ವಿಪರೀತ ಜ್ವರ, ಮೈತುಂಬಾ ಸುಸ್ತು.. 103 ಡಿಗ್ರಿ ಜ್ವರದ ನಡುವಿಯೂ ಬ್ಯಾಟ್ ಬೀಸಿದ ಗಟ್ಟಿಗಿತ್ತಿ ಮಂದಾನ..!

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಹಿಳಾ ತಂಡ ಡಬ್ಲ್ಯೂಪಿಎಲ್ (WPL 2026) ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಪಂದ್ಯದಲ್ಲಿ ನಾಯಕಿ ಸ್ಮೃತಿ ಮಂದಾನ ಅವರ ಬ್ಯಾಟಿಂಗ್ ಅಬ್ಬರ ನೋಡಿದ ಯಾರಿಗೂ, ಅವರು ಎಂಥಹ ಕಠಿಣ ಪರಿಸ್ಥಿತಿಯಲ್ಲಿದ್ದರು

author-image
Ganesh Kerekuli
rcb (19)
Advertisment

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಹಿಳಾ ತಂಡ ಡಬ್ಲ್ಯೂಪಿಎಲ್ (WPL 2026) ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಪಂದ್ಯದಲ್ಲಿ ನಾಯಕಿ ಸ್ಮೃತಿ ಮಂದಾನ ಅವರ ಬ್ಯಾಟಿಂಗ್ ಅಬ್ಬರ ನೋಡಿದ ಯಾರಿಗೂ, ಅವರು ಎಂಥಹ ಕಠಿಣ ಪರಿಸ್ಥಿತಿಯಲ್ಲಿದ್ದರು ಎಂಬ ಸಣ್ಣ ಸುಳಿವು ಕೂಡ ಸಿಕ್ಕಿರಲಿಲ್ಲ. ಇದೀಗ ಆರ್‌ಸಿಬಿ ಕೋಚ್ ಸ್ಫೋಟಕ ಸತ್ಯವೊಂದನ್ನು ಬಿಚ್ಚಿಟ್ಟಿದ್ದಾರೆ.

ಹೌದು, ಫೈನಲ್ ಪಂದ್ಯದಲ್ಲಿ ಮೈದಾನಕ್ಕಿಳಿದಾಗ ಸ್ಮೃತಿ ಮಂದಾನ ಅವರಿಗೆ 'ವಿಪರೀತ ಜ್ವರ' (Massive Flu) ಇತ್ತು! ಆದರೂ ಛಲ ಬಿಡದೆ ಹೋರಾಡಿ ತಂಡವನ್ನು ಗೆಲ್ಲಿಸಿದ್ದಾರೆ. ಮಾಹಿತಿಗಳ ಪ್ರಕಾರ ಅವರು, ಬರೋಬ್ಬರಿ 103 ಡಿಗ್ರಿ ಸೆಲ್ಸಿಯಸ್ ಜ್ವರದಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಕೋಚ್ ಹೇಳಿದ್ದೇನು?

ಆರ್‌ಸಿಬಿ ತಂಡದ ಮುಖ್ಯ ಕೋಚ್ ಮಾಲೋಲನ್ ರಂಗರಾಜನ್ ಈ ಬಗ್ಗೆ ಮಾಹಿತಿ ನೀಡಿದ್ದು, ಸ್ಮೃತಿ ಮಂದಾನ ಫೈನಲ್ ಪಂದ್ಯದ ದಿನದಂದು ತೀವ್ರ ಫ್ಲೂ ಜ್ವರದಿಂದ ಬಳಲುತ್ತಿದ್ದರು. ಅವರಿಗೆ ಸರಿಯಾಗಿ ಎದ್ದು ಓಡಾಡಲೂ ಆಗುತ್ತಿರಲಿಲ್ಲ. ಆದರೆ ತಂಡಕ್ಕಾಗಿ ಅವರು ನೋವು ನುಂಗಿಕೊಂಡು ಕಣಕ್ಕಿಳಿದರು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಆಂಥ್ರೋಪಿಕ್ ಎಐ ಹೇಗೆ ಕೆಲಸ ಮಾಡುತ್ತೆ? ಇದಕ್ಕೆ ದಿಗ್ಗಜ ಐ.ಟಿ. ಕಂಪನಿಗಳೇ ನಡುಗುತ್ತಿರುವುದೇಕೆ?

ಜ್ವರದ ನಡುವೆಯೂ 87 ರನ್ ಚಚ್ಚಿದ ನಾಯಕಿ!

ಆರೋಗ್ಯ ಕೈಕೊಟ್ಟಿದ್ದರೂ, ಮನಸ್ಥೈರ್ಯ ಕಳೆದುಕೊಳ್ಳದ ಸ್ಮೃತಿ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಕೇವಲ 49 ಎಸೆತಗಳಲ್ಲಿ 87 ರನ್ ಸಿಡಿಸಿದರು. ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್‌ಗಳಿದ್ದವು. ಜ್ವರದ ನಡುವೆಯೂ ಅವರು ಮೈದಾನದಲ್ಲಿ ತೋರಿದ ಶಕ್ತಿ ಮತ್ತು ಬದ್ಧತೆ ಇದೀಗ ಕ್ರಿಕೆಟ್ ಪ್ರೇಮಿಗಳ ಹುಬ್ಬೇರಿಸಿದೆ.

ಒಬ್ಬ ನಾಯಕಿಯಾಗಿ ತಂಡವನ್ನು ಹೇಗೆ ಮುನ್ನಡೆಸಬೇಕು ಮತ್ತು ಕಷ್ಟದ ಸಮಯದಲ್ಲಿ ಹೇಗೆ ಜವಾಬ್ದಾರಿ ಹೊರಬೇಕು ಎಂಬುದಕ್ಕೆ ಸ್ಮೃತಿ ಮಂದಾನ ಅವರೇ ಸಾಕ್ಷಿ ಎಂದು ಕೋಚ್ ಮತ್ತು ಸಹ ಆಟಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ, ಸ್ಮೃತಿ ಮಂದಾನ ಕೇವಲ ಬ್ಯಾಟ್ ಮೂಲಕ ಮಾತ್ರವಲ್ಲ, ತಮ್ಮ ಅಚಲವಾದ ಇಚ್ಛಾಶಕ್ತಿಯ ಮೂಲಕವೂ ಆರ್‌ಸಿಬಿಗೆ ಟ್ರೋಫಿ ತಂದುಕೊಟ್ಟಿದ್ದಾರೆ ಎಂದರೆ ತಪ್ಪಾಗಲಾರದು.

ಇದನ್ನೂ ಓದಿ: ಕಾಂಗ್ರೆಸ್​​ನಲ್ಲಿ ಭಾರೀ ಸಂಚಲನ ಮೂಡಿಸಿದ ಪ್ರತ್ಯೇಕ ಸಭೆ: 2 ಸಮುದಾಯಗಳ ನಾಯಕರ ರಹಸ್ಯ ಮಾತುಕತೆ ಬಗ್ಗೆ ಚರ್ಚೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

smriti mandhana
Advertisment