ಸಿಎಂ ಸಿದ್ದರಾಮಯ್ಯ 24 ಮ*ರ್ಡರ್ಗಳನ್ನ ಮಾಡಿದ್ದಾರೆ. ತಕ್ಷಣ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು. ನಮ್ಮ ಶಾಸಕರೇ ಹೇಳಿದ್ಮೇಲೆ ನಮಗ್ಯಾಕೆ ಭಯ? ಸಿದ್ದರಾಮಯ್ಯ ನೂರಕ್ಕೆ ನೂರು ಹ*ತ್ಯೆ ಮಾಡಿದ್ದಾರೆ ಎಂಬ ಮಹೇಶ್ ತಿಮರೋಡಿ ಹೇಳಿಕೆ ರಾಜ್ಯದಲ್ಲಿ ಸಂಚಲ ಸೃಷ್ಟಿಸಿದೆ. ಎರಡು ವರ್ಷಗಳ ಹಿಂದೆ ತಿಮರೋಡಿ ಮಾಡಿರುವ ಆರೋಪಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ತಿಮರೋಡಿ ವಿರುದ್ಧ ಕ್ರಮಕ್ಕೆ ಸೂಚನೆ
ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು, ಕ್ರಮಕ್ಕೆ ಸೂಚಿಸಿದ್ದಾರೆ. ಮಹೇಶ್ ತಿಮರೋಡಿ ವಿಚಾರ ವಿಧಾನಸಭಾ ಕಲಾಪದಲ್ಲಿ ಚರ್ಚೆ ಆಯಿತು. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ.. ಒಬ್ಬ ವ್ಯಕ್ತಿ ಸಿಎಂ ಸಿದ್ದರಾಮಯ್ಯ 28 ಕೊ*ಲೆ ಮಾಡಿದ್ದಾರೆ ಅಂದಿದ್ದಾನೆ. ಸದನ ನಡೆಯುವ ಸಂದರ್ಭದಲ್ಲೇ ಹೇಳಿದ್ದಾನೆ. ಮುಖ್ಯಮಂತ್ರಿಗಳ ಮೇಲೆ ಗಂಭೀರ ಆರೋಪ ಇದು. ಇದನ್ನ ಕೇಳಿಸಿಕೊಂಡು ನೀವು ಸುಮ್ಮನೆ ಇರ್ತೀರಾ, ಸರ್ಕಾರ ಏನು ಮಾಡ್ತಿದೆ? ಅವನಿಗೂ ಮುಸುಕು ಹಾಕಿ ತನಿಖೆ ಮಾಡ್ತೀರಾ? ಇಲ್ಲ, ಸಿಎಂ ಮೇಲೆ ತನಿಖೆ ನಡೆಸಲು ಮತ್ತೊಂದು ಎಸ್ಐಟಿಯನ್ನ ಮಾಡ್ತೀರಾ? ಎಂದು ಅಶೋಕ್ ಪ್ರಶ್ನೆ ಮಾಡಿದರು.
ಇದನ್ನೂ ಓದಿ:‘ಲೀಗಲ್ ಆಗಿಯೇ ಶ*ವ ಹೂತಿದ್ದೇನೆ..’ ಅಂದ್ನಂತೆ ಅನಾಮಿಕ! ಇಡೀ ಕರ್ನಾಟಕಕ್ಕೇ ಮಕ್ಕರ್ ಮಾಡಿಬಿಟ್ನಾ?
/filters:format(webp)/newsfirstlive-kannada/media/media_files/2025/08/18/dr-parameshwar-2025-08-18-12-53-08.jpg)
ಅಶೋಕ್ ಹೇಳಿಕೆ ಬಿಜೆಪಿ ಶಾಸಕರಾದ ಸುನಿಲ್ ಕುಮಾರ್ ಸಾಥ್ ನೀಡಿದರು. ಇದರ ಬಗ್ಗೆ ಸರ್ಕಾರ ಮೌನವಾಗಿರೋದು ಯಾಕೆ? ಯಾಕೆ ಇದರ ಬಗ್ಗೆ ಉತ್ತರ ಕೊಡ್ತಿಲ್ಲ ಎಂದು ಪ್ರಶ್ನೆ ಮಾಡಿದರು. ಬಿಜೆಪಿ ಸದಸ್ಯರ ಪ್ರಶ್ನೆಗೆ ಉತ್ತರ ನೀಡಿದ ಪರಮೇಶ್ವರ್ ಕ್ರಮಕ್ಕೆ ಸೂಚಿಸಿದರು.
ಮಹೇಶ್ ತಿಮರೋಡಿ ಹೆಸರನ್ನು ಪ್ರಸ್ತಾಪಿಸದೇ, ಪರೋಕ್ಷವಾಗಿ ಮಾತನಾಡಿದ ಗೃಹ ಸಚಿವರು.. ಆ ವ್ಯಕ್ತಿ ವಿರುದ್ಧ ಹಲವು ಕೇಸ್ ಇವೆ, ಹೆಸರು ಹೇಳಲ್ಲ. ಆ ವ್ಯಕ್ತಿಯ ವಿರುದ್ಧ ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಇಂಥ ವ್ಯಕ್ತಿಯನ್ನ ಸಮಾಜದಲ್ಲಿ ಸುಮ್ಮನೆ ಬಿಡೋದಿಲ್ಲ. ಕಾನೂನು ಚಲಾಯಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ರಾಜ್ಯದಲ್ಲಿ ಧರ್ಮಸ್ಥಳ ಪ್ರಕರಣ ಭಾರೀ ಸುದ್ದಿಯಲ್ಲಿದೆ. ಸೌಜನ್ಯ ಪರ ಹೋರಾಟಗಾರರಲ್ಲಿ ಮಹೇಶ್ ತಿಮರೋಡಿ ಕೂಡ ಒಬ್ಬರು. ಧರ್ಮಸ್ಥಳ ಕೇಸ್ನಲ್ಲಿ ಎಸ್ಐಟಿ ತನಿಖೆ ಮಾಡ್ತಿರುವ ಹೊತ್ತಿನಲ್ಲೇ, ಸರ್ಕಾರ ತಿಮರೋಡಿ ಮೇಲೆ ಕ್ರಮ ಕೈಗೊಳ್ಳಲು ಸೂಚಿಸಿರೋದು ಕೇಸ್ಗೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಇದನ್ನೂ ಓದಿ:ನಟಿ ರಮ್ಯಾ ಎದುರಿಗೆ ಬಂದಾಗ ಡಿಸಿಎಂ ಡಿಕೆಶಿ ಮಾಡಿದ್ದೇನು? ಇಬ್ಬರ ಭೇಟಿಯ ವಿಡಿಯೋ ಇಲ್ಲಿದೆ ನೋಡಿ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