Advertisment

ಡಿಸಿಎಂ ಶಿವಕುಮಾರ್ ಆಸೆಗೆ ಸೈಲೆಂಟ್​​​ ಕಿಲ್ಲರ್​​​​ ಸತೀಶ್​​ ಇಡ್ತಾರ ಚೆಕ್​ಮೇಟ್​​?

ನವೆಂಬರ್​​ ಕ್ರಾಂತಿ.. ಸದ್ದು ಗದ್ದಲ ಆರಂಭ.. ಕುರ್ಚಿ ಕದನಕ್ಕೆ ಮೊಳಗೇ ಬಿಡ್ತಾ ರಣಕಹಳೆ.. ಇಲ್ಲಿ ಯಾರ್​​ ಮಾತಿಗೂ ಕಿಮ್ಮತ್ತಿಲ್ಲ ಅಂತ ಕ್ರಾಂತಿವೀರರಿಗೆ ಕೌಂಟರ್​​ ಕೊಟ್ಟಿದ್ರು ಡಿಸಿಎಂ ಡಿಕೆಶಿ.. ಇದಾಗಿ 24 ಗಂಟೆ ಕಳೆದಿಲ್ಲ.. ಅದಾಗಲೇ ಡೆಲ್ಲಿ ಟೂರ್​ ಸಜ್ಜಾದ ಸತೀಶ್​​​, ರಾಜಕೀಯದ ಅಸಲೀ ಲೋಕೋಪಯೋಗಿ ಕಾರ್ಯ ಕೈಗೆತ್ತಿಕೊಂಡಿದ್ದಾರೆ.. 3 ದಿನಗಳ ಈ ದಂಡಯಾತ್ರೆಯತ್ತ ರಾಜ್ಯ ರಾಜಕಾರಣ ಕುತೂಹಲದಿಂದ ನೋಡುವಂತೆ ಮಾಡಿದೆ.

author-image
Ganesh Kerekuli
Advertisment

ನವೆಂಬರ್​​ ಕ್ರಾಂತಿ.. ಸದ್ದು ಗದ್ದಲ ಆರಂಭ.. ಕುರ್ಚಿ ಕದನಕ್ಕೆ ಮೊಳಗೇ ಬಿಡ್ತಾ ರಣಕಹಳೆ.. ಇಲ್ಲಿ ಯಾರ್​​ ಮಾತಿಗೂ ಕಿಮ್ಮತ್ತಿಲ್ಲ ಅಂತ ಕ್ರಾಂತಿವೀರರಿಗೆ ಕೌಂಟರ್​​ ಕೊಟ್ಟಿದ್ರು ಡಿಸಿಎಂ ಡಿಕೆಶಿ.. ಇದಾಗಿ 24 ಗಂಟೆ ಕಳೆದಿಲ್ಲ.. ಅದಾಗಲೇ ಡೆಲ್ಲಿ ಟೂರ್​ ಸಜ್ಜಾದ ಸತೀಶ್​​​, ರಾಜಕೀಯದ ಅಸಲೀ ಲೋಕೋಪಯೋಗಿ ಕಾರ್ಯ ಕೈಗೆತ್ತಿಕೊಂಡಿದ್ದಾರೆ.. 3 ದಿನಗಳ ಈ ದಂಡಯಾತ್ರೆಯತ್ತ ರಾಜ್ಯ ರಾಜಕಾರಣ ಕುತೂಹಲದಿಂದ ನೋಡುವಂತೆ ಮಾಡಿದೆ.

Advertisment

ನವೆಂಬರ್​ ಕ್ರಾಂತಿಗೆ ಕೌಂಟ್​​ಡೌನ್​.. ಪಟ್ಟ ಬದಲಾಗುತ್ತಾ? ಇಲ್ವಾ? ಬದಲಾವಣೆ ಆಗುವ ಪಟ್ಟಕ್ಕೆ ವಾರಸ್ದಾರ್​​​ ಯಾರು? ಆಗೋದೇ ಇಲ್ಲ ಅಂದ್ರೆ ಡಿಕೆಶಿಯ ಮುಂದಿನ ನಡೆ ಏನು? ಶಿವಕುಮಾರ್​ ಏನಾದ್ರೂ ತ್ಯಾಗಕುಮಾರ್​ ಆಗ್ತಾರ? ಅದರಲ್ಲೂ ಸತೀಶ್​​​ ಸಾಹುಕಾರ್​​ ಹೂಡಿದ ರಣತಂತ್ರ ಬಂಡೆ ಕನಸು ಛಿದ್ರ ಆಗುತ್ತಾ? ಗೊತ್ತಿಲ್ಲ.. ಆದ್ರೆ ಒಂದಂತು ಸತ್ಯ ಕಾಂಗ್ರೆಸ್​ನಲ್ಲಿ ಟೆನ್ಶನ್​ ಟೆನ್ಶನ್​ ಟೆನ್ಶನ್​​​.. 

