/newsfirstlive-kannada/media/post_attachments/wp-content/uploads/2024/10/Ratan-Tata-Dogs-1.jpg)
ಸರಳ ಮತ್ತು ಉದಾರ ದಾನಿಯಾದ ರತನ್ ಟಾಟಾ ಅವರ ಸಾಧನೆ ನೋಡಿ 2018ರಲ್ಲಿ ಯುನೈಟೆಡ್ ಕಿಂಗ್ ಡಮ್ನ ಕಿಂಗ್ ಚಾಲ್ಸ್ ‘ಜೀವಮಾನದ ಸಾಧನೆ’ ಪ್ರಶಸ್ತಿ ನೀಡಲು ಮುಂದಾದರು. ರತನ್ ಟಾಟಾ ಅವರನ್ನು ಪ್ರೀತಿಯಿಂದ ಆಹ್ವಾನಿಸುವ ಮೂಲಕ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಆದರೆ ಆ ಕಾರ್ಯಕ್ರಮಕ್ಕೆ ರತನ್ ಟಾಟಾ ಗೈರಾಗಿದ್ದರು. ಅದಕ್ಕೆ ಕಾರಣ ಅವರ ಮನೆಯ ಮುದ್ದಿನ ಶ್ವಾನ ಎಂದರೆ ನಂಬುತ್ತೀರಾ? ಈ ಸ್ಟೋರಿ ಓದಿ.
ಹೌದು. ಹಿರಿಯ ಕೈಗಾರಿಕೋದ್ಯಮಿ ರತನ್ ಟಾಟಾ ಸಾಧನೆಯನ್ನು ಕಂಡು ಕಿಂಗ್ ಚಾಲ್ಸ್ ಫೆಬ್ರವರಿ 6, 2018ರಲ್ಲಿ ಲಂಡನ್ನಲ್ಲಿರುವ ಬರ್ಕಿಂಗ್ಹ್ಯಾಮ್ ಅರಮನೆಗೆ ಆಹ್ವಾನಿಸಿದ್ದರು. ಈ ವಿಚಾರವನ್ನು ಅವರ ಆತ್ಮೀಯರಿಗೂ ತಿಳಿಸಿದ್ದರು. ಅದರಂತೆಯೇ ರತನ್ ಟಾಟಾ ಆತ್ಮೀಯ ವ್ಯಕ್ತಿ ಅವರಿಗೂ ಮುಂಚೆ, ಅಂದರೆ ಫೆಬ್ರವರಿ 3 ರಂದು ಲಂಡನ್ ತಲುಪಿದ್ದರು. ಆದರೆ ಲಂಡನ್ಗೆ ಬಂದಿಳಿದ ವ್ಯಕ್ತಿಗೆ ಭಾರತದಲ್ಲಿದ್ದ ರತನ್ ಟಾಟಾ 11 ಮಿಸ್ ಕಾಲ್ ಕೊಟ್ಟಿದ್ದರಂತೆ.
[caption id="attachment_90987" align="alignnone" width="800"] ರತನ್ ಟಾಟಾ ಅವರ ಟ್ಯಾಂಗೋ ಮತ್ತು ಟೀಟೋ ಶ್ವಾನ[/caption]
ಇದನ್ನೂ ಓದಿ: ಗುಡ್ಬೈ, ಮೈ ಡಿಯರ್ ಲೈಟ್ ಹೌಸ್! ರತನ್ ಟಾಟಾಗೆ ಕಣ್ಣೀರಿನ ವಿದಾಯ ಹೇಳಿದ ಶಾಂತನು ನಾಯ್ದು.. ಯಾರೀತ?
ರತನ್ ಟಾಟಾ ಕರೆಗೆ ಗಾಬರಿಯಾಗಿ ಕರೆ ಮಾಡಿದಾಗ ಅವರ ಮನೆಯ ಮುದ್ದಿನ ಶ್ವಾನವಾದ ಟ್ಯಾಂಗೋ ಮತ್ತು ಟೀಟೋಗೆ ಕುರಿತಾಗಿ ಮಾತನಾಡಿದರಂತೆ. ಅದರಲ್ಲಿ ಒಂದು ಶ್ವಾನಕ್ಕೆ ಅನಾರೋಗ್ಯವಿದೆ. ಅದನ್ನು ಬಿಟ್ಟು ಬರಲು ಆಗುತ್ತಿಲ್ಲ ಎಂದು ಹೇಳಿದರು ಎಂದು ಅವರ ಆತ್ಮೀಯರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
View this post on Instagram
ಇದನ್ನೂ ಓದಿ: Ratan Tata: ಸಿನಿಮಾದತ್ತ ಚಿತ್ತ ಹರಿಸಿದ್ದ ರತನ್ ಟಾಟಾ! ಬಿಗ್ ಬಜೆಟ್ ಸಿನಿಮಾ ಮಾಡಿ ಕೋಟಿ ಕೋಟಿ ಲಾಸ್
ರತನ್ ಟಾಟಾ ಆತ್ಮೀಯರು ಈ ವಿಚಾರವನ್ನು ಕಿಂಗ್ ಚಾಲ್ಸ್ಗೆ ತಲುಪಿಸಿದಾಗ, ಇದು ರತನ್ ಟಾಟಾ ನಿಜಗುಣ ಎಂದು ಬಣ್ಣಿಸಿದ್ದರು ಎಂದು ಸಂದರ್ಶನದಲ್ಲಿ ಹೇಳಿದ್ದಾರೆ. ಸದ್ಯ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ವೈರಲ್ ಆಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