newsfirstkannada.com

ಪ್ರಿಯಾಂಕಾ ಗಾಂಧಿ ಪೊಲಿಟಿಕಲ್ ಕರಿಯರ್​ಗೆ ಹೊಸ ಟಚ್​.. ರಾಹುಲ್ ಗಾಂಧಿಯಿಂದ ಮಾಸ್ಟರ್​​ ಪ್ಲಾನ್..!

Share :

Published June 18, 2024 at 7:25am

Update June 18, 2024 at 7:26am

  ವಯನಾಡ್‌ಗೆ ಕೈಕೊಟ್ಟು ರಾಯ್‌ಬರೇಲಿ ಉಳಿಸಿಕೊಂಡ ರಾಹುಲ್

  ದಕ್ಷಿಣ ಭಾರತದ ರಾಜಕೀಯಕ್ಕೆ ‘ಜೂನಿಯರ್ ಇಂದಿರಾ’ ಪದಾರ್ಪಣೆ

  ವಯನಾಡು ಕ್ಷೇತ್ರಕ್ಕೆ ರಾಜೀನಾಮೆ ನೀಡಿ ರಾಹುಲ್ ಗಾಂಧಿ ಹೇಳಿದ್ದೇನು?

ಇಂದಿರಾ, ಸೋನಿಯಾ, ರಾಹುಲ್ ಗಾಂಧಿಗೆ ದಕ್ಷಿಣ ಭಾರತ ಒಂದು ಲೆಕ್ಕಕ್ಕೇ ಕಷ್ಟ ಕಾಲದಲ್ಲಿ ಪುನರ್​ಜನ್ಮ ಕೊಟ್ಟ ದೇಗುಲ. ಇದೀಗ ಗಾಂಧಿ ಕುಟುಂಬದ ಮತ್ತೊಂದು ಕುಡಿ ದಕ್ಷಿಣ ಭಾರತದ ರಾಜಕೀಯಕ್ಕೆ ಎಂಟ್ರಿ ಕೊಡ್ತಿದ್ದಾರೆ. ಮೊಟ್ಟ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಬೈ ಎಲೆಕ್ಷನ್ ಮೂಲಕ ಧುಮುಕಲು ಸಜ್ಜಾಗಿದ್ದಾರೆ. ಜೂನಿಯರ್ ಇಂದಿರಾ ಅಂತಲೇ ಕರೆಸಿಕೊಳ್ಳೋ ಪ್ರಿಯಾಂಕಾ ಗಾಂಧಿ ವಯನಾಡ್ ಅಖಾಡಕ್ಕೆ ಇಳಿಯಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಪ್ರಿಯಾಂಕಾ ಗಾಂಧಿ.. ಇಂದಿರಾ ಗಾಂಧಿಯ ಹೋಲಿಕೆ.. ಅಜ್ಜಿಯನ್ನೇ ಹೋಲುವ ಕಳೆ.. ಕಾಂಗ್ರೆಸ್ ಕಾರ್ಯಕರ್ತರೂ ಕೂಡಾ ಭಾರತದ ಉಕ್ಕಿನ ಮಹಿಳೆಯನ್ನ ಪ್ರಿಯಾಂಕಾರಲ್ಲಿ ಕಾಣ್ತಿದ್ದಾರೆ. ಆದ್ರೂ ರಾಜಕೀಯ ರಂಗದಲ್ಲಿ ಪಕ್ಷ ಸಂಘಟನೆಯಲ್ಲಷ್ಟೇ ತೊಡಗಿಸಿಕೊಂಡಿದ್ದ ಪ್ರಿಯಾಂಕಾ, ಇದೀಗ ಚುನಾವಣಾ ಪಾಲಿಟಿಕ್ಸ್‌ಗೆ ಎಂಟ್ರಿ ಕೊಡಲು ಒಪ್ಪಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ:‘ನೀನ್ಯಾರು? ನಿನ್ ಕಥೆ ಎಲ್ಲಾ ಗೊತ್ತು..’ ಬಂಧನದ ವೇಳೆ ಖಡಕ್ ಅಧಿಕಾರಿ ದರ್ಶನ್​ಗೆ ಕೊಟ್ಟ ವಾರ್ನಿಂಗ್ ಏನು..?

