ಬೆಂಗಳೂರು: ಸಂಪುಟದಿಂದ ವಜಾಗೊಳಿಸಿದ್ದರ ಹಿಂದೆ ದೊಡ್ಡ ಷಡ್ಯಂತ್ರ ಇದೆ. ಸಮಯ ಬಂದಾಗ ಪಿತೂರಿ ಮಾಡಿದವರ ಬಗ್ಗೆ ಹೇಳ್ತೇನೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ನನ್ನ ಹೇಳಿಕೆ ಬಗ್ಗೆ ಹೈಕಮಾಂಡ್ಗೆ ತಪ್ಪು ಗ್ರಹಿಕೆ ಇದೆ. ದೆಹಲಿಗೆ ತೆರಳಿ ಹೈಕಮಾಂಡ್ಗೆ ಮನವರಿಕೆ ಮಾಡ್ತೀನಿ. ಇದು ಪಕ್ಷದ ತೀರ್ಮಾನ ಇದು. ಹಾಗಾಗಿ ಪಕ್ಷದ ತೀರ್ಮಾನವನ್ನು ಪ್ರಶ್ನೆ ಮಾಡಲ್ಲ. ಪಿತೂರಿ, ಷಡ್ಯಂತ್ರ ಎಲ್ಲಿಲ್ಲಿ ನಡೆದಿದೆ. ಯಾವೆಲ್ಲ ನಾಯಕರ ಜೊತೆ ಏನೆಲ್ಲ ಮಾತುಕತೆ ನಡೆದಿದೆ ಅನ್ನೋದನ್ನು ಕಾಲ ಬಂದಾಗ ಹೇಳ್ತೀನಿ.
ಇದನ್ನೂ ಓದಿ:KN ರಾಜಣ್ಣರದ್ದು ರಾಜೀನಾಮೆ ಅಲ್ಲ.. ಸಂಪುಟದಿಂದ ನೇರವಾಗಿ ಕಿಕ್ಔಟ್..!
ರಾಹುಲ್ ಗಾಂಧಿ, ವೇಣು ಗೋಪಾಲ್ ಅವರಿಗೆ ಏನೆಲ್ಲ ತಪ್ಪು ಗ್ರಹಿಕೆ ಆಗಿದೆ ಅನ್ನೋ ಮಾಹಿತಿ ನನಗೆ ಗೊತ್ತಿದೆ. ಅವರ ತಪ್ಪು ಗ್ರಹಿಕೆಯನ್ನು ಸರಿ ಮಾಡಲು ನಾನು ದೆಹಲಿಗೆ ಹೋಗ್ತೇನೆ. ದೆಹಲಿಗೆ ಹೋಗಿ ನಾವೆಲ್ಲ ಅದನ್ನು ಸರಿ ಮಾಡುವ ಪ್ರಯತ್ನ ಮಾಡ್ತೇನೆ. ಉಳಿದೆಲ್ಲ ವಿವರಗಳನ್ನ ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಎಂದರು.
ಮಾಜಿ ಸಚಿವ ಎಂದು ಕರೆಸಿಕೊಳ್ಳಲು ಸಂತೋಷ ಇದೆ. ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳ್ತೇನೆ. ಸಿಎಂ ಸ್ಟೇಟ್ಮೆಂಟ್ ಮಾಡಿಲ್ಲ. ರಾಹುಲ್ ಗಾಂಧಿ ಈ ದೇಶದ ನಾಯಕ. ರಾಹುಲ್ ಮಾರ್ಗದರ್ಶನದಲ್ಲಿ ಕೆಲಸ ಮಾಡುವೆ. ಸಿಎಂಗೆ ಶಕ್ತಿ ತುಂಬಲು ರಾಜೀನಾಮೆ ಎಂದಿದ್ದಾರೆ.
ಇದನ್ನೂ ಓದಿ: ‘I am helpless ರಾಜಣ್ಣ..’ ಸಿದ್ದರಾಮಯ್ಯ ಜೊತೆಗಿನ ಸಭೆಯಲ್ಲಿ ಆಗಿದ್ದೇನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