/newsfirstlive-kannada/media/media_files/2025/10/12/rohit-sharma-2-2025-10-12-09-01-18.jpg)
ರೋಹಿತ್​ ಶರ್ಮಾ ರಿಟೈರ್​ಮೆಂಟ್​​ನ ಸುದ್ದಿ ಕ್ರಿಕೆಟ್​ ಲೋಕದ ಟ್ರೆಂಡಿಂಗ್​ ಟಾಪಿಕ್​. 2027ರ ಏಕದಿನ ವಿಶ್ವಕಪ್​ ಆಡಬೇಕು ಅನ್ನೋ ಕನಸು ಕಂಡಿದ್ದ ರೋಹಿತ್​ ಶರ್ಮಾ ಅದಕ್ಕಾಗಿ ಸಖತ್​ ಹಾರ್ಡ್​​ವರ್ಕ್​ ಮಾಡಿದ್ರು. ಆದ್ರೀಗ ನೋಡಿದ್ರೆ ಮುಂಬರೋ ಆಸ್ಟ್ರೇಲಿಯಾ ಪ್ರವಾಸವೇ ರೋಹಿತ್​ ಪಾಲಿನ ಕೊನೆಯ ಸರಣಿಯಾಗುತ್ತಾ ಎಂಬ ಪ್ರಶ್ನೆ ಹುಟ್ಟಿದೆ.
ರೋಹಿತ್​ ಶರ್ಮಾ-ವಿರಾಟ್​​ ಕೊಹ್ಲಿ. ಇವರಿಬ್ಬರ ನಿವೃತ್ತಿ ಚರ್ಚೆ ಕ್ರಿಕೆಟ್​ ಲೋಕದಲ್ಲಿ ಸಿಕ್ಕಾಪಟ್ಟೆ ಜೋರಾಗಿ ನಡೀತಿದೆ. 2027ರ ವಿಶ್ವಕಪ್​ ಆಡೋದೇ ನಮ್ಮ ಗುರಿ ಎಂದಿದ್ದ ಕೊಹ್ಲಿ, ರೋಹಿತ್​ ಪಟ್ಟು ಹಿಡಿದು ಆಸ್ಟ್ರೇಲಿಯಾ ಪ್ರವಾಸದ ಟಿಕೆಟ್​ಗಿಟ್ಟಿಸಿಕೊಂಡಿದ್ದಾರೆ. ಈ ಪ್ರವಾಸದೊಂದಿಗೆ ಇವರಿಬ್ಬರ ಕರಿಯರ್​​ ಅಂತ್ಯವಾಗುತ್ತೆ ಅನ್ನೋ ಸುದ್ದಿ ಸದ್ಯ ಕ್ರಿಕೆಟ್​ ವಲಯದಲ್ಲಿದೆ.
ಇದನ್ನೂ ಓದಿ: ಫಾಲೋ ಆನ್ ಭೀತಿಯಲ್ಲಿ ವಿಂಡೀಸ್​.. ಗೆಲುವಿನತ್ತ ಟೀಂ ಇಂಡಿಯಾ..!
ಈ ವಿಚಾರದಲ್ಲಿ ಕೊಹ್ಲಿಯದ್ದು ನಿಗೂಢ ನಡೆಯಾಗಿದೆ. ಇಂಗ್ಲೆಂಡ್​ನಲ್ಲಿರೋ ವಿರಾಟ್​ ಕೊಹ್ಲಿ ಏನ್​​ ಮಾಡ್ತಿದ್ದಾರೆ? ಆಸ್ಟ್ರೇಲಿಯಾ ಪ್ರವಾಸಕ್ಕೆ ಹೇಗೆ ಸಿದ್ಧತೆ ನಡೆಸ್ತಿದ್ದಾರೆ ಅನ್ನೋದು ಯಾರಿಗೂ ಗೊತ್ತಿಲ್ಲ. ರೋಹಿತ್​ ಶರ್ಮಾ ಮಾತ್ರ ಸಿಕ್ಕಾಪಟ್ಟೆ ಹಾರ್ಡ್​​ವರ್ಕ್​ ಮಾಡ್ತಿದ್ದಾರೆ. ಫಿಟ್​ನೆಸ್​​ ಮೇಲೆ ವರ್ಕೌಟ್​ ಮಾಡಿ ಬರೋಬ್ಬರಿ 20 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಬ್ಯಾಟಿಂಗ್​ ಮೇಲೂ ಹೆಚ್ಚು ಗಮನ ಹರಿಸ್ತಿರೋ ರೋಹಿತ್​ ಸತತವಾಗಿ ಅಭ್ಯಾಸ ನಡೆಸ್ತಿದ್ದಾರೆ. ಬೆಂಗಳೂರಿನ ಎನ್​ಸಿಎನಲ್ಲಿ ಸ್ಪೆಷಲ್​ ಕ್ಯಾಂಪ್​​ನಲ್ಲಿ ಭಾಗಿಯಾಗಿದ್ದ ಹಿಟ್​ಮ್ಯಾನ್​ ಇದೀಗ ಮುಂಬೈನಲ್ಲಿ ಭರ್ಜರಿ ಅಭ್ಯಾಸ ನಡೆಸ್ತಿದ್ದಾರೆ.
ಅಭ್ಯಾಸದಿಂದಲೇ ನಿವೃತ್ತಿ ಸುಳಿವು ನೀಡಿದ್ರಾ ರೋಹಿತ್?
ರೋಹಿತ್​ ಶರ್ಮಾ ಸಿದ್ಧತೆಯನ್ನ ನೋಡಿದವರೆಲ್ಲಾ ರೋಹಿತ್​​, 2027ರ ವಿಶ್ವಕಪ್​ ಆಡಿಯೇ ಆಡ್ತಾರೆ ಎಂದು ಭಾವಿಸಿದ್ದಾರೆ. ಟೀಮ್​ ಮ್ಯಾನೇಜ್​ಮೆಂಟ್​ ಹಾಗೂ ಸೆಲೆಕ್ಷನ್​ ಕಮಿಟಿಗೆ ರೋಹಿತ್​ನ ಮುಂದುವರೆಸೋಕೆ ಒಲವಿಲ್ಲ. ಅದೇ ಕಾರಣದಿಂದಲೇ ನಾಯಕತ್ವದಿಂದ ರೋಹಿತ್​ಗೆ ಕೊಕ್​ ನೀಡಿದ್ದು. ನಾಯಕತ್ವದಿಂದ ಕೆಳಗಿಳಿಸಿದ ಬೆನ್ನಲ್ಲೇ ರೋಹಿತ್​ ಕೂಡ ಬೇಸರಗೊಂಡಿರುವಂತಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ ಬೈ ಹೇಳೋ ಹಿಂಟ್​ ಕೊಟ್ಟಿದ್ದಾರೆ.
ಶಿವಾಜಿ ಪಾರ್ಕ್​ನಲ್ಲಿ ರೋಹಿತ್​ ಸ್ಪೆಷಲ್​ ಅಭ್ಯಾಸ
ಆಸ್ಟ್ರೇಲಿಯಾ ಪ್ರವಾಸದ ಸಿದ್ಧತೆಯ ಭಾಗವಾಗಿ ರೋಹಿತ್​ ಶರ್ಮಾ 1 ದಿನದ ಹಿಂದೆ ಮುಂಬೈ ಶಿವಾಜಿ ಪಾರ್ಕ್​​ನಲ್ಲಿ ಅಭ್ಯಾಸ ನಡೆಸಿದ್ರು. ವಾಂಖೆಡೆ, ರಿಲಯನ್ಸ್​ ಸ್ಟೇಡಿಯಂಗಳಲ್ಲಿ ಅಭ್ಯಾಸ ನಡೆಸ್ತಿದ್ದ ರೋಹಿತ್​, ಭಿನ್ನ ನಿಲುವು ತಳೆದು ಶಿವಾಜಿ ಪಾರ್ಕ್​ನಲ್ಲಿ ಲೋಕಲ್​ ಪ್ಲೇಯರ್ಸ್​ ಜೊತೆಗೆ ಅಭ್ಯಾಸ ನಡೆಸಿದ್ರು. ವಿಶೇಷ ಅಂದ್ರೆ ರೋಹಿತ್​ ಶರ್ಮಾ ಅಭ್ಯಾಸ ನೋಡೋಕೆ ಪತ್ನಿ ರಿತಿಕಾ, ಕುಟುಂಬಸ್ಥರು, ಆಪ್ತರು ಹಾಗೂ ಸ್ನೇಹಿತರು ಕೂಡ ಬಂದಿದ್ರು. ಇವ್ರ ಆಗಮನವೇ ಈಗ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಇದನ್ನೂ ಓದಿ: ಸರ್ಕಾರಿ ಹುದ್ದೆ ಹುಡುಕಾಟದಲ್ಲಿ ಇದ್ದೀರಾ.. ಹಾಗಾದ್ರೆ ಒಮ್ಮೆ ಈ ಉದ್ಯೋಗಗಳಿಗೆ ಟ್ರೈ ಮಾಡಿ!
ರೋಹಿತ್​ ಶರ್ಮಾ ಶಿವಾಜಿ ಪಾರ್ಕ್​ಗೆ ಬಂದಿರೋ ಸುದ್ದಿ ಹೊರ ಜಗತ್ತಿಗೆ ತಿಳಿದ ಬೆನ್ನಲ್ಲೇ ದಂಡು ದಂಡಾಗಿ ಅಭಿಮಾನಿಗಳು ಬಂದಿದ್ರು. ನೆಚ್ಚಿನ ಆಟಗಾರರನನ್ನ ನೋಡಲು, ಆಟವನ್ನ ಕಣ್ತುಂಬಿಕೊಳ್ಳಲು ಸಹಸ್ರಾರು ಫ್ಯಾನ್ಸ್​ ಸ್ಟೇಡಿಯಂ ಸುತ್ತ ಜಮಾಯಿಸಿದ್ರು. ಅಭ್ಯಾಸದ ಬಳಿಕ ರೋಹಿತ್​ ಶರ್ಮಾ ಅಭಿಮಾನಿಗಳ ಜೊತೆ ಬೆರೆತಿದ್ದಾರೆ. ಅಭಿಮಾನಿಗಳನ್ನ ತಡೆದ ತನ್ನ ಸೆಕ್ಯೂರಿಟಿಗಳಿಗೆ ಬೈಯ್ದು ಆಟೋಗ್ರಾಫ್​​ ನೀಡಿದ್ದಾರೆ. ಈ ವೇಳೆ ಭಾವುಕರಾದಂತೆಯೂ ರೋಹಿತ್​ ಕಂಡು ಬಂದಿದ್ದಾರೆ.
ರೋಹಿತ್​ಗೂ ಶಿವಾಜಿ ಪಾರ್ಕ್​ಗೂ ವಿಶೇಷ ನಂಟು
ಮುಂಬೈನಲ್ಲಿರೋ ಈ ಶಿವಾಜಿ ಪಾರ್ಕ್​​ಗೂ ರೋಹಿತ್​ ಶರ್ಮಾಗೂ ವಿಶೇಷವಾದ ನಂಟಿದೆ. ಇವತ್ತು ವಿಶ್ವದ ಗ್ರೇಟೆಸ್ಟ್​ ಓಪನರ್​ ಆಗಿರೋ ರೋಹಿತ್​ ಕರಿಯರ್​​ನ ಬೇರು ಇರೋದೆ ಈ ಶಿವಾಜಿ ಪಾರ್ಕ್​ನಲ್ಲಿ. ಕ್ರಿಕೆಟರ್​ ಆಗಬೇಕು ಎಂಬ ಕನಸು ಕಂಡ ರೋಹಿತ್​ ತನ್ನ ಅಭ್ಯಾಸವನ್ನ ಆರಂಭಿಸಿದ್ದು ಇದೇ ಮೈದಾನದಲ್ಲಿ. ಆರಂಭಿಕ ದಿನಗಳಲ್ಲಿ ದಿನೇಶ್​ ಲಾಡ್​ ಮಾರ್ಗದರ್ಶನದಲ್ಲಿ ಶಿವಾಜಿ ಪಾರ್ಕ್​ನಲ್ಲಿ ಅಭ್ಯಾಸ ನಡೆಸಿ, ಹಲವು ಪಂದ್ಯಗಳನ್ನ ಆಡಿ ಬೆಳೆದವರು. ಇದೇ ಮೈದಾನದಲ್ಲಿ ಕ್ರಿಕೆಟ್​ ಪಟ್ಟುಗಳನ್ನ ಕಲಿತು ಬೆಳೆದ ರೋಹಿತ್​, ಶಿವಾಜಿ ಪಾರ್ಕ್​ನಲ್ಲಿ ಆಡಿ ಹಲವು ವರ್ಷಗಳೆ ಕಳೆದಿವೆ. ಇದೀಗ ಸಡನ್​ ಆಗಿ ಇದ್ದಕ್ಕಿದ್ದಂತೆ ಶಿವಾಜಿ ಪಾರ್ಕ್​ಗೆ ಬಂದು ಅಭ್ಯಾಸ ನಡೆಸಿದ್ದು, ಆ ಅಭ್ಯಾಸಕ್ಕೆ ಕುಟುಂಬ, ಆಪ್ತರು, ಸ್ನೇಹಿತರು ಸಾಕ್ಷಿಯಾಗಿರೋದು ನಿವೃತ್ತಿ ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ. ಇಲ್ಲೇ ಆರಂಭ, ಇಲ್ಲೇ ಅಂತ್ಯ ಎಂಬ ಸಂದೇಶ ರವಾನಿಸಿದ್ರಾ ಎಂಬ ಚರ್ಚೆಯಾಗ್ತಿದೆ.
ಆಸ್ಟ್ರೇಲಿಯಾ ಟೂರ್​​ಗೆ ಟೀಮ್​ ಸೆಲೆಕ್ಟ್​​ ಮಾಡಿದ ಬಳಿಕ ಪ್ರೆಸ್​ ಮೀಟ್​​ನಲ್ಲಿ ಸೆಲೆಕ್ಷನ್​ ಕಮಿಟಿ ಚೇರ್​ಮನ್​ ಅಜಿತ್​ ಅಗರ್ಕರ್​ ಒಂದು ಮಾತು ಹೇಳಿದ್ರು. ರೋಹಿತ್​, ಕೊಹ್ಲಿ ವಿಶ್ವಕಪ್​ ಆಡೋದಕ್ಕೆ ಕಮಿಟ್​ ಆಗಿಲ್ಲ ಅಂತಾ. ಈಗ ನೋಡಿದ್ರೆ ರೋಹಿತ್​ ಬಂದು ಕರಿಯರ್​ ಆರಂಭಿಕ ದಿನಗಳನ್ನ ಕಳೆದ ಮೈದಾನಕ್ಕೆ ಗೌರವ ಅರ್ಪಿಸುವಂತೆ ಅಭ್ಯಾಸ ನಡೆಸಿದ್ದಾರೆ. 2027ರ ವಿಶ್ವಕಪ್​ ವೇಳೆಗೆ ರೋಹಿತ್​ ವಯಸ್ಸು 40ರ ಆಸುಪಾಸಿನಲ್ಲಿರಲಿದೆ. ಒನ್​ ಡೇ ಫಾರ್ಮೆಟ್​​ಗೆ ಮಾತ್ರ ಸೀಮಿತವಾಗಿರೋದ್ರಿಂದ ಫಿಟ್​ನೆಸ್​, ಫಾರ್ಮ್​ ಉಳಿಸಿಕೊಳ್ಳೋದು ಸವಾಲಾಗಲಿದೆ. ಇವೆಲ್ಲವನ್ನ ಗಮನಿಸಿದ್ರೆ ಆಸಿಸ್​ ಪ್ರವಾಸವೇ ರೋಹಿತ್​ ಫೇರ್​​ವೆಲ್​ ಟೂರ್ ಆಗೋ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ: Rohit bal: ಭಾರತದ ಖ್ಯಾತ ಫ್ಯಾಷನ್ ಡಿಸೈನರ್ ರೋಹಿತ್ ಬಾಲ್ ಇನ್ನಿಲ್ಲ.. ಬಾಲಿವುಡ್ ಕಂಬನಿ!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