ಇದನ್ನೂ ಓದಿ:ಬಾಲಕನ ಕತೆ ಕೇಳಿ ಮರುಗಿದ ಸುರೇಶ್ ಕುಮಾರ್.. ಬೆಂಗಳೂರಲ್ಲಿ ಹೃದಯ ಮಿಡಿದ ಸ್ಟೋರಿ..!

ಬೆಳಗಾವಿ ರಾಜಕೀಯ ಅಂದ್ರೆನೆ ಹಾಗೇ ಅಲ್ವಾ.. ಯಾವ ಜಿದ್ದಿಗೂ ಕಮ್ಮಿ ಇಲ್ಲ.. ಯಾವ ಹಂತಕ್ಕೆ ಬೇಕಾದ್ರೂ ಹೋಗುವ ತಾಕತ್ತಿನ ಯುದ್ಧಕಣವದು.. ಆ ಯುದ್ಧಕಣದಲ್ಲಿ ಸೋಲಿಲ್ಲದ ಸರದಾರನಾಗಿ ಕಿಂಗ್​​ಮೇಕರ್​​ ಆಗಿ ಬೆಳೆದು ನಿಂತಿದ್ದು ಇದೇ ಪವರ್​ಫುಲ್​​ ಲೀಡರ್​ ಜಾರಕಿಹೊಳಿ.. ಸತೀಶ್​​ ಸೈಲೆಂಟ್​​ ಹೆಜ್ಜೆ ಮೀನಿಗಿಂತ ನಿಗೂಢ.. ಅದನ್ನ ಬೆಳಗಾವಿಯ ರಾಜಕೀಯ ಬಲ್ಲವರೇ ಬಲ್ಲರು.. ಸತೀಶ್​​ ಇಟ್ಟ ಗುರಿ ತಪ್ಪಿದ್ದೇ ಇಲ್ಲ ವೀಕ್ಷಕರೆ.. ಈಗ ಅದೇ ಸತೀಶ್​​​ ನೇರವಾಗಿ ಸಿಎಂ ಕುರ್ಚಿಗೆ ಗುರಿ ಇಟ್ರಾ? ಗೊತ್ತಿಲ್ಲ.. ಒಂದ್ವೇಳೆ ಗುರಿ ಇಟ್ಟಿದ್ದೆ ಆದಲ್ಲಿ ರಾಜಕೀಯದ ಮತ್ತೊಂದು ಮಹಾಯುದ್ಧ ಫಿಕ್ಸ್​ ಅಂತಾನೆ ಅರ್ಥ.. 

Advertisment

ಸತೀಶ್​​ ಈಗ ರೇಸ್​​ಗಿಳಿದ ಕುದುರೆ.. ಸಿಎಂ ಪಟ್ಟದ ರೇಸ್​​ನಲ್ಲಿ ಸಾಹುಕಾರ್​​​​ ಹೆಸರು ಅತ್ಯಂತ ಪವರ್​ಫುಲ್​​ ಆಗಿ ರಾಜ್ಯ ರಾಜಕೀಯದ ಪಡಸಾಲೆಯಲ್ಲಿ ಓಡ್ತಿದೆ.. ಅದ್ರಲ್ಲೂ ಸಿದ್ದರಾಮಯ್ಯ ನಂತ್ರ ಅಹಿಂದ ಚಕ್ರಾಧಿಪತ್ಯಕ್ಕೆ ಸತೀಶ್​​ ಹೆಸರು ಖುದ್ದು ಯತೀಂದ್ರ ಹೇಳಿದ ಬಳಿಕ ಪಟ್ಟಾಭಿಷೇಕ ಆಟಕ್ಕೆ ಟ್ವಿಸ್ಟ್​ ಸಿಕ್ಕಿದೆ.. ಸಚಿವ ಜಾರಕಿಹೊಳಿ‌ ದೆಹಲಿ ದಂಡಯಾತ್ರೆಗೆ ಸಜ್ಜಾಗಿದ್ದು, ಕಾಂಗ್ರೆಸ್​ನ ನವೆಂಬರ್ ಕ್ರಾಂತಿಗೆ ಕ್ಲೈಮ್ಯಾಕ್ಸ್​​ ಆಟ ಶುರುವಾಯ್ತಾ ಅನ್ನೋ ಚರ್ಚೆ ಹಬ್ಬಿದೆ.

ಡೆಲ್ಲಿಗೆ ಸತೀಶ್​​​ ಪಟ್ಟದಾಟ ಶಿಫ್ಟ್​​!

  • ಮೊನ್ನೆಯಷ್ಟೇ ದೆಹಲಿ ಭೇಟಿ ಮುಗಿಸಿ ಬಂದಿದ್ದ ಡಿಸಿಎಂ ಡಿಕೆಶಿ 
  • ದೇ ನವೆಂಬರ್​​​ 11ಕ್ಕೆ ಮತ್ತೆ ಫ್ಲೈಟ್​​​ ಬುಕ್​​ ಮಾಡಿರುವ ಡಿಕೆಶಿ
  • ಅದಕ್ಕೂ ಮುನ್ನವೇ ಸತೀಶ್ ಜಾರಕಿಹೊಳಿ‌ ಡೆಲ್ಲಿ ಟೂರ್ ಫಿಕ್ಸ್​​
  • ನಾಳೆಯಿಂದ ಭರ್ತಿ ಮೂರು ದಿನಗಳ ‌ಕಾಲ ಸತೀಶ್​​​ ಪ್ರವಾಸ
  • ನವೆಂಬರ್‌ ಕ್ರಾಂತಿ ಚರ್ಚೆ ಹಿನ್ನೆಲೆ ಸತೀಶ್​​ ಪ್ರವಾಸ ಕುತೂಹಲ
  • ಭವಿಷ್ಯದ ಚುನಾವಣೆಯಲ್ಲಿ ಅಹಿಂದ ಪರಂಪರೆ ಅನಿವಾರ್ಯ
  • ಅಹಿಂದ ರಾಜಕಾರಣ ಸತತವಾಗಿ ಪ್ರತಿಪಾದಿಸ್ತಿರುವ ಸತೀಶ್​​ 
  • ಹೈಕಮಾಂಡ್​​​ಗೆ ರಾಜ್ಯ ರಾಜಕೀಯ ಬೆಳವಣಿಗೆಯ ವಿವರಣೆ
  • ಎಐಸಿಸಿ ಅಧ್ಯಕ್ಷ ಖರ್ಗೆ, ಕೆಸಿವಿ ಭೇಟಿಗೆ ಟೈಂ ಕೇಳಿದ ಸತೀಶ್​​​ 
  • ರಾಜ್ಯ ಕಾಂಗ್ರೆಸ್​​ ಉಸ್ತುವಾರಿ ಸುರ್ಜೆವಾಲ ಭೇಟಿಯ ಸಾಧ್ಯತೆ 

ಬೆಂಗಳೂರಲ್ಲಿ ಡಿಸಿಎಂ ಡಿಕೆಶಿ ಕಿವಿಗೆ ಈ ವಿಷಯ ತಲುಪಿದ್ದೆ ತಡ ಬಳಿಕ ಕೊಟ್ಟ ಉತ್ತರ, ಹೋಗುವವರಿಗೆ ಹೋಗ್ಬೇಡ ಅನ್ನೋಕೆ ಆಗುತ್ತಾ? ಹೆಡ್​​ ಆಫೀಸ್​​ನ್ನ ದೇವಸ್ಥಾನಕ್ಕೆ ಹೋಲಿಸಿದ್ರು. ಪ್ರಿಯಾಂಕ್​​ ಖರ್ಗೆ ಕೂಡ ಸತೀಶ್​​​ ಭೇಟಿಗೆ ಏನು ಮರ್ಮ ಇಲ್ಲ, ವಿಶೇಷನೂ ಅಲ್ಲ ಅಂದ್ರು.. ನಾಯಕತ್ವ ಬದಲಾವಣೆ ಚರ್ಚೆಗೆ ಸ್ವಯಂ ಬ್ರೇಕ್​​​ ಹಾಕೊಂಡ್ರು. ಡೆಲ್ಲಿಗೆ ಯಾರು? ಯಾವಾಗ? ಬೇಕಾದ್ರೂ ಹೋಗಬಹುದು.. ಆದ್ರೆ ಕಾರಣ, ಕಾಲಘಟ್ಟ ತುಂಬಾನೇ ಮುಖ್ಯ.. ಹಾಗಾಗೇ ಸತೀಶ್​​ ಸೈಲೆಂಟ್​​​ ಆಟ ಹಲವರನ್ನ ಡೆಲ್ಲಿ ವಾರ್ತೆಯತ್ತ ದೃಷ್ಟಿ ನೆಡುವಂತೆ ಮಾಡಿದೆ. 

Advertisment

ಇದನ್ನೂ ಓದಿ:ಕರುಣ್ ನಾಯರ್ ಮತ್ತೆ ಮಿಂಚು.. ಕೇರಳ ವಿರುದ್ಧ ದ್ವಿಶತಕ ಬಾರಿಸಿ ಬಿಸಿಸಿಐಗೆ ಕಪಾಳಮೋಕ್ಷ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

DK Shivakumar satish jaraliholi
Advertisment
Advertisment
Advertisment