ರಾಯ್‌ಬರೇಲಿ ಉಳಿಸಿಕೊಂಡ ರಾಹುಲ್
ಲೋಕಸಭಾ ಚುನಾವಣೆಯಲ್ಲಿ 2 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಎಐಸಿಸಿ ನಾಯಕ ರಾಹುಲ್ ಗಾಂಧಿ ಎರಡರಲ್ಲೂ ಜಯಭೇರಿ ಬಾರಿಸಿದ್ದಾರೆ. ಹೀಗಾಗಿ ಒಂದು ಕ್ಷೇತ್ರಕ್ಕೆ ರಾಜೀನಾಮೆ ಕೊಡಲೇ ಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ರಾಹುಲ್ ಗಾಂಧಿ ರಾಯ್ ಬರೇಲಿ ಉಳಿಸಿಕೊಂಡು ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ಇವತ್ತು ರಾಜೀನಾಮೆ ನೀಡಲಿದ್ದಾರೆ.

ರಾಹುಲ್ ಗಾಂಧಿ ರಾಜೀನಾಮೆಯಿಂದ ತೆರವಾದ ವಯನಾಡ್‌ಗೆ ಯಾರು ಅಭ್ಯರ್ಥಿಯಾಗ್ತಾರೆ ಎಂಬ ಚರ್ಚೆ ಶುರುವಾಗಿತ್ತು.. ಇದೀಗ ಈ ಚರ್ಚೆಗೆ ಕಾಂಗ್ರೆಸ್ ನಾಯಕರು ತೆರೆ ಎಳೆದಿದ್ದಾರೆ.. ರಾಹುಲ್ ಗಾಂಧಿಯಿಂದ ತೆರವಾಗುವ ವಯನಾಡು ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲಿದ್ದಾರೆ. ಈ ಮೂಲಕ ಮೊಟ್ಟ ಮೊದಲ ಬಾರಿಗೆ ಚುನಾವಣಾ ರಾಜಕೀಯಕ್ಕೆ ಪ್ರಿಯಾಂಕ ಅಡಿಯಿಡಲಿದ್ದಾರೆ. ಜೊತೆಗೆ ದಕ್ಷಿಣ ಭಾರತದಿಂದ ತಮ್ಮ ಪೊಲಿಟಿಕಲ್ ಕರಿಯರ್‌ಗೆ ಎಂಟ್ರಿಕೊಡಲಿದ್ದಾರೆ. ಪ್ರಿಯಾಂಕಾ ಗಾಂಧಿ ಸ್ಪರ್ಧೆಗೆ ಒಪ್ಪಿಕೊಂಡಿರೋ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಘೋಷಣೆ ಮಾಡಿದ್ದಾರೆ. ರಾಹುಲ್ ಗಾಂಧಿ ವಯನಾಡು ಸ್ಥಾನವನ್ನ ಉಳಿಸಿಕೊಳ್ಳುತ್ತಿಲ್ಲ. ವಯನಾಡಿನ ಖಾಲಿ ಸ್ಥಾನದಿಂದ ಪ್ರಿಯಾಂಕಾರವರು ಸ್ಪರ್ಧಿಸಲಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ.

ಇದನ್ನೂ ಓದಿ:ದರ್ಶನ್ ಜೊತೆಯಲ್ಲೇ ಇರ್ತಾರೆ ಮೂವರು ದುಶ್ಮನ್​​ಗಳು.. ಪ್ರತಿ ಅನಾಹುತಗಳಿಗೂ ಕಾರಣ ಅವೇ..!

ನನಗೆ ತುಂಬಾ ಖುಷಿಯಾಗಿದೆ. ನಾನು ವಯನಾಡ್‌ನಿಂದ ಸ್ಪರ್ಧಿಸುತ್ತಿದ್ದೇನೆ ಅಂತ. ಬಹಳ ದಿನಗಳಿಂದ ಸ್ಪರ್ಧಿಸಿದ್ದ ಅವರ (ರಾಹುಲ್ ಗಾಂಧಿ) ಗೈರು ನನಗೆ ಕಾಡಲಿದೆ. ಇವರು ಹೇಳಿದ್ರು ನನ್ನ ಜೊತೆ ಯಾವಾಗಲೂ ಬರ್ತಿದ್ರು ಅಂತ. ಇದೀಗ ನಾನು ನನ್ನ ಕೈಲಿ ಆದಷ್ಟು ಸೇವೆಯನ್ನ ಮಾಡುತ್ತಾ ಉತ್ತಮ ಜನಪ್ರತಿನಿಧಿಯಾಗಲು ಪ್ರಯತ್ನಿಸುತ್ತೇನೆ-ಪ್ರಿಯಾಂಕಾ ಗಾಂಧಿ, ಎಐಸಿಸಿ ನಾಯಕಿ

ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಇಳಿಯಲು ಸಜ್ಜಾಗಿರೋ ಪ್ರಿಯಾಂಕಾ ಗಾಂಧಿ ಸಹೋದರನ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿದ್ದಾರೆ. ಅಂದ್ಹಾಗೆ ಈ ಹಿಂದೆ ಚಿಕ್ಕಮಗಳೂರಿನಿಂದ ಇಂದಿರಾ ಗಾಂಧಿ, ಬಳ್ಳಾರಿಯಿಂದ ಸೋನಿಯಾ ಗಾಂಧಿ ಸ್ಪರ್ಧಿಸಿ ಗೆದ್ದಿದ್ರು. ಇನ್ನೂ ಉತ್ತರದಲ್ಲಿ ಮುಳುಗಿದ್ದ ರಾಹುಲ್ ಗಾಂಧಿಗೆ ವಯನಾಡ್ 2 ಬಾರಿ ಕೈ ಹಿಡಿದೆ.. ಹೀಗಾಗಿ ಫಾರ್​ ದಿ ಫಸ್ಟ್​​ ಟೈಂ ದಕ್ಷಿಣ ಭಾರತದಿಂದಲೇ ಗಾಂಧಿ ಕುಟುಂಬದ ಮತ್ತೊಂದು ಕುಡಿ ಪ್ರಿಯಾಂಕಾ ಗಾಂಧಿ ಕಣಕ್ಕಿಳಿಯುತ್ತಿದ್ದಾರೆ.

ಇದನ್ನೂ ಓದಿ:ಸೂತ್ರಧಾರಿಗಳ ತಾಳಕ್ಕೆ ಕುಣಿದ ಪಾತ್ರಧಾರಿಗಳು.. ಯಾರು ಯಾವ ರೋಲ್ ನಿಭಾಯಿಸಿದರು..?

ನನಗೆ ರಾಯ್‌ಬರೇಲಿ ಮತ್ತು ವಯನಾಡ್‌ ಜೊತೆ ಭಾವನಾತ್ಮಕ ಸಂಬಂಧ ಇದೆ. ಕಳೆದ 5 ವರ್ಷಗಳಿಂದ ನಾನು ವಯನಾಡು ಎಂಪಿಯಾಗಿದ್ದೆ.. ಅಲ್ಲಿರುವ ಎಲ್ಲಾ ಜನರು ಮತ್ತು ಪಕ್ಷದ ಕಾರ್ಯಕರ್ತರು ನನಗೆ ಅಪಾರ ಪ್ರೀತಿ ಕೊಟ್ಟಿದ್ದಾರೆ. ಈಕೆ ಚುನಾವಣೆಯನ್ನ ಎದುರಿಸಲಿದ್ದಾರೆ.. ಪ್ರಿಯಾಂಕಾ ಗೆಲ್ಲುತ್ತಾರೆ ಎಂಬ ಭರವಸೆ ನನಗಿದೆ-ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ

ಒಟ್ಟಾರೆ, ದಕ್ಷಿಣ ಭಾರತದಿಂದ ಮತ್ತೆ ಉತ್ತರ ಭಾರತದ ಕಡೆ ರಾಹುಲ್ ಮುಖ ಮಾಡಿದ್ರೆ ದಕ್ಷಿಣ ಭಾರತದ ಕಡೆ ಪ್ರಿಯಾಂಕ ಗಾಂಧಿ ಬರ್ತಿದ್ದಾರೆ. ಉಪಚುನಾವಣೆಯಲ್ಲಿ ಈಗ ಪ್ರಿಯಾಂಕಾ ಗಾಂಧಿ ಕಣಕ್ಕಿಳಿಯಲಿದ್ದು, ಮೊದಲ ಬಾರಿಗೆ ಸಂಸತ್ ಪ್ರವೇಶಿಸುವ ಉತ್ಸಾಹದಲ್ಲಿರೋದಂತು ಸತ್ಯ.

ಇದನ್ನೂ ಓದಿ:ಮಗನ ಮದ್ವೆಗೆ ತಯಾರಿ ನಡೆದಿತ್ತು..’ ಒಬ್ಬಾಕೆಯಿಂದ ಏನೆಲ್ಲ ಆಗೋಯ್ತು..? ಪವಿತ್ರ ಗೌಡ ಕೊಟ್ಟ 10 ಪಂಚ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಿಯಾಂಕಾ ಗಾಂಧಿ ಪೊಲಿಟಿಕಲ್ ಕರಿಯರ್​ಗೆ ಹೊಸ ಟಚ್​.. ರಾಹುಲ್ ಗಾಂಧಿಯಿಂದ ಮಾಸ್ಟರ್​​ ಪ್ಲಾನ್..!

https://newsfirstlive.com/wp-content/uploads/2024/06/PRIYANKA-GANDHI.jpg

Load More