/newsfirstlive-kannada/media/media_files/2025/08/11/siddaramaiah-kn-rajanna-2025-08-11-19-33-34.jpg)
ಸಿದ್ದರಾಮಯ್ಯ ಜೊತೆ ಕೆಎನ್ ರಾಜಣ್ಣ
ಸಹಕಾರ ಸಚಿವ ಕೆ.ಎನ್.ರಾಜಣ್ಣ (KN Rajanna) ಅವರನ್ನು ಸಂಪುಟದಿಂದ ವಜಾ ಮಾಡಿದ ಬೆಳವಣಿಗೆ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಬೆನ್ನಲ್ಲೇ ಸಂಜೆ ರಾಜಣ್ಣ ಅವರು, ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದರು.
ರಾಜಣ್ಣ ಅವರಿಗೆ ಸಚಿವರಾದ ಚಲುವರಾಯಸ್ವಾಮಿ, ಸತೀಶ್ ಜಾರಕಿಹೊಳಿ, ಎಂಎಲ್ಸಿ ರಾಜೇಂದ್ರ ಸಾಥ್ ನೀಡಿದರು. ಚಲುವರಾಯಸ್ವಾಮಿ ಕಾರಿನಲ್ಲೇ ಸಿಎಂ ನಿವಾಸ ಕಾವೇರಿಗೆ ಆಗಮಿಸಿದ್ದರು. ಈ ವೇಳೆ ರಾಜಣ್ಣ ಅವರಿಗೆ ತಮ್ಮ ನಿರ್ಧಾರದ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ಇದನ್ನೂ ಓದಿ: KN ರಾಜಣ್ಣರದ್ದು ರಾಜೀನಾಮೆ ಅಲ್ಲ.. ಸಂಪುಟದಿಂದ ನೇರವಾಗಿ ಕಿಕ್ಔಟ್..!
ಸದ್ಯದ ಪರಿಸ್ಥಿತಿಯಲ್ಲಿ I am helpless. ನಾನು ಹೈಕಮಾಂಡ್ ಆದೇಶವನ್ನು ಪಾಲಿಸಿದ್ದೇನೆ. ನಿಮ್ಮ ಹೇಳಿಕೆಗಳನ್ನ ವರಿಷ್ಠರು ಗಂಭೀರವಾಗಿ ಪರಿಗಣಿಸಿದ್ದಾರೆ. ವರಿಷ್ಠರು ತಮ್ಮ ಹೇಳಿಕೆಗಳಿಂದ ಸಾಕಷ್ಟು ಮುಜುಗರ ಅನುಭವಿಸಿದ್ದಾರೆ. ತಮ್ಮನ್ನ ಸಂಪುಟದಿಂದ ಕೖಬಿಡದೆ ಅನ್ಯ ಮಾರ್ಗ ಇರಲಿಲ್ಲ ಎಂದು ಸಿಎಂ ಅವರು ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ವರದಿಯಾಗಿದೆ.
ರಾಜಣ್ಣ ಸಂಪುಟದಿಂದ ವಜಾ!
ರಾಜಣ್ಣ ಅವರು ರಾಜೀನಾಮೆ ನೀಡಿದ್ದಲ್ಲ, ಬದಲಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಅವರೇ ಸಂಪುಟದಿಂದ ವಜಾ ಮಾಡಿದ್ದಾರೆ. ರಾಜಣ್ಣ ಅವರು ಹೈಕಮಾಂಡ್ ಸೂಚನೆ ಮೇರೆಗೆ ಸಿಎಂ ಸಿದ್ದರಾಮಯ್ಯಗೆ ರಾಜೀನಾಮೆ ಪತ್ರ ನೀಡಿ, ಗೌರವಯುತವಾಗಿ ಸಂಪುಟದಿಂದ ಹೊರ ಹೋಗಿದ್ದಾರೆ ಎಂದು ಹೇಳಲಾಗಿತ್ತು. ಸದ್ಯದ ಮಾಹಿತಿ ಪ್ರಕಾರ, ಮುಖ್ಯಮಂತ್ರಿಗಳೇ ರಾಜಣ್ಣ ಅವರನ್ನು ವಜಾ ಮಾಡಿದ್ದಾರೆ. ರಾಜಣ್ಣ ವಜಾ ಆಗಿರೋದು, ಭಾರೀ ದೊಡ್ಡ ಅಪಮಾನ ಆದಂತೆ ಆಗಿದೆ. ಇತ್ತೀಚೆಗಿನ ವರ್ಷಗಳಲ್ಲಿ ರಾಜೀನಾಮೆ ಪ್ರಸಂಗಗಳು ನಡೆದಿದ್ದವು. ಆದರೆ ಮಂತ್ರಿ ಸ್ಥಾನದಿಂದ ವಾಜಾ ಮಾಡಿದ ಘಟನೆಗಳು ನಡೆದಿರಲಿಲ್ಲ.
ಇದನ್ನೂ ಓದಿ:ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾದ KN ರಾಜಣ್ಣ ಹೇಳಿಕೆ ಏನು..? Video
/filters:format(webp)/newsfirstlive-kannada/media/media_files/2025/08/11/kn-rajanna-3-2025-08-11-16-05-49.jpg)
ಸಿಎಂ ಸಿದ್ದರಾಮಯ್ಯ ಅವರು ರಾಜಣ್ಣ ಅವರು ಸಂಪುಟದಿಂದ ವಜಾ ಮಾಡುವಂತೆ ಕೋರಿ ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದರು. ರಾಜ್ಯಪಾಲರು ವಜಾ ಮಾಡಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್.ಪ್ರಭುಶಂಕರ್ ಅವರಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ರವಾನಿಸಿದ್ದಾರೆ. ಅದರಲ್ಲಿ ಕೆ.ಎನ್.ರಾಜಣ್ಣ ಅವರನ್ನು ಈ ಕ್ಷಣದಿಂದಲೇ ಸಚಿವ ಸ್ಥಾನದಿಂದ ವಜಾ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜಣ್ಣ ನುಡಿದ ಸತ್ಯ ಕಾಂಗ್ರೆಸ್ಗೆ ಮೆಣಸಿನಕಾಯಿ ಇಟ್ಟಂಗೆ ಆಗಿದೆ -ಅಶೋಕ್ ವ್ಯಂಗ್ಯ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