/newsfirstlive-kannada/media/media_files/2025/11/29/siddaramaiah-dk-shivakumar-1-2025-11-29-08-55-20.jpg)
ಇವತ್ತು ಬೆಳಗ್ಗೆ ಬೆಂಗಳೂರಲ್ಲಿ ಬ್ರೇಕ್​​ಫಾಸ್ಟ್​ ಪಾಲಿಟಿಕ್ಸ್​.. ನಾಳೆ ದೆಹಲಿಯಲ್ಲಿ ಪವರ್​ಶೇರಿಂಗ್ ಪಾಲಿಟ್ರಿಕ್ಸ್​​ಗೆ ಅಖಾಡ ರಂಗೇರಿದೆ.. ಈ ಮಧ್ಯೆ ಸಿಎಂ ಪುತ್ರ ಯತೀಂದ್ರ ಅಪ್ಪನನ್ನು ಅಧಿಕಾರದಿಂದ ಕೆಳಗಿಸುವ ಷಡ್ಯಂತ್ರ ಅಂತ ಬಾಂಬ್ ಸಿಡಿಸಿದ್ದಾರೆ.
ಇತ್ತ ಎಸ್​.ಟಿ.ಸೋಮಶೇಖರ್,​​​ ಡಿಕೆಶಿ ಹಣೆಯಲ್ಲಿ ಬರೆದಿದ್ರೆ ಸಿಎಂ ಆಗ್ತಾರೆ ಅಂತ ಕವಡೆ ಹಾಕಿದ್ರೆ ಚಲುವರಾಯಸ್ವಾಮಿ ಮಾತ್ರ ಲಿಮಿಟ್ ಮೀರಲ್ಲ ಎಂದಿದ್ದಾರೆ. ಸಚಿವ ಮುನಿಯಪ್ಪ ಮನೆಯ ಹಿರಿಯರಂತೆ ಒಂದಷ್ಟು ಸಲಹೆ ಕೊಟ್ಟಿದ್ದಾರೆ.
ಅಪ್ಪನ ಪರ ಜಾತಿ ಅಸ್ತ್ರ ಪ್ರಯೋಗಿಸಿದ ಪುತ್ರ ಡಾ.ಯತೀಂದ್ರ!
ಕುರ್ಚಿ ಕಾಳಗದಲ್ಲಿ ಸಿಎಂ ಪುತ್ರ ಡಾ.ಯತೀಂದ್ರ ಮುಖ್ಯಮಂತ್ರಿಗಾದಿಗಾಗಿ ಆಂತರಿಕ ತಿಕ್ಕಾಟದ ನಡುವೆ ತಮ್ಮ ತಂದೆ ಪರ ಪ್ರಬಲ ಜಾತಿ ಅಸ್ತ್ರ ಪ್ರಯೋಗಿಸಿದ್ದಾರೆ. ಮಂಡ್ಯದ ಕುರುಬ ಸಂಘದ ಕಾರ್ಯಕ್ರಮದಲ್ಲಿ ಮಾತನಾಡಿರೋ ಡಾಕ್ಟರ್, ಹಿಂದುಳಿದವರನ್ನೇ ಸಿಎಂ ಸ್ಥಾನದಲ್ಲಿ ಉಳಿಸಿಕೊಳ್ಳುವಂತೆ ಹೈಕಮಾಂಡ್​ಗೆ ಪರೋಕ್ಷ ಸಂದೇಶ ರವಾನಿಸಿದ್ದಾರೆ.
ಇದನ್ನೂ ಓದಿ:ಸಿದ್ದು-ಡಿಕೆಶಿ ಬ್ರೇಕ್​ಫಾಸ್ಟ್​ ಮೀಟಿಂಗ್.. ಕ್ಷಣ ಕ್ಷಣದ LIVE UPDATES
ಹೈಕಮಾಂಡ್​ ನಿರ್ಧಾರಕ್ಕೆ ಸಿಎಂ-ಡಿಸಿಎಂ ಬದ್ಧ ಅಂತ ಹೇಳ್ತಾನೇ ರಾಜ್ಯದಲ್ಲಿ ಹಿಂದುಳಿದವರು ಸಿಎಂ ಆಗಿರೋದು ತುಂಬಾ ಕಮ್ಮಿ, ಹಿಂದುಳಿದ ವರ್ಗದವರು ಸಣ್ಣ ತಪ್ಪು ಮಾಡಿದ್ರೂ ದೊಡ್ಡದಾಗಿ ಬಿಂಬಿಸಿ ಅಧಿಕಾರದಿಂದ ಇಳಿಸುವ ಷಡ್ಯಂತ್ರ ನಡೆಸ್ತಾರೆ ಅಂತ ಸಿಡಿಸಿದ್ದಾರೆ.
ಒಂದು ಸಣ್ಣ ತಪ್ಪು ಮಾಡಿದ್ರೂ ಅದನ್ನು ದೊಡ್ಡದಾಗಿ ಬಿಂಬಿಸುತ್ತಾರೆ. ಇಲ್ಲದೇ ಇರೋ ಘಟನೆಗಳನ್ನು ಸೃಷ್ಟಿಸುತ್ತಾರೆ. ಅಧಿಕಾರದಿಂದ ಕೆಳಗೆ ಇಳಿಸಬೇಕು ಎಂಬ ಪ್ರಯತ್ನವನ್ನು ಮಾಡುತ್ತಾರೆ. ರಾಜಕೀಯ ಶಕ್ತಿಯೂ ಕೂಡ ಬಹಳ ಮುಖ್ಯ.
ಸುಮುದಾಯದಲ್ಲಿ ಒಬ್ಬ ವ್ಯಕ್ತಿ ರಾಜಕೀಯವಾಗಿ ದೊಡ್ಡ ಮೊಟ್ಟದಲ್ಲಿದ್ದರೆ, ಅದರಿಂದ ಎಲ್ಲರಿಗೂ ಪ್ರಯೋಜನ ಆಗಲಿದೆ. ಆ ರಾಜಕೀಯ ಶಕ್ತಿಯನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕು. ಮುಖ್ಯಮಂತ್ರಿಯೋ ಅಥವಾ ಯಾವುದೋ ದೊಡ್ಡ ಹುದ್ದೆಯನ್ನು ಪಡೆದುಕೊಂಡರೆ ಅದರಿಂದ ಉಳಿದುಕೊಳ್ಳುವುದು ದೊಡ್ಡ ಕಷ್ಟ. ರಾಜ್ಯದಲ್ಲಿ ಇವತ್ತು ಸುಮಾರು 23 ಜನ ಮುಖ್ಯಮಂತ್ರಿಗಳಾಗಿ ಹೋಗಿದ್ದಾರೆ. 23 ಜನ ಮುಖ್ಯಮಂತ್ರಿಗಳಲ್ಲಿ ಹಿಂದುಳಿದ ವರ್ಗದ ಮುಖ್ಯಮಂತ್ರಿಗಳು ಯಾರು ಅಂದರೆ ಬರೀ ಐದು ಜನ. ದಲಿತ ವರ್ಗದವರು ಇದುವರೆಗೆ ಮುಖ್ಯಮಂತ್ರಿ ಆಗಿಯೇ ಇಲ್ಲ ಹಣೆಯಲ್ಲಿ ಬರೆದಿದ್ರೆ ಡಿ.ಕೆ ಶಿವಕುಮಾರ್ ಸಿಎಂ ಆಗ್ತಾರೆ
ಡಾ.ಯತೀಂದ್ರ ಸಿದ್ದರಾಮಯ್ಯ, ಸಿಎಂ ಪುತ್ರ
ಬಿಜೆಪಿಯಿಂದ ಎಕ್ಸ್​​ಪೆಲ್ ಆಗಿರೋ, ಕಾಂಗ್ರೆಸ್​​​ನಲ್ಲಿ ಗುರ್ತಿಸಿಕೊಂಡಿರೋ ಮಾಜಿ ಸಚಿವ ಎಸ್​.ಟಿ.ಸೋಮಶೇಖರ್​, ಡಿ.ಕೆ.ಶಿವಕುಮಾರ್ ಹಣೆಲಿ ಬರೆದಿದ್ರೆ ಸಿಎಂ ಆಗ್ತಾರೆ, ಹಿಂದೆ ಕೆಎಂಎಫ್ ಅಧ್ಯಕ್ಷ ಆಗದ ಸದಾನಂದಗೌಡರು ಸಿಎಂ ಆಗಿಲ್ವಾ ಅಂತ ಎಕ್ಸಾಂಪಲ್ ಕೊಟ್ಟು ಡಿಕೆ ಪರ ಬ್ಯಾಟ್ ಬೀಸಿದ್ದಾರೆ.
ಡಿಕೆಶಿ ಶ್ರಮಾದಾನದ ನೆನೆದ ಸಚಿವ ಕೆ.ಹೆಚ್.ಮುನಿಯಪ್ಪ
ಕುರ್ಚಿ ಕದನದ ನಡುವೆ ಒಂದು ರೌಂಡ್ ಡೆಲ್ಲಿಗೆ ಹೋಗಿ ಬಂದಿರುವ ಚಲುವರಾಯಸ್ವಾಮಿ ನಾನು ಲಿಮಿಟ್ ಕ್ರಾಸ್ ಮಾಡಲ್ಲ, ಸಮಯ ಬರಲಿ, ಆಗೋದೆಲ್ಲಾ ಒಳ್ಳೇದಕ್ಕೆ ಎನ್ನುವಂತೆ ಮಾತನಾಡಿದ್ದಾರೆ. ಮತ್ತೊಂದೆಡೆ ಹಿರಿಯ ಸಚಿವ ಕೆ.ಹೆಚ್.ಮುನಿಯಪ್ಪ ಡಿಕೆಶಿ ಅಧ್ಯಕ್ಷರಾದ ಬಳಿಕ ಪಕ್ಷ ಕಟ್ಟಲು ಶ್ರಮವಹಿಸಿದ್ದಾರೆ ಅಂತ ಡಿಕೆಶಿ ಕೂಡ ಸಿಎಂ ಸ್ಥಾನಕ್ಕೆ ಎಲಿಜಬೆಲ್ ಎಂದಿದ್ದಾರೆ.
ಒಟ್ಟಾರೆ, ವಿರಾಗಿಯಂತೆ ಮಾತನಾಡುವ ಡಿಸಿಎಂ ಡಿಕೆಶಿ ಕಣ್ಣು ಶತಾಯಗತಾಯ ಕುರ್ಚಿ ಮೇಲೆ ಕೂರುವುದು. ಆದ್ರೆ, ಸಿಂಹಾಸನದಿಂದ ಇಳಿಯಬಾರದು ಅನ್ನೋದು ಸಿದ್ದರಾಮಯ್ಯ ಛಲ.. ಇಬ್ಬರ ನಡುವೆ ಯಾರನ್ನು ಉಳಿಸಿಕೊಳ್ಳುವುದು ಎಂಬ ಹೊಯ್ದಾಟದಲ್ಲಿ ಕಾಂಗ್ರೆಸ್​​ ಹೈಕಮಾಂಡ್ ಚಿತ್ತ ಚಂಚಲವಾಗಿದೆ..
ಇನ್ನಷ್ಟು ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us