Advertisment

Narendra Modi: ನಾಳೆ ಪ್ರಧಾನಿ ಮೋದಿಗೆ 74ನೇ ಹುಟ್ಟುಹಬ್ಬ; ಕೇಂದ್ರ ಸರ್ಕಾರದ ಮೆಗಾ ಪ್ಲಾನ್‌ ಏನು?

author-image
Gopal Kulkarni
Updated On
Narendra Modi: ನಾಳೆ ಪ್ರಧಾನಿ ಮೋದಿಗೆ 74ನೇ ಹುಟ್ಟುಹಬ್ಬ; ಕೇಂದ್ರ ಸರ್ಕಾರದ ಮೆಗಾ ಪ್ಲಾನ್‌ ಏನು?
Advertisment
  • ನಾಳೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ 3.Oಗೆ ಈಗ ನೂರು ದಿನಗಳ ಸಂಭ್ರಮ
  • 100 ದಿನದ ರೋಡ್ ಮ್ಯಾಪ್ ಹಾಕಿಕೊಂಡಿದ್ದ ಮೋದಿ ಸರ್ಕಾರ ಮಾಡಿದ್ದೇನು?
  • ಮುಂದಿನ ದಿನಗಳಲ್ಲಿ ನಮೋ ಸರ್ಕಾರ ಹಾಕಿಕೊಂಡಿರುವ ರೂಪರೇಷೆಗಳೇನು?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಳೆ ಹುಟ್ಟುಹಬ್ಬದ ಸಂಭ್ರಮ. 3ನೇ ಬಾರಿಗೆ ಪ್ರಧಾನಮಂತ್ರಿ ಆಗಿರುವ ಮೋದಿ ಅವರು ನಾಳೆ 74ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಇದರ ಜೊತೆಗೆ ನಾಳೆ ಅಂದ್ರೆ ಸೆಪ್ಟೆಂಬರ್ 17ಕ್ಕೆ  ಮೋದಿ 3.O ಸರ್ಕಾರ ನೂರು ದಿನಗಳನ್ನು ಪೂರೈಸಲಿದೆ. ಮೊದಲ ನೂರು ದಿನಗಳಲ್ಲಿ ಮಹತ್ವದ ಯೋಜನೆಗಳಿಗೆ ಮೋದಿ ಚಾಲನೆ ನೀಡಿದ್ದರು. ಚುನಾವಣೆಗೂ ಮುನ್ನವೇ 100 ದಿನಗಳ ರೋಡ್ ಮ್ಯಾಪ್​ ಸಿದ್ಧಪಡಿಸಲು ಮೋದಿ ಸೂಚಿಸಿದ್ದ ಎಲ್ಲರಿಗೂ ಗೊತ್ತಿರುವ ವಿಚಾರವೇ. ಅದರಂತೆ ಮೋದಿ 3.0 ಸರ್ಕಾರ ಮೊದಲ 100 ದಿನಗಳಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಿದೆ ಈ ಮೊದಲ 100 ದಿನಗಳಲ್ಲಿ ಮೋದಿ ಸರ್ಕಾರ ಕೈಗೊಂಡ ಮಹತ್ವದ ತೀರ್ಮಾನಗಳು ಏನು ಅನ್ನೋದನ್ನು ನೋಡುವುದಾದರೆ.

