Advertisment

ಟೀಂ ಇಂಡಿಯಾಗೆ ಆಯ್ಕೆಯಾದ ರಾಹುಲ್​ ದ್ರಾವಿಡ್​​ ಪುತ್ರ! ಆಸ್ಟ್ರೇಲಿಯಾ ಸರಣಿಯ ವೇಳಾಪಟ್ಟಿ ಪ್ರಕಟ

author-image
AS Harshith
Updated On
ಟೀಮ್​ ಇಂಡಿಯಾಗೆ ಆಯ್ಕೆಯಾದ ಬೆನ್ನಲ್ಲೇ ಬಿಸಿಸಿಐಗೆ ಬಿಗ್​​ ಶಾಕ್​ ಕೊಟ್ಟ ದ್ರಾವಿಡ್​ ಪುತ್ರ; ಏನಾಯ್ತು?
Advertisment
  • ಆಸ್ಟ್ರೇಲಿಯಾ ವಿರುದ್ಧ ಬಹು-ಫಾರ್ಮ್ಯಾಟ್​​​ ಸರಣಿ
  • ಅಂಡರ್​ 19 ತಂಡವನ್ನು ಪ್ರಕಟಿಸಿದ ಟೀಂ ಇಂಡಿಯಾ
  • ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದ ದ್ರಾವಿಡ್​​ ಮಗ ಸಮಿತ್​

ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಕೋಚ್​ ರಾಹುಲ್​ ದ್ರಾವಿಡ್​​ ಅವರ ಮಗ ಸಮಿತ್​ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದಾರೆ. ಅಂಡರ್​ 19 ವಿಭಾಗದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

Advertisment

ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ ಆಗಸ್ಟ್​​ 31ರಂದು ಆಸ್ಟ್ರೇಲಿಯಾ ವಿರುದ್ಧ ಮುಂಬರುವ ಬಹು-ಫಾರ್ಮ್ಯಾಟ್​​​ ಸರಣಿಯ ವೇಳಾ ಪಟ್ಟಿಯೊಂದಿಗೆ ಅಂಡರ್​ 19 ತಂಡವನ್ನು ಪ್ರಕಟಿಸಿದೆ. ಸಮಿತ್​ ಅವರನ್ನು ಏಕದಿನ ಮತ್ತು ನಾಲ್ಕು ದಿನದ ಪಂದ್ಯಕ್ಕೆ ಆಯ್ಕೆ ಮಾಡಲಾಗಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಂಡರ್​ 19 ಸರಣಿಯು ಸೆಪ್ಟೆಂಬರ್​ 21ರಿಂದ ಪ್ರಾರಂಭವಾಗಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಮತ್ತು ಎರಡು ನಾಲ್ಕು ದಿನಗಳ ಪಂದ್ಯಗಳು ನಡೆಯಲಿವೆ.

ಇದನ್ನೂ ಓದಿ: ಪಂತ್​ ವಿರುದ್ಧ ಸಮರ ಸಾರಿದ ಜುರೇಲ್; ಸಿನಿಯರ್ಸ್​​ಗೆ ಕನ್ನಡಿಗ ಪಡಿಕ್ಕಲ್ ಕೂಡ ಚಾಲೇಂಜ್..!

Advertisment

ಇನ್ನು ಉತ್ತರ ಪ್ರದೇಶದ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​​ ಮೊಹಮ್ಮದ್​​ ಅಮಾನ್​ 50 ಓವರ್​​ಗಳ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ. ಮಧ್ಯಪ್ರದೇಶದ ಸೋಹಮ್​ ಪಟವರ್ಧನ್​ ನಾಲ್ಕು ದಿನಗಳ ಪಂದ್ಯಗಳಿಗೆ ತಂಡವನ್ನು ಮುನ್ನಡೆಸಲಿದ್ದಾರೆ.

ಇದನ್ನೂ ಓದಿ: 3ನೇ ಇನ್ನಿಂಗ್ಸ್​​​ನಲ್ಲೇ ತ್ರಿಶತಕ.. ಆಮೇಲೆ ಡೋರ್​ ಕ್ಲೋಸ್.. ಕನ್ನಡಿಗನಿಗೆ ಅವಕಾಶ ನೀಡದೇ ಬಿಸಿಸಿಐ ಮೋಸ

ದ್ರಾವಿಡ್​​ ಮಗ ಸಮಿತ್​ ಇತ್ತೀಚೆಗೆ ಮೊದಲ ಹಿರಿಯ ಪುರುಷರ ಟಿ20 ಪಂದ್ಯಾವಳಿಯಲ್ಲಿ ಮಹಾರಾಜಿ ಟಿ20 ಟ್ರೋಪಿಯಲ್ಲಿ ಆಡಿದ್ದರು. ಮೈಸೂರು ವಾರಿಯರ್ಸ್​ ತಂಡದ ಭಾಗವಾಗಿದ್ದರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್​ ಮಾಡುವ ಈತ 7 ಇನ್ನಿಂಗ್ಸ್​ನಲ್ಲಿ 114 ಸ್ಟ್ತೈಕ್​​ ರೇಟ್​​ನಲ್ಲಿ 82 ರನ್​ ಗಳಿಸಿದ್ದಾರೆ.

Advertisment

ಏಕದಿನ ಸರಣಿಗೆ ತಂಡ:

ರುದ್ರ ಪಟೇಲ್ (VC) (GCA), ಸಾಹಿಲ್ ಪರಾಖ್ (MAHCA) ಕಾರ್ತಿಕೇಯ ಕೆಪಿ (KSACA), ಮೊಹಮ್ಮದ್ ಅಮನ್ (C) (UPCA), ಕಿರಣ್ ಚೋರ್ಮಲೆ (MAHCA), ಅಭಿಗ್ಯಾನ್ ಕುಂದು (WK) (MCA)., ಹರ್ವಂಶ್ ಸಿಂಗ್ ಪಂಗಾಲಿಯಾ (WK) (SCA), ಸಮಿತ್ ದ್ರಾವಿಡ್ (KSCA), ಯುದ್ದೀತ್ ಗುಹಾ (CAB), ಸಮರ್ಥ್ ಎನ್ (KSCA), ನಿಖಿಲ್ ಕುಮಾರ್ (UTCA), ಚೇತನ್ ಶರ್ಮಾ (RCA), ಹಾರ್ದಿಕ್ ರಾಜ್ (KSCA), ರೋಹಿತ್ ರಾಜ್ Avt (MPCA), ಮೊಹಮ್ಮದ್ ಅನನ್ (KCA)

ನಾಲ್ಕು ದಿನಗಳ ಸರಣಿಗೆ ತಂಡ:

ವೈಭವ್ ಸೂರ್ಯವಂಶಿ (Bihar CA), ನಿತ್ಯ ಪಾಂಡ್ಯ (BCA), ವಿಹಾನ್ ಮಲ್ಲೋತ್ರಾ (VC) (PCA), ಸೋಹಮ್ ಪಟವರ್ಧನ್ (C) (MPCA), ಕಾರ್ತಿಕೇಯ KP (KSCA), ಸಮಿತ್ ದ್ರಾವಿಡ್ (KSCA), ಅಭಿಜ್ಞಾನ್ ಕುಂದು (WK) (MCA), ಹರ್ವಂಶ್ ಸಿಂಗ್ ಪಂಗಾಲಿಯಾ (WK) (SCA), ಚೇತನ್ ಶರ್ಮಾ (RCA), ಸಮರ್ಥ್ N (KSCA), ಆದಿತ್ಯ ರಾವತ್ (CAU), ನಿಖಿಲ್ ಕುಮಾರ್ (UTCA), ಅನ್ನೋಲ್ಲೀತ್ ಸಿಂಗ್ (PCA), ಆದಿತ್ಯ ಸಿಂಗ್ (UPCA), ಮೊಹಮ್ಮದ್ ಅನನ್ (KCA)

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment
Advertisment