/newsfirstlive-kannada/media/media_files/2025/11/23/mallikarjuna-kharge-2025-11-23-17-45-14.jpg)
ಕಾಂಗ್ರೆಸ್​​​ನಲ್ಲಿ ಆಡಿಸಿ ನೋಡು-ಬೀಳಿಸಿ ನೋಡುವ ಆಟ ಭರ್ಜರಿ ಆಗೇ ಸಾಗಿದೆ. ಕುರ್ಚಿಗಾಗಿ ಶಕ್ತಿ ಸಾಮರ್ಥ್ಯಗಳು ಜಂಟಿ ಆಯುಧಗಳಾಗ್ತಿವೆ. ಎದುರಾಳಿಗಳ ವಿರುದ್ಧ ತೊಡೆ ತಟ್ಟಿ ಸಂಖ್ಯಾಬಲ ಹೆಚ್ಚಿಸಿ ಆಟ ಕಟ್ಟುತ್ತಿರುವ ಎರಡು ಪಡೆಗಳು, ರಣಬಲ ಪ್ರದರ್ಶನ ಮಾಡ್ತಿವೆ. ಎಐಸಿಸಿ ಅಧ್ಯಕ್ಷ ನಿವಾಸವೇ ಪವರ್​​ ಹೌಸ್​ ಆಗಿದ್ದು, ಕುಶಲ ಕೌಶಲ್ಯ ಕಸರತ್ತಿನ ವೇದಿಕೆ ಆಗಿದೆ.
ಕಾಂಗ್ರೆಸ್‌ನಲ್ಲಿ ಕ್ಷಿಪ್ರ ಕ್ರಾಂತಿ ಬೆಳವಣಿಗೆಗಳ ನಡುವೆ ಬೆಂಗಳೂರಿನ ಖರ್ಗೆ ನಿವಾಸಕ್ಕೆ ನಾಯಕರ ಮ್ಯಾರಾಥಾನ್​​​ ನಡೀತಿದೆ. ಆದ್ರೆ ಕಾಂಗ್ರೆಸ್​ನ ಸಾರಥಿ ಮಲ್ಲಿಕಾರ್ಜುನ ಖರ್ಗೆ ಮಹಾಮೌನಕ್ಕೆ ಜಾರಿದ್ದಾರೆ. ಕುರ್ಚಿ ಫೈಟ್​ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ರು. ಎಲ್ಲವೂ ಹೈಕಮಾಂಡ್ ತೀರ್ಮಾನಿಸಲಿದೆ ಅಂತ ತಮ್ಮ ಮೇಲಿನ ಭಾರವನ್ನ ಹೈಕಮಾಂಡ್​​ಗೆ ವರ್ಗಾಯಿಸಿದ್ರು. ನಾನು ಹೇಳಿದ್ರೆ ಏನೂ ಚೆನ್ನಾಗಿರಲ್ಲ ಅಂತ ಪವರ್ ಫೈಟ್​ ಬಗ್ಗೆ ಪ್ರತಿಕ್ರಿಯಿಸಲು ಸ್ವತಃ ಎಐಸಿಸಿ ಅಧ್ಯಕ್ಷ ಖರ್ಗೆ ಹಿಂದೇಟು ಹಾಕಿದ್ದು ನೋಡಿದ್ರೆ ಪರಿಸ್ಥಿತಿಯ ತೀವ್ರತೆ ಎಷ್ಟಿದೆ ಅನ್ನೋ ಅಂದಾಜು ಎಣಿಕೆಗೂ ಸಿಗ್ತಿಲ್ಲ..
ಇದನ್ನೂ ಓದಿ:ಗಿಣಿ ಶಾಸ್ತ್ರ ಕೇಳಿ ಡಿಕೆಶಿಗೆ ಬಿಗ್ ಶಾಕ್ ಕೊಟ್ಟ ಬಿಜೆಪಿ -ಅಸಲಿ ಕತೆ ಏನು?
ಮುಖ್ಯವಾಗಿ ಸಿದ್ದರಾಮಯ್ಯ ಪರ ಬಲಿಷ್ಠ ಪಡೆ ಪ್ರಬಲವಾದಕ್ಕೆ ನಿಂತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಸಚಿವ ಹೆಚ್.ಸಿ. ಮಹದೇವಪ್ಪ, ಕೆ.ವೆಂಕಟೇಶ್ ಸೇರಿ ಹಲವು ನಾಯಕರು, ಸಿದ್ದರಾಮಯ್ಯ ಪರ ಅಭಿಪ್ರಾಯ ಮಂಡಿಸಿದ್ದಾರೆ..
ರಾಜ್ಯಕ್ಕೆ ಸಿದ್ದು ಅನಿವಾರ್ಯ!
- ರಾಜ್ಯದಲ್ಲಿ ಸಿದ್ದರಾಮಯ್ಯ ನಾಯಕತ್ವ ರಾಜ್ಯಕ್ಕೆ ಅನಿವಾರ್ಯ
- ಸದ್ಯದ ಸ್ಥಿತಿಯಲ್ಲಿ ಸಿದ್ದರಾಮಯ್ಯ ವರ್ಚಸ್ಸು ಕಾಂಗ್ರೆಸ್​ಗೆ ಬಲ
- ಪಕ್ಷ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ಕಾರಣಗಳ ವಿವರಣೆ
- ಸಿದ್ದುಗೆ ಎಲ್ಲ ವರ್ಗಗಳ ಬೆಂಬಲ, ನಾಯಕತ್ವ ಬಗ್ಗೆ ಚರ್ಚೆ ಬೇಡ
- ಎಲ್ಲಾ ವಿಷಯಗಳನ್ನ ರಾಹುಲ್ ಗಾಂಧಿಯವರ ಗಮನಕ್ಕೆ ತನ್ನಿ
- ಸಚಿವರಾದ ವೆಂಕಟೇಶ್, ಮಹದೇವಪ್ಪ ಒಂದೇ ಅಭಿಪ್ರಾಯ
- ಸಂಪುಟ ಪುನಾರಚನೆ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ
- ನಾಯಕತ್ವ ಬದಲಾವಣೆಯ ಚರ್ಚೆ ಪಕ್ಷ & ಸರ್ಕಾರಕ್ಕೆ ಹಾನಿ
- ಹೈಕಮಾಂಡ್ ಏನೇ ಹೇಳಿದ್ರು ಅದಕ್ಕೆ ಬದ್ಧ ಎಂದ ಸಚಿವೆ ಲಕ್ಷ್ಮೀ
ಮಲ್ಲಿಕಾರ್ಜುನ ಖರ್ಗೆ ಭೇಟಿ ಬಳಿಕ ಮಾತ್ನಾಡಿದ ಸಚಿವ ಹೆಚ್.ಸಿ. ಮಹದೇವಪ್ಪ, ಡಿನ್ನರ್ ಮೀಟಿಂಗ್ ವಿಚಾರ ಮಾತನಾಡಿಲ್ಲ ಎಂದ್ರು. ಸ್ಥಳೀಯ ಸಂಸ್ಥೆಗಳ ಬಗ್ಗೆ ಮಾತ್ರ ಚರ್ಚೆ ಆಗಿದೆ.. ಆದ್ರೆ, ಕಾಂಗ್ರೆಸ್​ನಲ್ಲಿ ಕುದುರೆ ವ್ಯಾಪಾರ ನಡೆಯುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಕಿಡಿಕಾರಿದ್ದಾರೆ. ಚಳ್ಳಕೆರೆ ಶಾಸಕ ರಘುಮೂರ್ತಿ, ಹೊಸದುರ್ಗ ಶಾಸಕ ಗೋವಿಂದಪ್ಪ, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಕೂಡ ಖರ್ಗೆ ನಿವಾಸಕ್ಕೆ ಭೇಟಿ ನೀಡಿ ಚಿತ್ರದುರ್ಗ ಜಿಲ್ಲೆಗೆ ಸಚಿವ ಸ್ಥಾನ ನೀಡಿ ಅಂತ ಮನವಿ ಮಾಡಿದ್ರು.. ಒಟ್ಟಾರೆ, ರಾಜ್ಯದಲ್ಲಿ ಕುರ್ಚಿ ಕದನ ಎಐಸಿಸಿ ಅಧ್ಯಕ್ಷರನ್ನೇ ಬೇಸರಕ್ಕೆ ತಳ್ಳಿದೆ.. ಉತ್ತರಿಸಲು ಆಗದಷ್ಟು ಪರಿಸ್ಥಿತಿ ವಿಷಮಿಸಿದಂತೆ ಕಾಣಿಸ್ತಿದೆ.
ಇದನ್ನೂ ಓದಿ: ಪವರ್ ಕೇಳ್ತಿರೋ DK ಶಿವಕುಮಾರ್​ಗೆ ಕೌಂಟರ್ ಕೊಟ್ಟ ಪರಮೇಶ್ವರ್..! VIDEO
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us