/newsfirstlive-kannada/media/media_files/2025/10/29/sharavati-pump-storage-project-3-2025-10-29-19-54-04.jpg)
ಹಳ್ಳಗಳ ನೀರು ನದಿ ಸೇರುತ್ತೆ.. ನದಿಯ ನೀರು ಸಮುದ್ರ ಸೇರುತ್ತೆ.. ಅದು ಪ್ರಕೃತಿಯ ನಿಯಮ. ಆದ್ರೆ, ನದಿಯ ನೀರನ್ನ ಪುನಃ ಮೇಲಕ್ಕೆ ತಂದು ಇನ್ನೇನೋ ಮಾಡ್ತೀನಿ ಅಂತ ಹೋದ್ರೆ ಅದು ಪ್ರಕೃತಿ ಮೇಲಿನ ದಬ್ಬಾಳಿಕೆಯಾಗುತ್ತೆ. ಅದರ ಏಟು ಇಂದಲ್ಲ ನಾಳೆಯಾದ್ರೂ ಬಿದ್ದೇ ಬೀಳುತ್ತೆ. ನಾವು ಈ ಮಾತು ಹೇಳೋದಕ್ಕೆ ಕಾರಣ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ. ಈ ಯೋಜನೆಯಿಂದ ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಯಾವ ರೀತಿಯಲ್ಲಿ ಸಮಸ್ಯೆಯಾಗುತ್ತೆ? ಪರಿಸರದ ಮೇಲೆ ಆಗೋ ದಬ್ಬಾಳಿಕೆ ಏನು? ಪ್ರಾಣಿ, ಪಕ್ಷಿ ಸಂಕುಲಕ್ಕೆ ಇರೋ ಅಪಾಯ ಎಂಥದ್ದು? ಅನ್ನೋ ವಿವರವನ್ನು ತಿಳಿದುಕೊಳ್ಳೋಣ..
ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ। ಸಾಯೋತನಕ ಸಂಸಾರದಲ್ಲಿ ಗಂಡಾ ಗುಂಡಿ| ಏರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ। ಇರೋದ್ರೊಳಗೆ ಒಮ್ಮೆ ನೋಡು ಜೋಗಾ ಗುಂಡಿ.. ಜೀವನ ಚೈತ್ರ ಸಿನಿಮಾದಲ್ಲಿ ಡಾ.ರಾಜ್‌ಕುಮಾರ್ ಹಾಡಿರೋ ಈ ಹಾಡನ್ನ ಒಮ್ಮೆಯಾದ್ರೂ ನೀವ್ ಕೇಳಿರ್ತೀರಿ. ಹಾಗೇ ತಾವು ಒಮ್ಮೆ ಜೋಗ್‌ಫಾಲ್ಸ್ ನೋಡ್ಬೇಕು ಅಂತ ಕನಸು ಕಂಡು ಹೋಗಿರ್ತೀರಿ.. ಜೋಗ್ ಫಾಲ್ಸ್‌ನ ಆ ಸೌಂದರ್ಯಕ್ಕೆ ಕಾರಣವಾಗಿದ್ದೇ ಶರವಾತಿ ನದಿ.. ರಾಜ್ಯದಲ್ಲಿ ಗರಿಷ್ಠ ಜಲವಿದ್ಯುತ್ ಉತ್ಪಾದನೆ ಮಾಡ್ತಿರೋ ಲಿಂಗನಮಕ್ಕಿ ಜಲವಿದ್ಯುತ್ ಸ್ಥಾವರ ಇರೋದು ಇದೇ ನದಿಯಲ್ಲಿ.. ಅಷ್ಟೇ ಅಲ್ಲ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮಘಟಕ್ಕೆ ಮರೆಗು. ಅಲ್ಲಿಯ ಅಪರೂಪದ ಸಸ್ಯ ಸಂಕುಲಕ್ಕೆ, ಪ್ರಾಣಿ ಸಂಕುಲಕ್ಕೆ, ಜಲಚರಗಳಿಗೆ, ಜನರಿಗೆ ಜೀವ ನದಿ.. ಆದ್ರೆ, ಇದೀಗ ಅಲ್ಲಿಯ ಜೀವಸಂಕುಲಕ್ಕೆ, ಜಲಚರಕ್ಕೆ ಅಪಾಯಕಾರಿಯಾದ ಯೋಜನೆಯೊಂದು ಜಾರಿಯಾಗ್ತಿದೆ. ಅದಕ್ಕಾಗಿ ರಾಜ್ಯ ಸರ್ಕಾರ ಬರೋಬ್ಬರಿ 10 ಸಾವಿರ ಕೋಟಿಗೆ ಅನುಮೋದನೆ ನೀಡಿ, ಟೆಂಡರ್ ಪ್ರಕ್ರಿಯೆಯನ್ನ ಮುಗ್ಸಿ ಬಿಟ್ಟಿದೆ. ಪರಿಣಾಮ ಶರಾವತಿ ಉಳಿಸಿ ಅನ್ನೋ ಅಭಿಯಾನದ ಕಿಚ್ಚು ಭುಗಿಲೆದ್ದಿದೆ. ಅಷ್ಟಕ್ಕೂ ಆ ಯೋಜನೆ ಯಾವುದು ಅಂದ್ರೆ ಶರವಾವತಿ ಪಂಪ್ ಸ್ಟೋರೇಜ್ ಯೋಜನೆ.
/filters:format(webp)/newsfirstlive-kannada/media/media_files/2025/10/29/sharavati-pump-storage-project-2025-10-29-19-57-09.jpg)
ಏನಿದು ಶರಾವತಿ ಪಂಪ್ಡ್ ಸ್ಟೋರೇಜ್?
ದೇಶ ಅಭಿವೃದ್ಧಿಯಾಗ್ಬೇಕು ಅಂದ್ರೆ ಅಭಿವೃದ್ಧಿ ಯೋಜನೆಗಳು ಖಂಡಿತವಾಗಿಯೂ ಬೇಕು. ಆದ್ರೆ ಅದು ಪರಿಸರವನ್ನ ನಾಶ ಮಾಡುವಂತೆ ಇರ್ಬಾರದು. ಅಪರೂಪದ ಜಲಚರಕ್ಕೆ ಸಸ್ಯ ಸಂಕುಲಕ್ಕೆ ಕಂಟಕವಾಗುವಂತೆ ಇರ್ಬಾರದು. ಕಾರಣ ಶರವಾತಿ ಪಂಪ್ಡ್ ಸ್ಟೋರೇಜ್ ಯೋಜನೆ ಮೇಲೆ ಕೇಳಿ ಬರ್ತಾ ಇರೋ ಗಂಭೀರ ಆರೋಪ. ಅಷ್ಟಕ್ಕೂ ಈ ಯೋಜನೆ ಏನು ಅಂದ್ರೆ, ತೀರ್ಥಹಳ್ಳಿಯಲ್ಲಿ ಹುಟ್ಟುವ ಶರಾವತಿ ನದಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾರವರದ ಬಳಿ ಅರಬ್ಬಿ ಸಮುದ್ರವನ್ನ ಸೇರುತ್ತೆ. ಈ ಮಧ್ಯೆ ಶಿವಮೊಗ್ಗ ಜಿಲ್ಲೆಯಲ್ಲಿ ಲಿಂಗನಮಕ್ಕಿ ಡ್ಯಾಮ್ ಬರುತ್ತೆ.
/filters:format(webp)/newsfirstlive-kannada/media/media_files/2025/10/29/sharavati-pump-storage-project-7-2025-10-29-20-01-16.jpg)
ಉತ್ತರ ಕನ್ನಡ ಜಿಲ್ಲೆಯಲ್ಲಿ ಬರೋ ಗೇರುಸೊಪ್ಪ ಡ್ಯಾಮ್‌ನಿಂದ ಪಂಪ್ ಸ್ಟೋರೇಜ್ ಮಾಡಿ ಮೇಲ್ಭಾಗದಲ್ಲಿರೋ ಶಿವಮೊಗ್ಗ ಜಿಲ್ಲೆಯ ತಳಕಳಲೆ ಡ್ಯಾಮ್‌ಗೆ ನೀರನ್ನ ಪಂಪ್ಡ್ ಮಾಡಲಾಗುತ್ತೆ. ಆ ಮೂಲಕ 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತೆ ಅನ್ನೋದೇ ಶರವಾತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಗುರಿ. ಈ ಪಂಪ್ಡ್ ಸ್ಟೋರೇಜ್ ಯೋಜನೆ ವಿಶ್ವದ ಅತಿದೊಡ್ಡ ಬ್ಯಾಟರಿ ತಂತ್ರಜ್ಞಾನವಾಗಿದೆ. ಎರಡು ಜಲಾಶಯಗಳ ನಡುವೆ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತದೆ. ಹೆಚ್ಚುವರಿ ವಿದ್ಯುತ್ ಇದ್ದಾಗ ಕೆಳಗಿನ ಜಲಾಶಯದ ನೀರನ್ನು ಮೇಲಿನ ಜಲಾಶಯಕ್ಕೆ ಪಂಪ್ ಮಾಡಿ ಶೇಖರಿಸಲಾಗುತ್ತದೆ. ವಿದ್ಯುತ್ ಬೇಡಿಕೆ ಹೆಚ್ಚಾದಾಗ ಆ ನೀರು ಬಳಸಿ ವಿದ್ಯುತ್ ಉತ್ಪಾದಿಸಿ ಪೂರೈಸಲಾಗುತ್ತದೆ. ಹೊಸ ಜಲಾಶಯ ನಿರ್ಮಾಣ ಮಾಡದೆ ಹೆಚ್ಚು ವಿದ್ಯುತ್ ಉತ್ಪಾದಿಸಲು ಅನುಕೂಲ ಆಗುವುದರಿಂದ ಇದು ಗ್ರಿಡ್ ಸ್ಥಿರತೆ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಅನ್ನೋದು ಸರ್ಕಾರ ಹೇಳ್ತಿರೋದು.
ಇದನ್ನೂ ಓದಿ: MI ಬಿಡಲು ರೋಹಿತ್ ಶರ್ಮಾ ರೆಡಿ.. ಯಾವ ಫ್ರಾಂಚೈಸಿ ಸೇರ್ತಾರೆ ಹಿಟ್​ಮ್ಯಾನ್..?
/filters:format(webp)/newsfirstlive-kannada/media/media_files/2025/10/29/sharavati-pump-storage-project-1-2025-10-29-19-57-57.jpg)
ಈ ಯೋಜನೆಯನ್ನ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಅಂದ್ರೆ ಕೆಪಿಸಿಎಲ್ ಏನಿದು ಅಂದು ಮಾಡ್ತಾ ಇರೋದು. 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದೆ. ಹೈದರಾಬಾದ್ ಮೂಲದ ಮೇಘಾ ಎಂಜಿನಿಯರಿಂಗ್ ಮತ್ತು ಇನ್ಫಾಸ್ಟ್ರಕ್ಚರ್ಸ್ ಲಿಮಿಟೆಡ್ ಸಂಸ್ಥೆಗೆ ಕಳೆದ ಫೆಬ್ರವರಿಯಲ್ಲಿ 8005 ಕೋಟಿ ರೂ.ಗಳಿಗೆ ಯೋಜನೆಯ ಟೆಂಡರ್ ನೀಡಲಾಗಿದೆ. ಯೋಜನೆಯ ಒಟ್ಟು ಮೊತ್ತ 10,500 ಕೋಟಿ ರೂ. ಎನ್ನಲಾಗ್ತಿದೆ. ಯೋಜನೆಯ ಬಹುತೇಕ ರಚನೆಗಳು ಸುರಂಗದೊಳಗೆ ಇರೋದ್ರಿಂದ ಭೂಮಿಯ ಮೇಲ್ಮೈನಲ್ಲಿ ದುಷ್ಪರಿಣಾಮ ಉಂಟಾಗುತ್ತೆ ಅನ್ನೋದನ್ನ ಹೋರಾಟಗಾರರು, ತಜ್ಞರು ಹೇಳ್ತಿದ್ದಾರೆ.
/filters:format(webp)/newsfirstlive-kannada/media/media_files/2025/10/29/sharavati-pump-storage-project-8-2025-10-29-20-00-54.jpg)
ಗಾಯದ ಮೇಲೆ ಬರೆ ಎಳೆಯುತ್ತಿದೆಯಾ ಸರ್ಕಾರ?
ಇದು ಅಳಿವಿನಂಚಿನಲ್ಲಿರುವ ಅತ್ಯಪರೂಪದ ಸಿಂಗಳೀಕಗಳ ಅಭಯಾರಣ್ಯ. ಇಲ್ಲಿ ಅತಿಕ್ರಮ ಪ್ರವೇಶ ಮಾಡಬಾರದು. ಮರಗಳನ್ನು ಕಡಿಯಬಾರದು ಅಂತ ಅರಣ್ಯ ಇಲಾಖೆ ಅಲ್ಲಲ್ಲಿ ಎಚ್ಚರಿಕೆ ಫಲಕಗಳನ್ನು ಹಾಕಿದೆ. ಈಗ ಸರ್ಕಾರ ರೂಪಿಸಿರೋ ಈ ಒಂದು ಯೋಜನೆ ಇದೇ ಅಭಯಾರಣ್ಯ ವ್ಯಾಪ್ತಿಯಲ್ಲಿ ಸಾವಿರಾರು ಮರಗಳ ಮಾರಣ ಹೋಮವಾಗುತ್ತೆ. ಈಗಾಗಲೇ ಲಿಂಗನಮಕ್ಕಿ ಡ್ಯಾಮ್, ಗೇರುಸೊಪ್ಪ ಡ್ಯಾಮ್, ತಳಕಳಲೆ ಡ್ಯಾಮ್‌ನಿಂದ ಆಸ್ತಿ ಮನೆ ಕಳ್ಕೊಂಡವರು ಇವತ್ತಿಗೂ ಪರದಾಡುತ್ತಿದ್ದಾರೆ. ಅಂತಾದ್ರಲ್ಲಿ ಸರ್ಕಾರ ದಿಢೀರ್ ಅಂತ ಶರವಾತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಗೆ ಮುಂದಾಗಿರೋದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಪರಿಣಾಮ ಈ ಹಿಂದೆ ತಲಕಳಲೆ ಡ್ಯಾಂನಿಂದಾಗಿ 1960ರಲ್ಲಿ ಊರು ತೊರೆದು ಬಂದು ಸಾಗರ ತಾಲೂಕು ಪಶ್ಚಿಮಘಟ್ಟದ ಸಿಂಗಳೀಕ ಅಭಯಾರಣ್ಯದೊಳಗಿನ ಗುಂಡಿಬೈಲು, ಮರಾಠಿಕೇರಿ, ಹೆನ್ನಿ, ಹಿರೇಹೆನ್ನಿಯಲ್ಲಿ ಹೊಸಬದುಕು ಕಟ್ಟಿಕೊಂಡಿದ್ದ ಹಾಗೂ ಪ್ರಸ್ತುತ ಸಿದ್ದಾಪುರ ಹಾಗೂ ಹೊನ್ನಾವರ ತಾಲೂಕಿನ ಹಲವಾರು ಗ್ರಾಮಗಳ ಜನರು ಈಗ ಮತ್ತೊಮ್ಮೆ ಊರು ಬಿಡುವಂತಾಗಿದೆ.
/filters:format(webp)/newsfirstlive-kannada/media/media_files/2025/10/29/sharavati-pump-storage-project-2-2025-10-29-19-58-42.jpg)
ಯೋಜನೆಯ ಚಿತ್ರಣ!
