/newsfirstlive-kannada/media/media_files/2025/10/12/dcm-vs-muniratna-2025-10-12-09-48-19.jpg)
ಬೆಂಗಳೂರಿನ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಡಿಸಿಎಂ ಡಿ.ಕೆ.ಶಿವಕುಮಾರ್ (DCM DK Shivakumar) ವಿಶೇಷ ಪ್ರಯತ್ನದಲ್ಲಿದ್ದಾರೆ. ಅಂತೆಯೇ ಇವತ್ತು ಜೆಪಿ ಪಾರ್ಕ್​​ನಲ್ಲಿ ವಾಯು ವಿಹಾರ ನಡೆಸಿದರು. ಆಗ ಇದ್ದಕ್ಕಿದ್ದಂತೆ ದೊಡ್ಡ ಹೈಡ್ರಾಮಾ ನಡೆದಿದೆ.
ಪಾರ್ಕ್​​ನಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವ ವೇಳೆ.. ಒಂದಷ್ಟು ಜನರು ಡಿಸಿಎಂಗೆ ದೂರು ನೀಡಿದರು. ಪಾರ್ಕ್​ನಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಇಲ್ಲಿ ಗಾಂಜಾ ಸೇದುತ್ತಾರೆ, ಅನೈತಿಕ ಚಟುವಟಿಕೆಗಳನ್ನ ಮಾಡ್ತಾರೆ ಎಂದು ದೂರಿದರು. ಇದೇ ವೇಳೆ ಆರ್​ಆರ್​ ನಗರದ ಶಾಸಕ ಮುನಿರತ್ನ ಪಥಸಂಚಲನ ಮುಗಿಸಿ, ಸಂಘದ ಗಣವೇಷದಲ್ಲಿ ಡಿ.ಕೆ.ಶಿವಕುಮಾರ್​​ ಅವರ ರೌಂಡ್ಸ್​​ಗೆ ಬಂದರು.
ಇದನ್ನೂ ಓದಿ: ಓಂ ಸಿನಿಮಾ ಮೀರಿಸುವಂತಿದೆ ರಂಗನ ಲವ್​ ಸ್ಟೋರಿ.. ಮದ್ವೆ ನಿರಾಕರಿಸಿದ್ಕೆ ಪ್ರಿಯತಮೆಯ ಕಿಡ್ನ್ಯಾಪ್
ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ‘ಕರಿಟೋಪಿ ಎಂಎಲ್​ಎ ಬಾ’ ಎಂದು ಕರೆದರು. ಅದಕ್ಕೆ ಶಿವಕುಮಾರ್​ ವಿರುದ್ಧ ಶಾಸಕ ಮುನಿರತ್ನ ಸಿಡಿದೆದ್ದಿದ್ದಾರೆ. ಆಹ್ವಾನ ಇಲ್ಲ, ಕ್ಷೇತ್ರದ ಪರ ಕೂತ್ಕೋತೀನಿ ಎಂದು ಮುನಿರತ್ನ ಹೇಳ್ತಾರೆ. ಒಂದು ಎಂಪಿ , MLA ಫೋಟೋ ಇಲ್ಲ. ಇಲ್ಲಿ ರಾಜಕೀಯ ಮಾಡೋಕೆ ಬರಬೇಡಿ ಎಂದು ಮುನಿರತ್ನ ಅಧಿಕಾರಿಗಳ ಮೇಲೂ ಕೋಪಗೊಂಡಿದ್ದಾರೆ.
ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರ್​.ಆರ್.ನಗರ ಶಾಸಕ ಮುನಿರತ್ನ ಡಿಕೆಶಿ ವಿರುದ್ಧ ಆರೋಪ ಮಾಡಿದರು. ನನಗೆ ಕಾರ್ಯಕ್ರಮಕ್ಕೆ ಆಹ್ವಾನ ಮಾಡಿಲ್ಲ. ಇದು ಜಿಬಿಎ ಎಲೆಕ್ಷನ್ ಗೆಲ್ಲೋದಕ್ಕೆ ಮಾಡ್ತಿರುವ ಗಿಮಿಕ್. ನಾನು ಕೇಳಿದ್ದಕ್ಕೆ ನನ್ನ ಕರೆದುಕೊಂಡು ಬಂದು ಹಲ್ಲೆ ಮಾಡಿದ್ದಾರೆ. ಸೋತ ಅಭ್ಯರ್ಥಿಯನ್ನ ಕರೆ ತಂದು ಕ್ಷೇತ್ರವನ್ನು ಹಾಳು ಮಾಡ್ತಿದ್ದಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ಫಾಲೋ ಆನ್ ಭೀತಿಯಲ್ಲಿ ವಿಂಡೀಸ್​.. ಗೆಲುವಿನತ್ತ ಟೀಂ ಇಂಡಿಯಾ..!
ಈ ರೀತಿಯಲ್ಲಿ ಕ್ಷೇತ್ರವನ್ನ ಹಾಳು ಮಾಡೋದು ಎಷ್ಟು ಸರಿ? ಕೌನ್ಸಿಲರ್ ಆಗಬೇಕು ಅನ್ನೋರನ್ನ ಕರೆ ತರುತ್ತಿದ್ದಾರೆ. ಅವರಿಂದಲೇ ದೂರು ಕೊಡಿಸಿ ಗೆಲ್ಲೋದಕ್ಕೆ ಯತ್ನಿಸ್ತಿದ್ದಾರೆ. ನನಗೆ ಒಂದೇ ಒಂದು ಆಹ್ವಾನ ಕೂಡ ಅವ್ರು ಕೊಟ್ಟಿಲ್ಲ. ಯಾವ ದೇವಸ್ಥಾನಕ್ಕೆ ಕರೆದ್ರೂ ಬಂದ್ರೂ ಪ್ರಮಾಣ ಮಾಡ್ತೀನಿ. RSS ಕಾರ್ಯಕ್ರಮ ಮುಗಿಸಿ ಬಂದ್ರೆ ಕರೀ ಟೋಪಿ ಅಂತಾರೆ. ಏಯ್ ಟೋಪಿ ಬಾರೋ ಇಲ್ಲಿ ಅಂತ ಅವರು ಕರೆಯುತ್ತಾರೆ. ಒಬ್ಬ ಎಂಎಲ್​ಎಗೆ ಈ ರೀತಿಯಲ್ಲಿ ಯಾರಾದ್ರೂ ಕರೆಯುತ್ತಾರಾ? ಇದು ನನಗೆ ಮಾಡಿದ ಅವಮಾನವಲ್ಲ, ಜನರಿಗೆ ಮಾಡಿದ್ದು.
ಆರ್.ಆರ್. ನಗರ ಕ್ಷೇತ್ರದ ಜನರಿಗೆ ಮಾಡಿದ ಅವಮಾನ. ಇಡೀ ಬೆಂಗಳೂರು ಹಾಳಾಗಿ ಹೋಗಿದ, ಜನ್ರನ್ನ ಓಡಿಸ್ತಾರೆ. ಐಟಿ, ಬಿಟಿ ಜನ ಹೋಗ್ತೀವಿ ಅಂದ್ರೆ ಹೋಗಿ ಅಂತಾರಲ್ಲ. ಅವ್ರ ತಮ್ಮನನ್ನ ಸೋಲಿಸಿದ್ದಕ್ಕೆ ಹೀಗೆಲ್ಲಾ ಮಾಡ್ತಿರೋದು. ಅಡ್ಜಸ್ಟ್​ಮೆಂಟ್ ಮಾಡಿಕೊಂಡಿದ್ರೆ ಇದೆಲ್ಲಾ ಆಗ್ತಿರಲಿಲ್ಲ. ಎಷ್ಟು ಮನೆಗಳನ್ನ ಇವ್ರು ಹಾಳು ಮಾಡೋದು? ಅವ್ರಿಗೂ ಸಂಸಾರ ಇಲ್ವಾ? ಸಂಸ್ಕೃತಿ ಯಾರದು ಅಂತ ಇದರಿಂದ ಗೊತ್ತಾಗಲ್ವಾ? ಎಂಎಲ್​ಎಗೆ ಏಯ್ ಟೋಪಿ ಅನ್ನೋದು ಸಂಸ್ಕೃತಿ. ಪೊಲೀಸರು ಏನ್ಮಾಡ್ತಾರೆ? ಪ್ರತಿ ಸ್ಟೇಷನ್​ಗೆ ಬಿಡ್ಡಿಂಗ್ ನಡೀತಿದೆ. ಸಂಸದರು, ಶಾಸಕರನ್ನ ಸರ್ಕಾರಿ ಕಾರ್ಯಕ್ರಮಕ್ಕೆ ಕರೀಬೇಕು. ಆದ್ರೆ ಸರ್ಕಾರಿ ಕಾರ್ಯಕ್ರಮಕ್ಕೆ ಆಹ್ವಾನವನ್ನೇ ನೀಡಿಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ: ನಿವೃತ್ತಿಯ ಹಿಂಟ್ ಕೊಟ್ಟ ಹಿಟ್​ಮ್ಯಾನ್.. ಅಭಿಮಾನಿಗಳ ಪ್ರೀತಿಗೆ ರೋಹಿತ್ ಭಾವುಕ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