Advertisment

ಮೋದಿ ಸರ್ಕಾರದ 7 ಸಾಧನೆಗಳು

  1. ಮೊದಲ ನೂರು ದಿನಗಳಲ್ಲಿ ಬರೋಬ್ಬರಿ 15 ಲಕ್ಷ ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಯೋಜನೆಗೆ ಮೋದಿ ಸರ್ಕಾರ ಚಾಲನೆ ನೀಡಿದೆ
  2. ಈ ನೂರು ದಿನದಲ್ಲಿ ದೇಶಾದ್ಯಂತ 11 ಲಕ್ಷ ಲಕ್​ಪತಿ ದೀದಿಯರ ಸೃಷ್ಟಿ. ಮಹಿಳಾ ಸಬಲೀಕರಣಕ್ಕೆಂದೇ ಜಾರಿಗೆ ಬಂದ ಈ ಯೋಜನೆಯಲ್ಲಿ 11 ಲಕ್ಷ ಮಹಿಳೆಯರೂ ಲಕ್​ಪತಿ ದೀದಿಗಳ ಸೃಷ್ಟಿಯಾಗಿದೆ. ಒಟ್ಟಾರೆ ದೇಶದಲ್ಲಿ 1 ಕೋಟಿ ಲಕ್​ಪತಿ ದೀದಿಯರು ಇದ್ದಾರೆ.
  3. ಮೋದಿ ಸರ್ಕಾರ ಕಳೆದ ಎರಡು ಅವಧಿಯಲ್ಲಿ ಅತಿಹೆಚ್ಚು ಗಮನ ಕೊಟ್ಟಿದ್ದು ಮೂಲಸೌಕರ್ಯ ಅಭಿವೃದ್ಧಿಯ ಕಡೆಗೆ. ಈ ಕ್ಷೇತ್ರದಲ್ಲಿ ಕಳೆದ 100 ದಿನಗಳಲ್ಲಿ 3 ಲಕ್ಷ ಕೋಟಿ ವೆಚ್ಚದ ಯೋಜನೆಗೆ ಚಾಲನೆ ನೀಡಲಾಗಿದೆ.
  4. 4-ಪಿಎಂ ಗ್ರಾಮ್ ಸಡಕ್ ಯೋಜನೆಯಡಿ 25 ಸಾವಿರ ಗ್ರಾಮಗಳಿಗೆ 49 ಸಾವಿರ ಕೋಟಿ ವೆಚ್ಚದಲ್ಲಿ ರಸ್ತೆ ಸಂಪರ್ಕ
  5. 76, 200 ಕೋಟಿ ರೂ ವೆಚ್ಚದಲ್ಲಿ ಮಹಾರಾಷ್ಟ್ರದ ವಧವನ್ ಪೋರ್ಟ್ ನಿರ್ಮಾಣಕ್ಕೆ ಶಂಕುಸ್ಥಾಪನೆ
  6. ದೇಶದಲ್ಲಿ 75 ಸಾವಿರ ಹೊಸ ಮೆಡಿಕಲ್ ಸೀಟುಗಳ ಮಂಜೂರು, ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ
  7. ದೇಶದಲ್ಲಿ 70 ವರ್ಷ ಮೇಲ್ಪಟ್ಟ ಎಲ್ಲರಿಗೂ ಆಯುಷ್ಮಾನ್ ಭಾರತ್ ಯೋಜನೆಯಡಿ 5 ಲಕ್ಷ ರೂವರೆಗೆ ಉಚಿತ ಚಿಕಿತ್ಸೆಗೆ ಒಪ್ಪಿಗೆpublive-image

ಸದ್ಯ ಇವೆಲ್ಲವೂ ಮೋದಿ ಸರ್ಕಾರದ ನೂರು ದಿನಗಳ ಸಾಧನೆ. ಆದ್ರೆ ಇದು ಇಲ್ಲಿಗೆ ನಿಂತಿಲ್ಲ. ಇನ್ನೂ ಅನೇಕ ಯೋಜನೆಗಳನ್ನು ಜಾರಿಗೆ ತರಲು ಮೋದಿ ಸರ್ಕಾರ ನಿರ್ಧರಿಸಿದೆ.

1-ಇದೇ ಅವಧಿಯಲ್ಲಿ ದೇಶದಲ್ಲಿ ಒನ್ ನೇಷನ್, ಒನ್ ಎಲೆಕ್ಷನ್ ಜಾರಿ
2014ರಲ್ಲಿ ಮೊದಲ ಬಾರಿ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದಲೂ ಪ್ರಧಾನಿ ನರೇಂದ್ರ ಮೋದಿ ಒನ್ ನೇಷನ್ ಒನ್ ಎಲೆಕ್ಷನ್ ಅಂದ್ರೆ ಒಂದು ರಾಷ್ಟ್ರ ಒಂದು ಚುನಾವಣೆಯ ಬಗ್ಗೆ ಮಾತನಾಡುತ್ತಿದ್ದಾರೆ. ದೇಶದಲ್ಲಿ ಪದೇ ಪದೇ ಚುನಾವಣೆಗಳು ನಡೆಯುವುದರಿಂದ ಅತಿಯಾದ ವೆಚ್ಚ ಉಂಟಾಗುತ್ತದೆ. ಹೀಗಾಗಿ ಒಂದು ದೇಶ ಒಂದು ಚುನಾವಣೆ ಅಡಿಯಲ್ಲಿ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯನ್ನು ದೇಶದೆಲ್ಲೆಡೆ ಏಕಕಾಲಕ್ಕೆ ನಡೆಸುವ ಚಿಂತನೆಯನ್ನು 2014ರಿಂದಲೂ ಮೋದಿ ಸರ್ಕಾರ ಮಾಡುತ್ತಿದೆ. ಈ ಬಾರಿ ಅದನ್ನು ಅನುಷ್ಠಾನಕ್ಕೆ ತರುತ್ತಾರಾ ಅನ್ನುವ ಪ್ರಶ್ನೆ ಇನ್ನೂ ಇದೆ.

