newsfirstkannada.com

ಪ್ರಜ್ವಲ್​ ಫೋನ್​ನಲ್ಲಿ ಅಡಗಿದ್ಯಾ ಭಯಾನಕ ರಹಸ್ಯಗಳು? ಎಸ್​​ಐಟಿ ಮುಂದಿರೋ ಚಾಲೆಂಜ್​ಗಳೇನು?

Share :

Published May 31, 2024 at 10:02pm

    ಗನ್ ತೋರಿಸಿ ಅತ್ಯಾಚಾರ ಮಾಡಿದ್ರು ಅನ್ನೋದಕ್ಕೆ ಸಾಕ್ಷಿ ಏನು?

    ವಿದೇಶದಲ್ಲೇ ಕೂತು ಸಾಕ್ಷಿಗಳ ಮೇಲೆ ಪ್ರಭಾವ ಬೀರಿದ್ರಾ ಪ್ರಜ್ವಲ್

    ಪ್ರಜ್ವಲ್​ಗೆ ವಿದೇಶದಲ್ಲಿ ತಲೆಮರಿಸಿಕೊಳ್ಳಲು ಸಹಾಯ ಮಾಡಿದ್ಯಾರು?

ಒಂದ್ಕಡೆ ಪ್ರಜ್ವಲ್ ರೇವಣ್ಣ ಈ ಕೇಸ್​ನಿಂದ ತಪ್ಪಿಸಿಕೊಳ್ಳೋದಕ್ಕೇ ಆಗೋದಿಲ್ಲ ಅಂತಿದ್ರೆ ಮತ್ತೊಂದ್ಕಡೆ ಈ ಕೇಸ್​ನ ಫ್ರೂವ್ ಮಾಡೋದು ಎಸ್​ಐಟಿಗೆ ದೊಡ್ಡ ಸವಾಲಾಗಿದೆ. ಪ್ರಜ್ವಲ್​ನ ಅರೆಸ್ಟ್​ ಮಾಡಿ ತನಿಖೆ ಶುರು ಮಾಡಿರೋ ತನಿಖಾಧಿಕಾರಿಗಳಿಗೆ ಒಂದಲ್ಲ, ಎರಡಲ್ಲ ಐದು ಮಹಾ ಸವಾಲು ಎದುರಾಗಿದೆ. ಈ ಐದು ಸವಾಲುಗಳನ್ನ ಮೆಟ್ಟಿ ನಿಂತರೇ ಮಾತ್ರ ಈ ಕೇಸ್‌ನಲ್ಲಿ ಗೆಲುವು ಸಾಧ್ಯ ಅಂತಾ ವಿಶ್ಲೇಷಣೆ ಮಾಡಲಾಗ್ತಿದೆ. ಹಾಗಾದ್ರೆ ಎಸ್​ಐಟಿ ಮುಂದಿರುವ ಆ ಐದು ಸವಾಲುಗಳೇನು? ಇದನ್ನ ಎಸ್​ಐಟಿ ಅವ್ರು ಹೇಗೆ ಆಪರೇಟ್​ ಮಾಡ್ತಾರೆ ಅನ್ನೋ ಡಿಟೈಲ್ಸ್​ ಇಲ್ಲಿದೆ.

ಸದ್ಯದ ಬೆಳವಣಿಗೆ, ಕೇಳಿ ಬರ್ತಿರುವ ಆರೋಪಗಳು, ಸಂತ್ರಸ್ತೆಯರ ಹೇಳಿಕೆಗಳು ಹಾಗೂ ಸಿಕ್ಕಿರುವ ಸಾಕ್ಷಿಗಳು ಎಲ್ಲವೂ ಪ್ರಜ್ವಲ್​ ರೇವಣ್ಣಗೆ ವಿರುದ್ಧವಾಗಿದೆ. ಆದರೆ ಇದೆಲ್ಲವೂ ಆರೋಪಗಳಷ್ಟೇ. ಯಾವುದು ಇದುವರೆಗೂ ಫ್ರೂವ್ ಆಗಿಲ್ಲ. ಹಾಗಾಗಿ, ಅಶ್ಲೀಲ ವಿಡಿಯೋ ಪ್ರಕರಣ ಹಾಗೂ ಅತ್ಯಾಚಾರ ಕೇಸ್​ಗಳಲ್ಲಿ ಪ್ರಜ್ವಲ್​ ತಪ್ಪಿತಸ್ಥ ಅಂತ ಈಗ್ಲೇ ಡಿಸೈಡ್ ಮಾಡೋಕೆ ಆಗಲ್ಲ.

