ರಾಜ್ಯಪಾಲರು ಕೇಂದ್ರದ ಕೈಗೊಂಬೆ -ಭಾಷಣ ಮಾಡದಿದ್ದಕ್ಕೆ ಸಿಎಂ ಹಿಗ್ಗಾಮುಗ್ಗಾ ವಾಗ್ದಾಳಿ

ರಾಜ್ಯಪಾಲರು ಜಂಟಿ ಅಧಿವೇಶದನಲ್ಲಿ ಸರ್ಕಾರ ಬರೆದುಕೊಟ್ಟ ಭಾಷಣವನ್ನು ಓದದೇ, ತಾವೇ ತಯಾರಿಸಿದ್ದ ಭಾಷಣ ಓದಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಏನು ಹೇಳಿದರು ಎಂಬ ವಿವರ ಈ ಸ್ಟೋರಿಯಲ್ಲಿದೆ.

author-image
Ganesh Kerekuli
ಇದು ಗಾಂಧಿ, ಬಸವಣ್ಣನ ಕಾಲ ಅಲ್ಲ - ಸಿಂಧೂರ ಇಟ್ಕೊಂಡು ಭಾರತದ ಬಗ್ಗೆ ಸಿಎಂ ಏನಂದ್ರು..?
Advertisment

ಬೆಂಗಳೂರು: ರಾಜ್ಯಪಾಲರು ಜಂಟಿ ಅಧಿವೇಶದನಲ್ಲಿ ಸರ್ಕಾರ ಬರೆದುಕೊಟ್ಟ ಭಾಷಣವನ್ನು ಓದದೇ, ತಾವೇ ತಯಾರಿಸಿದ್ದ ಭಾಷಣ ಓದಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ರಾಜ್ಯಪಾಲರು ಒಂದೇ ಲೈನ್​​ನಲ್ಲಿ ಭಾಷಣ ಮಾಡಿ ವಿಧಾನ ಸೌಧದಿಂದ ಹೊರಟು ಹೋದ ಬೆನ್ನಲ್ಲೇ ಮಾಧ್ಯಮಗಳ ಜೊತೆ ಮಾತನ್ನಾಡಿರುವ ಸಿಎಂ, ರಾಜ್ಯಪಾಲರು ಅವರು ತಯಾರಿಸಿರುವ ಭಾಷಣ ಓದಿವ ಹಾಗಿಲ್ಲ. ಸಚಿವ ಸಂಪುಟ ಏನು ಭಾಷಣ ತಯಾರು ಮಾಡುತ್ತದೆ, ಅದನ್ನ ಓದಲೇಬೇಕು. ಇದು ಜಂಟಿ ಅಧಿವೇಶನ. ನಾವು ವಿಶೇಷ ಅಧಿವೇಶನವನ್ನು ಕರೆದಿದ್ದೇವೆ ಎಂದರು.