Advertisment

ಇದನ್ನೂ ಓದಿ:ಕೇಜ್ರಿವಾಲ್ ರಾಜೀನಾಮೆ ಅಸ್ತ್ರಕ್ಕೆ ಬಿಜೆಪಿ ಅಂಕ ಗಣಿತ ಪಲ್ಟಿ.. ದೆಹಲಿ CM ರೇಸ್​ನಲ್ಲಿ ಮೂವರು..?

2-ದೇಶದಲ್ಲಿ ಸಮಾನ ನಾಗರಿಕ ಸಂಹಿತೆಯೂ ಜಾರಿ, ಐದಾರು ರಾಜ್ಯಗಳಲ್ಲಿ ಈ ಬಗ್ಗೆ ಅಧ್ಯಯನ
ಸಮಾನ ನಾಗರಿಕ ಸಂಹಿತೆ. ಯುನಿಫಾರ್ಮ್​ ಸಿವಿಲ್ ಕೋಡ್ ಜಾರಿಗೆ ಮೋದಿ ಸರ್ಕಾರ ಕಳೆದ ಬಾರಿಯ ಅಧಿಕಾರದ ಅವಧಿಯಲ್ಲಿಯೇ ಚಿಂತನೆ ನಡೆಸಿತ್ತು. ಬಿಜೆಪಿ ಆರಂಭದಿಂದಲೂ ತನ್ನ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿಕೊಂಡು ಬರುತ್ತಿರುವ ಅತಿಮುಖ್ಯ ಅಂಶಗಳು ಅಂದ್ರೆ ಅದು ರಾಮಮಂದಿರ ನಿರ್ಮಾಣ, ಜಮ್ಮು ಕಾಶ್ಮೀರದಿಂದ ಆರ್ಟಿಕಲ್ 370 ತೆರವು ಹಾಗೂ ಸಮಾನ ನಾಗರಿಕ ಸಂಹಿತೆಯ ಜಾರಿ. ಈಗಾಗಲೇ ಎರಡು ಪ್ರಮುಖ ಅಂಶಗಳನ್ನು ಬಿಜೆಪಿ ಪೂರ್ಣಗೊಳಿಸಿದ್ದು ಈಗ ಸಮಾನ ನಾಗರಿ ಸಂಹಿತೆಯನ್ನು ಈ ಅವಧಿಯಲ್ಲಿ ಜಾರಿಗೆ ತರುವ ಚಿಂತನೆಯಲ್ಲಿದೆ.

3-ಜನಗಣತಿ ಜೊತೆಗೆ ಜಾತಿ ಗಣತಿಗೂ ಮುಕ್ತ ಮನಸ್ಸು ಹೊಂದಿರುವ ಕೇಂದ್ರ ಸರ್ಕಾರ
ಇದರ ಜೊತೆಗೆ ಈ ಮೋದಿ 3.0 ಅವಧಿಯಲ್ಲಿ ಜನಗಣತಿ ಜೊತೆ ಜೊತೆಗೆ ಜಾತಿ ಗಣತಿಯನ್ನು ಮಾಡುವ ಉದ್ದೇಶವನ್ನು ಮೋದಿ ಸರ್ಕಾರ ಹೊಂದಿದೆ. ಮೋದಿ ಸರ್ಕಾರ ತನ್ನ ಮೂರನೇ ಅವಧಿಯಲ್ಲಿ ಈ ಒಂದು ಗಣತಿಯನ್ನುಕ ಕೈಗೊಳ್ಳುವ ಎಲ್ಲಾ ಸಾಧ್ಯತೆಗಳು ಇವೆ

