ಸಾವಿರಾರು ವಜ್ರಗಳಲ್ಲಿ ಮೂಡಿ ