/newsfirstlive-kannada/media/media_files/2025/11/22/dk-shivakumar-6-2025-11-22-08-13-21.jpg)
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಿದ ಸಂಭ್ರಮ ಸಡಗರ ಹೊತ್ತಲ್ಲೇ ನವೆಂಬರ್ ಕ್ರಾಂತಿ ಗೀತೆ ಮೊಳಗೋಕೆ ಶುರುವಾಗಿದೆ. ನಾಯಕತ್ವ ಬದಲಾವಣೆಯ ಗಾಳಿ ಜೋರಾಗಿ ಬೀಸ್ತಿದೆ. ಅದಕ್ಕೆ ಫುಲ್​ ಸ್ಟಾಪ್​ ಹಾಕಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಬೆಂಗಳೂರಿಗೆ ಆಗಮಿಸಿದ್ರು, ಸಮಸ್ಯೆಗಳಿಗೆ ಒಂದು ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗ್ತಿದೆ..
ಖರ್ಗೆ ಮನೆಯೇ ಈಗ ಪವರ್ ಸೆಂಟರ್ ಹೌಸ್
ಸದ್ಯ ಕಾಂಗ್ರೆಸ್​​ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ಮನೆ ಪವರ್ ಸೆಂಟರ್ ಹೌಸ್ ಆಗಿದೆ. ಖರ್ಗೆ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ಮೊನ್ನೆ ಯಾರನ್ನು ಭೇಟಿ ಮಾಡದ ಎಐಸಿಸಿ ಅಧ್ಯಕ್ಷರು ಬೆಂಗಳೂರಿಗೆ ಬಂದಿದ್ದಾರೆ.. ಇಂದು ಸಂಜೆ ಮಲ್ಲಿಕಾರ್ಜುನ ಖರ್ಗೆ ಭೇಟಿಗೆ ಸಿಎಂ ಸಿದ್ದರಾಮಯ್ಯ ಸಮಯಾವಕಾಶ ಕೇಳಿದ್ದಾರೆ. ಆದ್ರೆ, ಸಿಎಂ ಸಿದ್ದರಾಮಯ್ಯ ಭೇಟಿಗೂ ಮುಂಚೆಯೇ ಡಿ.ಕೆ.ಶಿವಕುಮಾರ್ ಭೇಟಿಯಾಗಿ ಚರ್ಚೆ ಮಾಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ..
ಇದನ್ನೂ ಓದಿ: ಬೆಂಗಳೂರಿನ ಜೈಲು ಅಧಿಕಾರಿಗಳಿಗೆ ಡಿಕೆಶಿ ತರಾಟೆ: ಜೈಲಿನಲ್ಲಿ ಬೆಂಬಲಿಗ ಶಾಸಕರ ಜೊತೆ ಡಿಕೆಶಿ ಚರ್ಚೆ
/filters:format(webp)/newsfirstlive-kannada/media/media_files/2025/11/21/dk-shivakumar-5-2025-11-21-15-46-36.jpg)
ಡಿಕೆಶಿ ಕುರ್ಚಿ ಕಸರತ್ತು
- ಡಿಕೆಶಿಯಿಂದ ಮುಂದುವರಿದ ಸಿಎಂ ಕುರ್ಚಿ ಕಸರತ್ತು
- ಡಿ.ಕೆ.ಶಿವಕುಮಾರ್​ ಭೇಟಿಯಾದ ಅತ್ಯಾಪ್ತ ಶಾಸಕರು
- ಸದಾಶಿವನಗರದ ನಿವಾಸದಲ್ಲಿ ಡಿಕೆ ಜೊತೆ ಮಾತುಕತೆ
- ಶಾಸಕರಾದ ಸಿ.ಪಿ.ಯೋಗೇಶ್ವರ್, ಶ್ರೀನಿವಾಸ ಮಾನೆ,
- ಪ್ರಕಾಶ್ ಕೋಳಿವಾಡ, ಯಾಸಿರ್ ಖಾನ್ ಪಠಾಣ್​​ ಭೇಟಿ
- ಖರ್ಗೆ ಬೆಂಗಳೂರಿಗೆ ಬಂದ ಬೆನ್ನಲ್ಲೇ ಶಾಸಕರ ಜೊತೆ ಚರ್ಚೆ
- ಕುತೂಹಲ ಮೂಡಿಸಿದ ‘ಕೈ’ ಶಾಸಕರ ಜೊತೆಗಿನ ಡಿಕೆ ಚರ್ಚೆ
ಅಧಿಕಾರ ಬದಲಾವಣೆ, ಸಂಪುಟ ವಿಸ್ತರಣೆ ರಾಜ್ಯ ರಾಜಕೀಯದಲ್ಲಿ ಮಾತ್ರವಲ್ಲದೇ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗ್ತಿದೆ. ಬಣ ನಾಯಕರು, ಶಾಸಕರ ಗುಂಪು ಪ್ರತ್ಯೇಕ ಸಭೆ ನಡೆಸುತ್ತಿದ್ದಾರೆ. ಹೈಕಮಾಂಡ್ ಭೇಟಿ ಮಾಡಿ ಖಾಸ್​ಬಾತ್​ನಲ್ಲಿ ಬ್ಯುಸಿಯಾಗಿದ್ದಾರೆ. ಒಂದೆಡೆ ಸಿದ್ದರಾಮಯ್ಯ ಬೆಂಬಲಿಗರು ಸಭೆ ನಡೆಸಿದರೆ, ಮತ್ತೊಂದೆಡೆ ಡಿಕೆಶಿ ಬೆಂಬಲಿಗರೂ ದೆಹಲಿ ಪ್ರಯಾಣ, ಹೈಕಮಾಂಡ್ ಭೇಟಿ, ಮಾತುಕತೆ, ಸಭೆ ನಡೆಸುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಡಿಕೆ ಶಿವಕುಮಾರ್ ಜೇನುಕಲ್ಲು ಸಿದ್ದೇಶ್ವರ ಸ್ವಾಮೀಜಿ ಮೊರೆ ಹೋಗಿದ್ದಾರೆ.
