Advertisment

ಬೆಂಗಳೂರಲ್ಲಿ ಬೆರಗುಗೊಳಿಸಿದ ರೊಬೋ ನಾಯಿ ‘PARAM’ -ಈತನ ವಿಶೇಷತೆ ಏನು?

ಬೆಂಗಳೂರಿನ ಹೆಚ್​ಎಸ್​ಆರ್​ ಲೇಔಟ್​ನಲ್ಲಿ ಅತ್ಯಾಧುನಿಕ ತಂತ್ರಜ್ಞಾನವೊಂದು ಅಲ್ಲಿನ ವಾಸಿಗಳನ್ನು ಬೆರಗುಗೊಳಿಸಿದೆ. ನಗರದಲ್ಲಿ ಸುತ್ತಾಡ್ತಿರುವ ಪರಮ್ ಎಂಬ ರೊಬೋಟಿಕ್ ನಾಯಿ (Robot dog PARAM) ಗಮನ ಸೆಳೆಯುತ್ತಿದೆ.

author-image
Ganesh Kerekuli
Robot dog
Advertisment

ಬೆಂಗಳೂರಿನ ಹೆಚ್​ಎಸ್​ಆರ್​ ಲೇಔಟ್​ನಲ್ಲಿ ಅತ್ಯಾಧುನಿಕ ತಂತ್ರಜ್ಞಾನವೊಂದು ಅಲ್ಲಿನ ವಾಸಿಗಳನ್ನು ಬೆರಗುಗೊಳಿಸಿದೆ. ನಗರದಲ್ಲಿ ಸುತ್ತಾಡ್ತಿರುವ ಪರಮ್ ಎಂಬ ರೊಬೋಟಿಕ್ ನಾಯಿ (Robot dog PARAM) ಗಮನ ಸೆಳೆಯುತ್ತಿದೆ. ಇದನ್ನು ನೋಡಿದ ಜನ, ಅಚ್ಚರಿಗೊಳಗಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗ್ತಿದೆ.   

Advertisment

ಇದನ್ನೂ ಓದಿ:ಟೆನ್ಷನ್​ ಬಿಡಿ, ಕ್ಯೂನಿಂದ ದೂರ ಇರಿ.. ಮನೆ ಬಾಗಿಲಿಗೆ PASSPORT VAN ​

ಜನರಲ್ ಅಟೊನೊಮಿ (General Autonomy) ಕಂಪನಿಯು ಇದನ್ನು ಅಭಿವೃದ್ಧಿಪಡಿಸಿದ್ದು, ಅದರ ವೈಶಿಷ್ಟ್ಯತೆಗಳು ಇದೀಗ ಚರ್ಚೆ ಆಗ್ತಿದೆ. ಬೆಂಗಳೂರಿನ ಹೆಚ್​ಎಸ್ಆರ್​ ಲೇಔಟ್​ನಲ್ಲಿ ಕಂಡುಬಂದಿರುವ  PARAM ಹಲವು ವಿಶೇಷತೆಗಳನ್ನ ಪಡೆದುಕೊಂಡಿದೆ. ಅದರ ವಿವರಗಳು ಹೀಗಿವೆ..  

PARAM ವಿಶೇಷತೆಗಳು..!

  • ಸ್ಥಳೀಯವಾಗಿಯೇ ನಿರ್ಮಾಣ (ಕೆಲವು ಬಿಡಿ ಭಾಗಗಳು ಹೊರತುಪಡಿಸಿ)
  • ಕೇವಲ 30 ದಿನದಲ್ಲಿ ನಿರ್ಮಾಣ
  • ಬರೋಬ್ಬರಿ 35 ಕೆಜಿ ತೂಕ ಹೊಂದಿದೆ
  • 8 ಗಂಟೆಗಳ ಬ್ಯಾಟರಿ ಸಾಮರ್ಥ್ಯ
  • ಟಾಪ್ ಸ್ಪೀಡ್​ -3m/s
  • ಒಂದು ಮೀಟರ್ ಎತ್ತರಕ್ಕೆ ಜಿಗಿಯುವ ಸಾಮರ್ಥ್ಯ
  • ಬೀದಿಯಲ್ಲಿ ಸಲೀಸಾಗಿ ನಡಿಗೆ
  • IPL​​ನಲ್ಲಿ ಕಾಣಿಸಿಕೊಂಡ ‘ಚಂಪಕ್​’ಗಿಂತ ಭಿನ್ನ
Advertisment

ಈ ವಿಡಿಯೋ ವೈರಲ್ ಆಗ್ತಿದ್ದಂತೆಯೇ, ಭಾರತವು ರೊಬೋಟಿಕ್ಸ್​ನಲ್ಲಿ ಹೆಚ್ಚು ಪ್ರಗತಿ ಕಾಣುತ್ತಿದೆ ಎಂಬ ವಿಚಾರ ಚರ್ಚೆ ಶುರುವಾಗಿದೆ. 2025ರ ಐಪಿಎಲ್​ನಲ್ಲಿ ಚಂಪಕ್ ಎಂಬ ರೊಬೋ ನಾಯಿ ಕಂಡು ಎಲ್ಲರ ಗಮನ ಸೆಳೆದಿತ್ತು. ಇದೀಗಗ ಬೆಂಗಳೂರಿನಲ್ಲಿ ಪರಮ್ ಎಂಬ ನಾಯಿ ಗಮನ ಸೆಳೆಯುತ್ತಿದೆ. ಒಟ್ಟಾರೆ ಬೆಂಗಳೂರಿನಲ್ಲಿ ಸ್ಥಳೀಯವಾಗಿ ನಿರ್ಮಾಣಗೊಂಡಿರುವ ರೊಬೋ ಪರಮ್. ಅದರ ವಿನ್ಯಾಸ ಮತ್ತು ಸಾಮರ್ಥ್ಯ ಎಲ್ಲರ ಗಮನ ಸೆಳೆಯುತ್ತಿದೆ. ಇದು ಭಾರತ ಬೆಳೆಯುತ್ತಿರುವ ತಾಂತ್ರಿಕ ಸಾಮರ್ಥ್ಯದ ಪ್ರತಿಬಿಂಬವಾಗಿದೆ. ​ 

ಇದನ್ನೂ ಓದಿ:ತೆಲುಗು ನಟಿ ಹೇಮಾ ವಿರುದ್ಧದ ಡ್ರಗ್ಸ್ ಸೇವನೆ ಕೇಸ್ ರದ್ದು : ಹೈಕೋರ್ಟ್ ನಿಂದ ನಟಿ ಹೇಮಾಗೆ ಬಿಗ್ ರಿಲೀಫ್‌

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Robot dog PARAM
Advertisment
Advertisment
Advertisment