/newsfirstlive-kannada/media/post_attachments/wp-content/uploads/2024/05/Prajwal-Revanna-Arrest.jpg)
ಬೆಂಗಳೂರು: ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಲಾಗಿದೆ. ನಿನ್ನೆ ರಾತ್ರಿಯಿಂದ SIT ವಶದಲ್ಲಿರುವ ಪ್ರಜ್ವಲ್ ರೇವಣ್ಣ ಅವರನ್ನು ಇಂದು ಮಧ್ಯಾಹ್ನ ಕೋರ್ಟ್‌ಗೆ ಹಾಜರುಪಡಿಸಲಾಗುತ್ತಿದೆ. 42ನೇ ಎಸಿಎಂಎಂ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಇಂದು ಪ್ರಜ್ವಲ್ ರೇವಣ್ಣ ಅವರನ್ನು ಹಾಜರುಪಡಿಸಲು SIT ಪೊಲೀಸರು ಸಕಲ ಸಿದ್ಧತೆಗಳನ್ನು ಮಾಡಿದ್ದಾರೆ.
ನಿನ್ನೆ ರಾತ್ರಿ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿದ್ದ SIT ಪೊಲೀಸರು ಇಂದು ವೈದ್ಯಕೀಯ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಬೌರಿಂಗ್ ಆಸ್ಪತ್ರೆಯ ವೈದ್ಯರು ಪ್ರಜ್ವಲ್ ರೇವಣ್ಣ ಅವರ ಮೆಡಿಕಲ್ ಚೆಕಪ್ ಮಾಡಿದ್ದಾರೆ. ಈ ವೇಳೆ ಆಸ್ಪತ್ರೆ ಆವರಣದಲ್ಲಿ ಮಹಿಳಾ ಆಫೀಸರ್ಸ್‌ಗಳ ಮುಖ ನೋಡಿ ಪ್ರಜ್ವಲ್ ರೇವಣ್ಣ ಅವರು ಗರಂ ಆಗಿದ್ದಾರೆ.
/newsfirstlive-kannada/media/post_attachments/wp-content/uploads/2024/05/prajwal-revanna-1-1.jpg)
ನಿನ್ನೆ ರಾತ್ರಿಯಿಂದಲೂ ಪ್ರಜ್ವಲ್ ರೇವಣ್ಣ ಅವರ ಪ್ರಕರಣದ ತನಿಖೆಯಲ್ಲಿ ಮಹಿಳಾ ಅಧಿಕಾರಿಗಳೇ ಹೈಲೆಟ್​ ಆಗಿದ್ದಾರೆ. ನಿನ್ನೆ ಏರ್​​ಪೋರ್ಟ್​ನಲ್ಲಿ ಪ್ರಜ್ವಲ್​ ಅವರನ್ನು ಲೇಡಿ ಆಫೀಸರ್ಸ್‌ಗಳೇ ಬಂಧಿಸಿದ್ದರು. ಇಂದು ತನಿಖೆ ವೇಳೆಯೂ ಮಹಿಳಾ ಅಧಿಕಾರಿಗಳೇ ಪ್ರಜ್ವಲ್ ರೇವಣ್ಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಪ್ರಜ್ವಲ್​ ಸುತ್ತಾ ಮುತ್ತ ನಾಲ್ವರು ಮಹಿಳಾ ಅಧಿಕಾರಿಗಳ ಭದ್ರತೆ ನೀಡಲಾಗಿದೆ.
ಮಹಿಳಾ ಅಧಿಕಾರಿಗಳ ಸಮ್ಮುಖದಲ್ಲೇ ಬೌರಿಂಗ್ ಆಸ್ಪತ್ರೆಯಲ್ಲೂ ಪ್ರಜ್ವಲ್ ರೇವಣ್ಣ ಅವರ​ ಮೆಡಿಕಲ್​ ಟೆಸ್ಟ್​ ಮಾಡಲಾಗಿದೆ. ಆಸ್ಪತ್ರೆಗೆ ಪ್ರಜ್ವಲ್​ ರೇವಣ್ಣ ಅವರ ಕೈ ಹಿಡಿದು ಮಹಿಳಾ ಅಧಿಕಾರಿಗಳ ತಂಡ ಎಳೆದು ತಂದಿದೆ. ಈ ವೇಳೆ ಮಹಿಳಾ ಅಧಿಕಾರಿ ಮುಖ ನೋಡಿ ಪ್ರಜ್ವಲ್ ರೇವಣ್ಣ ಅವರು ಗರಂ ಆಗಿದ್ದಾರೆ.
ಬೌರಿಂಗ್ ಆಸ್ಪತ್ರೆಯಲ್ಲಿ ಡಾಕ್ಟರ್ ಧನಂಜಯ ಸಿ.ಎಂ ಅವರು ಪ್ರಜ್ವಲ್ ರೇವಣ್ಣ ಅವರ ವೈದ್ಯಕೀಯ ಪರೀಕ್ಷೆ ಮಾಡಿದ್ದಾರೆ. ಪ್ರಜ್ವಲ್ ಅವರ ಆರೋಗ್ಯ ಸ್ಥಿರವಾಗಿದೆ. ಬಿಪಿ, ಶುಗರ್, ಇಸಿಜಿ & ಹಾರ್ಟ್ ಬೀಟ್ ರೇಟ್ ಚೆಕಪ್ ಮಾಡಲಾಗಿದೆ. ಅವರ ಆರೋಗ್ಯದಲ್ಲಿ ಯಾವುದೇ ತೊಂದರೆ ಇಲ್ಲ. ಅವರ ಆರೋಗ್ಯದ ಸ್ಥಿತಿ ಚೆನ್ನಾಗಿದೆ. ಯಾವುದೇ ಸಮಸ್ಯೆ ಇಲ್ಲ ಎನ್ನುವ ರಿಪೋರ್ಟ್ ಅನ್ನು ವೈದ್ಯರು ಎಸ್ಐಟಿ ಅಧಿಕಾರಿಗಳಿಗೆ ನೀಡಿದ್ದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us