Advertisment

ಫಾಲೋ ಆನ್ ಭೀತಿಯಲ್ಲಿ ವಿಂಡೀಸ್​.. ಗೆಲುವಿನತ್ತ ಟೀಂ ಇಂಡಿಯಾ..!

2ನೇ ಟೆಸ್ಟ್ ಪಂದ್ಯದ 2ನೇ ದಿನ ಟೀಮ್ ಇಂಡಿಯಾ ವಿಂಡೀಸ್ ವಿರುದ್ಧ ಭಾರೀ ಮುನ್ನಡೆ ಸಾಧಿಸಿತು. ನಾಯಕ ಶುಭ್ಮನ್​​ ಗಿಲ್​ರ ಭರ್ಜರಿ ಶತಕ, ನಿತೀಶ್ ರೆಡ್ಡಿ ಮತ್ತು ಧೃವ್ ಜುರೆಲ್​ರ ಌಂಕರಿಂಗ್ ರೋಲ್, ಟೀಮ್ ಇಂಡಿಯಾ ಮುನ್ನಡೆಗೆ ಕಾರಣವಾಯ್ತು. ಹಿನ್ನಡೆಯಲ್ಲಿರುವ ವಿಂಡೀಸ್ ಫಾಲೋ ಆನ್ ತಪ್ಪಿಸಿಕೊಳ್ಳಲು ಹೋರಾಡಬೇಕಿದೆ.

author-image
Ganesh Kerekuli
Ravindra Jadeja
Advertisment

2ನೇ ಟೆಸ್ಟ್ ಪಂದ್ಯದ 2ನೇ ದಿನ, ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ಭಾರೀ ಮುನ್ನಡೆ ಸಾಧಿಸಿತು. ನಾಯಕ ಶುಭ್ಮನ್​​ ಗಿಲ್​ರ ಭರ್ಜರಿ ಶತಕ, ನಿತೀಶ್ ರೆಡ್ಡಿ ಮತ್ತು ಧೃವ್ ಜುರೆಲ್​ರ ಌಂಕರಿಂಗ್ ರೋಲ್, ಟೀಮ್ ಇಂಡಿಯಾ ಮುನ್ನಡೆಗೆ ಕಾರಣವಾಯ್ತು. ಸದ್ಯ ಭಾರೀ ಹಿನ್ನಡೆಯಲ್ಲಿರುವ ವೆಸ್ಟ್ ಇಂಡೀಸ್, ಇಂದು ಫಾಲೋ ಆನ್ ತಪ್ಪಿಸಿಕೊಳ್ಳಲು ಹೋರಾಟ ನಡೆಸಲಿದೆ. 

Advertisment

ಇದನ್ನೂ ಓದಿ:ದ್ವಿಶತಕ ಹೊಸ್ತಿಲಲ್ಲಿದ್ದ ಯಶಸ್ವಿ ಜೈಸ್ವಾಲ್​ನ ಔಟ್ ಮಾಡಿದ ಕ್ಯಾಪ್ಟನ್ ಶುಭ್​ಮನ್ ಗಿಲ್​.. ಹೇಗೆ?

318 ರನ್​​​ಗಳೊಂದಿಗೆ ಎರಡನೇ ದಿನ ಆರಂಭಿಸಿದ ಟೀಮ್ ಇಂಡಿಯಾಕ್ಕೆ, ದಿನದಾಟದ ಆರಂಭದಲ್ಲೇ ಆಘಾತ ಎದುರಾಯ್ತು. ನಾಯಕ ಶುಭ್ಮನ್ ಗಿಲ್ ಜೊತೆ 74 ರನ್ ಕಲೆಹಾಕಿದ್ದ ಜೈಸ್ವಾಲ್, 175 ರನ್​ಗಳಿಸಿ ರನ್​ಔಟ್ ಆದ್ರು. 4ನೇ ವಿಕೆಟ್​​ಗೆ ಗಿಲ್ ಮತ್ತು ನಿತೀಶ್ ಕುಮಾರ್ ರೆಡ್ಡಿ, ವೇಗವಾಗಿ ರನ್​ಗಳಿಸಿದ್ರು. 103 ಎಸೆತಗಳಲ್ಲಿ 91 ರನ್​​​​​ ಜೊತೆಯಾಟವಾಡಿದ್ದ ಈ ಜೋಡಿ, ವಿಂಡೀಸ್ ಬೌಲರ್​ಗಳನ್ನ ಕಾಡಿದ್ರು.
ನಿತೀಶ್ ರೆಡ್ಡಿ 43 ರನ್​ಗಳಿಸಿ, ಎಡಗೈ ಸ್ಪಿನ್ನರ್ ವಾರಿಕಾನ್​​ಗೆ ವಿಕೆಟ್ ಒಪ್ಪಿಸಿದ್ರು. ಅದ್ಭುತ ಫಾರ್ಮ್​ನಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದ ಗಿಲ್, ಟೆಸ್ಟ್ ಕ್ರಿಕೆಟ್​​ನಲ್ಲಿ 10ನೇ ಶತಕ ಸಿಡಿಸಿ ಸಂಭ್ರಮಿಸಿಕೊಂಡ್ರು. 5ನೇ ವಿಕೆಟ್​​ಗೆ ಧೃವ್ ಜುರೆಲ್ ಜೊತೆಗೂಡಿ, 102 ರನ್​ಗಳ ಆಟವಾಡಿದ್ರು. 

44 ರನ್​ಗಳಿಸಿದ್ದ ಧೃವ್ ಜುರೆಲ್ ಔಟಾಗ್ತಿದಂತೆ ಟೀಮ್ ಇಂಡಿಯಾ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿತು. ಅಂತಿಮವಾಗಿ ಟೀಮ್ ಇಂಡಿಯಾ 5 ವಿಕೆಟ್ ನಷ್ಟಕ್ಕೆ 518 ರನ್​​ಗಳ, ಬೃಹತ್ ಮೊತ್ತ ಪೇರಿಸಿತ್ತು. ಗಿಲ್ 129 ರನ್​ಗಳಿಸಿ, ಅಜೇಯರಾಗಿ ಉಳಿದ್ರು. ಟೀಮ್ ಇಂಡಿಯಾ ಸವಾಲಿಗೆ ಉತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್, ಕೇವಲ 21 ರನ್​ಗಳಿಸುವಷ್ಟರಲ್ಲಿ ಆರಂಭಿಕ ಜಾನ್ ಕ್ಯಾಂಬೆಲ್ ವಿಕೆಟ್ ಕಳೆದುಕೊಂಡಿತು.

Advertisment

ಇದನ್ನೂ ಓದಿ:ಫ್ಯಾನ್ಸ್​ಗೆ ಸರ್​​ಪ್ರೈಸ್.. ಹಾರ್ದಿಕ್​ ಪಾಂಡ್ಯ ಕಾರ್​ನಿಂದ ಇಳಿದ ಬ್ಯೂಟಿ.. ಯಾರು ಈ ಸುಂದರಿ?

2ನೇ ವಿಕೆಟ್​​​ಗೆ ತ್ಯಾಗಿನರೈನ್ ಚಂದ್ರಪಾಲ್ ಮತ್ತು ಅಲಿಕ್ ಅಥೆಂಝೆ, 66 ರನ್​ಗಳ ಜೊತೆಯಾಟವಾಡಿದರು. ಸಾಲಿಡ್ ಟಚ್​ನಲ್ಲಿ ಇದ್ದಂತೆ ಕಾಣ್ತಿದ್ದ ಚಂದ್ರಪಾಲ್ 34 ರನ್​ಗಳಿಸಿ ಜಡೇಜಾಗೆ ವಿಕೆಟ್ ಒಪ್ಪಿಸಿದ್ರೆ, ಅಥೆಂಝೆ 41 ರನ್​ಗಳಿಸಿ ಕುಲ್ದೀಪ್ ಯಾದವ್ ಬೌಲಿಂಗ್​​ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ್ರು. ನಾಯಕ ರೋಸ್ಟನ್ ಚೇಸ್, ಖಾತೆ ತೆರೆಯದೆ ಪೆವಿಲಿಯನ್ ಸೇರಿಕೊಂಡ್ರು.
ಅಂತಿಮವಾಗಿ ವೆಸ್ಟ್​ ಇಂಡೀಸ್ ಎರಡನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 140 ರನ್​ಗಳಿಸಿತು. ಜಡೇಜಾ 3 ವಿಕೆಟ್ ಪಡೆದ್ರೆ, ಕುಲ್ದೀಪ್ 1 ವಿಕೆಟ್ ಪಡೆದು ಮಿಂಚಿದ್ರು. 378 ರನ್​ಗಳ ಹಿನ್ನಡೆಯಲ್ಲಿರುವ ವಿಂಡೀಸ್, ಇಂದು ಫಾಲೋ ಆನ್ ಭೀತಿಯಿಂದ ಪಾರಾಗಲು ಹೋರಾಟ ನಡೆಸಲಿದೆ. 

ಇದನ್ನೂ ಓದಿ:ಗಿಲ್​ ಶತಕ; ನಿತೀಶ್​, ಜುರೆಲ್ ಬಿರುಸಿನ ಬ್ಯಾಟಿಂಗ್.. ಬೃಹತ್​ ರನ್​ಗಳಿಗೆ ಇನ್ನಿಂಗ್ಸ್​ ಡಿಕ್ಲೇರ್

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

IND vs WI India vs West Indies
Advertisment
Advertisment
Advertisment