/newsfirstlive-kannada/media/media_files/2025/12/05/avarekayi-2025-12-05-12-23-34.jpg)
ಕಾಯಿ ಕಾಯಿ ನುಗ್ಗೆಕಾಯಿ ಮಹಿಮೆ ಮುಂದೆ ಅವರೆ ಕಾಯಿ ಮಹಿಮೆ ತಾಂಡವ ಆಡ್ತಾಯಿದೆ. ಅವರೆಕಾಯಿ ರೇಟ್ ಕೇಳಿ ಗ್ರಾಹಕರು ಶಾಕ್​ ಆಗಿದ್ದಾರೆ. ಅಲ್ಲಾ ಗುರು ಒಂದ್​ ಕೆಜಿ ಚಿಕನ್​​ ತಂದು ಸಾರ್​ ಮಾಡ್ಬೋದು ಈ ಪಾಟಿ ರೇಟ್​ ಆಗಿದ್ಯಲ್ಲಾ ಅವರೆಕಾಯಿಗೆ ಅಂತ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.
ಸಿಪ್ಪೆ ಸುಲಿದ ಅವರೆಕಾಯಿಗೆ ಭಾರೀ ರೇಟ್, ಖರೀದಿ ಕಷ್ಟ ಕಷ್ಟ
ಪ್ರತಿಯೊಂದು ತರಕಾರಿ ಏರಿಕೆಗೂ ಇಳಿಕೆಗೂ ಕಾರಣ ಅನ್ನೋದು ಇದ್ದೇ ಇರುತ್ತೆ. ಸುಖಾಸುಮ್ಮನೇ ಮಾರ್ಕೆಟ್‌ನಲ್ಲಿ ರಾಕೆಟ್ ವೇಗದಲ್ಲಿ ತರಕಾರಿ ಏರೋದು ಇಲ್ಲ, ಇಳಿಯೋದು ಇಲ್ಲ. ಹಾಗೇ ಇಷ್ಟುದಿನ ಕೆ.ಜಿ.ಗೆ 80 ರೂಪಾಯಿ ಇದ್ದ ಅವರೆ ಕಾಯಿ ಈಗ ಸಡನ್​ ಆಗಿ 400 ರೂಪಾಯಿವರೆಗೆ ಏರಿಕೆಯಾಗೋದಕ್ಕೆ ಒಂದು ರೀಜನ್​ ಇದೆ. ಅದ್ರಲ್ಲೂ ಸಿಪ್ಪೆ ಸುಲಿದ ಅವರೆಕಾಯಿಗೆ ಮಾರ್ಕೆಟ್​ನಲ್ಲಿ ಸಿಕ್ಕಾಪಟ್ಟೆ ರೇಟ್ ಆಗೋದಕ್ಕೂ ಕಾರಣ ಇದೆ.
ಇದನ್ನೂ ಓದಿ:‘ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನು ಇದ್ದೇನೆ’ ರಿಷಬ್ ಶೆಟ್ಟಿಗೆ ಪಂಜುರ್ಲಿ ದೈವ ಅಭಯ..!
ಆಗಸ್ಟ್​ ತಿಂಗಳ ಮಳೆಯಿಂದ ಅವರೆಕಾಯಿ ಬೆಳೆ ನಷ್ಟ ಆಗಿದೆ. ಇನ್ನು ಯಾವಾಗ ಬೆಳೆ ಹಾನಿ ಆಯ್ತೋ ಇತ್ತ ಡಿಮ್ಯಾಂಡ್​ ಕೂಡ ಹೆಚ್ಚಾಯ್ತು. ಹೀಗಾಗಿ ಪೂರೈಕೆ ಕೂಡ ಕಡಿಮೆ ಇರೋದ್ರಿಂದ ಅವರೆಕಾಯಿ ಬೆಲೆ ಗಗನಕ್ಕೇರಿದೆ.
ತರಕಾರಿಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಅಡುಗೆ ಮನೆಯಲ್ಲಿರೋ ಮಹಿಳೆಯರು ಯಾವ ತರಕಾರಿಯನ್ನ ಬಳಸ್ಬೇಕು? ಯಾವ ತರಕಾರಿಯನ್ನ ಬಳಸ್ಬಾರದು? ಅನ್ನೋದನ್ನ ಯೋಚನೆ ಮಾಡಿ ಅಡುಗೆ ಮಾಡ್ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್.. 30 ಸಾವಿರದಿಂದ 3 ಲಕ್ಷದವರೆಗೆ ಪರ್ಸನಲ್ ಲೋನ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us