ಶರವಾತಿ ಪಂಪ್ಡ್ ಸ್ಟೋರೇಜ್ ಯೋಜನೆ ಬರೋಬ್ಬರಿ 10,500 ಕೋಟಿ ರೂಪಾಯಿ. ಈ ಯೋಜನೆ ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ನಡೆಯುತ್ತದೆ. ಯೋಜನೆಗೆ ಒಳಗೊಂಡ ಪ್ರದೇಶಗಳು ಅರಣ್ಯ ಭೂಮಿ ಭೂಮಿಯ ಒಳಭಾಗದಲ್ಲಿ 19.982 ಹೆಕ್ಟೇರ್, ಭೂಮಿಯ ಮೇಲ್ಮೈನಲ್ಲಿ 34.173 ಹೆಕ್ಟೇರ್, ಒಟ್ಟು ಅರಣ್ಯ ಭೂಮಿ 54.155 ಹೆಕ್ಟೇರ್ ಅಂತ ಅಂದಾಜಿಸಲಾಗಿದೆ. ಹಾಗೇ ಯೋಜನೆಗೆ ಒಳಗೊಂಡ ಅರಣ್ಯೇತರ ಭೂಮಿ ಒಳಭಾಗದಲ್ಲಿ 0.1 ಹೆಕ್ಟೇರ್, ಹೊರಭಾಗದಲ್ಲಿ 88.508 ಹೆಕ್ಟೇರ್ ಅಂತ ಊಹಿಸಲಾಗಿದೆ.
/filters:format(webp)/newsfirstlive-kannada/media/media_files/2025/10/29/sharavati-pump-storage-project-6-2025-10-29-20-00-36.jpg)
ಕೆಪಿಸಿಎಲ್ ಏನ್ ಹೇಳುತ್ತೆ ಅಂದ್ರೆ ಈ ಯೋಜನೆಯ ಬಹುಭಾಗ ಭೂಮಿಯಾಳದಲ್ಲಿ ನಡೆಯುತ್ತದೆ. ಹೀಗಾಗಿ ಅರಣ್ಯಕ್ಕೆ ಜಾಸ್ತಿ ಹಾನಿಯಾಗೋದಿಲ್ಲ. ಜನರಿಗೂ ಸಮಸ್ಯೆಯಾಗೋದಿಲ್ಲ ಅನ್ನೋದನ್ನ ಕೆಪಿಸಿಎಲ್ ಹೇಳುತ್ತಿದೆ. ದಟ್ಟ ಅರಣ್ಯ ಭೂಮಿಯಾಳದಲ್ಲಿ ನಡೆಯೋ ಈ ಯೋಜನೆ ಇವತ್ತಲ್ಲ ನಾಳೆಯಾದ್ರೂ ಮಾರಕ ಅನ್ನೋದನ್ನ ಮರೆತಂತೆ ಕಾಣಿಸುತ್ತೆ ಅನ್ನೋದನ್ನ ಹೋರಾಟಗಾರರು ಹೇಳ್ತಿದ್ದಾರೆ.
ಇದನ್ನೂ ಓದಿ: ಪಾಕ್ ಲಿಂಕ್, ಗೂಢಚಾರಿಕೆ ಆರೋಪದಡಿ ಜಾರ್ಖಂಡ್ ವ್ಯಕ್ತಿ ದೆಹಲಿಯಲ್ಲಿ ಬಂಧನ : ಸತ್ತವನು ಜೀವಂತ! ನಕಲಿ ಪಾಸ್ ಪೋರ್ಟ್ ವಶಕ್ಕೆ
/filters:format(webp)/newsfirstlive-kannada/media/media_files/2025/10/29/sharavati-pump-storage-project-4-2025-10-29-19-59-31.jpg)
ಜಿಲ್ಲಾ ವಾರು ಭೂ ಸ್ವಾಧೀನ!
ಈ ಯೋಜನೆಯಿಂದ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ತಳಕಳಲೆ ಗ್ರಾಮದಲ್ಲಿ 3.63 ಹೆಕ್ಟೇರ್ ಭೂಮಿ,1 ಸರ್ಕಾರಿ ಶಾಲೆ, 8 ಮನೆಗಳು, 7 ದನದ ಕೊಟ್ಟಿಗೆಗಳು ವ್ಯಾಪ್ತಿಗೆ ಬರುತ್ತವೆ. ಹಾಗೇ ಉತ್ತರ ಕನ್ನಡ ಜಿಲ್ಲೆಯಲ್ಲಿಯ ಹೊನ್ನಾವರ ತಾಲೂಕಿನ ಗೇರುಸೊಪ್ಪ, ನಗರಬಸ್ತಿಕೇರಿ, ಬೆಗುಡಿ ಗ್ರಾಮಗಳು ಈ ಯೋಜನೆಯ ವ್ಯಾಪ್ತಿಗೆ ಬರುತ್ತವೆ. ಗೇರುಸೊಪ್ಪ, ನಗರಬಸ್ತಿಕೇರಿಯಲ್ಲಿ 0.404 ಹೆಕ್ಟೇರ್ ಭೂ ಭಾಗ, 40 ಮನೆಗಳು, 3 ಮಳಿಗೆಗಳು, 2 ದೇವಾಲಯದ ತಡೆಗೋಡೆ ಇದರ ವ್ಯಾಪ್ತಿಯಲ್ಲಿ ಬರುತ್ತೆ. ಹಾಗೇ ಬೆಗುಡಿಗ್ರಾಮ ವ್ಯಾಪ್ತಿಯಲ್ಲಿ 20.497 ಹೆಕ್ಟೇರ್ ಭೂಮಿ, 1 ಅಂಗನವಾಡಿ, 6 ಮನೆಗಳು, 4 ದನದ ಕೊಟ್ಟಿಗೆ, 1 ಬಾವಿ, 1 ದೇವಾಲಯ ವ್ಯಾಪ್ತಿಯೋಳಗೆ ಬರುತ್ತೆ.
ಇದನ್ನೂ ಓದಿ: ದೆಹಲಿಯಲ್ಲಿ ಮೋಡ ಬಿತ್ತನೆ ಮಾಡಿದ್ದರೂ ಮಳೆ ಬರಲಿಲ್ಲ, ಏಕೆ? : IIT ಕಾನ್ಪುರ ನಿರ್ದೇಶಕರು ಹೇಳಿದ್ದೇನು?
/filters:format(webp)/newsfirstlive-kannada/media/media_files/2025/10/29/sharavati-pump-storage-project-5-2025-10-29-20-00-16.jpg)
ಈ ಯೋಜನೆ ನಡೆಯೋದೇ ದಟ್ಟ ಅರಣ್ಯದ ಮಧ್ಯದಲ್ಲಿ. ಹೀಗಾಗಿ ಕೇವಲ ಅರಣ್ಯ ನಾಶವಾಗುವುದು ಅಷ್ಟೇ ಅಲ್ಲ, ಅಲ್ಲಿಯ ಅಪರೂಪದ ಸಸ್ಯ, ಪ್ರಾಣಿ ಸಂಕುಲಕ್ಕೂ ಸಂಕಷ್ಟ ಎದುರಾಗ್ತಿದೆ. ಹೀಗಾಗಿಯೇ ಅಲ್ಲಿಯ ಜನ, ಪರಿಸರ ಪ್ರೇಮಿಗಳು ಯಾವುದೇ ಕಾರಣಕ್ಕೂ ನಮ್ಗೆ ಈ ಯೋಜನೆ ಬೇಡವೇ ಬೇಡ ಅಂತ ಹೋರಾಟದ ಹಾದಿ ಹಿಡಿದಿದ್ದಾರೆ. ದೇಶಕ್ಕೆ, ರಾಜ್ಯಕ್ಕೆ ಅಭಿವೃದ್ಧಿ ಯೋಜನೆಗಳು ಬೇಕು. ಆದ್ರೆ, ಅದು ಪರಿಸರಕ್ಕೆ, ಜನರಿಗೆ ಮಾರಕವಾಗಿರ್ಬಾರದು.
ವಿಶೇಷ ವರದಿ: ✍ ಶ್ರೀಧರ್ ಹೆಗಡೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us