newsfirstkannada.com

9 ವರ್ಷದ ಬಳಿಕ ಐಪಿಎಲ್​ಗೆ​​ ಕಂ​ಬ್ಯಾಕ್.. ದ್ರಾವಿಡ್​ಗೆ ಟೀಂ ಇಂಡಿಯಾದ ಮತ್ತೊಬ್ಬ ಮಾಜಿ ಸ್ಟಾರ್ ಸಾಥ್..!

Share :

Published September 5, 2024 at 12:20pm

Update September 5, 2024 at 2:39pm

    IPLನಲ್ಲಿ ಮತ್ತೆ ರಾಹುಲ್​ ದ್ರಾವಿಡ್ ದರ್ಬಾರ್​​ ಶುರು

    ಚಾಂಪಿಯನ್ ಕೋಚ್​​​​​​ ದ್ರಾವಿಡ್​​ IPLಗೆ ರಿಟರ್ನ್​

    ಮರಳಿ ಗೂಡಿಗೆ ದಿ ವಾಲ್​, RRಗೆ ಹೆಡ್​ಕೋಚ್​

ಭಾರತ ಟಿ20 ವಿಶ್ವಕಪ್​ ಗೆದ್ದ ಬಳಿಕ ಕೋಚ್​ ರಾಹುಲ್​ ದ್ರಾವಿಡ್​ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​​ ಕ್ರಿಯೇಟ್​ ಆಗಿತ್ತು. ಹತ್ತು ಹಲವು ಫ್ರಾಂಚೈಸಿಗಳು ದ್ರಾವಿಡ್​​ನ ಕರೆ ತರಲು ಕಸರತ್ತು ನಡೆಸಿದ್ವು. ಕೋಟಿ ಕೋಟಿಯ ಆಫರ್​ ಮಾಡಿದ್ವು. ಅಂತಿಮವಾಗಿ ರಾಯಲ್​​ ಆಫರ್​​ಗೆ ರಾಹುಲ್​ ದ್ರಾವಿಡ್​​ ಜೈ ಅಂದಿದ್ದಾರೆ.

2025ರ ಐಪಿಎಲ್​​ ಟೂರ್ನಿಗೆ ಇನ್ನೂ ತಿಂಗಳುಗಟ್ಟಲೇ ಟೈಮ್​ ಇದೆ. ಈಗಲೇ ಮಿಲಿಯನ್ ಡಾಲರ್ ಟೂರ್ನಿಗೆ ಸಂಬಂಧಿಸಿದ ಸುದ್ದಿಗಳು ಸಖತ್​​​​​ ಸದ್ದು ಮಾಡ್ತಿವೆ. ಡಿಸೆಂಬರ್​ನಲ್ಲಿ ನಡೆಯೋ ಮೆಗಾ ಆಕ್ಷನ್​​​​ಗೂ ಈಗಿನಿಂದಲೇ ಸಿದ್ಧತೆಗಳು ಆರಂಭವಾಗಿದೆ. ಆಟಗಾರರ ರಿಟೇನ್​​-ರಿಲೀಸ್​​​ ಲೆಕ್ಕಾಚಾರಗಳ ಜೊತೆಗೆ ತಂಡದ ಸಪೋರ್ಟ್​​ ಸ್ಟಾಫ್​ ವಿಭಾಗಕ್ಕೂ ಸರ್ಜರಿಗಳು ನಡೀತಿವೆ. ಟೀಮ್ ಇಂಡಿಯಾದ ಮಾಜಿ ಹೆಡ್​​​​ಕೋಚ್​​ ರಾಹುಲ್​​ ದ್ರಾವಿಡ್​ ಕುರಿತಂತೆ ಬಿಗ್​​ ಅಪ್​ಡೇಟ್​​​​​​​​​​​​​​​​ ಹೊರ ಬಿದ್ದಿದೆ.

ಇದನ್ನೂ ಓದಿ:ಡಿ-ಗ್ಯಾಂಗ್​​ ಪಾರ್ಟಿ ಮರುಸೃಷ್ಟಿಯ ಫೋಟೋ ರಿವೀಲ್; ವಿನಯ್, ದರ್ಶನ್​, ಚಿಕ್ಕಣ್ಣ ಅಕ್ಕಪಕ್ಕ..!

