/newsfirstlive-kannada/media/media_files/2025/08/11/siddaramaiah-kn-rajanna-2025-08-11-19-33-34.jpg)
ಸಿದ್ದರಾಮಯ್ಯ ಜೊತೆ ಕೆಎನ್ ರಾಜಣ್ಣ
ನಾಲ್ಕೈದು ತಿಂಗಳ ಹಿಂದೆ ಕ್ರಾಂತಿಯ ಜನಕ ಕೆ.ಎನ್.ರಾಜಣ್ಣ ರಾಗ ಸಂಯೋಜಿಸಿದ್ದ ರಾಜಕೀಯ ವಿಪ್ಲವ.. ಪರಿವರ್ತನೆಯ ಪರ್ವಕ್ಕೆ ಘಳಿಗೆ ಕೂಡಿ ಬಂದಂತೆ ಕಾಣಿಸ್ತಿದೆ. ಇನ್ನೆರೆಡು ದಿನ ಕಳೆದ್ರೆ ನವೆಂಬರ್​​ ಬಂದೇ ಬಿಡ್ತು. ಶುಭಮುಹೂರ್ತ ನೋಡಲು ಈಗಾಗಲೇ ಪಂಚಾಂಗ ಖರೀದಿಸಲಾಗಿದೆ.. ಕಾಂಗ್ರೆಸ್‌ನಲ್ಲಿ ಕುತೂಹಲ ಗರಿಗಟ್ಟಿದ್ದು ತೆರೆ-ಮರೆ ಆಟಕ್ಕೆ ಟಾಸ್ ಹಾಕಲಾಗಿದೆ.. ಕ್ರಾಂತಿನೋ. ಭ್ರಾಂತಿನೋ ಆದ್ರೆ, ಗೊಂದಲ ಮಾತ್ರ ಮಹಾಪೂರ. ಭಿನ್ನ-ವಿಭಿನ್ನ ರೀತಿಯ ವ್ಯಾಖ್ಯಾನ ಟೆನ್ಷನ್​ಗೆ ಜಾರಿಸಿದೆ. ಇದ್ರ ಮಧ್ಯೆ ಸಿಎಂ ಬಣದಲ್ಲಿ ಮತ್ತೊಂದು ಕ್ರಾಂತಿಯ ಸುಳಿವು ಸಿಕ್ಕಿದೆ.
ಸಿಎಂ ತಂತ್ರಗಾರಿಕೆ!
ನವೆಂಬರ್ ಕ್ರಾಂತಿ ಗೀತೆ ನಡುವೆ ಸಿಎಂ-ಡಿಸಿಎಂ ಬಣಗಳ ನಡುವೆ ಅಸ್ತ್ರ-ಶಸ್ತ್ರಗಳ ಪ್ರಯೋಗಕ್ಕೆ ವಿರಾಮ ಬೀಳದಾಗಿದೆ. ನವೆಂಬರ್ ಮಧ್ಯದಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಡೆಲ್ಲಿಯಾತ್ರೆಗೆ ಸಜ್ಜಾಗಿದ್ದಾರೆ. ಕುರ್ಚಿ ಪಾಲಿಟಿಕ್ಸ್‌ನಲ್ಲಿ ಹೈಕಮಾಂಡ್ ನಾಯಕರ ಮುಂದೆ ತಮ್ಮ ವಾದವನ್ನ ಮಂಡಿಸುವ ಸಾಧ್ಯತೆ ಇದೆ. ಇದ್ರ ಮಧ್ಯೆ ಸಚಿವ ಸ್ಥಾನದಿಂದ ಗೇಟ್‌ಪಾಸ್ ಪಡೆದಿರೋ ಕೆ.ಎನ್. ರಾಜಣ್ಣ ಜೊತೆ ಸೇರಿ ಸಿಎಂ ಮತ್ತೊಂದು ಚದುರಂಗದ ಆಟಕ್ಕೆ ಸ್ವಾಗತ ಕೋರಿದ್ದಾರೆ. ಡಿನ್ನರ್ ನೆಪದಲ್ಲಿ ಶಕ್ತಿಪ್ರದರ್ಶನಕ್ಕೆ ಸಿದ್ದರಾಮಯ್ಯ ವೇದಿಕೆ ಸಜ್ಜುಗೊಳಿಸಿದ್ದಾರೆ.
ಇದನ್ನೂ ಓದಿ:ಶರಾವತಿ ಪಂಪ್ಡ್ ಸ್ಟೋರೇಜ್‌ನ ಆಳ ಅಗಲ.. ಏನಿದು ಯೋಜನೆ? ವಿರೋಧ ಇರೋದು ಯಾಕೆ?
/filters:format(webp)/newsfirstlive-kannada/media/media_files/2025/10/28/siddaramaiah-5-2025-10-28-21-39-11.jpg)
ಸಿದ್ದು ಬಣ ಡಿನ್ನರ್ ರಣತಂತ್ರ!
- ನವೆಂಬರ್ 14 ರಿಂದ 3 ದಿನಗಳ ಕಾಲ ಸಿದ್ದರಾಮಯ್ಯ ದೆಹಲಿ ಪ್ರವಾಸ
- ಕಪಿಲ್ ಸಿಬಲ್ ಪುಸ್ತಕ ಬಿಡುಗಡೆ ನೆಪದಲ್ಲಿ ಸಿಎಂ ಸಿದ್ದು ದೆಹಲಿ ಯಾತ್ರೆ
- ಇದೇ ವೇಳೆ ಹೈಕಮಾಂಡ್ ನಾಯಕರ ಭೇಟಿಗೂ ಪ್ಲಾನ್​​​ ಮಾಡಿದ ಸಿಎಂ
- ನವೆಂಬರ್ ಕ್ರಾಂತಿ ಚರ್ಚೆ ಬೆನ್ನಲ್ಲೇ ಸಿಎಂ ಸಿದ್ದು ರಾಜಕೀಯ ತಂತ್ರಗಾರಿಕೆ
- ಸರ್ಕಾರಿ ಕಾರ್ಯಕ್ರಮ ನಿಮಿತ್ತ ತುಮಕೂರಿಗೆ ತೆರಳಲಿರುವ ಸಿದ್ದರಾಮಯ್ಯ
- ಕಾರ್ಯಕ್ರಮ ಮುಗಿದ ಬಳಿಕ ಕೆ.ಎನ್ ರಾಜಣ್ಣ ನಿವಾಸದಲ್ಲಿ ಔತಣಕೂಟ
- ತುಮಕೂರಿನ ತಮ್ಮ ನಿವಾಸದಲ್ಲಿ ಸಿದ್ದರಾಮಯ್ಯಗೆ ರಾಜಣ್ಣರಿಂದ ಡಿನ್ನರ್
- ದೆಹಲಿಗೆ ತೆರಳುವ ಮುನ್ನ ನ.7ರಂದು ಔತಣಕೂಟದ ಬಗ್ಗೆ ಕುತೂಹಲ
ಸಿಎಂ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡವರು ಮಾಜಿ ಸಚಿವ ಕೆ.ಎನ್ ರಾಜಣ್ಣ. ಆದ್ರೆ, ಹೈಕಮಾಂಡ್ ನಾಯಕರ ಕೆಂಗಣ್ಣಿಗೆ ಗುರಿಯಾಗಿ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ. ಹೈಕಮಾಂಡ್ ನಾಯಕರಿಂದ ದೂಷಣೆಗೆ ಒಳಗಾಗಿರೋ ತಮ್ಮ ಆಪ್ತನ ಕೈಬಿಡದೇ ಜೊತೆಯಲ್ಲಿ ಕರೆದೊಯ್ಯಲು ಸಿದ್ದು ಡಿನ್ನರ್ ಸಭೆಯಲ್ಲಿ ಭಾಗಿಯಾಗ್ತಿದ್ದಾರೆ. ಈ ಮೂಲಕ ಕೆ.ಎನ್. ರಾಜಣ್ಣ ಪರ ನಾನು ಯಾವಾಗಲೂ ನಿಂತಿದ್ದೇನೆ ಅಂತ ಸಿಎಂ ಸಂದೇಶ ರವಾನಿಸಲಿದ್ದಾರೆ.
ಇದನ್ನೂ ಓದಿ:ಸರ್ಕಾರದಿಂದ ದೊಡ್ಡ ಹೆಜ್ಜೆ.. ಶೀಘ್ರದಲ್ಲೇ ಅಧಿಕೃತ caller ID ಸೇವೆ..!
ರಾಜಣ್ಣ ಕರೆದಿರೋ ಡಿನ್ನರ್‌ನಲ್ಲಿ ಕಾಂಗ್ರೆಸ್‌ನ ಶಾಸಕರು, ಸಚಿವರು, ಸಚಿವಾಕಾಂಕ್ಷಿಗಳು ಭಾಗಿಯಾಗುವ ಸಾಧ್ಯತೆ ಇದೆ. ಈ ಮೂಲಕ ಸಿಎಂ ಡೆಲ್ಲಿಗೆ ತೆರಳುವ ಮುನ್ನ ಇದೊಂದು ಶಕ್ತಿ ಪ್ರದರ್ಶನದ ಔತಣಕೂಟ ಅಂತಲೇ ರಾಜಕೀಯ ಪಡಸಾಲೆಯಲ್ಲಿ ಚರ್ಚೆ ನಡೆಯುತ್ತಿದೆ. ಈ ಮೂಲಕ ದೆಹಲಿ ನಾಯಕರಿಗೆ ಸಿದ್ದರಾಮಯ್ಯ ತಮ್ಮ ವರ್ಚಸ್ಸನ್ನ ತೋರಿಸಲು ಡಿನ್ನರ್ ವೇದಿಕೆಯಾಗಲಿದೆ. ಒಂದೇ ಸಮಯದಲ್ಲಿ ಎರಡು ಸಂದೇಶಗಳನ್ನ ರವಾನಿಸಲು ಸಿದ್ದರಾಮಯ್ಯ ತಂತ್ರಗಾರಿಕೆ ಹೆಣೆದಿದ್ದಾರೆ. ಆದ್ರೆ, ಸಿದ್ದರಾಮಯ್ಯರ ಬಣದ ಔತಣಕೂಟಕ್ಕೆ ಡಿಕೆ ಬಣ ಅದ್ಹೇಗೆ ಟಕ್ಕರ್ ನೀಡಲಿದೆ. ಇವರ ಸ್ಟ್ರಾಟರ್ಜಿ ಏನಾಗಿರಲಿದೆ ಅನ್ನೋದೇ ಮುಂದಿರೋ ಕೌತುಕ.
ವಿಶೇಷ ವರದಿ: ಹರೀಶ್ ಕಾಕೋಳ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us