ಕೊನೆಗೂ ಸಿಎಂ ಕಚೇರಿಗೆ ಬಂತು ಸಂದೇಶ.. ಸದನಕ್ಕೆ ಬರ್ತಾರೆ ರಾಜ್ಯಪಾಲರು.. ಭಾಷಣ ಓದುತ್ತಾರಾ?

ರಾಜ್ಯ ಸರ್ಕಾರ ಮತ್ತು ರಾಜಭವನದ ನಡುವೆ ಹಲವು ವಿಚಾರಗಳಲ್ಲಿ ಶೀತಲ ಸಮರ ನಡೆಯುತ್ತಿರುವ ಬೆನ್ನಲ್ಲೇ, ರಾಜ್ಯ ರಾಜಕೀಯದ ಕುತೂಹಲ ಕೆರಳಿಸಿದ್ದ ಪ್ರಶ್ನೆಯೊಂದಕ್ಕೆ ಈಗ ಉತ್ತರ ಸಿಕ್ಕಿದೆ. ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರು ಜಂಟಿ ಅಧಿವೇಶನಕ್ಕೆ ಹಾಜರಾಗುವುದು ಈಗ ಬಹುತೇಕ ಖಚಿತವಾಗಿದೆ.

author-image
Ganesh Kerekuli
thawar chand gehlot
Advertisment

ಬೆಂಗಳೂರು: ರಾಜ್ಯ ಸರ್ಕಾರ ಮತ್ತು ರಾಜಭವನದ ನಡುವೆ ಹಲವು ವಿಚಾರಗಳಲ್ಲಿ ಶೀತಲ ಸಮರ ನಡೆಯುತ್ತಿರುವ ಬೆನ್ನಲ್ಲೇ, ರಾಜ್ಯ ರಾಜಕೀಯದ ಕುತೂಹಲ ಕೆರಳಿಸಿದ್ದ ಪ್ರಶ್ನೆಯೊಂದಕ್ಕೆ ಈಗ ಉತ್ತರ ಸಿಕ್ಕಿದೆ. ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರು ಜಂಟಿ ಅಧಿವೇಶನಕ್ಕೆ ಹಾಜರಾಗುವುದು ಈಗ ಬಹುತೇಕ ಖಚಿತವಾಗಿದೆ.

ಸ್ಪೀಕರ್ ಮತ್ತು ಸಿಎಂ ಕಚೇರಿಗೆ ಸಂದೇಶ

ರಾಜ್ಯಪಾಲರು ಸದನಕ್ಕೆ ಹಾಜರಾಗುವ ಕುರಿತು ವಿಧಾನಸಭಾ ಸ್ಪೀಕರ್ ಹಾಗೂ ಮುಖ್ಯಮಂತ್ರಿಗಳ (CMO) ಕಚೇರಿಗೆ ಅಧಿಕೃತ ಸಂದೇಶ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಮೂಲಕ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಭಾಗಿಯಾಗುವುದು ದೃಢಪಟ್ಟಿದೆ. ಈ ಕುರಿತು 'ಲೋಕಭವನ'ದ ಉನ್ನತ ಮೂಲಗಳು ಮಾಹಿತಿಯನ್ನು ನೀಡಿವೆ.

ಭಾಷಣದ ಸುತ್ತ ನಿಗೂಢತೆ: 11 ಪ್ಯಾರಾಗಳ ಸಸ್ಪೆನ್ಸ್

ರಾಜ್ಯಪಾಲರು ಸದನಕ್ಕೆ ಬರುವುದು ಖಚಿತವಾಗಿದ್ದರೂ, ಅವರು ಸರ್ಕಾರದ ಪರವಾಗಿ ಸಿದ್ಧಪಡಿಸಲಾದ ಭಾಷಣವನ್ನು ಪೂರ್ಣ ಪ್ರಮಾಣದಲ್ಲಿ ಓದುತ್ತಾರೆಯೇ ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ. ಸರ್ಕಾರ ಸಿದ್ಧಪಡಿಸಿರುವ ಭಾಷಣದ 11 ಪ್ರಮುಖ ಪ್ಯಾರಾಗಳನ್ನು ರಾಜ್ಯಪಾಲರು ಓದುತ್ತಾರಾ ಅಥವಾ ಇಲ್ಲವಾ? ಎಂಬುದು ಸದ್ಯಕ್ಕೆ ನಿಗೂಢವಾಗಿದೆ.

ಇದನ್ನೂ ಓದಿ: ಉಗ್ರಂ ಮಂಜುಗೆ ಮದುವೆ ಸಂಭ್ರಮ.. ಅರಿಶಿಣ ಶಾಸ್ತ್ರದಲ್ಲಿ ಮಿಂದೆದ್ದ ಸ್ಟಾರ್‌..!

ಸಾಮಾನ್ಯವಾಗಿ ರಾಜ್ಯಪಾಲರು ಸರ್ಕಾರದ ಸಾಧನೆಗಳ ಭಾಷಣವನ್ನು ಓದಬೇಕು. ಆದರೆ, ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅವರು ಕೇವಲ ಭಾಷಣದ ಪ್ರತಿಯನ್ನು ಸದನದ ಮುಂದಿಟ್ಟು (Table ಮಾಡಿ) ನಿರ್ಗಮಿಸುತ್ತಾರಾ? ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿ ನಡೆಯುತ್ತಿದೆ.

ಏನಿದು ಟೇಬಲ್ ಮಾಡುವ ಚರ್ಚೆ?

ಒಂದು ವೇಳೆ ರಾಜ್ಯಪಾಲರು ಸರ್ಕಾರದ ನೀತಿ ಅಥವಾ ವಿಷಯಗಳ ಬಗ್ಗೆ ಅಸಮಾಧಾನ ಹೊಂದಿದ್ದರೆ, ಪೂರ್ಣ ಭಾಷಣ ಓದುವ ಬದಲಿಗೆ ಅದರ ಪ್ರತಿಯನ್ನು ಸದನದ ಮೇಜಿನ ಮೇಲಿಟ್ಟು "ಭಾಷಣ ಓದಲಾಗಿದೆ" ಎಂದು ಪರಿಗಣಿಸುವಂತೆ ತಿಳಿಸಿ ಹೊರಡುವ ಸಾಧ್ಯತೆಗಳೂ ಇರುತ್ತವೆ. ರಾಜ್ಯಪಾಲರು ಈ ಬಾರಿ ಯಾವ ಹಾದಿ ತುಳಿಯಲಿದ್ದಾರೆ ಎಂಬುದು ಇಡೀ ರಾಜ್ಯದ ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರದ ಸಾಧನೆಗಳ ಪಟ್ಟಿಯನ್ನು ರಾಜ್ಯಪಾಲರು ಅಧಿವೇಶನದಲ್ಲಿ ಹೇಗೆ ಮಂಡಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಯಶಸ್ವಿಯಾಗಿ ಸಂಪನ್ನಗೊಂಡ ಕ-ರೈಡ್‌ನ ನಾಗರಿಕ–ಹಿತಾಸಕ್ತಿದಾರರ ಸಂಪರ್ಕ ಕಾರ್ಯಕ್ರಮ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

CM SIDDARAMAIAH thawar chand gehlot session
Advertisment