ಅವಮಾನ ಸಹಿಸಲ್ಲ, ನನ್ನ ತಾಯಿಗೆ ಪ್ರತಾಪ್ ಸಿಂಹ ಕ್ಷಮೆ ಕೇಳಬೇಕು -ಪ್ರದೀಪ್ ಈಶ್ವರ್, ವಿಡಿಯೋ

ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಪ್ರದೀಪ್ ಈಶ್ವರ್​ ನಡುವೆ ವಾಕ್ಸಮರ ಮುಂದುವರಿದಿದೆ. ಚಿಕ್ಕಬಳ್ಳಾಪುರದಲ್ಲಿ ವಾಗ್ದಾಳಿ ನಡೆಸಿರುವ ಪ್ರದೀಪ್ ಈಶ್ವರ್.. ಮೈಸೂರು ಮಾಜಿ ಸಂಸದ ನನ್ನ ತಾಯಿಗೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

author-image
Ganesh Kerekuli
Advertisment

ಚಿಕ್ಕಬಳ್ಳಾಪುರ: ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಪ್ರದೀಪ್ ಈಶ್ವರ್ ( Pratap Simha vs Pradeep Eshwar) ನಡುವೆ ವಾಕ್ಸಮರ ಮುಂದುವರಿದಿದೆ. ಚಿಕ್ಕಬಳ್ಳಾಪುರದಲ್ಲಿ ವಾಗ್ದಾಳಿ ನಡೆಸಿರುವ ಪ್ರದೀಪ್ ಈಶ್ವರ್.. ಮೈಸೂರು ಮಾಜಿ ಸಂಸದ ನನ್ನ ತಾಯಿಗೆ ಅವಮಾನ ಮಾಡಿದ್ದಾರೆ. ನಮ್ಮ ತಾಯಿ‌ ಸ್ವರ್ಗದಲ್ಲಿದ್ದಾರೆ, ನೀನು ಅಲ್ಲಿಗೆ ಹೋಗಿ ಕ್ಷಮೆ ಕೇಳಬೇಡ. ಮೈಸೂರಿನಲ್ಲೇ ಚಾಮುಂಡಿ ತಾಯಿ ದೇವಸ್ಥಾನ ಇದೆ, ಅಲ್ಲಿಗೆ ಹೋಗಿ ಕ್ಷಮೆ ಕೇಳಲಿ ಎಂದಿದ್ದಾರೆ.. 

ಇಲ್ಲ ಅಂದ್ರೆ ನಿಮ್ಮ ಮನೆಯಲ್ಲಿ ಸೀತಾದೇವಿ ಫೋಟೋ ಇದ್ರೆ ಅಲ್ಲಿಯೇ ಕ್ಷಮೆ ಕೇಳು. ಪ್ರಿಯಾಂಕ್ ಖರ್ಗೆ ಹಾಗೂ ನನ್ನ ಬಗ್ಗೆ ಏನೇನೋ ಮಾತನ್ನಾಡ್ತಾರೆ. ಅಪ್ಪನ ಬಗ್ಗೆ ಮಾತನ್ನಾಡ್ತಾರೆ, ನೀನು ತ್ರಿಪುರ ಸುಂದರನಾ ಗುರು? ಅವನು ಕತ್ತಲಲ್ಲಿ ಕಾಣಿಸೋದಿಲ್ಲ ಅಂದ, ಅದಕ್ಕೆ ನಾನು ಏನನ್ನೂ ಹೇಳಿಲ್ಲ. ನಿಮಗೆ ನಮ್ಮನ್ನು ಹುಡುಕವಷ್ಟು ಬರನಾ ಎಂದೆ.. 

ಇದನ್ನೂ ಓದಿ: "ನನ್ನ ಹುಳುಕು ಏನಿದೆ ಎಲ್ಲವನ್ನು ಬಿಚ್ಚಿಡು, ನಿನ್ನದನ್ನು ನಾನು ಬಿಚ್ಚಿಡುವೆ: ಮುಂದೆ ಜೆಡಿಎಸ್ 8-9 ಸ್ಥಾನಗಳಿಗೆ ಕುಸಿಯಲಿದೆ" ಎಂದ ಡಿ.ಕೆ.ಶಿ