‘ಚಾಂಪಿಯನ್ ಕೋಚ್​​​’​​​ ದ್ರಾವಿಡ್​​ IPLಗೆ ರಿಟರ್ನ್​
T20 ವಿಶ್ವಕಪ್​ ಗೆಲುವಿನೊಂದಿಗೆ ರಾಹುಲ್​​ ದ್ರಾವಿಡ್​ ಟೀಮ್​ ಇಂಡಿಯಾ ಕೋಚ್​ ಹುದ್ದೆಗೆ ಗುಡ್​ ಬೈ ಹೇಳಿದ್ದಾರೆ. ಬೆನ್ನಲ್ಲೇ 17 ವರ್ಷಗಳ ಬಳಿಕ ಟೀಮ್​ ಇಂಡಿಯಾಗೆ ಟಿ20 ವಿಶ್ವಕಪ್​ ಗೆಲ್ಲಿಸಿಕೊಟ್ಟ ದಿ ವಾಲ್​ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​ ಶುರುವಾಗಿತ್ತು. ಹಲವು ಐಪಿಎಲ್​ ಫ್ರಾಂಚೈಸಿಗಳು ಚಾಂಪಿಯನ್​ ಕೋಚ್​ಗೆ ಆಫರ್​ ಮಾಡಿದ್ವು. ಅಂತಿಮವಾಗಿ ವಿಶ್ವ ಕ್ರಿಕೆಟ್​ನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್​​ಮನ್ ಮತ್ತೆ ಐಪಿಎಲ್​​ನತ್ತ ಮುಖ ಮಾಡಿದ್ದಾರೆ.

ಮರಳಿ ಗೂಡಿಗೆ ದಿ ವಾಲ್​, RRಗೆ ಹೆಡ್​ಕೋಚ್​
ಕೆಲ ದಿನಗಳ ಹಿಂದೆಯೇ ರಾಹುಲ್​ ದ್ರಾವಿಡ್​​, ರಾಜಸ್ಥಾನ್​ ರಾಯಲ್ಸ್​ ಕೋಚ್​ ಆಗ್ತಾರೆ ಅನ್ನೋ ರೂಮರ್ಸ್ ಸಖತ್​ ಸೌಂಡ್​ ಮಾಡಿತ್ತು. ಕೊನೆಗೂ ಆ ಸುದ್ದಿ ನಿಜವಾಗಿದೆ. ಈ ಸೀಸನ್​ನಿಂದ ಐಪಿಎಲ್​ನಲ್ಲಿ ಮತ್ತೆ ದ್ರಾವಿಡ್​​ ಕಾಣಿಸಿಕೊಳ್ಳಲಿದ್ದಾರೆ. ನಿರೀಕ್ಷೆಯಂತೆ ದ್ರಾವಿಡ್​, ರಾಜಸ್ಥಾನ್​ ರಾಯಲ್ಸ್​ ತಂಡದ ಕೋಚ್​ ಹುದ್ದೆಗೇರೋದು ಕನ್​ಫರ್ಮ್​ ಆಗಿದೆ.

ಇದನ್ನೂ ಓದಿ:RCB ಕಣ್ಣು ಯಾರ ಮೇಲೆ.. ಮೆಗಾ ಹರಾಜಿಗೂ ಮುನ್ನ 8 ಕನ್ನಡಿಗರು ಹಾಟ್ ಟಾಪಿಕ್..!

9 ವರ್ಷಗಳ ಬಳಿಕ..
ರಾಜಸ್ಥಾನ್​ ರಾಯಲ್ಸ್​ ಹಾಗೂ ರಾಹುಲ್​ ದ್ರಾವಿಡ್​ಗೂ ಅವಿನಾಭಾವ ನಂಟಿದೆ. 2011ರಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವನ್ನ ತೊರೆದ ರಾಹುಲ್​ ದ್ರಾವಿಡ್​, ರಾಜಸ್ಥಾನ್​ ರಾಯಲ್ಸ್​ಗೆ ಎಂಟ್ರಿ ಕೊಟ್ಟಿದ್ರು. ತಂಡದ ನಾಯಕತ್ವದ ಜವಾಬ್ದಾರಿ ಹೊತ್ತು, 2013ರಲ್ಲಿ ತಂಡವನ್ನ ಪ್ಲೇ ಆಫ್ ಗೇರಿಸಿದ್ರು. ಬಳಿಕ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ದಿ ವಾಲ್​, ಆ ಬಳಿಕ 2014-15 2 ಸೀಸನ್​ಗಳಲ್ಲಿ ರಾಜಸ್ಥಾನ್​ ರಾಯಲ್ಸ್​ನ ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ್ರು. ಇದೀಗ 9 ವರ್ಷಗಳ ಬಳಿಕ ಫ್ರಾಂಚೈಸಿಗೆ ರೀ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.

ರಾಹುಲ್​​ ದ್ರಾವಿಡ್​ಗೆ ವಿಕ್ರಂ ರಾಥೋರ್​​​ ಅಸಿಸ್ಟೆಂಟ್​
ರಾಹುಲ್​ ದ್ರಾವಿಡ್​ ಹೆಡ್​​ ಕೋಚ್​ ಪಟ್ಟವೇರಿದ ಬೆನ್ನಲ್ಲೇ ಮತ್ತೊಂದು ಸುದ್ದಿಯೂ ಹೊರಬಿದ್ದಿದೆ. ದ್ರಾವಿಡ್​ ಅವಧಿಯಲ್ಲಿ ಟೀಮ್​ ಇಂಡಿಯಾದ ಬ್ಯಾಟಿಂಗ್​ ಕೋಚ್​​ ಆಗಿದ್ದ ವಿಕ್ರಂ ರಾಥೋರ್​ ಕೂಡ ರಾಜಸ್ಥಾನ್​ ಕ್ಯಾಂಪ್​ ಸೇರಲಿದ್ದಾರೆ. ಅಸಿಸ್ಟೆಂಟ್​ ಕೋಚ್​ ಆಗಿ ದ್ರಾವಿಡ್​ ಜೊತೆಗೆ ವಿಕ್ರಂ ರಾಥೋರ್​ ಎಂಟ್ರಿ ಕೂಡ ಬಹುತೇಕ ಫಿಕ್ಸ್​ ಆಗಿದೆ. ಈ ಬಗ್ಗೆ ಮಾತುಕತೆಯೂ ನಡೆದಿದ್ದು, ಅಧಿಕೃತ ಘೋಷಣೆ ಬಾಕಿ ಉಳಿದಿದೆ.

ಕೋಚ್​ ಮುಂದಿರೋ ಸವಾಲು
ರಾಜಸ್ಥಾನ್​ ರಾಯಲ್ಸ್​ ತಂಡದ ನೂತನ ಗುರು ರಾಹುಲ್​ ದ್ರಾವಿಡ್​ ಮುಂದೆ ಇರೋ ಟಾಸ್ಕ್​ ತುಂಬಾ ದೊಡ್ಡದಿದೆ. ಚೊಚ್ಚಲ ಆವೃತ್ತಿ ಟ್ರೋಫಿ ಗೆದ್ದ ರಾಜಸ್ಥಾನ್​ ತಂಡಕ್ಕೆ ಆ ನಂತರದ ಸೀಸನ್​ಗಳಲ್ಲಿ ಕಪ್​ ಕನಸಾಗೇ ಉಳಿದಿದೆ. 2022ರಲ್ಲಿ ಫೈನಲ್​ನಲ್ಲಿ ಎಡವಿದ್ದ ತಂಡ, ಕಳೆದ ಸೀಸನ್​ನಲ್ಲಿ ಪ್ಲೇ ಆಫ್​ ಹಂತದಲ್ಲಿ ಹೊರಬಿದ್ದಿತ್ತು. ಇದೀಗ ಕಪ್​ ಬರ ಎದುರಿಸ್ತಾ ಇರೋ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಡೋ ಸವಾಲು ದ್ರಾವಿಡ್​ ಮುಂದಿದೆ. ಈ ಸವಾಲನ್ನು ದ್ರಾವಿಡ್​ ಹೇಗೆ ನಿಭಾಯಿಸ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

ಇದನ್ನೂ ಓದಿ:ಕ್ಯಾಪ್ಟನ್ಸಿ ವಿಚಾರದಲ್ಲಿ RCB ಬೋಲ್ಡ್​ ಡಿಸಿಷನ್.. ಯಾರೂ ಸಿಗದಿದ್ದರೇ ಈತನಿಗೆ ನಾಯಕತ್ವದ ಜವಾಬ್ದಾರಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

9 ವರ್ಷದ ಬಳಿಕ ಐಪಿಎಲ್​ಗೆ​​ ಕಂ​ಬ್ಯಾಕ್.. ದ್ರಾವಿಡ್​ಗೆ ಟೀಂ ಇಂಡಿಯಾದ ಮತ್ತೊಬ್ಬ ಮಾಜಿ ಸ್ಟಾರ್ ಸಾಥ್..!

https://newsfirstlive.com/wp-content/uploads/2024/09/Dravid-8.jpg

Load More