/newsfirstlive-kannada/media/media_files/2025/12/18/parameshwar-2025-12-18-18-40-48.jpg)
ವಿಧಾನಸಭೆ ಇವತ್ತು ಒಂದೇ ಒಂದು ಬಿಲ್​​ ವಿಚಾರಕ್ಕೆ ರಣರಂಗವಾಗೋಯ್ತು. ಶಾಂತಿಯ ತೋಟ ಪ್ರತಿಪಾದಿಸ್ತಿದ್ದ ಸಿದ್ದರಾಮಯ್ಯ, ಈ ಹಿಂದೆ ತಾವು ಕೊಟ್ಟ ಮಾತಿನಂತೆ ದ್ವೇಷ ಭಾಷಣಕ್ಕೆ ಕಾನೂನು ಜಾರಿಗೆ ತರ್ತಿದ್ದಾರೆ.. ಇವತ್ತು ಬಿಜೆಪಿ ಸದಸ್ಯರ ತೀವ್ರ ವಿರೋಧ ಮತ್ತು ಗದ್ದಲ ಗಲಾಟೆ ನಡುವೆ ದ್ವೇಷ ಭಾಷಣ ತಡೆಗಟ್ಟುವ ವಿಧೇಯಕ ಪಾಸ್​​ ಆಗಿದೆ.
ಬಿಲ್ ಪ್ರತಿ ಹರಿದು ಬಿಸಾಡಿದ ಅಶೋಕ್​!
ರಾಜ್ಯದಲ್ಲಿ ದ್ವೇಷಭಾಷಣಗಳಿಗೆ ಕಡಿವಾಣ ಹಾಕಲು ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ- 2025 ಅನ್ನ ವಿಧಾನಸಭೆಯಲ್ಲಿ ಕೋಲಾಹಲ ಸೃಷ್ಟಿಸ್ತು. ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಮಸೂದೆಯನ್ನ ಮಂಡಿಸ್ತಿದ್ದಂತೆ ಬಿಜೆಪಿ ಆಕ್ರೋಶ ಹೊರ ಹಾಕ್ತು. ಈ ವೇಳೆ, ವಿಪಕ್ಷ ನಾಯಕ ಆರ್.ಅಶೋಕ್ ಬಿಲ್ ಪ್ರತಿಯನ್ನು ಹರಿದು ಬಿಸಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಬಿಜೆಪಿ ಈ ಮಸೂದೆಯನ್ನ ವಾಕ್​​ ಸ್ವಾತಂತ್ರ್ಯದ ಹರಣ ಅಂತ ಕರೆದರು.
ಇದನ್ನೂ ಓದಿ: ಜೈಲು ಸೇರಿದ ಪತ್ನಿ.. ಲಾಯರ್ ಅಪ್ಪನ ವಿರುದ್ಧ ವಾದಿಸಲು ಕರಿ ಕೋಟ್ ಧರಿಸಿದ ಮಗ..!
/filters:format(webp)/newsfirstlive-kannada/media/media_files/2025/12/18/r-ahosk-2025-12-18-18-42-26.jpg)
ಇದು ಬಹಳ ಮಹತ್ವವಾದ ವಿಧೇಯಕ. ನನ್ನ ಭಾಷಣ ಮುಗಿದೇ ಇಲ್ಲ ಆಗಲೇ ವಿಧೇಯಕ ಅಂಗೀಕಾರ ಮಾಡುತ್ತೀರಿ. ಇದು ಒಳ್ಳೆಯ ಸಂಪ್ರದಾಯ ಅಲ್ಲ. ಎಂದಾದರೂ ಈ ರೀತಿ ಆಗಿದ್ಯಾ, ಚರ್ಚೆ ಮಾಡೋದಕ್ಕೆ ಅವಕಾಶ ಕೊಡಿ. ಅಧ್ಯಕ್ಷರು ಮತ್ತೆ ಮರು ಪರಿಶೀಲನೆ ಮಾಡಬೇಕು. ಈ ಬಿಲ್ ಬಗ್ಗೆ ಸಮಗ್ರವಾಗಿ ಚರ್ಚೆ ಆಗಬೇಕು. ಬಹುಮತ ಇದ್ದಾಗ ಬಿಲ್ ಪಾಸ್ ಸಹಜ, ಕಾನೂನು ರೀತಿಯಲ್ಲಿ ಚರ್ಚೆ ಆಗಬೇಕು. ಕಾನೂನು ಮಾಡಲು ಈ ಸದನ ಮಾಡಲಾಗಿದೆ. ಚರ್ಚೆಗೆ ಅವಕಾಶ ಇಲ್ಲದಿದ್ದರೆ ಬಿಲ್ಗೆ ಏನು ಗೌರವ. ಹಾಗಾಗಿ ಮತ್ತೆ ಚರ್ಚೆಗೆ ಮರುಪರಿಶೀಲಿಸಿ.
