Advertisment

Inspiring story: ಅಂದು ಗೋಪಾಲಕನಾಗಿ ತಿಂಗಳಿಗೆ 80 ರೂ ಸಂಬಳ.. ಇಂದು ವರ್ಷಕ್ಕೆ 8 ಕೋಟಿ ಸಂಪಾದನೆ..!

author-image
Ganesh
Updated On
Inspiring story: ಅಂದು ಗೋಪಾಲಕನಾಗಿ ತಿಂಗಳಿಗೆ 80 ರೂ ಸಂಬಳ.. ಇಂದು ವರ್ಷಕ್ಕೆ 8 ಕೋಟಿ ಸಂಪಾದನೆ..!
Advertisment
  • ರಮೇಶ್ ರೂಪರೇಲಿಯಾ ಜೀವನದ ಕತೆ ನಿಮಗೆ ಗೊತ್ತಾ?
  • ಬದುಕಿಗೆ ಹೊಸ ತಿರುವು ಕೊಟ್ಟಿದ್ದು ಗೋಮಾತೆ ಮೇಲಿನ ಪ್ರೀತಿ
  • 123 ದೇಶಗಳಿಗೆ ಬೇಕೇಬೇಕು ಇವರು ಮಾಡಿದ ತುಪ್ಪ

ಗುಜರಾತ್‌ನ ಸಣ್ಣ ಹಳ್ಳಿಯಿಂದ ಬಂದ ರಮೇಶ್ ರೂಪರೇಲಿಯಾ (Ramesh Rupareliya) ಚಿಕ್ಕ ವಯಸ್ಸಲ್ಲೇ ಆರ್ಥಿಕ ಬಿಕ್ಕಟ್ಟು ಎದುರಿಸಬೇಕಾಯಿತು. ಒಬ್ಬ ದನ ಕಾಯುವವರಾಗಿ ತಿಂಗಳಿಗೆ 80 ರೂಪಾಯಿ ಗಳಿಸುತ್ತಿದ್ದರು. ನಂತರದ ದಿನಗಳಲ್ಲಿ ಗೋಂಡಲ್ ನಗರಕ್ಕೆ ಬಂದು ಕೃಷಿ ಕಾಯಕ ಆರಂಭಿಸಿದರು. ಇಂದು ಯಶಸ್ವಿ ಉದ್ಯಮಿಗಳಲ್ಲಿ ಅವರೂ ಒಬ್ಬರು. ಯಶಸ್ವಿ ಡೈರಿ ವಹಿವಾಟಿನಿಂದ ವರ್ಷಕ್ಕೆ 8 ಕೋಟಿಗೂ ಸಂಪಾದಿಸ್ತಿದ್ದಾರೆ.

Advertisment

publive-image

ಬಾಲ್ಯದಿಂದಲೂ ಸಂಗೀತದ ಬಗ್ಗೆ ಒಲವು ಹೊಂದಿದ್ದ ಅವರಿಗೆ, ಹಸುಗಳು ಅಂದರೆ ಎಲ್ಲಿಲ್ಲದ ಪ್ರೀತಿ. ಒಮ್ಮೆ ಅವರು ಜಮೀನಿನಲ್ಲಿ ಈರುಳ್ಳಿ ಬೆಳೆದು 35 ಲಕ್ಷ ರೂಪಾಯಿ ಗಳಿಸಿದ್ದರು. ಆ ನಂತರ ಅವರಿಗೆ ಹಸುಗಳ ಮೇಲಿನ ಪ್ರೀತಿ ಮತ್ತಷ್ಟು ಹೆಚ್ಚಾಯಿತು. ಹಸುಗಳನ್ನು ತಂದು ಸಾಕಲು ಆರಂಭಿಸಿದರು. ನಂತರ ಶ್ರೀ ಗಿರ್ ಗೌ ಕೃಷಿ ಜತನ್ ಸಂಸ್ಥೆ (Shree Gir Gau krushi Jatan Sansthan) ಹುಟ್ಟುಹಾಕಿ ತಮ್ಮದೇ ಗೋಶಾಲೆಯನ್ನು ನಡೆಸ್ತಿದ್ದಾರೆ.