ಇಷ್ಟು ದಿನ ಪ್ರಜ್ವಲ್ ರೇವಣ್ಣ ಅರೆಸ್ಟ್​ ಆಗಬೇಕು.. ಅರೆಸ್ಟ್​ ಆದ್ರೆ ಎಲ್ಲ ಸತ್ಯವೂ ಬಯಲಾಗುತ್ತೆ. ಆತ ತಪ್ಪು ಮಾಡಿದ್ದಾನಾ ಇಲ್ವಾ ಅಂತ ಸಾಬೀತಾಗುತ್ತೆ ಅಂತ ಹೇಳಲಾಗ್ತಿತ್ತು. ಸದ್ಯ ಪ್ರಜ್ವಲ್ ರೇವಣ್ಣನನ್ನ ಅರೆಸ್ಟ್​ ಸಹ ಮಾಡಲಾಗಿದೆ. ಆದರೆ ಈ ಕೇಸ್​ನಲ್ಲಿ ಪ್ರಜ್ವಲ್​ ರೇವಣ್ಣ ತಪ್ಪಿತಸ್ಥ ಅಂತ ಸಾಬೀತು ಪಡಿಸುವುದು ಎಸ್​ಐಟಿ ಅವ್ರಿಗೆ ಅಂದುಕೊಂಡಷ್ಟು ಸುಲಭವಾಗಿಲ್ಲ. ಈ ಐದು ಸವಾಲುಗಳು ಎಸ್​ಐಟಿ ಅವ್ರಿಗೆ ಕಬ್ಬಿಣದ ಕಡಲೆಯಾಗುವ ಸಾಧ್ಯತೆ ಇದೆ. ಈ ಐದು ಸವಾಲುಗಳನ್ನ ಮೆಟ್ಟಿ ನಿಂತರೇ ಮಾತ್ರ ಪ್ರಜ್ವಲ್ ಮೇಲಿನ ಆರೋಪವನ್ನ ಸಾಭೀತು ಪಡಿಸೋ ಸಾಧ್ಯತೆ ಇದೆ. ಹಾಗಾದ್ರೆ, ಎಸ್​ಐಟಿ ಅವ್ರಿಗೆ ಎದುರಾಗಿರೋ ಆ ಐದು ಸವಾಲು ಏನು? ಒಂದೊಂದು ಸವಾಲು ಎಸ್​ಐಟಿಗೆ ಎಷ್ಟು ಚಾಲೆಂಜ್​ ಆಗಿರುತ್ತೆ?.

ಸವಾಲು 1
ಪ್ರಜ್ವಲ್​ ಫೋನ್​ನ ಮದರ್​ ಬೋರ್ಡ್‌​ ಹುಡುಕೋದು!

ಇಡೀ ಪ್ರಕರಣಕ್ಕೆ ಇದೇ ಪ್ರಮುಖ ಅಸ್ತ್ರವಾಗಿರಲಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಪ್ರಜ್ವಲ್ ರೇವಣ್ಣನನ್ನ ಈ ಕೇಸ್​ಗಳಲ್ಲಿ ಆರೋಪಿ ಅಂತ ಪ್ರೂವ್ ಮಾಡಬೇಕು ಅಂದ್ರೆ ಎಸ್​ಐಟಿ ಪಾಲಿಗೆ ಬ್ರಹ್ಮಾಸ್ತ್ರವಾಗಬೇಕಿರೋದೇ ಪ್ರಜ್ವಲ್​ ಬಳಸುತ್ತಿದ್ದ ಫೋನ್​ ಹಾಗೂ ಫೋನ್​ನ ಮದರ್​ ಬೋರ್ಡ್

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣನ ಆರೋಪ ಸಾಬೀತು ಪಡಿಸಬೇಕು ಅಂದ್ರೆ ಮೊದಲು ಸದ್ಯ ವೈರಲ್ ಆಗಿರುವ ವಿಡಿಯೋಗಳು ಹಾಗೂ ಫೋಟೋಗಳ ಬಗ್ಗೆ ತನಿಖೆ ಆಗ್ಬೇಕು. ಈ ವಿಡಿಯೋಗಳು ಮತ್ತು ಫೋಟೋಗಳು ಒರಿಜಿನಲ್​ ಅಂತ ಪರೀಕ್ಷೆ ಮಾಡ್ಬೇಕು. ಒರಿಜಿನಲ್ ಅಂತಾ ಗೊತ್ತಾಗಬೇಕು ಅಂದ್ರೆ ವಿಡಿಯೋ ಚಿತ್ರೀಕರಣ ಮಾಡಿರುವ ಫೋನ್​ ಯಾವುದು ಅಂತ ತಿಳಿಯಬೇಕು. ಹಾಗಾಗಿ, ಪ್ರಜ್ವಲ್ ರೇವಣ್ಣ ಅವ್ರು ಬಳಸುತ್ತಿದ್ದ ಫೋನ್​ಗಳನ್ನ ಎಸ್​ಐಟಿ ಅವ್ರು ಮೊದಲ ವಶಪಡಿಸಿಕೊಳ್ಳಲಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಜರ್ಮನಿಯಿಂದ ಬೆಂಗಳೂರಿಗೆ ಬಂದಿಳಿದ ಪ್ರಜ್ವಲ್​ ಬಳಿಯಿದ್ದ ಫೋನ್​ನ ವಶಕ್ಕೆ ಪಡೆಯಲಾಗಿದೆ. ಫೋನ್​ನ ಎಫ್​ಎಸ್​ಎಲ್​ ಪರೀಕ್ಷೆಗೆ ಕಳುಹಿಸಲಾಗುತ್ತೆ. ಆದರೆ ಈ ಫೋನ್​ನ ವಿಡಿಯೋ ಚಿತ್ರೀಕರಣಕ್ಕೆ ಬಳಸಿದ್ದ ಫೋನ್​ನಾ? ಅಥವಾ ಬೇರೆ ಫೋನಾ ಅನ್ನೋದರ ಬಗ್ಗೆ ಖಚಿತತೆ ಇಲ್ಲ.