Advertisment

4-ದೇಶದಲ್ಲಿ ರಸ್ತೆ, ರೈಲು, ಮೆಟ್ರೋ, ವಿಮಾನ ನಿಲ್ದಾಣ ಸೇರಿ ಮೂಲಸೌಕರ್ಯ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ
ರಸ್ತೆ ಹಾಗೂ ರೈಲು ಸಂಪರ್ಕ ವಿಚಾರದಲ್ಲಿ ಮೋದಿ ಸರ್ಕಾರ ಕಳೆದ 10 ವರ್ಷಗಳಲ್ಲಿ ದೊಡ್ಡ ಮಟ್ಟದ ಕ್ರಾಂತಿಯನ್ನು ಮಾಡಿದೆ ಅದರ ಜೊತೆಗೆ ಮೆಟ್ರೋ ಹಾಗೂ ವಿಮಾನ ನಿಲ್ದಾಣಗಳನ್ನ ಸೇರಿ ಮೂಲಕಸೌಕರ್ಯ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿಯನ್ನ ಮಾಡುವ ಉದ್ದೇಶ ಮೋದಿ ಸರ್ಕಾರದ್ದಿದೆ.

5-ಸರ್ಕಾರಿ, ಖಾಸಗಿ ರಂಗದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಗೆ ಒತ್ತು ನೀಡುವ ಗುರಿ
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅತಿಹೆಚ್ಚು ಟೀಕೆಗೆ ಒಳಗಾಗಿದ್ದು ನಿರುದ್ಯೋಗ ವಿಷಯದಲ್ಲಿ. ದೇಶಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿಕೊಂಡೇ ಮೋದಿ ಸರ್ಕಾರ 2014ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಈ ಹಿನ್ನೆಲೆ ಈ ಬಾರಿ ಸರ್ಕಾರಿ ಹಾಗೂ ಖಾಸಗಿ ರಂಗದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿ ಮಾಡುವ ನಿಟ್ಟಿನಲ್ಲಿ ತನ್ನದೇ ಆದ ಗುರಿಯನ್ನು ಹೊಂದಿದೆ.

ಇದನ್ನೂ ಓದಿ:ಅಯೋಧ್ಯೆಗೆ ಹರಿದು ಬರುತ್ತಿದೆ ಜನಸಾಗರ; ಕೇವಲ 6 ತಿಂಗಳಲ್ಲಿ ಭೇಟಿ ಕೊಟ್ಟ ಪ್ರವಾಸಿಗರು ಎಷ್ಟು ಗೊತ್ತಾ?

Advertisment

6-ದೇಶವು ಈಗ 3.75 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶ. 2029ರೊಳಗೆ 5 ಟ್ರಿಲಿಯನ್ ಡಾಲರ್‌ಗಿಂತ ದೊಡ್ಡ ಆರ್ಥಿಕತೆಯ ದೇಶದ ಗುರಿ
ವಿಶ್ವದ ಆರ್ಥಿಕ ಶಕ್ತಿಯಲ್ಲಿ ಈಗ ಭಾರತ 5ನೇ ಸ್ಥಾನದಲ್ಲಿ ಇದನ್ನು 3ನೇ ಸ್ಥಾನಕ್ಕೆ ತೆಗೆದುಕೊಂಡು ಹೋಗುವ ಗುರಿಯಲ್ಲಿದೆ ಮೋದಿ ಸರ್ಕಾರ. ಸದ್ಯ ಭಾರತ 3.75 ಟ್ರಿಲಿಯನ್ ಡಾಲರ್ ಆರ್ಥಿಕ ಶಕ್ತಿಯನ್ನು ಹೊಂದಿದ್ದು ಇದನ್ನು 5 ಟ್ರಿಲಿಯನ್ ಡಾಲರ್​ಗೆ ತೆಗದುಕೊಂಡು ಹೋಗುವ ಗುರಿಯನ್ನು ಮೋದಿ ಸರ್ಕಾರ ಇಟ್ಟುಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment