/newsfirstlive-kannada/media/post_attachments/wp-content/uploads/2024/05/prajaval1.jpg)
ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ನಾಪತ್ತೆಯಾಗಿದ್ದ ಪ್ರಜ್ವಲ್ ರೇವಣ್ಣ ಪ್ರತ್ಯಕ್ಷರಾಗಿದ್ದಾರೆ. ‘ನಾನು ರಿಟರ್ನ್ ಬರ್ತೀದ್ದೀನಿ’ ಅನ್ನೋ ವಿಡಿಯೋ ಸಂದೇಶವನ್ನು ಕಳುಹಿಸಿದ್ದಾರೆ. ಇದರ ಬೆನ್ನಲ್ಲೇ ಎಸ್ಐಟಿಯಿಂದ ಮುಂದಿನ ಕಾನೂನು ಪ್ರಕ್ರಿಯೆಗಳ ತಯಾರಿ ನಡೀತಿದೆ.
ಪ್ರಜ್ವಲ್ ವಿಡಿಯೋ ರಿಲೀಸ್ ಬಳಿಕ ‘ಕುಂಕುಮ’ ಕುತೂಹಲ ಮೂಡಿದಿದೆ. ವಿಡಿಯೋದಲ್ಲಿ ಪ್ರಜ್ವಲ್ ರೇವಣ್ಣ ಹಣೆಯಲ್ಲಿ ಕುಂಕುಮ ಇದೆ. ವಿದೇಶದಲ್ಲಿದ್ರೆ ಪ್ರಜ್ವಲ್ ಹಣೆಯಲ್ಲಿ ಕುಂಕುಮ ಹೇಗೆ ಬಂತು? ಕರ್ನಾಟಕದಲ್ಲಿದ್ದೇ ಪ್ರಜ್ವಲ್ ರೇವಣ್ಣ ವಿದೇಶದ ಕಥೆ ಕಟ್ಟಿದ್ರಾ? ಎಂಬ ಅನುಮಾನ ಎಸ್ಐಟಿ ಅಧಿಕಾರಿಗಳಿಗೆ ಕಾಡಲು ಶುರುವಾಗಿದೆಯಂತೆ. ವಿಡಿಯೋ ರಿಲೀಸ್ ಬಳಿಕ ಪ್ರಜ್ವಲ್ ನಡೆ ಬಗ್ಗೆ ಅನುಮಾನ ಮೂಡಿದ್ದು, ಪಾಸ್ಪೋರ್ಟ್ ರದ್ದಿಗೆ ಹೆದರಿ ವಾಪಸ್ ಆಗ್ತಿದ್ದಾರಾ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ.
ಇದನ್ನೂ ಓದಿ:ಟೀಂ ಇಂಡಿಯಾ ಕೋಚ್ಗಾಗಿ ಹಗ್ಗಜಗ್ಗಾಟ.. ಶಾರೂಖ್ ಖಾನ್ vs ಜಯ್ ಶಾ..!
‘ಕುಂಕುಮ’ ಕುತೂಹಲ
- ಕುತೂಹಲ 01: ಪ್ರಜ್ವಲ್ ವಿಡಿಯೋ ಮಾಡುವ ವೇಳೆ ಕುಂಕುಮ ಇಟ್ಟಿದ್ದು ಯಾಕೆ?
- ಕುತೂಹಲ 02: ಪ್ರಜ್ವಲ್ ವಿದೇಶದಲ್ಲೇ ಇದ್ದರೆ ಅವರಿಗೆ ಕುಂಕುಮ ಸಿಕ್ಕಿದ್ದು ಹೇಗೆ?
- ಕುತೂಹಲ 03: ಒಂದು ತಿಂಗಳ ಹಿಂದೆಯೇ ದೇಶ ಬಿಟ್ಟಿದ್ದರೆ ಕುಂಕುಮ ಹೇಗೆ ಸಿಗುತ್ತೆ?
- ಕುತೂಹಲ 04: ವಿದೇಶದಲ್ಲೇ ಭಾರತೀಯ ಕುಟುಂಬದ ಆಶ್ರಯ ಪಡೆದಿದ್ದಾರಾ?
- ಕುತೂಹಲ 05: ದೇವಸ್ಥಾನಕ್ಕೆ ಹೋಗಿರಬೇಕು, ಇಲ್ಲ ಮನೆಯಲ್ಲಿ ಪೂಜೆ ಮಾಡಿರಬೇಕು
- ಕುತೂಹಲ 06: ನಿನ್ನೆ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದ ರೇವಣ್ಣ
- ಕುತೂಹಲ 07: ರೇವಣ್ಣ ದೇವಾಲಯದಿಂದ ಕೊಂಡೊಯ್ದ ಕುಂಕುಮ ಪ್ರಜ್ವಲ್ ಬಳಸಿದ್ದ?
- ಕುತೂಹಲ 08: ಪ್ರಜ್ವಲ್ ವಿಡಿಯೋದಲ್ಲಿ ಕೇಳಿ ಬಂದ ವಾಹನಗಳ ಹಾರ್ನ್ ವಿದೇಶದ್ದಲ್ಲ
- ಕುತೂಹಲ 09: ವಿಡಿಯೋದಲ್ಲಿ 3 ಬಾರಿ ಹಾರ್ನ್, ಪಕ್ಕಾ ಲೋಕಲ್ ಹಾರ್ನ್ ಎಂಬ ಚರ್ಚೆ
- ಕುತೂಹಲ 10: ಕಟಿಂಗ್ ಅಂಡ್ ಶೇವಿಂಗ್ ಮಾಡಿಸಿಕೊಂಡು ಚೆನ್ನಾಗೆ ಇರುವ ಪ್ರಜ್ವಲ್ ರೇವಣ್ಣ
- ಕುತೂಹಲ 11: ಡಿಪ್ರೆಶನ್‌ಗೆ ಹೋದ ಅಥವಾ ಐಸೋಲೇಶನ್ ಆದ ಲಕ್ಷಣಗಳು ಕಾಣ್ತಿಲ್ಲ
ಇದನ್ನೂ ಓದಿ:ಸಮಸ್ಯೆ ಇದ್ದಾಗ ಮಾತ್ರ KL ರಾಹುಲ್ ನೆನಪಾಗ್ತಾರೆ.. ಈ ವಿಚಾರದಲ್ಲಿ ತಪ್ಪು ಮಾಡಿಬಿಡ್ತಾ ಬಿಸಿಸಿಐ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