ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ

ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಓರ್ವ ವ್ಯಕ್ತಿಯನ್ನ ಬಂಧಿಸಲಾಗಿದೆ. ಅಫಾನ್ ಅಹ್ಮದ್ ಬಂಧಿತ ಆರೋಪಿ. ಪ್ರಕರಣದ ವಿವರ ಈ ಸ್ಟೋರಿಯಲ್ಲಿದೆ

author-image
Ganesh Kerekuli
bengaluru airport (3)
Advertisment

ಬೆಂಗಳೂರು: ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಓರ್ವ ವ್ಯಕ್ತಿಯನ್ನ ಬಂಧಿಸಲಾಗಿದೆ. ಅಫಾನ್ ಅಹ್ಮದ್ ಬಂಧಿತ ಆರೋಪಿ. 

ಈತ ವಿಮಾನ ನಿಲ್ದಾಣದ ಸಿಬ್ಬಂದಿಯಾಗಿದ್ದು, ಭದ್ರತಾ ಪರಿಶೀಲನೆ ಹೆಸರಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪವಿದೆ. ಕೆಐಎಬಿಯಿಂದ ಕೊರಿಯಾಗೆ ತೆರಳಲು ವಿದೇಶಿ ಮಹಿಳೆಯೊಬ್ಬರು ಬಂದಿದ್ದರು. ಈ ವೇಳೆ ಮಹಿಳೆಗೆ ಆರೋಪಿತ ಸಿಬ್ಬಂದಿ, ಭದ್ರತಾ ಕ್ರಮವಾಗಿ ನಿಮ್ಮನ್ನು ತಪಾಸಣೆಗೆ ಒಳಪಡಿಸಬೇಕು ಎಂದಿದ್ದಾನೆ.

ಇದನ್ನೂ ಓದಿ:ಐಪಿಎಲ್ ಆಯೋಜನೆಗೆ ಚಿನ್ನಸ್ವಾಮಿ ಸ್ಟೇಡಿಯಂ ಸಿದ್ಧ.. ಹೊಸ ರಾಗ ಎಳೆದ RCB..!

ಮಹಿಳೆಯ ಟಿಕೆಟ್ ಚೆಕ್ ಮಾಡಿದಾಗ ಬ್ಯಾಗ್​ನಿಂದ ಬೀಪ್ ಸೌಂಡ್ ಬರ್ತಿದೆ. ಪ್ರತ್ಯೇಕವಾಗಿ ಚೆಕ್ ಮಾಡಬೇಕು ಎಂದಿದ್ದಾನೆ. ಚೆಕಿಂಗ್ ಕೌಂಟರ್​ಗೆ ಹೋದರೆ ವಿಮಾನ ಲೇಟ್ ಆಗುತ್ತದೆ ಎಂದು ಪುರುಷರ ಶೌಚಾಲಯಕ್ಕೆ ಕರೆದುಕೊಂಡು ಹೋಗಿದ್ದಾನೆ. ಈ‌ ವೇಳೆ‌ ಕೆಲ‌ ಕಾಲ ಚೆಕಿಂಗ್ ನೆಪದಲ್ಲಿ ಮಹಿಳೆಯ ಖಾಸಗಿ ಅಂಗಗಳನ್ನ ಸ್ವರ್ಶಿಸಿ ಹಿಂದಿನಿಂದ ಮಹಿಳೆಯನ್ನ ತಬ್ಬಿಕೊಂಡಿದ್ದಾನೆ. 

ಕೆಲ ಕಾಲ ಮಹಿಳೆಯ ಅಂಗಾಂಗಗಳನ್ನ ಸ್ವರ್ಶಿಸಿ ತಬ್ಬಿಕೊಳ್ಳುತ್ತಿದ್ದಂತೆ ಮಹಿಳೆ ಆರೋಪಿಸಿದ್ದಾಳೆ. ಈ‌ ವೇಳೆ ಒಕೆ ಥ್ಯಾಂ ಕ್ಯೂ ಎಂದು ಹೇಳಿ ಶೌಚಾಲಯದಿಂದ ಹೊರಗಡೆ ಹೋಗಿದ್ದ. ಸಿಬ್ಬಂದಿಯ ಲೈಂಗಿಕ ಕಿರುಕುಳ ಮತ್ತು ನಡತೆ ವಿರುದ್ಧ ಏರ್​ಪೋರ್ಟ್ ಭದ್ರತಾ ಪಡೆಗೆ ಮಹಿಳೆ ದೂರು ನೀಡಿದ್ದರು. 

ವಿದೇಶಿ ಮಹಿಳೆಯ ದೂರಿನ ಮೆರೆಗೆ ಕಾಮುಕನನ್ನ ಏರ್​ಪೋರ್ಟ್ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ. ಮಹಿಳೆಯ ದೂರಿನನ್ವಯ ಆರೋಪಿ‌ ವಿರುದ್ಧ ಪ್ರಕರಣ ದಾಖಲಾಗಿದೆ. ಏರ್​ಪೋರ್ಟ್ ಪೊಲೀಸರಿಂದ ಪ್ರಕರಣ ದಾಖಲಿಸಿ ಆರೋಪಿಯನ್ನ ವಿಚಾರಣೆಗೆ ಒಳಪಡಿಸಿದ್ದಾರೆ. 

ಇದನ್ನೂ ಓದಿ:ಭಾರತದ ಬಾಸ್ಮತಿ ಅಕ್ಕಿಗೆ ಭಾರೀ ಪೆಟ್ಟು ಕೊಟ್ಟ ಇರಾನ್ ಸಂಘರ್ಷ..! ಹೇಗೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Airport
Advertisment