ಮದರ್​ ಡಿವೈಸ್​ ಬಗ್ಗೆ ಫೋಕಸ್ ಮಾಡಬೇಕಾಗುತ್ತದೆ

ಒಂದು ವೇಳೆ ಪ್ರಜ್ವಲ್​ರಿಂದ ವಶಪಡಿಸಿಕೊಂಡಿರುವ ಫೋನ್ ಅವರದ್ದೇ, ಇದೇ ಫೋನ್​ನ ಅವ್ರು ಬಳಸುತ್ತಿದ್ದರು, ಆದರೆ ಯಾವುದೇ ವಿಡಿಯೋಗಳು ಮತ್ತು ಫೋಟೋಗಳು ಇದ್ದ ಬಗ್ಗೆ ಮಾಹಿತಿ ಸಿಕ್ಕಿಲ್ಲ ಅನ್ನೋದಾದರೇ ಮದರ್​ ಡಿವೈಸ್​ ಬಗ್ಗೆ ಫೋಕಸ್ ಮಾಡಬೇಕಾಗುತ್ತದೆ. ​ಒಂದು ವೇಳೆ ಫೋನ್ ಸಿಕ್ಕಿದರೂ ಆ ಫೋನ್​ನಲ್ಲಿರುವ ಮದರ್​ ಡಿವೈಸ್​ ಒರಿಜಿನಲ್​ ಅಂತ ಚೆಕ್ ಮಾಡಬೇಕು. ಯಾಕಂದ್ರೆ, ಫೋನ್​ ಸಿಕ್ಕರೂ ಅದರಲ್ಲಿರುವ ಮದರ್​ ಡಿವೈಸ್​ ಡೆಸ್ಟ್ರಾಯ್ ಮಾಡಿರುವ ಸಾಧ್ಯತೆ ಇರುತ್ತೆ. ಇನ್​ಕೇಸ್​ ಮದರ್​ ಡಿವೈಸ್​ ಡೆಸ್ಟ್ರಾಯ್ ಮಾಡಿದ್ರೆ ಅಥವಾ ಚೇಂಜ್ ಮಾಡಿದ್ರೆ ಖಂಡಿತ ವಿಡಿಯೋಗಳು ಹಾಗೂ ಫೋಟೋಗಳ ಚಿತ್ರೀಕರಣದ ಬಗ್ಗೆ ಯಾವ ಸುಳಿವು ಸಿಗಲ್ಲ. ಹಾಗಾಗಿ, ಎಸ್​ಐಟಿ ಅವ್ರಿಗೆ ಪ್ರಜ್ವಲ್​ ರೇವಣ್ಣ ಬಳಸುತ್ತಿದ್ದ ಫೋನು ಹಾಗೂ ಫೋನ್​ನ ಮದರ್ ಡಿವೈಸ್​ ವಶಕ್ಕೆ ಪಡೆಯೋದು ಅತಿ ದೊಡ್ಡ ಸವಾಲಾಗಿದೆ.

ಮದರ್ ಡಿವೈಸ್ ಸಿಕ್ಕಿಲ್ಲ ಅಂತ ಪ್ರಜ್ವಲ್ ರಿಲೀಫ್​ ಆದ್ರು ಅಂತ ಅಲ್ಲ. ಮದರ್ ಡಿವೈಸ್​ ಡೆಸ್ಟ್ರಾಯ್ ಆಗಿರೋದು ಕನ್ಫರ್ಮ್ ಆದ್ರೆ ಮತ್ತೊಂದು ರೀತಿಯಲ್ಲಿ ಸಂಕಷ್ಟಕ್ಕೆ ಸಿಲುಕಿಕೊಳ್ತಾರೆ. ಸಾಕ್ಷಿ ನಾಶ ಆರೋಪದಲ್ಲಿ ಮತ್ತೊಂದು ಸೆಕ್ಷನ್‌ ನಡಿ ದೂರು ದಾಖಲಾಗುತ್ತದೆ. ಜೊತೆಗೆ ಮದರ್ ಡಿವೈಸ್ ಸಿಗದಿದ್ರೆ ಬೇರೊಂದು ಮಾರ್ಗದಲ್ಲಿ ಎಸ್‌ಐಟಿ ಅವ್ರು ತನಿಖೆ ಮಾಡಬೇಕಾಗುತ್ತದೆ.

ಸವಾಲು 2
ವಿಡಿಯೋದಲ್ಲಿರೋದು ಪ್ರಜ್ವಲ್ ಅಂತ ಸಾಬೀತು ಪಡಿಸಬೇಕು!

ಅಶ್ಲೀಲ ವಿಡಿಯೋಗಳು ಹಾಗೂ ಅತ್ಯಾಚಾರ ಕೇಸ್​ನಲ್ಲಿ ಪ್ರಜ್ವಲ್ ರೇವಣ್ಣ ವಿರುದ್ದ ಕೇಸ್ ದಾಖಲಾಗಿದೆ. ಪ್ರಜ್ವಲ್ ಅವರದ್ದು ಎನ್ನಲಾದ ಸುಮಾರು 2 ಸಾವಿರ ವಿಡಿಯೋಗಳಿವೆ ಎನ್ನಲಾದ ಪೆನ್​ಡ್ರೈವ್​ ಎಸ್​ಐಟಿ ಅವರ ಬಳಿ ಇದೆ. ಈ ಕಡೆ ಸಂತ್ರಸ್ಥೆಯರು ಸಹ ಪ್ರಜ್ವಲ್ ರೇವಣ್ಣ ಬ್ಲಾಕ್​ಮೇಲ್ ಮಾಡಿ ಅತ್ಯಾಚಾರ ಮಾಡಿದ್ದಾನೆ ಅಂತ ದೂರಿದ್ದಾರೆ. ಹಾಗಾಗಿ ಲಭ್ಯವಾಗಿರುವ ವಿಡಿಯೋಗಳಲ್ಲಿ ಪ್ರಜ್ವಲ್ ರೇವಣ್ಣನೇ ಇರೋದು ಅಂತ ಸಾಬೀತು ಪಡಿಸಬೇಕಿರುವುದು ಎಸ್​ಐಟಿ ಅವ್ರ ಮತ್ತೊಂದು ದೊಡ್ಡ ಸವಾಲು.

ವಾಯ್ಸ್ ಮ್ಯಾಚ್ ಆಗದ್ದಿದ್ರೆ, ತನಿಖೆಗೆ ದೊಡ್ಡ ಮಟ್ಟಿದ ಹಿನ್ನಡೆ

ಈ ವಿಚಾರದಲ್ಲು ಎಸ್​ಐಟಿ ಅವ್ರಿಗೆ ದೊಡ್ಡ ಚಾಲೆಂಜ್ ಇದೆ. ಯಾಕಂದ್ರೆ ಸದ್ಯ ವೈರಲ್ ಆಗಿರುವ ಯಾವ ವಿಡಿಯೋದಲ್ಲಿ ಎಲ್ಲೂ ಕೂಡ ಪ್ರಜ್ವಲ್ ರೇವಣ್ಣ ಮುಖ ಪರಿಚಯ ಆಗಿಲ್ಲ ಎನ್ನಲಾಗಿದೆ. ಜೊತೆಗೆ ವಿಡಿಯೋಗಳಲ್ಲಿ ಧ್ವನಿ ಇದ್ದರೂ ಅದು ಪ್ರಜ್ವಲ್ ರೇವಣ್ಣನ ವಾಯ್ಸ್ ಅನ್ನೋದನ್ನ ಪತ್ತೆ ಹಚ್ಚಬೇಕಾಗಿದೆ. ಹೀಗಾಗಿ ಎಸ್‌ಐಟಿ ವಿಡಿಯೋದಲ್ಲಿರುವ ವಾಯ್ಸ್ ಮತ್ತು ಪ್ರಜ್ವಲ್‌ರ ವಾಯ್ಸ್‌ನ ಎಫ್‌ಎಸ್‌ಎಲ್‌ಗೆ ಕಳುಹಿಸುತ್ತಾರೆ. ಈ ಎರಡು ಆಡಿಯೋ ಮ್ಯಾಚ್ ಆದರೇ, ಎಸ್‌ಐಟಿ ತನಿಖೆಗೆ ದೊಡ್ಡ ಪುಷ್ಠಿ ಸಿಗಲಿದೆ. ಒಂದು ವೇಳೆ, ವಾಯ್ಸ್ ಮ್ಯಾಚ್ ಆಗದ್ದಿದ್ರೆ, ತನಿಖೆಗೆ ದೊಡ್ಡ ಮಟ್ಟಿಗೆ ಹಿನ್ನಡೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇದನ್ನೂ ಓದಿ: ರಾಷ್ಟ್ರ ರಾಜಧಾನಿಯಲ್ಲಿ ನೀರಿಗಾಗಿ ಹಾಹಾಕಾರ.. ವೈರಲ್ ಆಗಿರೋ ವಿಡಿಯೋ ನೋಡಿದ್ರೆ ಶಾಕ್ ಆಗೋದು ಪಕ್ಕಾ!

ವಾಯ್ಸ್​ ಹಾಗೂ ಫೇಸ್​ ಎರಡರ ಬಗ್ಗೆಯೂ ಕ್ಲಾರಿಟಿ ಬೇಕು ಅಂದ್ರೆ ವಿಡಿಯೋ ಚಿತ್ರೀಕರಣ ಆಗಿದೆ ಎನ್ನಲಾದ ಡಿಜಿಟಲ್ ಡಿವೈಸ್ ಬೇಕು. ಅಂದ್ರೆ ಮೂಲ ಮೊಬೈಲ್ ಬೇಕು. ಅದರ ಒರಿಜಿನಲ್ ಮದರ್ ಡಿವೈಸ್ ಬೇಕು. ಯಾಕಂದ್ರೆ ಸದ್ಯ ಸಿಕ್ಕಿರುವ ವಿಡಿಯೋಗಳೆಲ್ಲವೂ ಸೆಕೆಂಡರಿ ಎವಿಡೆನ್ಸ್​ ಆಗಿರುತ್ತೆ. ಇದನ್ನ ಇಟ್ಕೊಂಡು ಪ್ರಜ್ವಲ್ ಆರೋಪಿ ಅಂತ ಪ್ರೂವ್ ಮಾಡೋಕೆ ಆಗಲ್ಲ. ಅಂಡ್ ಪ್ರಜ್ವಲ್ ರೇವಣ್ಣ ಸಹ ಆ ವಿಡಿಯೋ ಹಾಗೂ ಆಡಿಯೋ ನನ್ನದ್ದಲ್ಲ ಅಂದ್ರೆ ಇದು ಕೂಡ ಕೇಸ್​ಗೆ ಹಿನ್ನಡೆ ತಂದೊಡ್ಡುವ ಸಾಧ್ಯತೆ ಇದೆ.

ಸವಾಲು 3
ಪ್ರಜ್ವಲ್​ನ ಒಂದು ತಿಂಗಳ ಟ್ರಾವಲ್‌ ಹಿಸ್ಟರಿ

ಅಶ್ಲೀಲ ವಿಡಿಯೋ ಕೇಸ್​ಗೆ ಸಂಬಂಧಿಸಿದಂತೆ ಏಪ್ರಿಲ್ 27ರ ಸಂಜೆ ರಾಜ್ಯ ಸರ್ಕಾರ ಎಸ್​ಐಟಿ ರಚನೆ ಮಾಡುತ್ತೆ. ಅವತ್ತು ಬೆಳಗ್ಗಿನ ಜಾವ ಪ್ರಜ್ವಲ್ ರೇವಣ್ಣ ವಿದೇಶಿ ಪ್ರಯಾಣ ಮಾಡಿದ್ದ. ಅಂದ್ರೆ ಆಲ್​ಮೋಸ್ಟ್​ ಒಂದು ತಿಂಗಳಿಗೂ ಅಧಿಕ ಅಂದ್ರೆ 34 ದಿನ ಪ್ರಜ್ವಲ್ ರೇವಣ್ಣ ದೇಶದಲ್ಲಿ ಇರಲಿಲ್ಲ. ಈ ಒಂದು ತಿಂಗಳು ಪ್ರಜ್ವಲ್ ಎಲ್ಲಿದ್ದ? ಎಲ್ಲೆಲ್ಲಿ ಓಡಾಡಿದ್ದ? ಆತನಿಗೆ ಆಶ್ರಯ ಕೊಟ್ಟಿದ್ಯಾರು ಅನ್ನೋದು ಬಹಳ ಪ್ರಮುಖವಾಗುತ್ತೆ. ಯಾಕಂದ್ರೆ ಪ್ರಜ್ವಲ್ ತಲೆಮರಿಸಿಕೊಂಡಿದ್ದ ಸಮಯದಲ್ಲಿ ದೇವೇಗೌಡರ ಕುಟುಂಬ ಆಗ್ಲಿ ಅಥವಾ ಜೆಡಿಎಸ್​ ಪಕ್ಷದವರಾಗಲಿ ಯಾರೂ ಕೂಡ ಪ್ರಜ್ವಲ್​ ಎಲ್ಲಿದ್ದಾನೆ ಅನ್ನೋದರ ಬಗ್ಗೆ ಮಾತಾಡಿರಲಿಲ್ಲ. ನಮ್ಮ ಸಂಪರ್ಕದಲ್ಲೇ ಇಲ್ಲ ಅಂತಾನೇ ಹೇಳಿದ್ದರು. ಹಾಗಾದ್ರೆ ಪ್ರಜ್ವಲ್​ಗೆ ವಿದೇಶದಲ್ಲಿ ಒಂದು ತಿಂಗಳು ತಲೆಮರಿಸಿಕೊಳ್ಳಲು ಸಹಾಯ ಮಾಡಿದ್ಯಾರು ಅನ್ನೋದನ್ನ ಎಸ್​ಐಟಿ ಅವ್ರು ಪತ್ತೆ ಹಚ್ಚಬೇಕಾಗುತ್ತದೆ.