ಇದನ್ನೂ ಓದಿ:2028ಕ್ಕೆ ನಮ್ಮದೇ ಆಡಳಿತ.. ಮಾಜಿ ಪ್ರಧಾನಿ ದೇವೇಗೌಡ ಶಪಥ..!
ದೇವರ ಮೊರೆ ಹೋದ ಡಿಕೆಶಿ
ರಾಜಕೀಯ ಚರ್ಚೆ, ಮಾತುಕತೆ ನಡುವೆ ಡಿಕೆ ಶಿವಕುಮಾರ್ ದೇವರ ಮೊರೆ ಹೋಗಿದ್ದಾರೆ. ಹಾಸನ ಜಿಲ್ಲೆ ಅರಸಿಕೆರೆಯ ಪ್ರಸಿದ್ದ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಉತ್ಸವ ಮೂರ್ತಿ ಪಲ್ಲಕ್ಕಿ ಡಿಕೆ ಶಿವಕುಮಾರ್ ನಿವಾಸಕ್ಕೆ ಆಗಮಿಸಿದೆ. ಡಿಕೆಶಿವಕುಮಾರ್ ನಿವಾಸದ ಒಳಗೆ ವಿಶೇಷ ಪೂಜೆ ನೇರವೆರಿಸಲಾಗಿದೆ. ಡಿಕೆ ಶಿವಕುಮಾರ್ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಜೇನುಕಲ್ಲು ಸಿದ್ದೇಶ್ವರ ಸ್ವಾಮೀಜಿ ಮೊರೆಹೋಗಿದ್ದಾರೆ. ಜುಲೈ 26 ಕ್ಕೆ ಸಿದ್ದೇಶ್ವರ ಸನ್ನಿಧಾನಕ್ಕೆ ಡಿಕೆಶಿ ಭೇಟಿ ನೀಡಿದ್ದರು. ಹರಕೆ ಸಲ್ಲಿಸಿ ಸಿದ್ದೇಶ್ವರ ಸ್ವಾಮಿಯಲ್ಲಿ ಪ್ರಾರ್ಥಿಸಿದ್ದ ಡಿಸಿಎಂ ಡಿಕೆಶಿ ಪ್ರಾರ್ಥನೆ ಮಾಡಿದ್ದರು.
ಕುರ್ಚಿ ಕಿತ್ತಾಟ ನಡುವೆ ಸಿಎಂ, ಡಿಸಿಎಂ ಒಂದೊಂದು ರೀತಿ ಹೇಳಿಕೆ ನೀಡ್ತಿದ್ದಾರೆ. ಮುಖ್ಯಮಂತ್ರಿಗಳು ಐದು ವರ್ಷ ಇರುವುದಿಲ್ಲ ಎಂದು ನಾವು ಹೇಳಿಲ್ಲ. ಅವರೇ ಐದು ವರ್ಷ ಇರುವುದಾಗಿ ಹೇಳಿದ್ದಾರೆ. ದೊಡ್ಡವರು ಹೇಳಿದ ಮೇಲೆ, ನಾವು ಚಿಕ್ಕವರು ಗೌರವದಿಂದ ಕೇಳಿಕೊಂಡು ನಮ್ರತೆಯಿಂದ ಇರಬೇಕುʼಎಂದು ಡಿ.ಕೆ ಹೇಳಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us