ಜಾರಕಿಹೊಳಿಯನ್ನು ‘ಕ್ಲೀನ್ ಬೋಲ್ಡ್’ ಮಾಡಿದ ಹೆಬ್ಬಾಳಕರ್..!

ಬೆಳಗಾವಿಯ ಪ್ರಭಾವಿ ಕಾಂಗ್ರೆಸ್ ನಾಯಕರು ಇಂದು ಕ್ರಿಕೆಟ್ ಮೈದಾನದಲ್ಲಿ ಮಗುವಿನಂತೆ ಆಟವಾಡಿ ಗಮನ ಸೆಳೆದಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹೆಬ್ಬಾಳಕರ್ ಅವರ 'ಬಾಕ್ಸ್ ಕ್ರಿಕೆಟ್' ಜುಗಲ್ ಬಂದಿ ನೆರೆದಿದ್ದ ಜನರಿಗೆ ಭರಪೂರ ಮನರಂಜನೆ ನೀಡಿದೆ

author-image
Ganesh Kerekuli
satish jarakiholi (4)
Advertisment

ಬೆಳಗಾವಿ: ರಾಜಕೀಯದ ಜಂಜಾಟ, ಅಧಿಕಾರದ ಒತ್ತಡಗಳನ್ನು ಬದಿಗಿಟ್ಟು ಬೆಳಗಾವಿಯ ಪ್ರಭಾವಿ ಕಾಂಗ್ರೆಸ್ ನಾಯಕರು ಇಂದು ಕ್ರಿಕೆಟ್ ಮೈದಾನದಲ್ಲಿ ಮಗುವಿನಂತೆ ಆಟವಾಡಿ ಗಮನ ಸೆಳೆದಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ 'ಬಾಕ್ಸ್ ಕ್ರಿಕೆಟ್' (Box Cricket) ಜುಗಲ್ ಬಂದಿ ನೆರೆದಿದ್ದ ಜನರಿಗೆ ಭರಪೂರ ಮನರಂಜನೆ ನೀಡಿದೆ.

ಇದನ್ನೂ ಓದಿ:ಕಾಂಗ್ರೆಸ್​​ನಲ್ಲಿ ಭಾರೀ ಸಂಚಲನ ಮೂಡಿಸಿದ ಪ್ರತ್ಯೇಕ ಸಭೆ: 2 ಸಮುದಾಯಗಳ ನಾಯಕರ ರಹಸ್ಯ ಮಾತುಕತೆ ಬಗ್ಗೆ ಚರ್ಚೆ

satish jarakiholi (3)

ಸತೀಶ್ ವಿಕೆಟ್ ಉರುಳಿಸಿದ ಹೆಬ್ಬಾಳ್ಕರ್

ಬೆಳಗಾವಿಯಲ್ಲಿ ಬಾಲಭವನ ವತಿಯಿಂದ ನಿರ್ಮಿಸಲಾದ ನೂತನ ಬಾಕ್ಸ್ ಕ್ರಿಕೆಟ್ ಮೈದಾನದ ಉದ್ಘಾಟನೆ ಇಂದು ನೆರವೇರಿತು. ಉದ್ಘಾಟನೆಯ ಪ್ರಯುಕ್ತ ಸಚಿವ ಸತೀಶ್ ಜಾರಕಿಹೊಳಿ ಬ್ಯಾಟಿಂಗ್‌ಗೆ ಇಳಿದರು. ಈ ವೇಳೆ ಬಾಲ್ ಹಿಡಿದು ಎದುರಾಳಿಯಾಗಿ ನಿಂತವರು ಸಚಿವೆ ಲಕ್ಷ್ಮೀ ಹೆಬ್ಬಾಳಕರ್. ವಿಶೇಷವೆಂದರೆ, ಲಕ್ಷ್ಮೀ ಹೆಬ್ಬಾಳಕರ್ ಹಾಕಿದ ಎಸೆತಕ್ಕೆ ಸತೀಶ್ ಜಾರಕಿಹೊಳಿ 'ಕ್ಲೀನ್ ಬೋಲ್ಡ್' (Clean Bowled) ಆದರು! ಇದನ್ನು ಕಂಡ ನೆರೆದಿದ್ದ ಕಾರ್ಯಕರ್ತರು ಮತ್ತು ಜನರು ಶಿಳ್ಳೆ, ಚಪ್ಪಾಳೆ ಮೂಲಕ ಸಂಭ್ರಮಿಸಿದರು.

ಇದನ್ನೂ ಓದಿ:ವಿಪರೀತ ಜ್ವರ, ಮೈತುಂಬಾ ಸುಸ್ತು.. 103 ಡಿಗ್ರಿ ಜ್ವರದ ನಡುವಿಯೂ ಬ್ಯಾಟ್ ಬೀಸಿದ ಗಟ್ಟಿಗಿತ್ತಿ ಮಂದಾನ..!

satish jarakiholi (2)

ಬಳಿಕ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬ್ಯಾಟಿಂಗ್ ಸರದಿ. ಅಕ್ಕನಿಗೆ ಬಾಲಿಂಗ್ ಮಾಡಲು ಸಹೋದರ, ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ ಅಖಾಡಕ್ಕಿಳಿದರು. ಸ್ವಾರಸ್ಯಕರ ಸಂಗತಿ ಎಂದರೆ, ಸಚಿವೆ ಬ್ಯಾಟಿಂಗ್ ಮಾಡುತ್ತಿದ್ದಾಗ ಸಚಿವ ಸತೀಶ್ ಜಾರಕಿಹೊಳಿ ‘ವಿಕೆಟ್ ಕೀಪರ್’ (Wicket Keeper) ಆಗಿ ಕಾಣಿಸಿಕೊಂಡರು. ಹೆಬ್ಬಾಳಕರ್ ಅವರು ಸಹೋದರನ ಎಸೆತಗಳನ್ನು ಸಮರ್ಥವಾಗಿ ಎದುರಿಸಿ ಸಖತ್ ಆಗಿ ಬ್ಯಾಟ್ ಬೀಸಿದರು.

ಇದೇ ವೇಳೆ ಶಾಸಕ ಆಸೀಫ್ ಸೇಠ್ ಕೂಡ ಮೈದಾನದಲ್ಲಿ ಫೀಲ್ಡಿಂಗ್ ಮಾಡುತ್ತಾ ಸಾಥ್ ನೀಡಿದರು. ಒಟ್ಟಿನಲ್ಲಿ ರಾಜಕೀಯದಲ್ಲಿ ಸದಾ ಗಂಭೀರವಾಗಿರುತ್ತಿದ್ದ ನಾಯಕರು, ಸ್ಪೋರ್ಟ್ಸ್ ಡ್ರೆಸ್ ಇಲ್ಲದಿದ್ದರೂ ಕ್ರಿಕೆಟ್ ಆಡಿ ಫುಲ್ ಎಂಜಾಯ್ ಮಾಡಿದರು. ಇವರ ಆಟವನ್ನು ಕಣ್ತುಂಬಿಕೊಂಡ ಜನರು ನಾಯಕರ ಉತ್ಸಾಹಕ್ಕೆ ಫಿದಾ ಆಗಿದ್ದಾರೆ.

ಇದನ್ನೂ ಓದಿ: ಎಂಎಸ್‌ಎಂಇ ಗಳಿಗೆ 20 ಲಕ್ಷದವರೆಗೂ ಅಡಮಾನ ರಹಿತ ಸಾಲ: ಸೈಬರ್ ವಂಚನೆಗಳಿಗೆ 25 ಸಾವಿರ ಪರಿಹಾರಕ್ಕೆ ಆರ್‌ಬಿಐ ಪ್ರಸ್ತಾಪ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Lakshmi Hebbalkar Satish Jarkiholi
Advertisment