ಇದನ್ನೂ ಓದಿ: ಕಾಂಗ್ರೆಸ್​ ಹಿರಿಯ ಶಾಸಕ ಶಾಮನೂರ ಶಿವಶಂಕರಪ್ಪ ದಿಢೀರ್​ ಆಸ್ಪತ್ರೆಗೆ ದಾಖಲು

ಈ ಕೇಸ್​ನಲ್ಲಿ ಪ್ರಜ್ವಲ್ ಟ್ರಾವೆಲ್ ಹಿಸ್ಟರಿ ತುಂಬಾನೇ ಇಂಪಾರ್ಟೆಂಟ್​. ಎಸ್​ಐಟಿ ಅವ್ರ ಕೊಟ್ಟ ಮೊದಲ ನೋಟಿಸ್​ಗೆ ರಿಯಾಕ್ಟ್​ ಮಾಡಿದ್ದ ಪ್ರಜ್ವಲ್ ವಕೀಲರ ಮೂಲಕ ಏಳು ದಿನ ಕಾಲಾವಕಾಶ ಕೇಳಿದ್ದರು. ಆಮೇಲೆ ಆ ಡೆಡ್​ಲೈನ್​ ಮುಗಿದ ಮೇಲೂ ಪ್ರಜ್ವಲ್ ಬಂದಿರಲಿಲ್ಲ. ಡೆಡ್​ಲೈನ್​ ಮುಗಿದರೂ ಪ್ರಜ್ವಲ್ ಯಾಕೆ ಬರಲಿಲ್ಲ ಅನ್ನೋದರ ಮೇಲೆ ಅನುಮಾನಗಳಿವೆ. ಈ ನಡುವೆ ಪ್ರಜ್ವಲ್ ಏನಾದರೂ ಸಾಕ್ಷಿ ನಾಶ ಪಡೋಕೆ ಪ್ರಯತ್ನಿಸಿದರಾ? ವಿದೇಶದಲ್ಲೇ ಕೂತು ಸಾಕ್ಷಿಗಳ ಮೇಲೆ ಪ್ರಭಾವ ಬೀರಿದರಾ ಅನ್ನೋದು ಪತ್ತೆ ಹಚ್ಚಬೇಕಿದೆ. ಅಷ್ಟೇ ಅಲ್ಲ, ವಿದೇಶದಲ್ಲಿದ್ದ ಪ್ರಜ್ವಲ್​ಗೆ ಆರ್ಥಿಕ ಸಹಾಯ ಮಾಡಿದ್ಯಾರು ಅನ್ನೋದರ ಬಗ್ಗೆಯೂ ಮಾಹಿತಿ ಸಂಗ್ರಹಿಸಬೇಕಾಗುತ್ತೆ. ಹಾಗಾಗಿ, ಕಳೆದ ಒಂದು ತಿಂಗಳು ಎಲ್ಲಿದ್ದರು? ಹೇಗಿದ್ದರು? ಯಾರ್ಯಾರ ಜೊತೆ ಸಂಪರ್ಕದಲ್ಲಿದ್ದರು? ಯಾವ ಫೋನ್ ಬಳಸಿದರು? ಯಾರೊಂದಿಗೆ ಮಾತಾಡಿದ್ದರು ಅನ್ನೋದರ ಜೊತೆಗೆ ಕೊನೆಯದಾಗಿ ವಿಡಿಯೋ ಬೈಟ್​ ಮಾಡಿದ್ದರ ಬಗ್ಗೆಯೂ ಮೂಲ ಹುಡುಕಬೇಕಿದೆ. ಇದು ಎಸ್​ಐಟಿಗೆ ಪಾಲಿಗೆ ಬಿಗ್ಗೆಸ್ಟ್​ ಚಾಲೆಂಜ್ ಆಗಿರಲಿದೆ.

ಸವಾಲು 4
ಆರೋಪಿ ವಿರುದ್ಧ ಸೂಕ್ತ ಸಾಕ್ಷ್ಯ ಸಂಗ್ರಹ

ಅಶ್ಲೀಲ ವಿಡಿಯೋ ಕೇಸ್​ ಹಾಗೂ ಅತ್ಯಾಚಾರ ಕೇಸ್​ ಎರಡರಲ್ಲೂ ಎಸ್​ಐಟಿ ಅವ್ರು ಸಾಕಷ್ಟು ಸಾಕ್ಷ್ಯ ಸಂಗ್ರಹ ಮಾಡಿದ್ದಾರೆ. ಸಂತ್ರಸ್ತೆಯರ ಹೇಳಿಕೆ ಹಾಗೂ ದೂರಿನ ಅನ್ವಯ ಕೃತ್ಯಗಳು ನಡೆದಿದೆ ಎನ್ನಲಾದ ಸ್ಥಳಗಳಲ್ಲಿ ಮಹಜರು ಮಾಡಿ ಸಾಕ್ಷ್ಯ ಸಂಗ್ರಹಿಸಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ಎಸ್​ಐಟಿಗೆ ಅನುಕೂಲ ಆಗಿದೆಯೋ ಗೊತ್ತಿಲ್ಲ. ಬಟ್, ಸಂತ್ರಸ್ತೆಯರ ದೂರು ಹಾಗೂ ಹೇಳಿಕೆಯಲ್ಲಿ ಉಲ್ಲೇಖಿಸಿರುವ ವಿಚಾರಗಳಿಗೆ ಸಂಬಂಧಪಟ್ಟಂತೆ ಸೂಕ್ತ ಸಾಕ್ಷ್ಯ ಬೇಕಾಗಿದೆ. ಗನ್ ತೋರಿಸಿ ಅತ್ಯಾಚಾರ ಮಾಡಿದ್ರು ಅನ್ನೋ ಅಂಶಕ್ಕೆ ಸಾಕ್ಷ್ಯಿ ಬೇಕಾಗಿದೆ. ಆಮಿಷವೊಡ್ಡಿ ಬಳಸಿಕೊಂಡರು ಎಂದಿರುವ ಆರೋಪಕ್ಕೆ ಪುರಾವೆ ಬೇಕಾಗಿದೆ. ಹಾಗಾಗಿ, ಈ ಪ್ರಕರಣಗಳಲ್ಲಿ ಪ್ರಜ್ವಲ್ ವಿರುದ್ಧ ಪ್ರಬಲ ಸಾಕ್ಷ್ಯಗಳನ್ನ ಕೋರ್ಟ್​ಗೆ ಪ್ರೊಡ್ಯೂಸ್ ಮಾಡೋದು ತನಿಖಾಧಿಕಾರಿಗಳಿಗೆ ನಿಜಕ್ಕೂ ಸವಾಲೇ ಸರಿ.

ಸವಾಲು 5
ತನಿಖೆ ಹಂತದಲ್ಲಿ ತಪ್ಪು ಆಗಬಾರದು.. ಬಿಗ್ ಅಲರ್ಟ್‌

ಅಂದ್ಹಾಗೆ, ಪ್ರಜ್ವಲ್ ರೇವಣ್ಣ ವಿರುದ್ಧದ ಈ ಪ್ರಕರಣಗಳು ಬಹಳ ಗಂಭೀರವಾದದು. ಕೇವಲ ರಾಜ್ಯ ಮಾತ್ರವಲ್ಲ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಸೃಷ್ಟಿಸಿರುವ ಪ್ರಕರಣ. ಹಾಲಿ ಸಂಸದರಾಗಿರುವ ಕಾರಣ ಇಡೀ ದೇಶದ ಗಮನ ಈ ಕೇಸ್​ ಮೇಲೆ ಇದೆ. ರಾಜಕೀಯವಾಗಿ ಈ ಕೇಸ್​ ತುಂಬಾನೇ ಮುಖ್ಯವಾಗಿದೆ. ಅದರಲ್ಲೂ ರಾಜ್ಯ ಸರ್ಕಾರಕ್ಕೆ ಇದು ಪ್ರತಿಷ್ಠೆಯೇ ಆಗಿದೆ. ಯಾವುದೇ ಕಾರಣಕ್ಕೂ ಈ ಪ್ರಕರಣ ತನಿಖೆಯಲ್ಲಿ ಲೋಪದೋಷ ಆಗದಂತೆ ಎಚ್ಚರವಹಿಸಿಬೇಕಾಗಿರುವುದು ಎಸ್​ಐಟಿ ಅವ್ರು ಬಹುದೊಡ್ಡ ಜವಾಬ್ದಾರಿ ಹಾಗೂ ಸರ್ಕಾರದ ಕಾಳಜಿಯೂ ಆಗಿದೆ. ಒಂದು ವೇಳೆ ಈ ಕೇಸ್​ನ ತನಿಖೆ ಹಂತದಲ್ಲಿ ಯಾವುದಾದರೂ ಲೋಪದೋಷಗಳು ಕಂಡುಬಂದಲ್ಲಿ ಅದನ್ನೇ ವಿರೋಧ ಪಕ್ಷಗಳು ಅಸ್ತ್ರವನ್ನಾಗಿಸಿಕೊಂಡು ಸರ್ಕಾರವನ್ನ ಮುಜುಗರಕ್ಕೆ ಸಿಲುಕಿಸುವ ಕೆಲಸ ಮಾಡಬಹುದು. ಹಾಗೂ ರಾಜ್ಯ ಪೊಲೀಸರ ಮೇಲೆ ವಿಶ್ವಾಸ ಕಳೆದುಕೊಳ್ಳುವ ಭೀತಿ ಉಂಟಾಗಬಹುದು. ಹಾಗಾಗಿ, ಎಸ್​ಐಟಿ ಅಧಿಕಾರಿಗಳಿಗೆ ಈ ಪ್ರಕರಣ ತುಂಬಾನೇ ಮುಖ್ಯವಾಗಿರುತ್ತದೆ.

