/newsfirstlive-kannada/media/post_attachments/wp-content/uploads/2024/04/ALLU_ARJUN-1.jpg)
ಪುಷ್ಪ- 2 ದಿ ರೂಲ್ ಸಿನಿಮಾದ ಟೀಸರ್ ಮೊನ್ನೆ ಮೊನ್ನೆ ರಿಲೀಸ್ ಆಗಿತ್ತು. ಟೀಸರ್​ನಲ್ಲಿ ಸ್ಟೈಲೀಸ್​ ಸ್ಟಾರ್​ ಮಹಾಕಾಳಿ ಅವತಾರದಲ್ಲಿ ರಗಡ್​ ಲುಕ್​ನಲ್ಲಿ ಕಾಣಿಸಿದ್ದು ಅದೇ ಮ್ಯಾನರಿಸಮ್ ಅನ್ನು ಮುಂದುವರೆಸಿದ್ದಾರೆ. ಸದ್ಯ ಇದೀಗ ಐಕಾನ್​ ಸ್ಟಾರ್​ ಅಲ್ಲು ಅರ್ಜುನ್ ಅವರ ಬಗ್ಗೆ ಹೊಸ ಅಪ್​ಡೇಟ್​ ಒಂದು ಹೊರ ಬಿದ್ದಿದ್ದು ಅವರು ಪುಷ್ಪ-2ಗೆ ಎಷ್ಟು ಸಂಭಾವನೆ ಪಡೆಯುತ್ತಿದ್ದಾರೆ ಎಂಬುದು ಕೇಳಿದರೆ ಒಂದು ಕ್ಷಣ ಕರೆಂಟ್ ಶಾಕ್ ಹೊಡೆದಂಗೆ ಆಗುತ್ತದೆ.
ಸುಕುಮಾರ್ ನಿರ್ದೇಶನದ ಪುಷ್ಪಾ-2 ಮೂವಿಯಿಂದ ಅಲ್ಲು ಅರ್ಜುನ್ ಇಡೀ ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಹೆಸರು ಮಾಡಿದ್ದಾರೆ. ಪುಷ್ಪ-2 ಸಿನಿಮಾ ನಿರ್ಮಾಣ ಮಾಡಲು ಒಟ್ಟು 1,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ. ಇದರಲ್ಲಿ ಶೇಕಡ 33 ರಷ್ಟು ಅಲ್ಲು ಅರ್ಜುನ್​ ಪಡೆದುಕೊಳ್ಳುತ್ತಿದ್ದಾರೆ. ಅಂದರೆ ಈ ಸಿನಿಮಾಕ್ಕಾಗಿ ಬರೋಬ್ಬರಿ 330 ಕೋಟಿ ರೂಪಾಯಿಗಳ ಸಂಭಾವನೆಯನ್ನು ಬನ್ನಿ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಮಲೈಕಾ ಅರೋರಾ ಹಾಟ್ & ವರ್ಕೌಟ್​ ವಿಡಿಯೋ ವೈರಲ್; ಈ ಬ್ಯೂಟಿ ವಯಸ್ಸೆಷ್ಟು?
/newsfirstlive-kannada/media/post_attachments/wp-content/uploads/2024/04/Pushpa-2-Rule.jpg)
ಇದನ್ನೂ ಓದಿ: ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್​ಗೆ ಬಿಗ್ ಶಾಕ್.. ಎಲೆಕ್ಷನ್​ ಕಮಿಷನ್ ನೋಟಿಸ್
ಐಕಾನ್ ಸ್ಟಾರ್ ಪುಷ್ಪಾ-1 ಸಿನಿಮಾಕ್ಕಾಗಿ ಕೇವಲ 50 ಕೋಟಿ ರೂಪಾಯಿಗಳನ್ನು ಮಾತ್ರ ಪಡೆದಿದ್ದರು. ಆದರೆ ಭಾಗ ಒಂದು ಸೂಪರ್ ಹಿಟ್ ಆದ ನಂತರ ಭಾಗ-2ಗೆ ದೊಡ್ಡ ಮಟ್ಟದಲ್ಲಿ ನಿರ್ದೇಶಕ ಪ್ಲಾನ್ ಮಾಡಿದ್ದರು. ಅದರಂತೆ ಅಲ್ಲು ಅರ್ಜುನ್ ಪಡೆಯುತ್ತಿರುವ ಸಂಭಾವನೆ ಇಡೀ ಭಾರತದಲ್ಲೇ ಎಲ್ಲ ನಟರನ್ನು ಮೀರಿಸಿದೆ.
ಸೂಪರ್ ಸ್ಟಾರ್​ ರಜನಿಕಾಂತ್ ಇಲ್ಲಿವರೆಗೆ ಇಡೀ ಇಂಡಿಯಾದಲ್ಲೇ ಅತ್ಯಂತ ಹೆಚ್ಚು ಸಂಭಾವನೆ ಪಡೆಯುತ್ತಿರುವ ಲಿಸ್ಟ್​ನಲ್ಲಿ ಮೊದಲಿಗರು ಆಗಿದ್ದರು. ಅಂದರೆ ರಜನಿಕಾಂತ್ ಅವರು 210 ಕೋಟಿ ರೂ.ಗಳ ಸಂಭಾವನೆ ಪಡೆದಿದ್ದರು. ಇನ್ನುಳಿದಂತೆ ಡಾರ್ಲಿಂಗ್ ಪ್ರಭಾಸ್, ಸಲ್ಮಾನ್ ಖಾನ್ ಮತ್ತು ಶಾರುಕ್​ ಖಾನ್ 150 ರಿಂದ 200 ಕೋಟಿ ರೂ.ಗಳ ಸಂಭಾವನೆ ಪಡೆದಿದ್ದರು. ಆದರೆ ಇದೀಗ ಅಲ್ಲು ಅರ್ಜುನ್ 330 ಕೋಟಿ ರೂ.ಗಳನ್ನ ಪಡೆಯುವ ಮೂಲಕ ಎಲ್ಲರನ್ನೂ ಮೀರಿಸಿ ಮೊದಲ ಸ್ಥಾನದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us