ನೀನು ನನ್ನ ತಾಯಿ ಬಳಿ ಕ್ಷಮೆ ಕೇಳು, ಅವರು ಕ್ಷಮಿಸಿಸುತ್ತಾರೆ. ನಾನು ಕ್ಷಮಿಸಲ್ಲ, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಮಾತನ್ನಾಡ್ತಿಯಾ? ಅವರ ವಯಸ್ಸು ಎಷ್ಟು ಅಂತಾ ಗೊತ್ತಾ? ಮುಸ್ಲಿಮರ ಬಗ್ಗೆ ನೀನು, ಯತ್ನಾಳ್ ಏನೆಲ್ಲಾ ಮಾತನಾಡ್ತೀರಾ? 500-600 ಪೇಯ್ಡ್ ಕಾಮೆಂಟ್ ಇರುತ್ತವೆ. ಆ ತರಹ ದರಿದ್ರ ನನಗೆ ಇಲ್ಲ ಗುರೂ. ಪಾರ್ಲಿಮೆಂಟ್ ಮೇಲೆ ಅಟ್ಯಾಕ್ ಆದಾಗ ಪ್ರಶ್ನೆ ಮಾಡೋದು ತಪ್ಪಾ ಎಂದು ತಿರುಗೇಟು ನೀಡಿದ್ದಾರೆ. 

ಆರ್‌ಎಸ್‌ಎಸ್ ಬ್ಯಾನ್ ಮಾಡ್ತೇವೆ ಅಂತಾ ನಾವು ಹೇಳಿದ್ವಾ? ಆರ್‌ಎಸ್‌ಎಸ್ ನೋಂದಣಿ ಪ್ರತಿ ಎಲ್ಲಿ ಅಂತಾ ಕೇಳಿದ್ದೆವು, ಕೊಟ್ರಾ? ಇದೆನಾ ಆರ್‌ಎಸ್ಎಸ್ ನಿಮ್ಮಗೆ ಕಲಿಸಿ ಕೊಟ್ಟಿರೋದು? ಸಿಟಿ ರವಿ ಅಧಿವೇಶನದಲ್ಲಿ ಒಬ್ಬ ಮಹಿಳೆ ಜೊತೆ ಹೇಗೆ ನಡೆದುಕೊಂಡ್ರು? ಮಹಾರಾಷ್ಟ್ರಗೆ ಅನುದಾನ ಎಷ್ಡು ಹೋಯ್ತು? ಕರ್ನಾಟಕಕ್ಕೆ ಎಷ್ಟು ಅನುದಾನ ಬಂತು? ಅದನ್ನ ಪ್ರಶ್ನೆ ಮಾಡಿದ್ರೆ ನೀವು ಅದನ್ನೇ ಸಾಧನೆ ಅಂದುಕೊಳ್ತೀರಾ? ಸಿ.ಟಿ‌ ರವಿ, ಪ್ರತಾಪ್ ಸಿಂಹ ಆರ್‌ಎಸ್‌ಎಸ್ ನಿಂದ ಕಲಿತದ್ದು ಇದೇನಾ? ನಿಮ್ಮ ಅಪ್ಪ, ಅಮ್ಮ ಒಳ್ಳೆಯವರು ಗುರು, ಅವರು ಮಾಡಿದ್ದು ಕೆಟ್ಟ ಕೆಲಸ ಏನಂದ್ರೆ ನಿಂಗೆ ಜನ್ಮ ಕೊಟ್ಟಿರೋದು. 

ಕೂಡಲೇ ನಮ್ಮ ತಾಯಿಗೆ ಕ್ಷಮೆ ಕೇಳು. ನಾಳೆ ಮಾಧ್ಯಮಗೋಷ್ಠಿ ಮಾಡ್ತೀಯಾ ಮಗನೇ ಮಾಡು. ನಾನು ಕರೆಯುತ್ತೇನೆ. ನೀನು ನಿಲ್ಲಿಸೋವರೆಗೂ ನಾನು ನಿಲ್ಲಿಸಲ್ಲ. Control your tongue ಮಿಸ್ಟರ್ ಪ್ರತಾಪ್ ಸಿಂಹ ಎಂದು ಆಕ್ರೋಶದಲ್ಲಿ ಮಾತನ್ನಾಡಿದ್ದಾರೆ. 

ಇದನ್ನೂ ಓದಿ: ಕಾಂಗ್ರೆಸ್​ನಲ್ಲಿ ಉತ್ತರಾಧಿಕಾರಿ ಯುದ್ಧ.. ಯತೀಂದ್ರರನ್ನ ಕೇಳಿ CM ಸಿದ್ದರಾಮಯ್ಯ ಏನ್ ಹೇಳಿದರು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

MLA Pradeep Eshwar Pratap Simha
Advertisment