ಇದನ್ನೂ ಓದಿ: ತ್ರಿವರ್ಣ ಧ್ವಜ ಹಿಡಿದು ಉಸಿರು ಚೆಲ್ಲಿದ ಯೋಧ; ದೇಶಭಕ್ತಿ ಗೀತೆಗೆ ಡ್ಯಾನ್ಸ್​ ಮಾಡುವಾಗ ಸಾವು

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್​ಗೆ ಎಷ್ಟು ಕಂಟಕ ಎದುರಾಗಿದ್ಯೋ ಎಸ್​ಐಟಿ ಅವ್ರಿಗೂ ಅಷ್ಟೇ ಸವಾಲುಗಳು ಇರೋದು ಸುಳ್ಳಲ್ಲ. ಇದೆಲ್ಲದರ ನಡುವೆ ಪ್ರಜ್ವಲ್ ರೇವಣ್ಣನನ್ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯ್ತು. ಪ್ರಜ್ವಲ್​ ವಿರುದ್ಧ ಬಲವಾದ ಸಾಕ್ಷಿಗಳಿವೆ, ಹೆಚ್ಚಿನ ತನಿಖೆ ಅಗತ್ಯವಿದೆ ಅಂತ ಎಸ್​ಐಟಿ ಪರ ವಕೀಲರು ವಾದಿಸಿದರು. ವಾದ ಜೊತೆ ಪ್ರತಿವಾದವನ್ನು ಆಲಿಸಿದ ಜಡ್ಜ್​ ಪ್ರಜ್ವಲ್​ನ 7 ದಿನ ಎಸ್​ಐಟಿ ಕಸ್ಟಡಿಗೆ ನೀಡಿದ್ದು, ಈ ನಡುವೆ ಇನ್ನಷ್ಟು ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: ಮನೆಯೊಳಗೆ ಆಟವಾಡುತ್ತ ಕುಳಿತ್ತಿದ್ದಾಗ ಕುಸಿದು ಬಿದ್ದ ಮೇಲ್ಛಾವಣಿ.. ಉಸಿರು ಚೆಲ್ಲಿದ 2 ಮಕ್ಕಳು

ಪ್ರಜ್ವಲ್ ವಿರುದ್ಧ ಎಸ್​ಐಟಿ ಬಳಿ ಪ್ರಬಲ ಅಸ್ತ್ರಗಳಿಗೆ.. ಎಲ್ಲಾ ಆ್ಯಂಗಲ್​ನಲ್ಲೂ ತನಿಖೆ ಮುಂದುವರಿಸಿದೆ. ಈ ಕಡೆ ಪ್ರಜ್ವಲ್​ನ ಈ ಕೇಸ್​ನಿಂದ ಬಚಾವ್ ಮಾಡ್ಲೇಬೇಕು ಅಂತ ರೇವಣ್ಣ ಪರ ವಕೀಲರನ್ನೂ ಒಂದಷ್ಟು ತಯಾರಿ ನಡೆಸಿದ್ದಾರೆ. ಸೋ, ತನಿಖೆ ಹೇಗೆ ಸಾಗುತ್ತೆ ಎಂದು ಕಾಯಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಜ್ವಲ್​ ಫೋನ್​ನಲ್ಲಿ ಅಡಗಿದ್ಯಾ ಭಯಾನಕ ರಹಸ್ಯಗಳು? ಎಸ್​​ಐಟಿ ಮುಂದಿರೋ ಚಾಲೆಂಜ್​ಗಳೇನು?

https://newsfirstlive.com/wp-content/uploads/2024/05/prajwal1.jpg

Load More