/newsfirstlive-kannada/media/media_files/2025/10/29/mumbai-indians-2025-10-29-16-01-59.jpg)
5 ಬಾರಿ ಐಪಿಎಲ್ ಪ್ರಶಸ್ತಿ ಗೆಲ್ಲಿಸಿಕೊಟ್ಟ ನಾಯಕ, ಮುಂಬೈ ಇಂಡಿಯನ್ಸ್ ತಂಡಕ್ಕೆ ಬೇಡವಾದ್ರಾ? ಕಷ್ಟಪಟ್ಟು ತಂಡ ಕಟ್ಟಿದ ಸಾರಥಿಗೆ ಈಗ ಬೆಲೆನೇ ಇಲ್ವಾ? ಯಶಸ್ವಿ ನಾಯಕ, ಚಾಣಾಕ್ಷ ನಾಯಕ ಎನಿಸಿಕೊಂಡವನಿಗೆ, ಅವಮಾನ ಮಾಡಲಾಗ್ತಿದ್ಯಾ? ಐಪಿಎಲ್​ನ ಮೋಸ್ಟ್​ ಸಕ್ಸಸ್​ಫುಲ್​​​​ ಮತ್ತು ಎಕ್ಸ್​ಪೆಸ್ವಿವ್ ಫ್ರಾಂಚೈಸಿ, ಮುಂಬೈ ಇಂಡಿಯನ್ ತಂಡದ ಕಥೆ ಇದು. ತಂಡಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದ ರೋಹಿತ್​​ಗೆ, ಅಂಬಾನಿಗಳು ನೀಡ್ತಿರೋ ಗೌರವ ಇದು.
2011 ರಿಂದ 2025..! 14 ವರ್ಷಗಳ ಕಾಲ ರೋಹಿತ್, ಮುಂಬೈ ಇಂಡಿಯನ್ಸ್ ತಂಡಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ್ರು. ಆಟಗಾರನಾಗಿ ಹಾಗೇ ನಾಯಕನಾಗಿ ರೋಹಿತ್, ತಂಡಕ್ಕೆ ತನ್ನದೇ ಕೊಡುಗೆ ನೀಡಿದ್ದಾರೆ. ರೋಹಿತ್, ತಾನು ಯಾವುದೋ ಒಂದು ಫ್ರಾಂಚೈಸಿಗೆ ಆಡುತ್ತಿದ್ದೇನೆ ಅಂತ ಯಾವತ್ತೂ ಅಂದುಕೊಳ್ಳಲಿಲಿಲ್ಲ. ಬದಲಿಗೆ ಇದು ನನ್ನ ಫ್ರಾಂಚೈಸಿ, ನನ್ನ ತಂಡ ಮತ್ತು ನನ್ನ ಆಟಗಾರರು ಅಂತ, ಮುಂಬೈ ಇಂಡಿಯನ್ಸ್​​ ಫ್ರಾಂಚೈಸಿ ಜೊತೆ ಎಮೋಷನಲ್ ಕನೆಕ್ಷನ್ ಹೊಂದಿದ್ರು. ಆದ್ರೀಗ ರೋಹಿತ್, ಭಾರದ ಮನಸ್ಸಿನಿಂದಲೇ ಮುಂಬೈ ಇಂಡಿಯನ್ಸ್ ತಂಡ ತೊರೆಯಲು ರೆಡಿಯಾಗಿದ್ದಾರೆ. ​​​​​​
ಇಶಾನ್ ಕಿಶನ್​​​​​​​ ಬೇಕು ಅಂತ ಪಟ್ಟು ಹಿಡಿದಿದ್ದೇಕೆ ಪಾಂಡ್ಯ..?
ಲೇಟೆಸ್ಟ್ ವಿಚಾರ ಏನಪ್ಪಾ ಅಂದ್ರೆ, ಮುಂಬೈ ಇಂಡಿಯನ್ಸ್ ತಂಡದ ಹಾಲಿ ನಾಯಕ ಹಾರ್ದಿಕ್ ಪಾಂಡ್ಯ, ಐಪಿಎಲ್ ವಿಂಡೋ ಟ್ರಾನ್ಸಫರ್​​ನಲ್ಲಿ ಇಶಾನ್ ಕಿಶನ್​ರನ್ನ ತಮ್ಮ ತಂಡಕ್ಕೆ ಕರೆತರಲು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರಂತೆ. ಇಶಾನ್​​​​​​​​​​​ ಕಿಶನ್​​ರನ್ನ ಕರೆತಂದ್ರೆ ಓಪನರ್ ಸ್ಥಾನವನ್ನ ತುಂಬಬಹುದು ಅನ್ನೋದು ಪಾಂಡ್ಯ ಲೆಕ್ಕಾಚಾರ. ಪಾಂಡ್ಯ ಲೆಕ್ಕಾಚಾರದ ಹಿಂದೆ ದೊಡ್ಡ ಕಥೆನೇ ಇದೆ. ಇಶಾನ್​ ಕಿಶನ್​ರನ್ನ ತಂಡಕ್ಕೆ ಬಂದ್ರೆ, ರೋಹಿತ್​ಗೆ ಗೇಟ್​ಪಾಸ್ ನೀಡಬಹುದು ಅನ್ನೋದು, ಪಾಂಡ್ಯ ಸ್ಮಾರ್ಟ್ ಸ್ಟ್ಯಾಟಜಿಯಾಗಿದೆ.
2015ರಲ್ಲಿ ಮುಂಬೈ ಇಂಡಿಯನ್ಸ್ ಪರ ಐಪಿಎಲ್ ಕರಿಯರ್ ಆರಂಭಿಸಿದ್ದ ಹಾರ್ದಿಕ್ ಪಾಂಡ್ಯ, 2022ರಲ್ಲಿ ಗುಜರಾತ್ ಟೈಟನ್ಸ್ ತಂಡ ಸೇರಿಕೊಂಡ್ರು. 2024ರಲ್ಲಿ ಟ್ರೇಡ್ ಮೂಲಕ ಮತ್ತೆ ಮುಂಬೈ ಸೇರಿಕೊಂಡ ಪಾಂಡ್ಯ, ಬಂದ ಬಂದಹಾಗೆ ನಾಯಕ ಪಟ್ಟ ಗಿಟ್ಟಿಸಿಕೊಂಡ್ರು. ಫ್ರಾಂಚೈಸಿ ಮಾಲೀಕರ ನಡೆಯಿಂದ ರೋಹಿತ್ ಶರ್ಮಾಗೆ, ಅಸಮಾಧಾನ ಉಂಟಾಗಿತ್ತು. ಅಂದು ತಂಡಕ್ಕೆ ರೀ ಎಂಟ್ರಿ ಕೊಟ್ಟ ಹಾರ್ದಿಕ್​​ಗೆ ಸನ್ಮಾನ ಮಾಡಿದ್ದ MI ಫ್ರಾಂಚೈಸಿ, ರೋಹಿತ್​ರನ್ನ ಸೈಡ್​ಲೈನ್​ ಮಾಡಿ ಅವಮಾನ ಮಾಡಿತ್ತು. ಇದು ರೋಹಿತ್​​ಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.
ರೋಹಿತ್ ಶರ್ಮಾ ಆಪ್ತ ಮಿತ್ರ ಅಭಿಷೇಕ್ ನಾಯರ್, ಇದೀಗ ಕೊಲ್ಕತ್ತಾ ನೈಟ್​ರೈಡರ್ಸ್​ ತಂಡದ ನೂತನ ಕೋಚ್ ಆಗಿ ಕಾರ್ಯನಿರ್ವಹಿಸುವ ಸಾಧ್ಯತೆ ಹೆಚ್ಚಿದೆ. ಮುಂಬೈ ಇಂಡಿಯನ್ಸ್​ ತಂಡದಲ್ಲಿ, ರೋಹಿತ್​ಗೆ ಸಿಗಬೇಕಾದ ಗೌರವ ಸಿಕ್ತಿಲ್ಲ. ಇದನ್ನ ಗಮನಿಸಿರುವ ಗೆಳೆಯ ಅಭಿಷೇಕ್ ನಾಯರ್, ರೋಹಿತ್​ರನ್ನ ಕೆಕೆಆರ್ ತಂಡಕ್ಕೆ ಸೆಳೆದುಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ರೋಹಿತ್ ಕೆಕೆಆರ್​ ಎಂಟ್ರಿ, ಹೇಳಿಕೊಳ್ಳುವಷ್ಟು ಸುಲಭವಲ್ಲ. ಟ್ರೈ ಅಂತೂ, ಮಾಡೇ ಮಾಡ್ತಾರೆ. ಅದು ಯಾವ ಲೆಕ್ಕಾಚಾರದಲ್ಲಿ ಅನ್ನೋದು, ಅವರಿಗೆ ಮಾತ್ರ ಗೊತ್ತು.
ಇದನ್ನೂ ಓದಿ: ಇಂದಿನ ಭಾರತ vs ಆಸ್ಟ್ರೇಲಿಯಾ ನಡುವಿನ ಮೊದಲ T20 ಮ್ಯಾಚ್ ನಡೆಯೋದು ಡೌಟ್​.. ಯಾಕೆ ಗೊತ್ತಾ?
ಶ್ರೇಯಸ್ ಅಯ್ಯರ್ ನಂತರ ಅಜಿಂಕ್ಯಾ ರಹಾನೆ, ಕೊಲ್ಕತ್ತಾ ನೈಟ್​ರೈಡರ್ಸ್ ತಂಡವನ್ನ ಮುನ್ನಡೆಸುತ್ತಿದ್ದಾರೆ. ಆದ್ರೆ ಕೆಕೆಆರ್​ ಫ್ರಾಂಚೈಸಿಗೆ, ರಹಾನೆ ನಾಯಕತ್ವದ ಬಗ್ಗೆ ಸಮಾಧಾನವಿಲ್ಲ. ಹೀಗಿರುವಾಗ ಹೊಸ ಸಾರಥಿಯ ಹುಡುಕಾಟದಲ್ಲಿರುವ ಕೆಕೆಆರ್​ಗೆ, ರೋಹಿತ್​ ಶರ್ಮಾ ಸಿಕ್ರೆ, ಅದೃಷ್ಟವೇ ಸರಿ. ಕೆಕೆಆರ್, ನಾಯಕತ್ವ ಸಾಮರ್ಥ್ಯ ಇರೋ ಕೆಲ ಆಟಗಾರರ ಸಂಪರ್ಕದಲ್ಲಿದೆ. ಕೆಕೆಆರ್ ಮಾಲೀಕ ಕಿಂಗ್ ಖಾನ್ ಅಂದುಕೊಂಡಿದ್ದೇ ಆದ್ರೆ, ರೋಹಿತ್ ಶರ್ಮಾರನ್ನ ತಂಡಕ್ಕೆ ಕರೆತರೋದು ಕಷ್ಟವೇನಲ್ಲ.​
ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡ ಬಿಡ್ತಾರೆ. ರೋಹಿತ್ ಕೊಲ್ಕತ್ತಾ ನೈಟ್​ರೈಡರ್ಸ್​ ತಂಡ ಸೇರಿಕೊಳ್ತಾರೆ ಅನ್ನೋ ಮಾತುಗಳು ಭಾರೀ ಸುದ್ದಿಯಾಗ್ತಿವೆ. ಆದ್ರೆ ಯಾವುದು ನಿಜ.. ಯಾವುದು ಸುಳ್ಳು ಅನ್ನೋದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us