ವಿಶೇಷ ಅಧಿವೇಶನಕ್ಕೆ ಕಾರಣ ಕೇಂದ್ರ ಸರ್ಕಾರ ಮನರೇಗಾ ಯೋಜನೆ ರದ್ದು ಮಾಡಿರೋದು. ಅದನ್ನು ರದ್ದು ಮಾಡಿ ವಿಬಿಜಿ ರಾಮ್ ಜೀ ಕಾಯ್ದೆಯನ್ನು ಹೊಸದಾಗಿ ತಂದಿದೆ. ಇದಕ್ಕೆ ನಮ್ಮ ಸರ್ಕಾರದಿಂದ ತೀವ್ರ ವಿರೋಧವಿದೆ. ಒಂದು ಮಹಾತ್ಮ ಗಾಂಧಿ ಹೆಸರು ತೆಗೆದಿರೋದು. ಮನಮೋಹನ್ ಸಿಂಗ್ ಪಿಎಂ ಆಗಿದ್ದಾಗ‌ ರೈಟ್ ಟು ವರ್ಕ್. ರೈಟ್ ಟು ಪುಡ್, ರೈಟು ಎಜುಕೇಶನ್ ತಂದಿದ್ದರು. ನರೇಗಾ ಉದ್ದೇಶ ಹಳ್ಳಿಗಳಲ್ಲಿ ಕಾರ್ಮಿಕರಿಗೆ 100 ದಿನ ಉದ್ಯೋಗ ನೀಡೋದು. ರೈತರು, ದಲಿತರು, ಮಹಿಳೆಯರು ಈ ಲಿಸ್ಟ್​ನಲ್ಲಿದ್ದರು. ಉದ್ಯೋಗ ಖಾತ್ರಿ ಅಡಿಯಲ್ಲಿ ತಮ್ಮ ಊರು, ಜಮೀನಿನಲ್ಲಿ ಕೆಲಸ ಮಾಡಬಹುದಿತ್ತು. ಆದರೆ ಇದನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಇದನ್ನೂ ಓದಿ: ಒಂದೇ ಸಾಲಿನಲ್ಲಿ ಭಾಷಣ ಮಾಡಿ ಹೊರಟು ಹೋದ ರಾಜ್ಯಪಾಲರು -ಅಧಿವೇಶನದಲ್ಲಿ ಭಾರೀ ಹೈಡ್ರಾಮಾ

Siddaramaiah (21)

ಈಗೀನ ಕಾಯ್ದೆಯಲ್ಲಿ ಎಲ್ಲಿ ಕೆಲಸ ಮಾಡೋದು ಅಂತ ಕೇಂದ್ರ ಸರ್ಕಾರ ತೀರ್ಮಾನ ಮಾಡುತ್ತದೆ. ಮೊದಲು ಯಾವಾಗ ಬೇಕಿದ್ದರೂ ಕೆಲಸ ಮಾಡಬಹುದಿತ್ತು. ಪಂಚಾಯತಿಗಳು ಆಕ್ಷನ್ ಪ್ಲಾನ್ ಪ್ರಕಾರ ಮಾಡುತ್ತಿದ್ದವು. ಈಗೀನ ಕಾಯ್ದೆಯಲ್ಲಿ ಅದು ಇಲ್ಲ. ವಿರೋಧ ಪಕ್ಷದವರು ಉದ್ದೇಶ ಪೂರಕವಾಗಿ ಮಾತಾಡ್ತಿದ್ದಾರೆ. ನಮ್ಮ ಉದ್ದೇಶ ಮನರೇಗಾ ಮರು ಸ್ಥಾಪನೆ ಮಾಡಬೇಕು. ರಾಮ್‌ಜಿ ಕಾಯ್ದೆಯನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು. 

ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆ ಆಗಿದ್ದಾರೆ. ಸರ್ಕಾರ ತಯಾರು ಮಾಡಿದ ಭಾಷಣ ಓದದೇ ತಾವೇ ತಯಾರು ಮಾಡಿದ್ದ ಭಾಷಣ ಓದಿದ್ದಾರೆ. ಆ ಮೂಲಕ ಅವರು ಸಂವಿಧಾನ ಉಲ್ಲಂಘನೆ ಮಾಡಿದ್ದಾರೆ. ಸಂವಿಧಾನ ವಿರೋಧವಾಗಿ ನಡೆದುಕೊಂಡಿದ್ದಾರೆ. ಜನ ಪ್ರತಿನಿಧಿ ಸಭೆಗೆ ಅವಮಾನ ಆಗಿದೆ. ಈ ಸಂಬಂಧ ನಮ್ಮ ಸರ್ಕಾರ, ಪಕ್ಷ, ಎಂಎಲ್ಎ, ಎಂಎಲ್ಸಿಗಳು ಕಾನೂನು ಹೋರಾಟ ಮಾಡ್ತಾರೆ ಎಂದು ಎಚ್ಚರಿಸಿದ್ದಾರೆ. 

ಇದನ್ನೂ ಓದಿ:ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

CM SIDDARAMAIAH thawar chand gehlot
Advertisment