Advertisment

Rain Rain! ಬೆಂಗಳೂರಲ್ಲಿ ರಾತ್ರಿ ಸುರಿದ ಮಳೆಗೆ ಭಾರೀ ಅನಾಹುತ.. ಪೂರ್ವ ಮುಂಗಾರು ಆಘಾತ..!

author-image
Ganesh
Updated On
Rain Rain! ಬೆಂಗಳೂರಲ್ಲಿ ರಾತ್ರಿ ಸುರಿದ ಮಳೆಗೆ ಭಾರೀ ಅನಾಹುತ.. ಪೂರ್ವ ಮುಂಗಾರು ಆಘಾತ..!
Advertisment
  • ನಿನ್ನೆ ಬಂದ ಗಾಳಿ ಮಳೆಯ ರೌದ್ರಾವತಾರಕ್ಕೆ ಜನ ಸುಸ್ತು
  • ಒಂದಲ್ಲ ಎರಡಲ್ಲ ಬರೋಬ್ಬರಿ 3 ವಿದ್ಯುತ್ ಕಂಬ ಧರೆಗೆ
  • ಹೆಮ್ಮರ ಬಿದ್ದ ಕಾರಣ 2 ಕಾರು ಒಂದು ಟಿಟಿ ವಾಹನ ಜಖಂ

ಬೆಂಗಳೂರು: ನಿನ್ನೆಯೂ ಕೂಡ ಬೆಂಗಳೂರಲ್ಲಿ ಭರ್ಜರಿ ಮಳೆಯಾಗಿದ್ದು, ರಾತ್ರಿ ಸುರಿದ ಮಳೆಗೆ ಸಿಲಿಕಾನ್ ಸಿಟಿ ಸಖತ್ ಕೂಲ್ ಆಗಿದೆ. ಜೊತೆಗೆ ಜೋರಾಗಿ ಬಂದ ಗಾಳಿಯಿಂದಾಗಿ ಹಲವು ಅನಾಹುತಗಳು ಸಂಭವಿಸಿವೆ.

Advertisment

publive-image

ನಿನ್ನೆ ಬಂದ ಗಾಳಿ ಮಳೆಯ ರೌದ್ರಾವತಾರಕ್ಕೆ ನಗರದ ಜನ ಸುಸ್ತಾಗಿದ್ದು, ಒಂದಲ್ಲ ಎರಡಲ್ಲ ಬರೋಬ್ಬರಿ ಮೂರು ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದಿವೆ. ಹೆಮ್ಮರವೊಂದು ಉರುಳಿ ಬಿದ್ದ ಕಾರಣ 2 ಕಾರು ಒಂದು ಟಿಟಿ ವಾಹನ ಜಖಂಗೊಂಡಿದೆ. ನಿನ್ನೆ ರಾತ್ರಿ 11.30ರ ಸುಮಾರಿಗೆ ದೀಪಾಂಜಲಿ ನಗರದ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ.

ಇದನ್ನೂ ಓದಿ:ಜೈಲಿನಿಂದ ರಿಲೀಸ್ ಆದ ಕೇಜ್ರಿವಾಲ್​ಗೆ ಆರತಿ ಬೆಳಗಿ ಸ್ವಾಗತ.. ಬರ್ತಿದ್ದಂತೆಯೇ ಕೊಟ್ಟ ಹೇಳಿಕೆ ಏನು?

publive-image

ಬೆಳಗ್ಗಿನ ಜಾವ ಜನರ ಗಮನಕ್ಕೆ ಬಂದಿದೆ. ಬೆಳ್ಳಂಬೆಳಿಗ್ಗೆ ಮರ ಮತ್ತು ಕಂಬ ಬಿದ್ದಿದ್ದನ್ನು ನೋಡಿ ಜನರು ಕಂಗಾಲಾಗಿದ್ದಾರೆ. ಅಪಾಯಕಾರಿ ಮರಗಳನ್ನು ತೆರವು ಕಾರ್ಯ ಮಾಡಿದ್ರೆ ಈ ಅವಾಂತರ ಆಗ್ತಾ ಇರಲಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆಯೇ ನಾಗರಭಾವಿಯಲ್ಲಿ ದೊಡ್ಡ ಮರ ಬೇರು ಸಹಿತ ನೆಲಕ್ಕುರುಳಿದೆ. ನಾಗರಬಾವಿ ಸರ್ಕಲ್ ರಸ್ತೆ ಬದಿ ಇರುವ ಮರ ಇದಾಗಿದೆ. ಅದೃಷ್ವವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ. ರಸ್ತೆ ಬದಿ, ಮನೆ, ಕಾಂಪ್ಲೆಕ್ಸ್ ಮುಂದೆ ಮರ ಬಿದ್ದಿದೆ.

Advertisment

ಇದನ್ನೂ ಓದಿ:ವಿರಾಟ್ ಕೊಹ್ಲಿ​ ಔಟಾ? ನಾಟ್​ ಔಟಾ? ಭಾರೀ ಅನುಮಾನ.. ವಿವಾದದಲ್ಲಿ ಐಪಿಎಲ್​..!

publive-image

ಆರ್​ಆರ್ ನಗರದಲ್ಲಿ ಮಳೆಯಿಂದಾಗಿ ಪೆಟ್ರೋಲ್ ಬಂಕ್ ಜಲಾವೃತಗೊಂಡಿದೆ. ರಾತ್ರಿ ಸಂಪೂರ್ಣ ಜಲಾವೃತವಾಗಿದ್ದ ಹಿನ್ನೆಲೆಯಲ್ಲಿ ಬೆಳಗ್ಗೆ ನೀರು ತೆಗೆಯುವ ಕೆಲಸ ಮಾಡುತ್ತಿದ್ದಾರೆ. ಪರಿಣಾಮ ಪೆಟ್ರೋಲ್ ಸಿಗದೇ ವಾಹನ ಸವಾರರ ಬೇರೆಡೆಗೆ ಹೋಗುತ್ತಿದ್ದಾರೆ. ಇನ್ನು ನಗರದ ಹಲವು ಭಾಗಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment