/newsfirstlive-kannada/media/media_files/2025/12/02/siddaramiah-and-dk-shivakumar-1-2025-12-02-12-08-59.jpg)
ಬೆಂಗಳೂರು: ಸಿಎಂ ಹಾಗೂ ಡಿಸಿಎಂ ಬ್ರೇಕ್​ಫಾಸ್ಟ್ ಮೀಟಿಂಗ್ ಅಂತ್ಯಗೊಂಡಿದೆ. ಡಿಕೆ ಶಿವಕುಮಾರ್ ನಿವಾಸದಲ್ಲಿ ನಡೆದ ಇವತ್ತಿನ ಉಪಹಾರಕೂಟವು ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಹೋದರ ಡಿ.ಕೆ.ಸುರೇಶ್ ಹಾಗೂ ಕುಣಿಗಲ್ ಶಾಸಕ ರಂಗನಾಥ್ ಬ್ರೇಕ್​ಫಾಸ್ಟ್​ನಲ್ಲಿ ಭಾಗಿಯಾಗಿದ್ದರು. ಬ್ರೇಕ್​ಫಾಸ್ಟ್​ ಬಳಿಕ ಸಿಎಂ ಹಾಗೂ ಡಿಸಿಎಂ ಪ್ರತ್ಯೇಕ ಮಾತುಕತೆ ನಡೆಸಿದರು.
ನಾಯಕತ್ವ ಗೊಂದಲ ದೆಹಲಿ ಅಂಗಳಕ್ಕೆ..!
ಬ್ರೇಕ್​ಫಾಸ್ಟ್​ ಮೀಟಿಂಗ್​ನ ಉದ್ದೇಶವೇ ಪವರ್ ಶೇರಿಂಗ್​ ವಿಚಾರದಲ್ಲಿ ಉಂಟಾಗಿರುವ ಗೊಂದಲ ಬಗೆಹರಿಸಿಕೊಳ್ಳೋದು ಆಗಿತ್ತು. ಹೈಕಮಾಂಡ್ ಸೂಚನೆಯಂತೆ ಎರಡು ಬ್ರೇಕ್​ಫಾಸ್ಟ್ ಮೀಟಿಂಗ್ ನಡೆದಿದೆ. ಇಬ್ಬರ ನಡುವಿನ ಚರ್ಚೆ ಬಳಿಕ, ನಾಯಕತ್ವ ಗೊಂದಲ ವಿಚಾರ ದೆಹಲಿಗೆ ಶಿಫ್ಟ್ ಆಗಿದೆ. ಉಭಯ ನಾಯಕರು ಹೈಕಮಾಂಡ್ ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ.
/filters:format(webp)/newsfirstlive-kannada/media/media_files/2025/12/02/siddaramaiah-and-dk-shivakumar-3-2025-12-02-10-27-11.jpg)
ಬ್ರೇಕ್​ಫಾಸ್ಟ್ ಮೀಟಿಂಗ್ ಬಳಿಕ ಮಾತನ್ನಾಡಿರುವ ಸಿದ್ದರಾಮಯ್ಯ.. ಇವನು (ಶಿವಕುಮಾರ್) ವೆಜಿಟೇರಿಯನ್, ನಾನು ನಾನ್ ವೆಜಿಟೇರಿಯನ್. ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುವ ಚರ್ಚೆ ನೆನ್ನೆ ಕೂಡ ಮಾಡಿದ್ದೇವೆ, ಇಂದು ಕೂಡ ಚರ್ಚೆ ಮಾಡಿದ್ದೇವೆ. ನಾವು ಯಾವಾಗಲೂ ಒಗ್ಗಟ್ಟಿಂದ ಇದ್ದೇವೆ. ನಾವು ಯಾವಾಗಲೂ ಬ್ರದರ್ಸ್. ಒಟ್ಟಿಗೆ ಕೆಲಸ ಮಾಡಿ 2028ಕ್ಕೆ ಮತ್ತೆ ಅಧಿಕಾರಕ್ಕೆ ಬರ್ತೇವೆ. ಡಿಸೆಂಬರ್ 2 ರಂದು ಹೈಕಮಾಂಡ್ ನಾಯಕ ಕೆಸಿ ವೇಣುಗೋಪಾಲ್ ಅವರನ್ನು ಭೇಟಿ ಸಾಧ್ಯತೆ ಇದೆ. ನಾವು ಮೂವರು ಒಂದೇ ಕಾರ್ಯಕ್ರಮದಲ್ಲಿ ಭಾಗಿಯಾಗ್ತೇವೆ ಎಂದರು.
ಇನ್ನು, ಶಿವಕುಮಾರ್ ಮಾತನ್ನಾಡಿ.. ಹೈಕಮಾಂಡ್ ನಾಯಕರು ಸಮಯ ನೀಡಿದ್ರೆ ಭೇಟಿ ಮಾಡಿ ಚರ್ಚೆ ಮಾಡುತ್ತೇವೆ. ಹೈಕಮಾಂಡ್, ರಾಹುಲ್ ಗಾಂಧಿ ನಿರ್ಧಾರಕ್ಕೆ ನಾವಿಬ್ಬರು ಬದ್ಧರಾಗಿದ್ದೇವೆ. ರಾಹುಲ್, ಸೋನಿಯಾ ಗಾಂಧಿ, ಖರ್ಗೆ ಭೇಟಿ ಮಾಡಿ ಚರ್ಚೆ ಮಾಡುತ್ತೇವೆ. ಇದುವರೆಗೂ ನಾವೂ ನಾಯಕತ್ವದ ಬಗ್ಗೆ ಚರ್ಚೆ ಮಾಡಿಲ್ಲ ಎಂದಿದ್ದಾರೆ.
ಇದನ್ನೂ ಓದಿ:ಆತ್ಮೀಯ ಮಾತುಕತೆ.. ಈ ಸಲ ಬ್ರೇಕ್​ಫಾಸ್ಟ್ ಮೀಟಿಂಗ್​ನಲ್ಲಿ ನಾಲ್ವರು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us