ಆರ್ ಅಶೋಕ್, ವಿಪಕ್ಷ ನಾಯಕ
ಸಿಡಿದೆದ್ದ ಕರಾವಳಿಗರು!
ಬಿಜೆಪಿ ತೀವ್ರ ವಿರೋಧ ಗಲಾಟೆ ವೇಳೆ ಸಚಿವ ಬೈರತಿ ಸುರೇಶ್​​​, ನೀವು ಕರಾವಳಿಯವರು ಬೆಂಕಿ ಹಚ್ಚುವವರು ಅಂತ ಹೇಳಿ ಹೊಸ ವಿವಾದ ಸೃಷ್ಟಿಸಿದ್ರು.. ಈ ಮಾತು ಆಡಳಿತ ಮತ್ತು ವಿಪಕ್ಷಗಳ ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಯ್ತು. ಯಾವಾಗ ಕರಾವಳಿ ಭಾಗದ ಬಗ್ಗೆ ಅಸಹನೆ ವ್ಯಕ್ತವಾಯ್ತೋ, ಕಡಲತಡಿಯ ಶಾಸಕರ ಆಕ್ರೋಶದ ಕಟ್ಟೆ ಒಡೆಯಿತು.. ಕೆರಳಿದ ಬಿಜೆಪಿ ಶಾಸಕರಾದ ಸುನಿಲ್​ಕುಮಾರ್, ವೇದವ್ಯಾಸ ಕಾಮತ್​, ಚನ್ನಬಸಪ್ಪ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ರು.. ಇದು ಕರಾವಳಿ ಸಂಸ್ಕೃತಿಗೆ ಮಾಡಿದ ಅಪಮಾನ ಅಂತ ಬೈರತಿ ಸಚಿವರ ಕ್ಷಮೆಯಾಚನೆಗೆ ಪಟ್ಟು ಹಿಡಿದಿದ್ದರಿಂದ ಕಲಾಪದ ದಿಕ್ಕನ್ನೇ ಬದಲಿಸಿತು.
ಈ ಸಂದರ್ಭದಲ್ಲಿ ಶಾಸಕ ಸುನಿಲ್​ಕುಮಾರ್​ ನೇರವಾಗಿ ಸಭಾಧ್ಯಕ್ಷ ಯು.ಟಿ. ಖಾದರ್​ರನ್ನೇ ನೀವೂ ಕರಾವಳಿಯವರಲ್ವೆ? ನೀವು ಸುಮ್ಮನೆ ಕುಳಿತಿದ್ದೀರಲ್ಲ ಅಂತ ಕಿಡಿಕಾರಿದ್ರು.. ಬಳಿಕ ಸ್ಪೀಕರ್ ವಿವಾದದ ಮಾತನ್ನ ಕಡತದಿಂದ ತೆಗೆದುಹಾಕೋದಾಗಿ ಹೇಳಿದ್ರೂ ಪ್ರತಿಭಟನೆ ಕಿಚ್ಚು ಆರಲಿಲ್ಲ.. ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ರು.. ನಂತ್ರ ಬಿಲ್​ ಅಂಗೀಕರಿಸಿದ ಸ್ಪೀಕರ್​​ ಕಲಾಪವನ್ನ ಮುಂದೂಡಿದ್ರು.
ಇದನ್ನೂ ಓದಿ: 1500 ಜನರು ಇರುವ ಹಳ್ಳಿಯಲ್ಲಿ ಕೇವಲ 3 ತಿಂಗಳಲ್ಲಿ 27,000 ಶಿಶುಗಳ ಜನನ -ಬೆಚ್ಚಿಬಿದ್ದ ಮಹಾರಾಷ್ಟ್ರ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us