/newsfirstlive-kannada/media/post_attachments/wp-content/uploads/2024/08/Rohit-sharma-1-2.jpg)
ಪಂಜಾಬ್​ ಕಿಂಗ್​​ನ ಮಾಜಿ ನಾಯಕ ಶಿಖರ್​ ಧವನ್​ 2 ದಿನಗಳ ಹಿಂದೆ ನಿವೃತ್ತಿ ಘೋಷಿಸಿದರು. ದೇಶೀಯ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ರು. ಆದರೀಗ ರೋಹಿತ್​ ಶರ್ಮಾ ಕುರಿತಾಗಿ ಸುದ್ದಿಯೊಂದು ಹರಿದಾಡುತ್ತಿದೆ. ಅದೇನದು ಗೊತ್ತಾ?.
ಪಂಜಾಬ್​ ಕಿಂಗ್ಸ್​​ ತಂಡದ ಅಭಿವೃದ್ಧಿ ಮುಖ್ಯಸ್ಥ ಸಂಜಯ್​​ ಬಂಗಾರ್​​ ಮುಂಬರುವ ಐಪಿಎಲ್​ 2025ರ ವೇಳೆ ಭಾರೀ ಕಣ್ಣಿಟ್ಟಿದೆ. ಮೆಗಾ ಹರಾಜಿನಲ್ಲಿ ತಮ್ಮ ತಂಡದ ಕಾರ್ಯತಂತ್ರವನ್ನು ನಿರೂಪಿಸಿದ್ದಾರೆ. ವಿಶೇಷವಾಗಿ ರೋಹಿತ್​ ಶರ್ಮಾರನ್ನು ತಂಡಕ್ಕೆ ಆಹ್ವಾನಿಸಲು ಮುಂದಾಗಿದ್ದಾರೆ.
/newsfirstlive-kannada/media/post_attachments/wp-content/uploads/2024/08/Rohit-sharma-2-2.jpg)
ಇದನ್ನೂ ಓದಿ: ಪಾಂಡ್ಯ ಬಿಟ್ಟು ಸೂರ್ಯಕುಮಾರ್​ಗೆ T20 ಕ್ಯಾಪ್ಟನ್ಸಿ ಕೊಟ್ಟಿದ್ಯಾರು.. ರೋಹಿತ್, ಗಂಭೀರ್ ಅಲ್ಲವೇ ಅಲ್ಲ!
ರೋಹಿತ್​ ಮುಂದಿನ ಐಪಿಎಲ್​ನಲ್ಲಿ ಉತ್ತಮ ಬೇಡಿಕೆ ಬರಲಿದ್ದು, ಹರಾಜಿಗೆ ಬಂದರೆ ಉತ್ತಮ ಬೆಲೆಗೆ ಖರೀದಿಸಲು ಸಂಜಯ್​​ ಬಂಗಾರ್​​ ಪ್ಲಾನ್​ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪಾಡ್​ಕಾಸ್ಟ್​ನಲ್ಲಿ ಒತ್ತಿ ಹೇಳಿದ್ದಾರೆ. ಮಾತ್ರವಲ್ಲದೆ, ಬಲಿಷ್ಠವಾದ ತಂಡವನ್ನು ಕಟ್ಟಲು ಪ್ರಯತ್ನಿಸುತ್ತಿದ್ದಾರೆ.
ಇದನ್ನೂ ಓದಿ: ಹಣಕಾಸಿನ ಸಮಸ್ಯೆ ಬಗೆಹರಿಯುತ್ತೆ, ಜನಕ್ಕೆ ಸಹಾಯ ಮಾಡಿ; ಇಲ್ಲಿದೆ ಇಂದಿನ ಭವಿಷ್ಯ
ಪಾಡ್​ಕಾಸ್ಟ್​ವೊಂದರಲ್ಲಿ ಸಂಜಯ್​​ ಬಂಗಾರ್​​ ಅವರಿಗೆ ಮುಂಬೈ ತಂಡ ರೋಹಿತ್​ ಅವರನ್ನು ಕೈಬಿಟ್ಟರೆ ಏನು ಮಾಡುತ್ತೀರಿ ಎಂದು ಪ್ರಶ್ನಿಸಲಾಯಿತು. ಅದಕ್ಕೆ ಉತ್ತರಿಸಿದ ಸಂಜಯ್​ ಹರಾಜಿನ ಸಮಯದಲ್ಲಿ ಅವರ ಮೇಲಿನ ಬಿಡ್ಡಿಂಗ್​ ವಿಚಾರ ನಿರ್ಧಾರ ಮಾಡುವುದನ್ನು ಅವಲಂಬಿಸಿರುತ್ತದೆ. ಒಂದು ವೇಳೆ ರೋಹಿತ್​ ಶರ್ಮಾ ಲಭ್ಯವಿದ್ದರೆ, ಅತಿ ಹೆಚ್ಚು ಬೆಲೆಗೆ ಖರೀದಿಸಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಬಿಗ್ ಶಾಕ್ ಕೊಟ್ಟ ಬಾಂಗ್ಲಾ ಪ್ಲೇಯರ್ಸ್​.. ಐತಿಹಾಸಿಕ ದಾಖಲೆ ಬರೆದ ಆಟಗಾರರು
ಐಪಿಎಲ್​ನಲ್ಲಿ ಪಂಜಾಬ್​ ತಂಡ ಅಷ್ಟೇನು ಯಶಸ್ಸು ಕಾಣದ ತಂಡವಾಗಿದೆ. ಮುಂಬರುವ 2025ರ ಪಂದ್ಯಕ್ಕಾಗಿ ಬಲವಾದ ಗುರಿಯನ್ನು ಹೊಂದಿದೆ. ಹರಾಜಿನ ಸಮಯದಲ್ಲಿ ತಂಡ ಭಾರೀ ಪ್ಲಾನ್​ ಮಾಡಿಕೊಂಡಿದೆ ಎನ್ನಲಾಗುತ್ತಿದೆ. ಆದರೀಗ ರೋಹಿತ್​ ಶರ್ಮಾವನ್ನು ಪಂಜಾಬ್​ ಆಹ್ವಾನಿಸಿದರೆ ಮುಂಬೈ ತಂಡದಿಂದ ಹೊರಬರುತ್ತಾರಾ? ದಿಕ್ಕು ಬದಲಾಯಿಸುತ್ತಾರಾ? ಎಂಬ ಕುತೂಹಲ ಅಬಿಮಾನಿಗಳಲ್ಲಿ ಮೂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us