/newsfirstlive-kannada/media/media_files/2025/11/14/rcb-1-2025-11-14-12-58-03.jpg)
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯಗಳು ನಡೆಯುತ್ತಾ? ಇಲ್ವಾ? ಅನ್ನೋ ಪ್ರಶ್ನೆಗೆ ಕ್ಲೀಯರ್​ ಆನ್ಸರ್​ ಸಿಕ್ಕಿದೆ. ಕರ್ನಾಟಕ ಸರ್ಕಾರದಿಂದ ಪಂದ್ಯಗಳ ಆಯೋಜನೆಗೆ ಪರ್ಮಿಷನ್​ ಸಿಕ್ಕಿದೆ. ಕೆಎಸ್​​ಸಿಎ ಕೂಡ ಹೋಸ್ಟ್​ ಮಾಡಲು ರೆಡಿಯಾಗಿದೆ. ಆರ್​​ಸಿಬಿ ಈಗ ಹೊಸ ಆಟ ಶುರುವಿಟ್ಟುಕೊಂಡಿದೆ. ಏನಿದು ಆರ್​​ಸಿಬಿ ಆಟ?
ಇದನ್ನೂ ಓದಿ: ಭಾರತದ ಬಾಸ್ಮತಿ ಅಕ್ಕಿಗೆ ಭಾರೀ ಪೆಟ್ಟು ಕೊಟ್ಟ ಇರಾನ್ ಸಂಘರ್ಷ..! ಹೇಗೆ..?
/filters:format(webp)/newsfirstlive-kannada/media/media_files/2025/11/05/rcb-2025-11-05-13-13-50.jpg)
ಜೂನ್ 4, 2025! ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ವೇಳೆ, ಕಾಲ್ತುಳಿತ ಸಂಭವಿಸಿತ್ತು. ಈ ದುರಂತದಲ್ಲಿ 11 ಮಂದಿ ಮೃತಪಟ್ಟಿದ್ದರು ಮತ್ತು 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ದುರ್ಘಟನೆಯ ಬಳಿಕ, ಐಕಾನಿಕ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ, ಒಂದೇ ಒಂದು ಅಂತರಾಷ್ಟ್ರೀಯ ಪಂದ್ಯ ನಡೆದಿರಲಿಲ್ಲ. ಸುಮಾರು 7 ತಿಂಗಳ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮತ್ತೆ ಕ್ರಿಕೆಟ್​ ಕಲರವ ಆರಂಭವಾಗಲಿದೆ. ಬೆಂಗಳೂರು ಸ್ಟೇಡಿಯಂ ಮತ್ತೆ ಪಂದ್ಯಗಳ ಆಯೋಜನೆಗೆ ಸಿದ್ಧವಾಗಿ ನಿಂತಿದೆ.
ಚಿನ್ನಸ್ವಾಮಿ ಮೈದಾನ ಗತವೈಭವವನ್ನ ಮತ್ತೆ ತರ್ತಿವಿ ಎಂದು ಕೆಎಸ್​​ಸಿಎ ಚುನಾವಣೆ ಗೆದ್ದ ವೆಂಕಟೇಶ್​ ಪ್ರಸಾದ್​ ಅಂಡ್ ಟೀಮ್​ ಹಗಲಿರುಳು ಶ್ರಮಿಸಿ ಕೊನೆಗೂ ಅಂದುಕೊಂಡಿದ್ದನ್ನ ಸಾಧಿಸಿದ್ದಾರೆ. ಸತತ ಪ್ರಯತ್ನ ನಡೆಸಿ ರಾಜ್ಯ ಸರ್ಕಾರದ ಮನವೊಲಿಸಿ, ಕೊನೆಗೂ ಪಂದ್ಯ ಆಯೋಜನೆಗೆ ರೆಡಿಯಾಗಿದ್ದಾರೆ. ಸರ್ಕಾರ ಕೂಡ ಚಿನ್ನಸ್ವಾಮಿಯಲ್ಲಿ ಪಂದ್ಯ ನಡೆಸೋಕೆ ಗ್ರೀನ್​ ಸಿಗ್ನಲ್​ ಕೊಟ್ಟಿದೆ. ಐಪಿಎಲ್​ ಹಾಗೂ ಅಂತರಾಷ್ಟ್ರೀಯ ಪಂದ್ಯಗಳ ಆಯೋಜನೆಗೆ ನಾವ್​ ರೆಡಿ ಎಂದು ಕೆಎಸ್​ಸಿಎ ಅಧ್ಯಕ್ಷ ವೆಂಕಟೇಶ್​ ಪ್ರಸಾದ್​ ಅಧಿಕೃತವಾಗಿ ಹೇಳಿದ್ದಾರೆ. ಅಭಿಮಾನಿಗಳಲ್ಲಿದ್ದ ಗೊಂದಲ ದೂರ ಮಾಡಿದ್ದಾರೆ.
ಇದನ್ನೂ ಓದಿ:ಮತ್ತೊಂದು ಬಸ್ ಘೋರ​ ದುರಂತ.. 36 ಪ್ರಯಾಣಿಕರಿದ್ದ ಬಸ್ ಬೆಂಕಿಗೆ ಆಹುತಿ..
/filters:format(webp)/newsfirstlive-kannada/media/media_files/2025/12/10/ksca-prez-venkatesh-prasad-met-dks-2025-12-10-18-47-55.jpg)
ಪಂದ್ಯಗಳ ಆಯೋಜನೆಗೆ KSCAನಲ್ಲಿ ಭರದ ಸಿದ್ಧತೆ
ಕಾಲ್ತುಳಿತ ದುರಂತದ ಬಳಿಕ ನೇಮಿಸಲಾಗಿದ್ದ ಜಸ್ಟಿಸ್​ ಕುನ್ಹಾ ಕಮಿಟಿ, ಫ್ಯಾನ್ಸ್​​ ಸೆಫ್ಟಿ ದೃಷ್ಟಿಯಿಂದ ಸ್ಟೇಡಿಯಂನಲ್ಲಿ ಹಲವು ಬದಲಾವಣೆ ಮಾಡುವಂತೆ ಶಿಫಾರಸು ಮಾಡಿತ್ತು. ಸ್ಟೇಡಿಯಂ ಗೇಟ್​ಗಳನ್ನ ಇನ್ನಷ್ಟು ದೊಡ್ಡದು ಮಾಡಬೇಕು, ಅಗ್ನಿಶಾಮಕ ವಾಹನ ಸ್ಟೇಡಿಯಂ ಸುತ್ತ ಓಡಾಡ ಬೇಕು ಸೇರಿದಂತೆ ಹಲವು ಶಿಫಾರಸುಗಳನ್ನ ಮಾಡಿತ್ತು. ಕುನ್ಹಾ ಕಮಿಟಿ ನೀಡಿದ ಶಿಫಾರಸುಗಳನ್ನೆಲ್ಲಾ ಜಾರಿಗೆ ತರೋ ಕೆಲಸ ಕೆಎಸ್​​ಸಿಎನಲ್ಲಿ ಭರದಿಂದ ಸಾಗಿದೆ. ಫೆಬ್ರವರಿ ಅಂತ್ಯದ ವೇಳೆಗೆ ಎಲ್ಲಾ ಕೆಲಸಗಳು ಮುಗಿದು ಸ್ಟೇಡಿಯಂ ರೆಡಿಯಾಗಲಿದೆ ಎಂದು ಕೆಎಸ್​ಸಿಎ ಕಾರ್ಯದರ್ಶಿ ಸಂತೋಷ್​ ಮೆನನ್​ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಲ್ಲಿ ಆಡೋಕೆ ಆರ್​​ಸಿಬಿನೇ ರೆಡಿಯಿಲ್ಲ!
ಆರ್​​​ಸಿಬಿ ಫ್ರಾಂಚೈಸಿಗೆ ಈ ಸ್ಟೇಡಿಯಂನಲ್ಲಿ ಆಡೋಕೆ ಮನಸ್ಸಿಲ್ಲ. ಈಗಾಗಲೇ ಚತ್ತಿಸ್​ಘಢದ ರಾಯ್​​ಪುರ್​​ ಸ್ಟೇಡಿಯಂನಲ್ಲಿ ಮುಂದಿನ ಸೀಸನ್​ನ 2 ಹೋಮ್​ ಮ್ಯಾಚ್​ಗಳನ್ನ ಆರ್​​ಸಿಬಿ ಆಡೋದು ಕನ್​ಫರ್ಮ್​ ಆಗಿದೆ. ಈ ಬಗ್ಗೆ ಛತ್ತೀಸ್​ಘಡ ಮುಖ್ಯಮಂತ್ರಿಯನ್ನ ಭೇಟಿಯಾಗಿ ಆರ್​​ಸಿಬಿ ಸಿಒಒ ರಾಜೇಶ್​ ಮೆನನ್​ ಚರ್ಚಿಸಿದ್ದೂ ಆಗಿದೆ. 2 ಪಂದ್ಯಗಳ ಆಯೋಜನೆ ಬಗ್ಗೆ ಛತ್ತೀಸ್​ಘಡ ಸಿಎಂ ಅಧಿಕೃತ ಘೋಷಣೆ ಮಾಡಿದ್ದೂ ಆಗಿದೆ. ಉಳಿದ 5 ಪಂದ್ಯಗಳನ್ನ ಆಡಲು ಮತ್ತೊಂದು ಗ್ರೌಂಡ್​​ಗಾಗಿ ಹುಡುಕಾಟ ನಡೆಸ್ತಿದೆ.
ಇದನ್ನೂ ಓದಿ: ಕೊನೆಗೂ ಸಿಎಂ ಕಚೇರಿಗೆ ಬಂತು ಸಂದೇಶ.. ಸದನಕ್ಕೆ ಬರ್ತಾರೆ ರಾಜ್ಯಪಾಲರು.. ಭಾಷಣ ಓದುತ್ತಾರಾ?
/filters:format(webp)/newsfirstlive-kannada/media/media_files/2025/11/17/rcb-2-2025-11-17-09-12-41.jpg)
ಚಿನ್ನಸ್ವಾಮಿಯಲ್ಲಿ ಆಡಲು ಆರ್​ಸಿಬಿಗೆ ಏನು ಸಮಸ್ಯೆ?
ಚಿನ್ನಸ್ವಾಮಿಯಲ್ಲಿ ಪಂದ್ಯ ಆಯೋಜನೆಗೆ ರಾಜ್ಯ ಸರ್ಕಾರ ಪರ್ಮಿಷನ್​ ಕೊಟ್ಟಿದೆ. ಆಯೋಜಿಸೋಕೆ ಕೆಎಸ್​​ಸಿಎ ರೆಡಿಯಿದೆ. 18 ವರ್ಷಗಳ ಕಾಲ ಚಿನ್ನಸ್ವಾಮಿಯಲ್ಲಿ ಐಪಿಎಲ್ ಟೂರ್ನಿಯನ್ನಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗೆ ಮನಸ್ಸಿಲ್ಲ. ಆರ್​​ಸಿಬಿ ಹಿಂದೇಟು ಹಾಕ್ತಿರೋದ್ರ ಹಿಂದಿನ ಇನ್​​ಸೈಡ್​ ಮಾಹಿತಿ ನ್ಯೂಸ್​ಫಸ್ಟ್​ ಕ್ರಿಕೆಟ್​ಗೆ ಲಭ್ಯವಾಗಿದೆ. ಚಿನ್ನಸ್ವಾಮಿಯಲ್ಲಿ ಪಂದ್ಯವನ್ನಾಡಲು ಆರ್​​​ಸಿಬಿ ಕೆಎಸ್​ಸಿಗೆ ಷರತ್ತನ್ನ ವಿಧಿಸಿತ್ತಂತೆ. ಸೆಕ್ಯೂರಿಟಿ, ಕ್ರೌಡ್​​ ಮ್ಯಾನೇಜ್​ಮೆಂಟ್​ ಸೇರಿದಂತೆ ಎಲ್ಲಾ ಜವಾಬ್ಧಾರಿಯನ್ನ ನೀವೇ ನಿರ್ವಹಿಸಬೇಕು ಎಂದು ಕೆಎಸ್​​ಸಿಎಗೆ ತಿಳಿಸಿತ್ತು. ಇದಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್​ ಸಂಸ್ಥೆ ನಮ್ಮ ಕೆಲಸ ಏನಿದ್ರೂ ಕ್ರಿಕೆಟ್. ಬೇರೆದಕ್ಕೆ ತಲೆ ಹಾಕಲ್ಲ ಎಂದು ಕಡ್ಡಿ ಮುರಿದಂತೆ ಹೇಳಿತ್ತು. ಇದು ಆರ್​​ಸಿಬಿ ಚಿನ್ನಸ್ವಾಮಿ ಬಿಡಲು ಮುಂದಾಗಿರೋದಕ್ಕೆ ಪ್ರಮುಖ ಕಾರಣ.
ಇದನ್ನೂ ಓದಿ: ಯಶಸ್ವಿಯಾಗಿ ಸಂಪನ್ನಗೊಂಡ ಕ-ರೈಡ್‌ನ ನಾಗರಿಕ–ಹಿತಾಸಕ್ತಿದಾರರ ಸಂಪರ್ಕ ಕಾರ್ಯಕ್ರಮ
ಇಷ್ಟೇ ಅಲ್ಲ.. ಕಾಲ್ತುಳಿತ ಪ್ರಕರಣದಲ್ಲಿ ಆರೋಪಿಯಾಗಿರೋ ಆರ್​​ಸಿಬಿ ವಿರುದ್ಧ ಸದ್ಯದಲ್ಲೇ ಮತ್ತೊಂದು ಚಾರ್ಜ್​ಶೀಟ್​ ಓಪನ್​ ಆಗಲಿದೆಯಂತೆ. ಇದ್ರಿಂದ, ಫ್ರಾಂಚೈಸಿ ಭಯಬಿದ್ದಿದೆ. ಈಗಾಗಲೇ ಆರ್​ಸಿಬಿ ಫ್ರಾಂಚೈಸಿಯ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿರುವುದರಿಂದ ಆಟಗಾರರು ಮತ್ತು ಮಾಲೀಕರು ಮುಜುಗರಕ್ಕೆ ಒಳಗಾಗಿದ್ದಾರೆ. ಜೊತೆಗೆ ಕ್ರೌಡ್​ ಮ್ಯಾನೇಜ್​ಮೆಂಟ್​ ವಿಚಾರದಲ್ಲಿ ಕರ್ನಾಟಕ ಸರ್ಕಾರ ಕೂಡ ಹೊಸ ನಿಯಮ ಜಾರಿಗೆ ತಂದಿದ್ದು, ಏನೇ ಸಮಸ್ಯೆಗಳು ಉಂಟಾದ್ರೂ, ಆಯೋಜಕರೇ ಹೊಣೆಗಾರರು ಎಂದು ಹೇಳಿದೆ. ಇದನ್ನೆಲ್ಲಾ ನಿಭಾಯಿಸೋಕೆ ಆಗಲ್ಲ ಎಂದೆ ಆರ್​​ಸಿಬಿ ಹಿಂದೆ ಸರಿಯೋಕೆ ಮುಂದಾಗಿದೆ.
ಒಟ್ಟಿನಲ್ಲಿ, ಚೆಂಡು ಈಗ ಆರ್​​ಸಿಬಿ ಕೋರ್ಟ್​​ನಲ್ಲಿದೆ. 18 ವರ್ಷಗಳ ಕಾಲ ಅಪರಿಮಿತ ಅಭಿಮಾನ ಮೆರೆದ ಅಭಿಮಾನಿಗಳಿಗಾಗಿ ಚಿನ್ನಸ್ವಾಮಿಯಲ್ಲಿ ಆಡ್ತಾರಾ.? ಅಥವಾ ನಾವು ಸೇಫಾದ್ರೆ ಸಾಕಪ್ಪಾ ಅಂತಾ ಬೇರೆ ಸ್ಟೇಡಿಯಂಗೆ ಆರ್​​ಸಿಬಿ ಫ್ರಾಂಚೈಸಿ ಪಲಾಯನ ಮಾಡುತ್ತಾ.? ಕಾದು ನೋಡೋಣ.
ಇದನ್ನೂ ಓದಿ: ಉಗ್ರಂ ಮಂಜುಗೆ ಮದುವೆ ಸಂಭ್ರಮ.. ಅರಿಶಿಣ ಶಾಸ್ತ್ರದಲ್ಲಿ ಮಿಂದೆದ್ದ ಸ್ಟಾರ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us