Advertisment

6 ಅಡಿ ಎತ್ತರ, 2 ಅಡಿ ಅಗಲ.. ಅಪರೂಪದ ಮಾಸ್ತಿಕಲ್ಲು ಮತ್ತು ಶಾಸನ ಪತ್ತೆ! ಎಲ್ಲಿ?

author-image
AS Harshith
Updated On
6 ಅಡಿ ಎತ್ತರ, 2 ಅಡಿ ಅಗಲ.. ಅಪರೂಪದ ಮಾಸ್ತಿಕಲ್ಲು ಮತ್ತು ಶಾಸನ ಪತ್ತೆ! ಎಲ್ಲಿ?
Advertisment
  • ಆಂಜನೇಯ ದೇಗುಲದ ಸಮೀಪದ ಸಿಕ್ತು ಶಾಸನ
  • ಶಾಸನದಲ್ಲಿ ಏನೇನಿದೆ? ಯಾರಿಗೆ ಸಿಕ್ಕಿದ್ದು ಗೊತ್ತಾ?
  • ದೇಗುಲದ ಸಮೀಪದ ಮಾರ್ಗ ಮದ್ಯದಲ್ಲಿ ಸಿಕ್ತು ಮಾಸ್ತಿಗಲ್ಲು

ವಿಜಯನಗರದ ಕಾಲದ ಅಪರೂಪದ ಮಾಸ್ತಿಕಲ್ಲು ಮತ್ತು ಶಾಸನ ಪತ್ತೆಯಾಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮುದ್ದಾಪುರದ ಗ್ರಾಮದಲ್ಲಿ ಸಿಕ್ಕಿದೆ. ಗ್ರಾಮದ ಆಂಜನೇಯ ದೇಗುಲದ ಸಮೀಪದ ಮಾರ್ಗ ಮದ್ಯದಲ್ಲಿ ಮಾಸ್ತಿಗಲ್ಲು ಮತ್ತು ಶಾಸ‌ನ ಕಾಣಿಸಿದೆ.

Advertisment

ವಿಜಯನಗರ ತಿರುಗಾಟ ಸಂಶೋಧನಾ ತಂಡ ಅಪೂರ್ಣ ಶಾಸನವನ್ನು ಪತ್ತೆಹಚ್ಚಿದೆ. ಅದರ ಸದಸ್ಯರಾದ ಡಾ.ಗೋವಿಂದ್ ಈ ವಿಚಾರ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:  Bengaluru Rain: ರಸ್ತೆ ಜಲಾವೃತ, ವಾಹನ ಸವಾರರ ಪರದಾಟ.. ಎಲ್ಲೆಲ್ಲಿ ಏನೇನಾಗಿದೆ ಗೊತ್ತಾ?

ಬಹುತೇಕ ಮಾಸ್ತಿಕಲ್ಲುಗಳಲ್ಲಿ ಮಹಿಳೆಯೊಬ್ಬರು ಕೈಯಲ್ಲಿ ನಿಂಬೆಹಣ್ಣು, ಕೈ ಮೇಲೆ ಎತ್ತಿರೋ ಚಿತ್ರ ಇರೋದು ಸಹಜ. ಆದರೆ ಶೈವಧರ್ಮದ ಪ್ರತೀಕವಾಗಿ ಮಾಸ್ತಿಕಲ್ಲನ್ನು ಎರಡು ಹಂತದಲ್ಲಿ ಕೆತ್ತಲಾಗಿದೆ. ರಾಜ ಪರಿವಾರ, ರಾಜನ ಪಾಳೆಯಗಾರನ ಪತ್ನಿಗಾಗಿ ಮಾಸ್ತಿಕಲ್ಲು ಕೆತ್ತಿಲಾಗಿದೆ. ಆದರೆ ಈ ಮಾಸ್ತಿಕಲ್ಲಿನಲ್ಲಿ ಮಹಿಳೆ ನಿಂತಿರುವ ಭಂಗಿಯಲ್ಲಿ ಕೆತ್ತಿರುವುದು ಕಾಣಿಸಿದೆ.

Advertisment

ಇದನ್ನೂ ಓದಿ: ಸಿಸಿಬಿ ಪೊಲೀಸರಿಂದ ಬ್ಯಾಂಕ್​ ನೌಕರರು ಸೇರಿ ಎಂಟು ಜನರ ಬಂಧನ; ₹97 ಕೋಟಿ ಪಂಗನಾಮ!

ನಿಧಿಗಳ್ಳರ ಉಪಟಳಕ್ಕೆ ಮಾಸ್ತಿಕಲ್ಲು ತುಂಡಾಗಿದೆ. ಮಾಸ್ತಿಕಲ್ಲು ಜೊತೆಗೆ ವಿಜಯನಗರ ಸಾಮ್ರಾಜ್ಯದ ಅಪೂರ್ಣ ಶಾಸನ ಕಲ್ಲು ಪತ್ತೆಯಾಗಿದೆ. ಅಪೂರ್ಣ ಬೃಹದಾಕಾರದ ಶಿವಲಿಂಗ ಚಿತ್ರವುಳ್ಳ ಶಾಸನ ಕಲ್ಲು ಪತ್ತೆಯಾಗಿದೆ.

ಶಾಸನಕಲ್ಲು 6 ಅಡಿ ಎತ್ತರ, 2 ಅಡಿ ಅಗಲವುಳ್ಳದ್ದಾಗಿದ್ದು, ಎಡಕ್ಕೆ ಸೂರ್ಯ, ಬಲಕ್ಕೆ ಚಂದ್ರ, ಕೆಳಗೆ ಸುಂದರ ಶಿವಲಿಂಗ ಕೆತ್ತಲಾಗಿದೆ ಎಂದು ತಿರುಗಾಟ ತಂಡದ ಸದಸ್ಯರಾದ ಡಾ.ಗೋವಿಂದ್ ಮಾಹಿತಿ ಹಂಚಿಕೊಂಡಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment