/newsfirstlive-kannada/media/media_files/2026/01/09/siddaramaiah-2026-01-09-06-54-06.jpg)
ಬೆಂಗಳೂರು: M-ನರೇಗಾ ಬದಲು ಜಿ ರಾಮ್ ಜಿ ಜಾರಿ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರ ಸಮರ ಸಾರಿದೆ. ಕೇಂದ್ರದ ನಿರ್ಧಾರವನ್ನು ಖಂಡಿಸಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ 'M-ನರೇಗಾ ಬಚಾವ್' ಹೆಸರಿನಲ್ಲಿ ಬೃಹತ್ ಪಾದಯಾತ್ರೆ, ಪ್ರತಿಭಟನೆ ಮಾಡಲು ಕಾಂಗ್ರೆಸ್ ನಿರ್ಧರಿಸಲಾಗಿದೆ.
ಅಲ್ಲಿದೇ M-ನರೇಗಾ ಮರು ಯೋಜನೆ ಜಾರಿಗಾಗಿ ವಿಶೇಷ ಅಧಿವೇಶನಕ್ಕೆ ಕರೆಯಲು ನಿರ್ಧರಿಸಿರುವ ಸರ್ಕಾರ, ಮುಂದಿನ ಸಂಪುಟ ಸಭೆಯಲ್ಲಿ 2 ದಿನ ಅಧಿವೇಶನಕ್ಕೆ ದಿನಾಂಕ ನಿಗದಿ ಮಾಡಲಿದೆ. ಜೊತೆಗೆ 224 ವಿಧಾನಸಭಾ ಕ್ಷೇತ್ರಗಳಲ್ಲೂ 5 ರಿಂದ 10 ಕಿ.ಮೀ. ಪಾದಯಾತ್ರೆ ನಡೆಯಲಿದೆ. M-ನರೇಗಾ ಯೋಜನೆ ಕೈಬಿಡಬಾರದು ಎಂದು ಆಗ್ರಹಿಸಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ. ಸಭೆ ಬಳಿಕ ಮಾತನ್ನಾಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ರಾಜ್ಯ ಕಾಂಗ್ರೆಸ್ ಮುಖಂಡರ ಸಭೆ ನಡೆಸಲಾಯಿತು. ಶಾಸಕರು, ಸಂಸದರು,ಎಐಸಿಸಿ ಕಾರ್ಯದರ್ಶಿಗಳು ಭಾಗಿಯಾಗಿದ್ರು. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ತೆಗೆದು ಹಾಕಿದ್ದಾರೆ.
ಈ ಬಗ್ಗೆ ಹೋರಾಟ ರೂಪಿಸುವ ಸಭೆ ಆಗಿದೆ, ಶಾಸಕರ ಜೊತೆಗೂ ಚರ್ಚೆ ಮಾಡಲಾಯಿತು. ಸೋತ ಅಭ್ಯರ್ಥಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸಭೆ ಕರೆಯುವೆ. ದೇಶಕ್ಕೆ ಮಾರಕವಾದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಮೂರು ದಿನಗಳಲ್ಲಿ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಮಾತನಾಡಿ, ಜಾಗೃತಿ ಮೂಡಿಸ್ತಾರೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಪ್ರತಿಭಟನೆ ಮಾಡ್ತಾರೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಭೆ ಮಾಡಿ, ಆಚಾರ ವಿಚಾರ ತಿಳಿಸಲಿದ್ದಾರೆ.
ಇದನ್ನೂ ಓದಿ:ಬದಲಾವಣೆಯ ಪರ್ವ ನಿಮ್ಮ ಯಶಸ್ಸಿನ ಗುಟ್ಟಾಗಿರುತ್ತದೆ -ರಾಶಿ ಭವಿಷ್ಯ
ಗ್ರಾಮ ಪಂಚಾಯತ್ ನ ಹಕ್ಕನ್ನೂ ಕಿತ್ತು ಕೊಂಡಿದ್ದಾರೆ, ದೆಹಲಿಯಿಂದ ಕೊಡುವ ಕಾರ್ಯಕ್ರಮ ಮಾಡಿದ್ದಾರೆ. ವಾರದೊಳಗೆ ಕೂಲಿ ಸಿಗುವ ಶಕ್ತಿ ಇತ್ತು, ಅವರ ಖಾತೆಗೆ ಹಣ ಹೋಗಲೂ ಅವಕಾಶ ಇತ್ತು. ಶೇ.60 ರಷ್ಟು ಕೇಂದ್ರ ಸರ್ಕಾರ, 40ರಷ್ಟು ರಾಜ್ಯ ಸರ್ಕಾರ ನೀಡಬೇಕು. ನಮ್ಮ ಜೊತೆಗೆ ಚರ್ಚೆ ಮಾಡಿಲ್ಲ, ನಮ್ಮ ಆರ್ಥಿಕ ಪರಿಸ್ಥಿತಿಯ ಬಗ್ಗೆ ಚರ್ಚೆ ಮಾಡಿಲ್ಲ. ಪ್ರತಿಯೊಂದು ವಿಧಾನ ಸಭಾ ಕ್ಷೇತ್ರದಲ್ಲಿ 5 ಕಿ.ಮೀ. ಪಾದಯಾತ್ರೆ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ. ಮುಂದಿನ ಸಂಪುಟ ಸಭೆಯಲ್ಲಿ 2 ದಿನಗಳ ವಿಶೇಷ ಅದಿವೇಶನ ಕರೆಯಲು ದಿನಾಂಕ ನಿಗದಿ ಮಾಡಲು ತೀರ್ಮಾನ ಮಾಡಲಾಯಿತು.
ಸಂವಿಧಾನದ ರಕ್ಷಣೆ ಮಾಡಲು ಈ ಐತಿಹಾಸಿಕ ತೀರ್ಮಾನ ತೆಗೆದುಕೊಳ್ಳಲಾಗಿದೆ, ಬಡವರ ಸ್ವಾಭಿಮಾನಕ್ಕೆ ದಕ್ಕೆಯಾಗಿದೆ. 5 ರಿಂದ 10 ಕಿ.ಮೀ. ಪಾದಯಾತ್ರೆ ಮಾಡಲಾಗುತ್ತದೆ. ಎಲ್ಲಾ ಜನರ ರಕ್ಷಣೆ ಸರ್ಕಾರದ ಜವಾಬ್ದಾರಿ. ಧರಣಿ, ಪ್ರತಿಭಟನೆ, ಜನರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಮನ್ರೇಗಾ ಬಚಾವ್ ಪಾದಯಾತ್ರೆ ಹೆಸರಿನಲ್ಲಿ ಪಾದಯಾತ್ರೆ, ಧರಣಿ, ಪ್ರತಿಭಟನೆ ನಡೆಯಲಿದೆ ಎಂದಿದ್ದಾರೆ.
ಇದನ್ನೂ ಓದಿ: RCBನಲ್ಲಿ ಪವರ್​ ಹಿಟ್ಟರ್ಸ್.. ಸಿಂಹಿಣಿಯರು ಯುದ್ಧಕ್ಕೆ ರೆಡಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us