ಸ್ಥಾನದ ನಿರೀಕ್ಷೆಯಲ್ಲಿದ್ದ ಸ್ಟಾರ್ ಆಟಗಾರರಿಗೆ ಆತಂಕ
ಸ್ಥಾನಕ್ಕಾಗಿ ಸೀನಿಯರ್ಸ್ -ಜೂನಿಯರ್ಸ್ ಫೈಟ್ ಶುರು
ಟಾರ್ಗೆಟ್ ಟೆಸ್ಟ್..! ಯುದ್ಧಕ್ಕೆ ಕನ್ನಡಿಗ ಪಡಿಕ್ಕಲ್ ರೆಡಿ
ಟೀಮ್ ಇಂಡಿಯಾದ ಟೆಸ್ಟ್ ತಂಡದಲ್ಲಿ ಸುಲಭಕ್ಕೆ ಸ್ಥಾನದ ನಿರೀಕ್ಷೆಯಲ್ಲಿದ್ದ ಸ್ಟಾರ್ ಆಟಗಾರರಿಗೆ ಆತಂಕ ಶುರುವಾಗಿದೆ. ದುಲೀಪ್ ಟ್ರೋಫಿ ಕಣದಲ್ಲಿ ಸೀನಿಯರ್ಸ್ ಎದುರು ತೊಡೆ ತಟ್ಟಲು ಜೂನಿಯರ್ಸ್ ರೆಡಿಯಾಗಿದ್ದಾರೆ. ಸಿಕ್ಕ ಅವಕಾಶದಲ್ಲಿ ಟೀಮ್ ಇಂಡಿಯಾ ಪರ ವೈಟ್ ಜೆರ್ಸಿ ತೊಟ್ಟು ಮಿಂಚಿರೋ ಇವ್ರು, ಈಗ ಡೊಮೆಸ್ಟಿಕ್ ಅಂಗಳದಲ್ಲಿ ಸೀನಿಯರ್ಸ್ಗೆ ಸವಾಲೆಸೆಯಲು ಸಜ್ಜಾಗಿದ್ದಾರೆ. ಇವರು ಆರ್ಭಟಿಸಿದ್ರೆ ಸೀನಿಯರ್ಸ್ ಕಥೆ ಗೋವಿಂದ..!
ಟೀಮ್ ಇಂಡಿಯಾದ ಟೆಸ್ಟ್ ಸೀಸನ್ ಆರಂಭಕ್ಕೂ ಮುನ್ನ ನಡೆಯೋ ದುಲೀಪ್ ಟ್ರೋಫಿ ಟೂರ್ನಿಗೆ ಕೌಂಟ್ಡೌನ್ ಶುರುವಾಗಿದೆ. ಟೀಮ್ ಇಂಡಿಯಾ ಟೆಸ್ಟ್ ತಂಡದ ಡೋರ್ ಬಡೀತಾ ಆಟಗಾರರೆಲ್ಲಾ ಡೊಮೆಸ್ಟಿಕ್ ಟೂರ್ನಿಯಲ್ಲಿ ಮಿಂಚೋ ಲೆಕ್ಕಾಚಾರದಲ್ಲಿದ್ದಾರೆ. ಸ್ಟಾರ್ಗಳ ಕಮ್ಬ್ಯಾಕ್ ಡೊಮೆಸ್ಟಿಕ್ ಟೂರ್ನಿಗೆ ಕಲರ್ಫುಲ್ ರಂಗು ತಂದಿದೆ. ಜೊತೆಗೆ ಸ್ಥಾನಕ್ಕಾಗಿ ನಡೀತಿರೋ ದುಲಿಪ್ ಟ್ರೋಫಿಯ ಕುತೂಹಲ ಹೆಚ್ಚಿಸಿದೆ.
ಇದನ್ನೂ ಓದಿ:3ನೇ ಇನ್ನಿಂಗ್ಸ್ನಲ್ಲೇ ತ್ರಿಶತಕ.. ಆಮೇಲೆ ಡೋರ್ ಕ್ಲೋಸ್.. ಕನ್ನಡಿಗನಿಗೆ ಅವಕಾಶ ನೀಡದೇ ಬಿಸಿಸಿಐ ಮೋಸ
ಟೆಸ್ಟ್ ತಂಡದ ಸ್ಥಾನಕ್ಕೆ ಸೀನಿಯರ್ಸ್ -ಜೂನಿಯರ್ಸ್ ಫೈಟ್.!
ಸಪ್ಟೆಂಬರ್ 19ರ ಬಾಂಗ್ಲಾದೇಶದ ಸರಣಿ ಆರಂಭದೊಂದಿಗೆ ಟೀಮ್ ಇಂಡಿಯಾ ಸಾಲು ಸಾಲು ಟೆಸ್ಟ್ ಪಂದ್ಯಗಳನ್ನ ಆಡಲಿದೆ. ಈ ಟೆಸ್ಟ್ ಸರಣಿಗಳ ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳಲು ಆಟಗಾರರ ನಡುವೆ ಟಫ್ ಫೈಟ್ ಏರ್ಪಟ್ಟಿದೆ. ಸೆಲೆಕ್ಷನ್ಗೆ ದುಲೀಪ್ ಟ್ರೋಫಿ ಟೂರ್ನಿಯನ್ನ ಆಯ್ಕೆಗಾರರು ಮಾನದಂಡವಾಗಿ ಮಾಡಿದ್ದಾರೆ. ಇದೀಗ ಡೊಮೆಸ್ಟಿಕ್ ಕಣದಲ್ಲಿ ಸೀನಿಯರ್ಸ್ ಎದುರು ತೊಡೆ ತಟ್ಟಲು ಯಂಗ್ಸ್ಟರ್ಸ್ ಸಜ್ಜಾಗಿದ್ದಾರೆ.
ಪಂತ್ ವಿರುದ್ಧ ಸಮರ ಸಾರಿದ ದೃವ್ ಜುರೇಲ್
ಟೀಮ್ ಇಂಡಿಯಾದ ಖಾಯಂ ವಿಕೆಟ್ ಕೀಪರ್ ಆಗಿದ್ದ ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಲು ಎದುರು ನೋಡ್ತಿದ್ದಾರೆ. ಇದಕ್ಕಾಗಿ ದುಲೀಪ್ ಟ್ರೋಫಿ ಟೂರ್ನಿಯನ್ನಾಡಲು ಸಜ್ಜಾಗಿದ್ದಾರೆ. ಇದೇ ಟೂರ್ನಿಯಲ್ಲಿ ಪಂತ್ ವಿರುದ್ಧ ದೃವ್ ಜುರೇಲ್ ಸಮರ ಸಾರಲು ಸಜ್ಜಾಗಿದ್ದಾರೆ. ಪಂತ್ ಅಲಭ್ಯತೆಯಲ್ಲಿ ಇಂಗ್ಲೆಂಡ್ ಸರಣಿಯಲ್ಲಿ ಆಡಿದ್ದ ದೃವ್ ಜುರೇಲ್, ಬ್ಯಾಟಿಂಗ್ ಹಾಗೂ ಕೀಪಿಂಗ್ ಎರಡರಲ್ಲೂ ಇಂಪ್ರೆಸ್ಸಿವ್ ಪರ್ಫಾಮೆನ್ಸ್ ನೀಡಿದ್ರು. ಸಾಲಿಡ್ ಆಟದಿಂದ ಗಮನ ಸೆಳೆದಿದ್ದ ಜುರೇಲ್, ದುಲೀಪ್ ಟ್ರೋಫಿಯಲ್ಲಿ ಮಿಂಚಿ ತನ್ನ ಸ್ಥಾನ ರಿಟೈನ್ ಮಾಡಿಕೊಳ್ಳೋ ಲೆಕ್ಕಾಚಾರದಲ್ಲಿದ್ದಾರೆ.
ಇದನ್ನೂ ಓದಿ:ಕ್ರಿಕೆಟ್ ಜಗತ್ತಿಗೆ ಜಯ್ ಶಾ ಬಾಸ್.. ತೆರವಾದ BCCI ಕಾರ್ಯಾಧ್ಯಕ್ಷ ಸ್ಥಾನದ ರೇಸ್ನಲ್ಲಿ ಮೂವರು..!
ಸೀನಿಯರ್ಸ್ಗೆ ಸರ್ಫರಾಜ್ ಖಾನ್ ಚಾಲೆಂಜ್
ಶ್ರೇಯಸ್ ಅಯ್ಯರ್ ಅಲಭ್ಯತೆಯಲ್ಲಿ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದ ಸರ್ಫರಾಜ್ ಖಾನ್ ಇಂಗ್ಲೆಂಡ್ ಸರಣಿಯಲ್ಲಿ ಮೋಡಿ ಮಾಡಿದ್ರು. ಅಬ್ಬರದ ಬ್ಯಾಟಿಂಗ್ನಿಂದ ಗಮನ ಸೆಳೆದಿದ್ರು. ಇದೀಗ ಶ್ರೇಯಸ್ ಅಯ್ಯರ್ ಕಮ್ಬ್ಯಾಕ್ ಎದುರು ನೋಡ್ತಿದ್ದು, ದುಲೀಪ್ ಟ್ರೋಫಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಸ್ಥಾನದ ಮೇಲೆ ಕಣ್ಣಿಟ್ಟಿರೋ ಸರ್ಫರಾಜ್ ಖಾನ್ ಕೂಡ ಇದೇ ಟೂರ್ನಿಯಲ್ಲಿ ಆಡ್ತಿದ್ದಾರೆ. ಟೆಸ್ಟ್ ತಂಡದ ಸ್ಥಾನವನ್ನ ಟಾರ್ಗೆಟ್ ಮಾಡಿರೋ ಶ್ರೇಯಸ್ ಅಯ್ಯರ್ – ಸರ್ಫರಾಜ್ ಖಾನ್ ನಡುವೆ ದುಲಿಪ್ ಟ್ರೋಫಿಯಲ್ಲಿ ಟಫ್ ಫೈಟ್ ನಡೆಯೋದು ಕನ್ಫರ್ಮ್.
ಟಾರ್ಗೆಟ್ ಟೆಸ್ಟ್..! ಕನ್ನಡಿಗ ಪಡಿಕ್ಕಲ್ ರೆಡಿ
ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್ರಂತಹ ಸೀನಿಯರ್ಗಳ ಅಲಭ್ಯತೆಯಲ್ಲಿ ಕನ್ನಡಿಗ ದೇವದತ್ತ್ ಪಡಿಕ್ಕಲ್ ಕೂಡ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಚಾನ್ಸ್ ಗಿಟ್ಟಿಸಿಕೊಂಡಿದ್ರು. ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ರನ್ ಹೊಳೆ ಹರಿಸಿ, ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದ ಪಡಿಕ್ಕಲ್, ಸಿಕ್ಕ ಒಂದು ಅವಕಾಶದಲ್ಲೇ ಸಾಲಿಡ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದ್ರು. ದುಲೀಪ್ ಟ್ರೋಫಿಯಲ್ಲಿ ಸ್ಥಾನಗಿಟ್ಟಿಸಿಕೊಂಡಿರುವ ಪಡಿಕ್ಕಲ್, ದೇಶಿ ಟೂರ್ನಿಯಲ್ಲಿ ಮಿಂಚಿ ಮತ್ತೆ ಟೀಮ್ ಇಂಡಿಯಾಗೆ ಎಂಟ್ರಿ ಕೊಡೋ ಇರಾದೆಯಲ್ಲಿದ್ದಾರೆ.
ಮೇಲ್ನೋಟಕ್ಕೆ ನೋಡಿದ್ರೆ ಈ ಹಿಂದಿನ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಮಿಂಚಿದ ಈ ಮೂವರಿಗೂ ಟೀಮ್ ಇಂಡಿಯಾದ ಟೆಸ್ಟ್ ತಂಡದಲ್ಲಿ ಅನುಮಾನ ಅನ್ನಿಸುತ್ತೆ. ಸ್ಟಾರ್ಗಳ ಕಮ್ಬ್ಯಾಕ್, ಯಂಗ್ಸ್ಟರ್ಗಳ ಸ್ಥಾನಕ್ಕೆ ಕುತ್ತು ತಂದಂತೆ ಕಾಣುತ್ತೆ. ಅಸಲಿಗೆ ಈ ಬಾರಿಯ ದುಲೀಪ್ ಟ್ರೋಫಿ ಟೂರ್ನಿ ಟೀಮ್ ಇಂಡಿಯಾ ಸ್ಟಾರ್ಗಳ ಪಾಲಿಗೂ ಅಗ್ನಿಪರೀಕ್ಷೆಯ ಕಣವಾಗಿದೆ. ಇಲ್ಲಿ ಪರ್ಫಾಮ್ ಮಾಡಿದ್ರಷ್ಟೇ ಟೀಮ್ ಇಂಡಿಯಾ ಟೆಸ್ಟ್ ಡೋರ್ ಓಪನ್ ಆಗಲಿದೆ. ಹೀಗಾಗಿ ದೇಶಿ ಟೂರ್ನಿಯಲ್ಲಿ ಸೀನಿಯರ್ಸ್ – ಜೂನಿಯರ್ಸ್ ಫೈಟ್ ನಡೆಯಲಿದೆ. ಈ ಫೈಟ್ನಲ್ಲಿ ಗೆಲ್ಲೋದ್ಯಾರು ಅನ್ನೋದು ಸದ್ಯದ ಕುತೂಹಲವಾಗಿದೆ.
ಇದನ್ನೂ ಓದಿ:ಗಾಯಕ್ವಾಡ್ಗೆ ಬಿಗ್ ಶಾಕ್; ಧೋನಿ ಶಿಷ್ಯನಿಗೆ ಗಾಳ ಹಾಕಿದ CSK, ಕ್ಯಾಪ್ಟನ್ಸಿ ಆಫರ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್