ಬಿ.ನಾಗೇಂದ್ರಕ್ಕೆ ED ಶಾಕ್.. 8.07 ಕೋಟಿ ಮೌಲ್ಯದ ಆಸ್ತಿ ಜಪ್ತಿ..!

ವಾಲ್ಮೀಕಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ‌ ಸಚಿವ ಬಿ.ನಾಗೇಂದ್ರಗೆ ಸೇರಿದ 8.07 ಕೋಟಿ ಮೌಲ್ಯದ ಸ್ಥಿರಾಸ್ತಿಯನ್ನ ಇಡಿ (ಜಾರಿ ನಿರ್ದೇಶನಾಲಯ) ಜಪ್ತಿ ಮಾಡಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಆಸ್ತಿಯನ್ನ ಮುಟ್ಟುಗೋಲು ಹಾಕಲಾಗಿದೆ.

author-image
Ganesh Kerekuli
BREAKING: ವಾಲ್ಮೀಕಿ ನಿಗಮದ ಹಗರಣಕ್ಕೆ ಮಹತ್ವದ ಸುಳಿವು.. ಮಾಜಿ ಸಚಿವ ನಾಗೇಂದ್ರ ಬಂಧನ ಸಾಧ್ಯತೆ
Advertisment
  • ವಾಲ್ಮೀಕಿ ಅಭಿವೃದ್ಧಿ‌ ನಿಗಮದಲ್ಲಿ ಕೇಸ್​​​ನಲ್ಲಿ ನಾಗೇಂದ್ರಗೆ ಶಾಕ್​​
  • ಇ.ಡಿಯಿಂದ ಮಾಜಿ‌ ಸಚಿವ ಬಿ.ನಾಗೇಂದ್ರಗೆ ಸೇರಿದ ಆಸ್ತಿ ಜಪ್ತಿ
  • ಈ ಆಸ್ತಿಗಳನ್ನು ‘ಅಪರಾಧದ ಆದಾಯ’ ಎಂದು ಕರೆದ ಇ.ಡಿ

ವಾಲ್ಮೀಕಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ‌ ಸಚಿವ ಬಿ.ನಾಗೇಂದ್ರಗೆ ಸೇರಿದ 8.07 ಕೋಟಿ ಮೌಲ್ಯದ ಸ್ಥಿರಾಸ್ತಿಯನ್ನ ಇಡಿ (ಜಾರಿ ನಿರ್ದೇಶನಾಲಯ) ಜಪ್ತಿ ಮಾಡಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಆಸ್ತಿಯನ್ನ ಮುಟ್ಟುಗೋಲು ಹಾಕಲಾಗಿದೆ. ವಸತಿ ಮತ್ತು ವಾಣಿಜ್ಯ ಆಸ್ತಿ ಸೇರಿದಂತೆ 4 ಸ್ಥಿರಾಸ್ತಿ ಮುಟ್ಟುಗೋಲು ಹಾಕಲಾಗಿದ್ದು, ಅಪರಾಧದ ಉಳಿದ ಆದಾಯವನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಅವುಗಳಿಗೆ ಬಿ.ನಾಗೇಂದ್ರ ಈಗಾಗಲೇ ಬೇರೆ ವ್ಯವಸ್ಥೆ ಮಾಡಿರಬಹುದು ಅಥವಾ ಮರೆಮಾಡಿರಬಹುದು ಎಂದು ಇಡಿ ತಿಳಿಸಿದೆ.

ಇದನ್ನೂ ಓದಿ: T20 ವಿಶ್ವಕಪ್​ಗೆ ಇವತ್ತು ತಂಡ ಪ್ರಕಟ.. 15 ಸದಸ್ಯರ ತಂಡದಲ್ಲಿ ಯಾರಿಗೆಲ್ಲ ಸ್ಥಾನ?

ಕೆಎಂವಿಎಸ್‌ಟಿಡಿಸಿಎಲ್‌ನಲ್ಲಿನ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ರಾಜ್ಯದ ಪೊಲೀಸರು ದಾಖಲಿಸಿದ್ದ ಎಫ್ಐಆರ್ ಆಧಾರದ ಮೇಲೆ ತನಿಖೆ ಆರಂಭಿಸಿದ್ದ ಇ.ಡಿ ಕರ್ನಾಟಕ ಮತ್ತು ಇತರ ರಾಜ್ಯಗಳ ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿತ್ತು. ಇದೇ ಪ್ರಕರಣದಲ್ಲಿ ನಾಗೇಂದ್ರ ಸೇರಿದಂತೆ ಆರು ಜನರ ಬಂಧಿಸಿತ್ತು. ನಾಗೇಂದ್ರ ಸೇರಿದಂತೆ 25 ಆರೋಪಿಗಳ ವಿರುದ್ಧ 2024ರ ಸೆಪ್ಟೆಂಬರ್ 9ರಂದು ನಗರ ಪ್ರಧಾನ ಸಿವಿಲ್ ಮತ್ತು ಸೆಷನ್ಯ್ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿತ್ತು. 

ಬಿ ನಾಗೇಂದ್ರ ಅವರ ಅಪರಾಧದ ಆದಾಯ ಪತ್ತೆಹಚ್ಚಲು ಎಲ್ಲ ಪ್ರಯತ್ನಗಳನ್ನು ಮಾಡಲಾಯಿತು. ಆದಾಗ್ಯೂ, ಎಲ್ಲ ಪಿಒಸಿಯನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಅದನ್ನು ಬಿ ನಾಗೇಂದ್ರ ಈಗಾಗಲೇ ಖಾಲಿ ಮಾಡಿದ್ದಾರೆ ಅಥವಾ ಮರೆಮಾಡಿದ್ದಾರೆ ಎಂದು ತೋರುತ್ತದೆ. ಹೀಗಾಗಿ ಜಾರಿ ನಿರ್ದೇಶನಾಲಯವು (ED) ಅಪರಾಧದ ಆದಾಯಕ್ಕೆ (POC) ಸಮಾನ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. 

ಇದನ್ನೂ ಓದಿ:  ಹೊಸ ವರ್ಷಕ್ಕೆ ಜಿಯೋ ಭರ್ಜರಿ ಉಡುಗೊರೆ​.. ಕಡಿಮೆ ಬೆಲೆಗೆ ಮೂರು ಬಿಗ್ ಆಫರ್..!​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Valmiki scandal B. Nagendra
Advertisment