ಹೊಸ ವರ್ಷಕ್ಕೆ ಜಿಯೋ ಭರ್ಜರಿ ಉಡುಗೊರೆ​.. ಕಡಿಮೆ ಬೆಲೆಗೆ ಮೂರು ಬಿಗ್ ಆಫರ್..!​

ಹೊಸ ವರ್ಷಕ್ಕೆ ರಿಲಯನ್ಸ್ ಜಿಯೋ (reliance jio) ತನ್ನ ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಿದೆ. ಕಂಪನಿಯು ‘ಹ್ಯಾಪಿ ನ್ಯೂ ಇಯರ್ 2026’ ಎಂಬ ಮೂರು ಆಕರ್ಷಕ ಪ್ಲಾನ್​ ಪರಿಚಯಿಸಿದೆ.

author-image
Ganesh Kerekuli
jio
Advertisment

ಹೊಸ ವರ್ಷಕ್ಕೆ ರಿಲಯನ್ಸ್ ಜಿಯೋ (reliance jio) ತನ್ನ ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಿದೆ. ಕಂಪನಿಯು ‘ಹ್ಯಾಪಿ ನ್ಯೂ ಇಯರ್ 2026’ ಎಂಬ ಮೂರು ಆಕರ್ಷಕ ಪ್ಲಾನ್​ ಪರಿಚಯಿಸಿದೆ.

ಈ ಯೋಜನೆಗಳು ಪೂರ್ಣ ವರ್ಷದಿಂದ ಮಾಸಿಕ ಸೇವೆಗಳನ್ನು ನೀಡುತ್ತವೆ. ಪ್ಲಾನ್​ಗಳು 103 ರೂಪಾಯಿಯಿಂದ ಶುರುವಾಗಿ 3,599 ರೂಪಾಯಿವರೆಗೆ ಮುಂದುವರಿಯುತ್ತವೆ. ಈ ಯೋಜನೆಗಳು ಜೆಮಿನಿ ಪ್ರೊ AI ಸೇವೆ ಮತ್ತು ಬಳಕೆದಾರರಿಗೆ ಇತರ ಹಲವು ಪ್ರಯೋಜನ ನೀಡುತ್ತವೆ. 

ಇದನ್ನೂ ಓದಿ:ಬೆಂಗಳೂರಲ್ಲಿ ಬೆರಗುಗೊಳಿಸಿದ ರೊಬೋ ನಾಯಿ ‘PARAM’ -ಈತನ ವಿಶೇಷತೆ ಏನು?

Jio ನೀಡಿರುವ ಈ ಆಫರ್​ ಭಾರೀ ಟ್ರೆಂಡಿಂಗ್.. ದಿನಕ್ಕೆ 125 GB..! 4 ಒಳ್ಳೊಳ್ಳೆ ಪ್ಲಾನ್​​ಗಳು..!

ನೀವು ಮನರಂಜನಾ ಪ್ರಿಯರಾಗಿದ್ದರೆ 13ಕ್ಕೂ ಹೆಚ್ಚು OTT ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶ ಪಡೆಯುತ್ತಿರಿ. ನೀವು ಬ್ಯುಸಿನೆಸ್ ಸಂಬಂಧ ಬಳಕೆ ಮಾಡುತ್ತಿದ್ದರೆ AI ಟೂಲ್ ಪ್ರಯೋಜನ ಪಡೆಯುತ್ತೀರಿ.

‘ಜಿಯೋ ಹೀರೋ’ ವಾರ್ಷಿಕ ರೀಚಾರ್ಜ್ ಪ್ಲಾನ್..!

‘ಹ್ಯಾಪಿ ನ್ಯೂ ಇಯರ್ 2026’ ಆಫರ್ ಅಡಿಯಲ್ಲಿ ಜಿಯೋ ನೀಡುವ ವಾರ್ಷಿಕ ರೀಚಾರ್ಜ್ ಪ್ಲಾನ್​ ಬೆಲೆ 3,599 ರೂಪಾಯಿ. ದಿನಕ್ಕೆ 2.5 GB ಡೇಟಾ, ಉಚಿತ ಕರೆ, ದಿನಕ್ಕೆ 100 SMS ಮತ್ತು ಅನಿಯಮಿತ 5G ಇಂಟರ್ನೆಟ್. ಈ ಯೋಜನೆಯು 35,100 ರೂ.ಗಳ ಮೌಲ್ಯದ 18 ತಿಂಗಳ ಉಚಿತ Google Gemini Pro ಚಂದಾದಾರಿಕೆ ನೀಡುತ್ತದೆ. ಇದನ್ನು ಉಚಿತವಾಗಿ ನೀಡುತ್ತಿದೆ. 

‘ಜಿಯೋ ಸೂಪರ್ ಸೆಲೆಬ್ರೇಷನ್’ ಮಾಸಿಕ ಪ್ಲಾನ್

ಜಿಯೋ ‘ಹ್ಯಾಪಿ ನ್ಯೂ ಇಯರ್ 202’ ಎಂಬ ಉತ್ತಮ ಮಾಸಿಕ ಪ್ಲಾನ್ ಪರಿಚಯಿಸಿದೆ. ಇದರ ರೀಚಾರ್ಜ್ ಬೆಲೆ  500 ರೂಪಾಯಿ. ಬಳಕೆದಾರರಿಗೆ ದಿನಕ್ಕೆ 2GB ಡೇಟಾ, ಅನಿಯಮಿತ ಕರೆ, 28 ದಿನಗಳವರೆಗೆ ದಿನಕ್ಕೆ 100 SMS ಸಂದೇಶಗಳನ್ನು ಉಚಿತವಾಗಿ ನೀಡುತ್ತದೆ. YouTube ಪ್ರೀಮಿಯಂ, JioHotstar, Amazon Prime Video Mobile Edition, Sony LIV, ZEE5, Lionsgate Play, Discovery+, Sun NXT, Kanchha Lanka, Planet Marathi, Chaupal, FanCode, Hoichoi ನಂತಹ 13 OTT ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶ ನೀಡುತ್ತದೆ.

ಇದನ್ನೂ ಓದಿ:  ಡಿಜಿಟಲ್ ಆರೆಸ್ಟ್ ಕೇಸ್ ತನಿಖೆ ಸಿಬಿಐಗೆ ವಹಿಸಿದ ಸುಪ್ರೀಂಕೋರ್ಟ್‌: CBI ಗೆ ನೆರವು ನೀಡಲು ರಾಜ್ಯಗಳಿಗೆ ನಿರ್ದೇಶನ

Breaking news: ಜಿಯೋ ಗ್ರಾಹಕರಿಗೆ ಬಿಗ್ ಶಾಕ್‌.. ಪ್ರಿಪೇಯ್ಡ್ ದರ ಭಾರೀ ಏರಿಕೆ; ಎಷ್ಟು?

ಈ ಯೋಜನೆಯ ಪ್ರಯೋಜನಗಳು ಅಲ್ಲಿಗೆ ಮುಗಿಯಲ್ಲ. ವಾರ್ಷಿಕ ಯೋಜನೆಯಂತೆ ರೂ. 35,100 ಮೌಲ್ಯದ ಜೆಮಿನಿ ಪ್ರೊಗೆ 18 ತಿಂಗಳ ಉಚಿತ ಚಂದಾದಾರಿಕೆ ನೀಡುತ್ತದೆ. ಕೇವಲ ಒಂದು ತಿಂಗಳಿಗೆ ರೀಚಾರ್ಜ್ ಮಾಡಿದರೂ ಸಹ, ನೀವು ಒಟ್ಟು 18 ತಿಂಗಳವರೆಗೆ ಉಚಿತ ಜೆಮಿನಿ ಪ್ರೊ ಚಂದಾದಾರರಾಗುತ್ತೀರಿ. ರೀಚಾರ್ಜ್ ಮಾಡಿದ ನಂತರ ನೀವು ಅಪ್ಲಿಕೇಶನ್‌ನಲ್ಲಿ ಜೆಮಿನಿ ಪ್ರೊ ಚಂದಾದಾರಿಕೆಯನ್ನು ಪ್ರತ್ಯೇಕವಾಗಿ ಪಡೆಯಬೇಕಾಗುತ್ತದೆ. 

ಜಿಯೋದ ಮೂರನೇ ಪ್ಲಾನ್ ಫ್ಲೆಕ್ಸಿ ಪ್ಯಾಕ್

ಹ್ಯಾಪಿ ನ್ಯೂ ಇಯರ್ 2026 ಆಫರ್ ಅಡಿಯಲ್ಲಿ ಜಿಯೋದ ಅತ್ಯಂತ ಅಗ್ಗದ ಪ್ಲಾನ್ ಇದು. ರೀಚಾರ್ಜ್ ಬೆಲೆ ಕೇವಲ 103 ರೂಪಾಯಿ. 28 ದಿನಗಳ ಮಾನ್ಯತೆಯೊಂದಿಗೆ 5GB ಡೇಟಾ ನೀಡುತ್ತದೆ. ಈ ಬಳಕೆದಾರರಿಗೆ ಮೂರು ಮನರಂಜನಾ ಪ್ಯಾಕ್‌ಗಳಿಂದ ಆಯ್ಕೆ ಮಾಡುವ ಅವಕಾಶ ಇದೆ. ಹಿಂದಿ ಪ್ಯಾಕ್‌ನಲ್ಲಿ ಜಿಯೋಹಾಟ್‌ಸ್ಟಾರ್, Zee5 ಮತ್ತು SonyLIV ಸೇರಿವೆ.

 ಅಂತರರಾಷ್ಟ್ರೀಯ ಪ್ಯಾಕ್‌ನಲ್ಲಿ ಜಿಯೋಹಾಟ್‌ಸ್ಟಾರ್, ಫ್ಯಾನ್‌ಕೋಡ್, ಲಯನ್ಸ್‌ಗೇಟ್ ಮತ್ತು ಡಿಸ್ಕವರಿ+ ಸೇರಿವೆ. ಪ್ರಾದೇಶಿಕ ಪ್ಯಾಕ್‌ನಲ್ಲಿ ಜಿಯೋಹಾಟ್‌ಸ್ಟಾರ್, ಸನ್ಎನ್‌ಎಕ್ಸ್‌ಟಿ, ಕಾಂಚಾ ಲಂಕಾ ಮತ್ತು ಹೋಸ್ಟಾರ್​ ಸೇರಿವೆ.

ಇದನ್ನೂ ಓದಿ: ಬರೀ 16 ಎಸೆತದಲ್ಲಿ ಅರ್ಧ ಶತಕ ಬಾರಿಸಿದ ಪಾಂಡ್ಯ.. ತಿಲಕ್ ಆಟ ಹೇಗಿತ್ತು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

jio recharge plans Reliance Jio Happy New Year 2026
Advertisment