/newsfirstlive-kannada/media/post_attachments/wp-content/uploads/2024/05/Praveen-Nettar-1.jpg)
ಮಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಸಂಬಂಧಿಸಿ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಎನ್​ಐಎ ಬಂಧಿಸಿದೆ. ತಲೆ ಮರೆಸಿ ಪರಾರಿಯಾಗಿದ್ದ ನಾಲ್ಕನೇ ಆರೋಪಿ ಮುಸ್ತಫಾ ಪೈಚಾರ್​ನ ಬಂಧನವಾಗಿದೆ.
ಮುಸ್ತಫಾ ಪೈಚಾರ್ ಸುಳ್ಯದ ಶಾಂತಿ ನಗರ ನಿವಾಸಿಯಾಗಿದ್ದು, ಪಿಎಫ್ಐ ಮುಖಂಡನಾಗಿದ್ದನು. ಪ್ರವೀಣ್​ ಹತ್ಯೆ ಬಳಿಕ ತಲೆಮರೆಸಿಕೊಂಡ ಈತನನ್ನು ಹಾಸನದ ಸಕಲೇಶಪುರ ಬಳಿ ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ಇದನ್ನೂ ಓದಿ: ಮೊದಲಿಗೆ ಎಣ್ಣೆ ಪಾರ್ಟಿ, ಆಮೇಲೆ ಜಗಳ, ನಂತರ ಕೊಲೆ.. ದೊಡ್ಡಪ್ಪನ ಮಗನನ್ನೇ ಬರ್ಬರವಾಗಿ ಕೊಂದ ತಮ್ಮ
ಎನ್​ಐಎ ಅಧಿಕಾರಿಗಳು ಮುಸ್ತಫಾ ಪೈಚಾರ್ ಬಂಧನಕ್ಕೆ ಬಲೆ ಬೀಸಿದ್ದರು. ಆದರೆ ಪ್ರವೀಣ್​ ನೆಟ್ಟಾರು ಹತ್ಯೆ ಬಳಿಕ ಆತ ತಲೆಮರೆಸಿಕೊಂಡಿದ್ದ. ಹೀಗಾಗಿ ಆತನ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಎನ್​ಐಎ ಅಧಿಕಾರಿಗಳು ಘೋಷಿಸಿದ್ದರು.
/newsfirstlive-kannada/media/post_attachments/wp-content/uploads/2024/05/Mustafa-Paichar.jpg)
ಕೊನೆಗೆ ಹಾಸನ ಜಿಲ್ಲೆ ಸಕಲೇಶಪುರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ಅಡಗಿದ್ದನು. NIA ಇನ್ಸ್ಪೆಕ್ಟರ್ ಷಣ್ಮುಗಂ ನೇತೃತ್ವದಲ್ಲಿ ಮುಸ್ತಫಾ ಪೈಚಾರ್​ನ ಬಂಧನವಾಗಿದೆ. ಆರೋಪಿಯನ್ನು ಅಧಿಕಾರಿಗಳು ಬೆಂಗಳೂರು ಎನ್.ಐ.ಎ ಕಚೇರಿಗೆಯತ್ತ ಕೊಂಡೊಯ್ದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us