newsfirstkannada.com

ಚಕ್ರವರ್ತಿ ಬೆತ್ತಲಾಗಿದ್ದಾನೆ.. ಆತನ ಅಹಂಕಾರ ಮುರಿದಿದ್ದಕ್ಕೆ ಧನ್ಯವಾದ; ಪ್ರಕಾಶ್​ ರಾಜ್​

Share :

Published June 5, 2024 at 7:20am

  ‘ಅಬ್ಕಿ ಬಾರ್​ 400 ಪಾರ್​’ ಎಂಬ ಘೋಷಣೆ ಕೂಗಿದ್ದ ಮೋದಿ

  400ರ ಗಡಿ ದಾಟಲು ವಿಫಲವಾದ ಎನ್​ಡಿಎಯನ್ನು ಕಂಡು ಅಪಹಾಸ್ಯ?

  ಈಗ ಬೇರೊಬ್ಬರ ಬೆಂಬಲದೊಂದಿಗೆ ನಡೆಯಬೇಕಿದೆ ಎಂದ ಪ್ರಕಾಶ್​ ರಾಜ್

ಪ್ರಧಾನಿ ನರೇಂದ್ರ ಮೋದಿಯವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ‘ಅಬ್ಕಿ ಬಾರ್​ 400 ಪಾರ್​’ ಎಂಬ ಘೋಷಣೆ ಕೂಗಿದ್ದರು. ಆದರೆ ನಿನ್ನೆ ಹೊರಬಿದ್ದ ಫಲಿತಾಂಶ ಗಮನಿಸಿ ನಟ ಪ್ರಕಾಶ್ ರಾಜ್​ರವರು​ ಮೋದಿ ಮಾತನ್ನು ನೆನೆದುಕೊಂಡು ಅಪಹಾಸ್ಯ ಮಾಡಿದ್ದಾರೆ. ಬಿಜೆಪಿ ನೇತೃತ್ವದ ಎನ್​ಡಿಎ 400ರ ಗಡಿ ದಾಟಲು ವಿಫಲವಾಗಿದೆ ಎಂದು ಹೇಳಿದ್ದಾರೆ.

ಟ್ವೀಟ್​ ಮಾಡಿರುವ ನಟ ಪ್ರಕಾಶ್​​ ರಾಜ್​, ವಿಡಿಯೋವೊಂದನ್ನು  ಹಂಚಿಕೊಂಡಿದ್ದಾರೆ. ಅದರಲ್ಲಿ ಯುವತಿಯೊಬ್ಬಳ ‘ಅಬ್ಕಿ ಬಾರ್​ 400 ಪಾರ್​’ ಘೋಷಣೆಯನ್ನು ಹಂಚಿಕೊಂಡು ಪ್ರಧಾನಿಯ ಕಾಲೆಳೆದಿದ್ದಾರೆ.

ಪ್ರಕಾಶ್​ ರಾಜ್​ ಸಾಮಾಜಿಕ ಜಾಲತಾಣದಲ್ಲಿ, ‘ಚಕ್ರವರ್ತಿ ನಗ್ನನಾಗಿದ್ದಾನೆ. ಈಗ ಬೇರೊಬ್ಬರ ಬೆಂಬಲದಲ್ಲಿ ನಡೆಯಲು ಒತ್ತಾಯಿಸುತ್ತಿದ್ದಾನೆ. ಅವರ ಅಂಹಕಾರವನ್ನು ಪಂಕ್ಚರ್​ ಮಾಡಿದ್ದಕ್ಕಾಗಿ ಮತ್ತು ಅವರ ಸ್ಥಾನವನ್ನು ತೋರಿಸಿದ್ದಕ್ಕಾಗಿ ಭಾರತ ಮತ್ತು ಜವಾಬ್ದಾರಿಯುತ ನಾಗರಿಕ ಸಮಾಜಕ್ಕೆ ಧನ್ಯವಾದಗಳು. ನಾವು ನಮ್ಮ ಪರವಾಗಿ ಚೆನ್ನಾಗಿ ಹೋರಾಡಿದ್ದೇವೆ. ನಾವು ಮುಂದುವರೆಯುತ್ತೇವೆ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: VIDEO: ತಲೆಕೆಳಗಾದ ಚುನಾವಣಾ ಫಲಿತಾಂಶದ ಅಂಕಿ ಅಂಶ.. ಲೈವ್​ನಲ್ಲೇ ಗಳಗಳನೆ ಅತ್ತ ಪ್ರದೀಪ್​ ಗುಪ್ತಾ 

ಅಂದಹಾಗೆಯೇ ವಾರಣಾಸಿಯಲ್ಲಿ ಸ್ಪರ್ಧಿಸಿದ್ದ ಪ್ರಧಾನಿ ನರೇಂದ್ರ ಮೋದಿ 152513 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ. ಮೋದಿಗೆ ಒಟ್ಟು 612970 ಮತಗಳು ಬಿದ್ದಿದೆ.

ಇದನ್ನೂ ಓದಿ: VIDEO: ಹುಸಿಯಾದ AAP ನಾಯಕನ ಪ್ರತಿಜ್ಞೆ! BJP ಕಾರ್ಯಕರ್ತರಿಂದ ತಲೆ ಬೋಳಿಸಿಕೊಂಡ ವ್ಯಕ್ತಿ 

ಇನ್ನು ನಟ ಪ್ರಕಾಶ್​ ರಾಜ್ ಸಿನಿಮಾ ವಿಚಾರದ ಬಗ್ಗೆ ಗಮನಿಸುವುದಾದರೆ,​ ಮಹೇಶ್ ಬಾಬು, ಮೀನಾಕ್ಷಿ ಚೌಧರಿ, ಜಯರಾಮ್, ಜಗಪತಿ ಬಾಬು, ಶ್ರೀಲೀಲಾ, ಸುನಿಲ್, ರಮ್ಯಾ ಕೃಷ್ಣ ಮತ್ತು ರಾವ್ ರಮೇಶ್ ನಟಿಸಿದ ಗುಂಟೂರು ಕಾರಂ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕ ಅಲ್ಲು ಅರ್ಜುನ್​ ನಟನೆಯ ಪುಷ್ಪ 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಕ್ರವರ್ತಿ ಬೆತ್ತಲಾಗಿದ್ದಾನೆ.. ಆತನ ಅಹಂಕಾರ ಮುರಿದಿದ್ದಕ್ಕೆ ಧನ್ಯವಾದ; ಪ್ರಕಾಶ್​ ರಾಜ್​

https://newsfirstlive.com/wp-content/uploads/2024/06/Prakash-raj.png

Load More