Advertisment

BSNL ಅತಿದೊಡ್ಡ ಕೊಡುಗೆ.. ವಿದ್ಯಾರ್ಥಿಗಳಿಗಾಗಿ 100 GB ಡೇಟಾ, ಅನ್​ಲಿಮಿಟೆಡ್​ ಕಾಲ್ಸ್..!

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್ ವಿದ್ಯಾರ್ಥಿಗಳಿಗಾಗಿ ವಿಶೇಷ ಮೊಬೈಲ್ ಯೋಜನೆ ಪರಿಚಯಿಸಿದೆ. ಇದನ್ನು ಮಕ್ಕಳ ದಿನಾಚರಣೆಯಂದು ಪ್ರಾರಂಭಿಸಲಾಗಿದೆ. ಅದರ ವಿಶೇಷತೆಗಳು ಈ ಸ್ಟೋರಿಯಲ್ಲಿದೆ.

author-image
Ganesh Kerekuli
ಗ್ರಾಹಕರಿಗೆ ಗುಡ್​ನ್ಯೂಸ್​; ಕಡಿಮೆ ದರದಲ್ಲಿ ಹಲವು ಬೆನಿಫಿಟ್ಸ್​​; ಏನಿದು BSNL ಹೊಸ ಪ್ಲಾನ್​​?
Advertisment

BSNL Student Special Plan: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್ ವಿದ್ಯಾರ್ಥಿಗಳಿಗಾಗಿ ವಿಶೇಷ ಮೊಬೈಲ್ ಯೋಜನೆ ಪರಿಚಯಿಸಿದೆ. ಇದನ್ನು ಮಕ್ಕಳ ದಿನಾಚರಣೆಯಂದು ಪ್ರಾರಂಭಿಸಲಾಗಿದೆ. BSNL ಸಿಎಂಡಿ ಎ. ರಾಬರ್ಟ್ ಜೆ. ರವಿ ಪ್ರಕಾರ, ಕಂಪನಿ ವಿದ್ಯಾರ್ಥಿಗಳು ಮತ್ತು ಮಹಿಳೆಯರಿಗಾಗಿ ವಿಶೇಷ ಯೋಜನೆಗಳನ್ನು ಪರಿಚಯಿಸುವ ಪ್ಲಾನ್ ಕಾರ್ಯನಿರ್ವಹಿಸುತ್ತಿದೆ. ಈ ಸ್ಟುಡೆಂಟ್ ಸ್ಪೆಷಲ್ ಪ್ಲಾನ್ ಆ ದಿಕ್ಕಿನಲ್ಲಿ ಮೊದಲ ಹೆಜ್ಜೆಯಾಗಿದೆ ಎಂದಿದ್ದಾರೆ.

Advertisment

ಇದನ್ನೂ ಓದಿ: ಟೆಸ್ಲಾ ಕಂಪನಿಯ ಸಿಇಓ ಎಲಾನ್ ಮಸ್ಕ್‌ಗೆ 1 ಟ್ರಿಲಿಯನ್ ಡಾಲರ್ ವೇತನ ನೀಡಿಕೆಗೆ ಒಪ್ಪಿಗೆ : ಟಾಪ್ ಒನ್ ವೇತನ ಪಡೆಯುವ ಸಿಇಓ ಮಸ್ಕ್‌

ಏನಿದು ಸ್ಪೆಷಲ್ ಪ್ಲಾನ್? 

ಈ ಹೊಸ ಪ್ಲಾನ್ ವಿದ್ಯಾರ್ಥಿಗಳಿಗಾಗಿಯೇ ಪರಿಚಯಿಸಲಾಗಿರುವ ಸೀಮಿತ ಅವಧಿಯ ಕೊಡುಗೆ. ದಿನಕ್ಕೆ ಸರಿಸುಮಾರು 8.96 ರೂಪಾಯಿ ಅಥವಾ ತಿಂಗಳಿಗೆ 251 ರೂಪಾಯಿ ಬಳಕೆ ಆಗಲಿದೆ. ಅಂದರೆ ಬಳಕೆದಾರರು 251 ರೀಚಾರ್ಜ್​ ಪ್ಲಾನ್ ಮಾಡಿಸಿಕೊಳ್ಳಬೇಕು. ಇದರಿಂದ ಕರೆ, ಡೇಟಾ ಮತ್ತು SMS ನಂತಹ ಎಲ್ಲಾ ಅಗತ್ಯ ವೈಶಿಷ್ಟ್ಯಗಳನ್ನು ಪಡೆಯುತ್ತಾರೆ.

  • ರೀಚಾರ್ಜ್ ಬೆಲೆ: 251 ರೂಪಾಯಿ
  • ಮಾನ್ಯತೆ: ನವೆಂಬರ್ 14 ರಿಂದ ಡಿಸೆಂಬರ್ 13, 2025 ರವರೆಗೆ ಲಭ್ಯ
  • ಅನಿಯಮಿತ ಕರೆ
  • 100GB ಹೈ-ಸ್ಪೀಡ್ ಡೇಟಾ
  • ಪ್ರತಿದಿನ 100 SMS
  • ಅರ್ಹತೆ: ಈ ಕೊಡುಗೆ ಹೊಸ ಬಳಕೆದಾರರಿಗೆ ಮಾತ್ರ ಸೀಮಿತವಾಗಿರದೆ ಎಲ್ಲಾ BSNL ಗ್ರಾಹಕರಿಗೆ
  • ಲಭ್ಯವಿದೆ.
  • ಈ ಪ್ಲಾನ್ ಪಡೆಯಲು, ಗ್ರಾಹಕರು ಹತ್ತಿರದ BSNL CSC ಕೇಂದ್ರಕ್ಕೆ ಭೇಟಿ ನೀಡಬಹುದು, 1800-180-1503 ಗೆ ಕರೆ ಮಾಡಬಹುದು ಅಥವಾ bsnl.co.in ಗೆ ಭೇಟಿ ನೀಡಬಹುದು.
Advertisment

ಇದನ್ನೂ ಓದಿ:UPI ಈಗ ಬ್ಯಾಂಕ್ ಖಾತೆ ಇಲ್ಲದೆಯೂ ಕೆಲಸ ಮಾಡ್ತದೆ.. ಮಕ್ಕಳು ಸಹ ಆನ್‌ಲೈನ್ ಪಾವತಿ ಮಾಡಬಹುದು..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

bsnl plan
Advertisment
Advertisment
Advertisment