/newsfirstlive-kannada/media/media_files/2025/08/15/dharmasthala-case2-2025-08-15-18-22-19.jpg)
ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣವು ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ಇದೀಗ ಅನಾಮಿಕ ದೂರುದಾರ ವಿಶೇಷ ತನಿಖಾ ತಂಡಕ್ಕೆ ‘ಅಸಲಿ ಸತ್ಯ’ವನ್ನು ಬಿಚ್ಚಿಟ್ಟಿದ್ದಾನೆ ಎನ್ನಲಾಗಿದ್ದು, ಆ ಮೂಲಕ ಇಡೀ ಕರ್ನಾಟಕಕ್ಕೆ ಆತ ಮಕ್ಕರ್ ಮಾಡಿದ್ನಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಏನು ಹೇಳಿದ್ದಾನಂತೆ ಅನಾಮಿಕ..?
ಎಸ್ಐಟಿ ಅಧಿಕಾರಿಗಳ ತನಿಖೆ ವೇಳೆ ಅನಾಮಿಕ ನೀಡಿದ್ದಾನೆ ಎನ್ನಲಾಗಿರುವ ಇನ್ಸೈಡ್ ಮಾಹಿತಿಗಳ ಪ್ರಕಾರ..‘ ಯಾರು ನಿನ್ನ ಅಲ್ಲಿ ಬಂದು ಸಂಪರ್ಕಿಸಿದ್ದರು..?’ ಎಂದು ಎಸ್ಐಟಿ ಕೇಳಿದೆ. ಅದಕ್ಕೆ ಆತನ ಅನಾಮಿಕ ದೂರುದಾರನ ಉತ್ತರ ಹೀಗಿದೆಯಂತೆ..
ಇದನ್ನೂ ಓದಿ:ಧರ್ಮಸ್ಥಳ ಅನಾಮಿಕ ಯೂಟರ್ನ್; ಶ*ವ ಹೂತಿದ್ದು ನಾನೊಬ್ಬನೇ ಅಲ್ಲ.. ಸಂಚಲನ ಸೃಷ್ಟಿಸಿದ ಹೇಳಿಕೆ..!
‘2014ರ ಬಳಿಕ ನಾನು ತಮಿಳುನಾಡಿನಲ್ಲಿದ್ದೆ. 2023ರಲ್ಲಿ ಒಂದು ಗುಂಪು ನನ್ನನ್ನು ಸಂಪರ್ಕಿಸಿತ್ತು. ಧರ್ಮಸ್ಥಳದಲ್ಲಿ ಹೆ*ಣಗಳನ್ನು ಹೂತಿರುವ ಬಗ್ಗೆ ಕೇಳಿತ್ತು. ನಾನು ಲೀಗಲ್ ಆಗಿಯೇ ಹೆಣಗಳನ್ನು ಹೂತಿದ್ದೆ ಅಂತ ಹೇಳಿದ್ದೆ. ತಪ್ಪು ಹೇಳಿಕೆ ನೀಡುವಂತೆ ಆ ಗುಂಪು ನನ್ನನ್ನು ಕೇಳಿಕೊಂಡಿತ್ತು. ಹೀಗಾಗಿ ನಾನು ಇಲ್ಲಿಗೆ ಬಂದೆ. ನ್ಯಾಯಾಧೀಶರ ಮುಂದೆ ಹೇಳಿಕೆ ನೀಡುವಾಗ ತುಂಬಾ ಭಯ ಆಗಿತ್ತು. ಆ ಗುಂಪು ಬುರುಡೆ ಕೊಟ್ಟು ಸುಳ್ಳು ಹೇಳುವಂತೆ ನನ್ನನ್ನು ಒತ್ತಾಯಿಸಿತು. ಇವೆಲ್ಲ ಒಂದು ವರ್ಷದ ಹಿಂದೆ ನಡೆದಿರುವ ಚಟುವಟಿಕೆ ಎಂದು ಎಸ್ಐಟಿ ತನಿಖೆ ವೇಳೆ ಹೇಳಿದ್ದಾನೆ’ ಎನ್ನಲಾಗಿದೆ. ಇದು ಸತ್ಯವೋ? ಸುಳ್ಳೋ ಅನ್ನೋದನ್ನ ಅನಾಮಿಕ ದೂರುದಾರ ಬಹಿರಂಗವಾಗಿ ಹೇಳಿಕೆ ನೀಡಬೇಕು. ಇಲ್ಲ, ಎಸ್ಐಟಿ ಅಧಿಕಾರಿಗಳೇ ಅದರ ಬಗ್ಗೆ ಸ್ಪಷ್ಟನೆ ನೀಡಬೇಕಿದೆ.
ಇದನ್ನೂ ಓದಿ:ಧರ್ಮಸ್ಥಳದ ಪರವಾಗಿ ಬಿಜೆಪಿ ನೈತಿಕ ಬೆಂಬಲ; ಮಂಜುನಾಥನ ಸನ್ನಿಧಿಯಲ್ಲಿ ವಿಜಯೇಂದ್ರ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