Advertisment

ಟೆನ್ಷನ್​ ಬಿಡಿ, ಕ್ಯೂನಿಂದ ದೂರ ಇರಿ.. ಮನೆ ಬಾಗಿಲಿಗೆ PASSPORT VAN ​

ಫಾರಿನ್​ ಟ್ರಿಪ್​ ಹೋಗ್ತೀವೋ ಇಲ್ವೋ ನಮ್ಮದೂ ಅಂತ ಒಂದು ಪಾಸ್​​ಪೋರ್ಟ್​ ಇರ್ಲೇಬೇಕು. ಪಾಸ್​ಪೋರ್ಟ್​ ಮಾಡ್ಕೊಳ್ಳೋದು ಅಂದ್ರೆ ಮಂತ್ರಕ್ಕೆ ಉದುರೋ ಮಾವಿನಕಾಯಿ ಅಲ್ವೇ ಅಲ್ಲಾ ಬಿಡಿ. ಕ್ಯೂನಲ್ಲಿ ನಿಂತು ನಿಂತು ಸಾಕಾಗಿಬಿಡುತ್ತೆ. ಇನ್ಮುಂದೆ ಆ ಟೆನ್ಷನ್​ ಬೇಡ. ಪಾಸ್​ಪೋರ್ಟ್​ ಆಫೀಸೇ ಮನೆಗೆ ಬರುತ್ತೆ.

author-image
Ganesh Kerekuli
Paaport office
Advertisment
  • ಮೊಬೈಲ್ ಪಾಸ್‌ಪೋರ್ಟ್ ವ್ಯಾನ್ ಮೂಲಕ ಜನರಿದಲ್ಲಿಯೇ ಸೇವೆ
  • ಈ ವ್ಯಾನ್​ನಿಂದ​ ಶುಕ್ರವಾರ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಕಾರ್ಯ
  • ವಿಧಾನಸೌಧ, ಎನ್​ಇಎನ್​​ ಆಫೀಸ್​ ರೋಡ್​, ಯಲಹಂಕದಲ್ಲಿ ಸೇವೆ

ಫಾರಿನ್​ ಟ್ರಿಪ್​ ಹೋಗ್ತೀವೋ ಇಲ್ವೋ ನಮ್ಮದೂ ಅಂತ ಒಂದು ಪಾಸ್​​ಪೋರ್ಟ್​ ಇರ್ಲೇಬೇಕು.  ಸಿಲಿಕಾನ್​ ಸಿಟಿಯಲ್ಲಿ ಪಾಸ್​ಪೋರ್ಟ್​ ಮಾಡ್ಕೊಳ್ಳೋದು ಅಂದ್ರೆ ಮಂತ್ರಕ್ಕೆ ಉದುರೋ ಮಾವಿನಕಾಯಿ ಅಲ್ವೇ ಅಲ್ಲಾ ಬಿಡಿ. ಕ್ಯೂನಲ್ಲಿ ನಿಂತು ನಿಂತು ಸಾಕಾಗಿಬಿಡುತ್ತೆ. ಇನ್ನು ಮುಂದೆ ಆ ಟೆನ್ಷನ್​ ಬೇಡ. ಪಾಸ್​ಪೋರ್ಟ್​ ಆಫೀಸೇ ನಿಮ್ಮ ಮನೆ ಮುಂದೆ ಬರುತ್ತೆ. 

Advertisment

ಪಾಸ್‌ಪೋರ್ಟ್.. ಆಧಾರ್‌ ಕಾರ್ಡ್‌ ,ಪ್ಯಾನ್‌ ಕಾರ್ಡ್‌ ಈ ಯಾವುದೇ ಸರ್ಕಾರಿ ಗುರುತಿನ ಚೀಟಿ ಮಾಡಿಸಬೇಕು ಅಂದ್ರೆ ಸಾಕು, ಶುರುವಾಗುತ್ತೆ ನೋಡಿ ತಲೆ ಬಿಸಿ. ಸರ್ಕಾರಿ ಕಚೇರಿಯಿಂದ ಮನೆ ಮನೆಯಿಂದ ಆಫೀಸ್​ ಅಂತ ಸುತ್ತಿಸುತ್ತಿ ಸುಸ್ತಾಗೋಗುತ್ತೆ. ಅದ್ರಲ್ಲೂ ಸಿಲಿಕಾನ್​ ಸಿಟಿ ಮಂದಿ ಪಾಸ್​ಪೋರ್ಟ್​ ಮಾಡಿಸ್ಬೇಕು ಅಂದ್ರೆ ಕೋರಮಂಗಲ, ಲಾಲ್​ಬಾಗ್​, ಮಾರತಹಳ್ಳಿಗೆ ಹೋಗ್ಬೇಕು. ಈ ಜಾಗದಲ್ಲೋ ಸಿಕ್ಕಾಪಟ್ಟೆ ಕ್ಯೂ. ಸಾಲದಕ್ಕೆ ಡಾಕ್ಯೂಮೆಂಟ್ಸ್​, ಫೋಟೋ ವೇರಿಫಿಕೇಷನ್​ ಸೇರಿ ಹತ್ತಾರು ರಗಳೆ. ಆದ್ರೆ, ಇನ್ಮುಂದೆ ಈ ತಲೆಬಿಸಿ ಇಲ್ಲ ನೀವು ಆಫೀಸ್​ಗೆ ಹೋಗೋದು ಬೇಡ ಪಾಸ್​​ಪೋರ್ಟ್​ ಆಫೀಸೇ ನಿಮ್ಮ ಮನೆಗೆ ಬರುತ್ತೆ.

ಇದನ್ನೂ ಓದಿ:BSNL ಅತಿದೊಡ್ಡ ಕೊಡುಗೆ.. ವಿದ್ಯಾರ್ಥಿಗಳಿಗಾಗಿ 100 GB ಡೇಟಾ, ಅನ್​ಲಿಮಿಟೆಡ್​ ಕಾಲ್ಸ್..!

ಮೊಬೈಲ್ ಪಾಸ್‌ಪೋರ್ಟ್ ವ್ಯಾನ್ ಎಂಬ ಹೊಸ ಸೇವೆ ಪ್ರಾರಂಭವಾಗಿದೆ. ಪಾಸ್​​ಪೋರ್ಟ್​ ಆಫೀಸ್​ನಲ್ಲಿ ಇರೋ ಉದ್ದನೆಯ ಸರತಿ ಸಾಲನ್ನ ಕಡಿಮೆ ಮಾಡಲು ಬೆಂಗಳೂರು ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ನಿಮ್ಮ ಮನೆ ಬಳಿಗೆ ಈ ಮೊಬೈಲ್ ಪಾಸ್‌ಪೋರ್ಟ್ ವ್ಯಾನ್ ಅನ್ನ ಕಳುಹಿಸಿಕೊಡ್ತಾಯಿದೆ. 

Advertisment

ಏನಿದು ಮೊಬೈಲ್ ಪಾಸ್‌ಪೋರ್ಟ್ ವ್ಯಾನ್ ?

  • ಮೊಬೈಲ್ ಪಾಸ್‌ಪೋರ್ಟ್ ವ್ಯಾನ್ ಮೂಲಕ ಜನರಿದಲ್ಲಿಯೇ ಸೇವೆ
  • ಈ ವ್ಯಾನ್​ನಿಂದ​ ಶುಕ್ರವಾರ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಕಾರ್ಯ
  • ವಿಧಾನಸೌದ, ಎನ್​ಇಎನ್​​ ಆಫೀಸ್​ ರೋಡ್​, ಯಲಹಂಕದಲ್ಲಿ ಸೇವೆ
  • ಈ ವ್ಯಾನ್​ನಲ್ಲಿ 40 - 50 ಅಪ್ಲಿಕೇಷನ್​ ಅಪ್ಲೈ ಮಾಡೋದಕ್ಕೆ ಅವಕಾಶ
  • ಈ ಮೂರು ಕಡೆ ಜನರ ಪ್ರಕ್ರಿಯೆ ಆಧರಿಸಿ ರಾಜ್ಯದಾದ್ಯಂತ ಸೇವೆಗೆ ಸಿದ್ಧತೆ
  • ರೇಡಿಯೋ-ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ಚಿಪ್ ಈ ವ್ಯಾನ್​ನಲ್ಲಿ ಅಳವಡಿಕೆ
  • ಇ-ಪಾಸ್‌ಪೋರ್ಟ್​ಗಾಗಿ ಹಿಂಬದಿಯ ಕವರ್‌ನಲ್ಲಿ ಆಂಟೆನಾ ಅಳವಡಿಕೆ
  • ಹೋಲ್ಡರ್‌ನ ವೈಯಕ್ತಿಕ ಮಾಹಿತಿ ಮತ್ತು ಬಯೋಮೆಟ್ರಿಕ್ ಡೇಟಾ ಸಂಗ್ರಹ
  • ಈ ಪಾಸ್​ಪೋರ್ಟ್​ನ ಮುಂಭಾಗದಲ್ಲಿ ಸಣ್ಣ ಚಿನ್ನದ ಲಾಂಛನ ಇರಲಿದೆ
  • ನಕಲಿ & ಇತರ ಪಾಸ್‌ಪೋರ್ಟ್ ವಂಚನೆಯನ್ನೂ ಇದು ತಪ್ಪಿಸಲಿದೆ
  • ಏಪ್ರಿಲ್‌ನಿಂದ ಇಲ್ಲಿಯವರೆಗೆ, 6 ಲಕ್ಷಕ್ಕೂ ಹೆಚ್ಚು ಇ-ಪಾಸ್‌ಪೋರ್ಟ್‌
  • ಈ ವ್ಯಾನ್​ನಿಂದ ತಿಂಗಳಿಗೆ ಸುಮಾರು 90,000 ಪಾಸ್‌ಪೋರ್ಟ್‌ ವಿತರಣೆ

ಈ ಮೊಬೈಲ್ ಪಾಸ್‌ಪೋರ್ಟ್ ವ್ಯಾನ್ ಸೇವೆಗಾಗಿ ನೀವು  ಪಾಸ್‌ಪೋರ್ಟ್ ಸೇವಾ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಅರ್ಜಿ ಸಲ್ಲಿಸುವ ಸಮಯದಲ್ಲಿ, ಡಿಜಿಲಾಕರ್ ಪರಿಶೀಲನೆಗೆ ಒಪ್ಪಿಗೆ ನೀಡಬೇಕಾಗುತ್ತದೆ. ಆಗ ಮಾತ್ರ ಈ ಸೇವೆ ಲಭ್ಯವಾಗಲಿದೆ. ಒಟ್ನಲ್ಲಿ ಇನ್ಮುಂದೆ ಪಾಸ್‌ಪೋರ್ಟ್ ಮಾಡಿಸಲು ಕಷ್ಟಪಡೋ ಅವಶ್ಯಕತೆ ಇಲ್ಲ ಯಾಕಂದ್ರೆ ಪಾಸ್‌ಪೋರ್ಟ್ ಆಫೀಸೇ ನಿಮ್ಮ ಮನೆ ಬಾಗಿಲಿಗೆ ಬರಲಿದೆ. 

ಇದನ್ನೂ ಓದಿ: ನುಗ್ಗೆಕಾಯಿ ಬಳಿಕ ಅವರೆಕಾಯಿ ಶಾಕ್.. ರೇಟ್ ಕೇಳಿದ್ರೆ ಅಂಗಡಿಗೇ ಹೋಗಲ್ಲ..!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

passport van
Advertisment
Advertisment
Advertisment