ಇದನ್ನೂ ಓದಿ:UPSC ಟಾಪರ್​​ಗೂ ಕೊಹ್ಲಿಯೇ ಸ್ಫೂರ್ತಿ, ರಘುರಾಂ ರಾಜನ್​​ ಕೂಡ ಕೊಹ್ಲಿ ಬಗ್ಗೆ ಮಾತು..!

publive-image

ರಮೇಶ್ ಅವರು ರೂಪರೇಲಿಯಾ ಗಿರ್ ಹಸುಗಳನ್ನು ಖರೀದಿಸುವ ಮೂಲಕ ಡೈರಿ ಉದ್ಯಮವನ್ನು ಪ್ರಾರಂಭಿಸಿದರು. ಗೀರ್ ಹಸುವಿನ ಹಾಲಿನಿಂದ ತಯಾರಿಸಿದ ಸಾವಯವ ತುಪ್ಪವನ್ನು ಮಾರಾಟ ಮಾಡಲು ಪ್ರಾರಂಭಿಸಿದರು. ಸೈಕಲ್ ಮೇಲೆ ಹಳ್ಳಿ ಹಳ್ಳಿಗೆ ಹೋಗಿ ತುಪ್ಪ ಮಾರುತ್ತಿದ್ದರು. ಗ್ರಾಹಕರಿಂದ ಉತ್ತಮ ಬೇಡಿಕೆ ಹೆಚ್ಚಾಯ್ತು. ಇದು ತುಪ್ಪ ಉತ್ಪಾದನೆಯತ್ತ ಗಮನ ಹರಿಸಲು ಹೆಚ್ಚು ಪ್ರೋತ್ಸಾಹ ನೀಡಿತು.
ಹಸುಗಳಿಗೆ ಸರಿಯಾಗಿ ಆಹಾರ ಕೊಡಲು ಆರಂಭಿಸಿದ ಅವರು ಗುಣಮಟ್ಟದ ತುಪ್ಪ ತಯಾರಿಕೆಯ ಬಗ್ಗೆ ಹೆಚ್ಚು ಕಲಿತರು. ಅವರ ತುಪ್ಪ ಬಹಳ ಜನಪ್ರಿಯವಾಗಿದೆ. ಅವರ ವ್ಯಾಪಾರ ಬೆಳೆಯಿತು. ಈಗ ಅವರು 123 ದೇಶಗಳಿಗೆ ತುಪ್ಪವನ್ನು ರಫ್ತು ಮಾಡುತ್ತಿದ್ದಾರೆ.

Advertisment

publive-image

ಅಂದ್ಹಾಗೆ ಇವರಿಗೆ ಸ್ವಂತ ಜಮೀನು ಇರಲಿಲ್ಲ. ಗೊಂಡಾಲ್‌ನಲ್ಲಿರುವ ಜೈನ ಕುಟುಂಬದಿಂದ ಬಾಡಿಗೆಗೆ ಜಮೀನು ಪಡೆದು ಕೃಷಿ ಕಾಯಕ ಆರಂಭಿಸಿದ್ದರು. ವಿಶೇಷ ಅಂದರೆ ಅವರು ತಮ್ಮ ಕೃಷಿಯಲ್ಲಿ ಇಂದಿಗೂ ಯಾವುದೇ ರಾಸಾಯನಿಕಗಳನ್ನು ಬಳಸುವುದಿಲ್ಲ!

ಇದನ್ನೂ ಓದಿ:ಜಸ್ಟ್​ 22 ವರ್ಷಕ್ಕೇ IAS ಅಧಿಕಾರಿ.. ಮೊದಲ ಪ್ರಯತ್ನದಲ್ಲೇ ಟಾಪರ್ ಆದ ಯುವತಿಯ ಸ್ಫೂರ್ತಿದಾಯಕ ಸ್ಟೋರಿ..!

publive-image

ಸದ್ಯ ಅವರ ಬಳಿ 250 ಗಿರ್ ಹಸುಗಳಿವೆ. ವರ್ಷಕ್ಕೆ ಸುಮಾರು ರೂ.8 ಕೋಟಿ ವಹಿವಾಟು ನಡೆಸುತ್ತಿದ್ದಾರೆ. ತಮ್ಮ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಮಾದರಿಯಾಗಿದ್ದಾರೆ. ಪ್ರಾಮಾಣಿಕವಾಗಿ ಮಾಡಿದರೆ ಯಾವುದೇ ವ್ಯವಹಾರದಲ್ಲಿ ಯಶಸ್ಸು ಕಷ್ಟವಲ್ಲ ಎನ್ನುತ್ತಾರೆ ರಮೇಶ್ ರೂಪರೇಲಿಯಾ. ಕಷ್ಟಪಟ್ಟಿದ್ದಾರೆ.. ಹಂತ ಹಂತವಾಗಿ ಬೆಳೆಯುತ್ತಿದ್ದಾರೆ.

Advertisment

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment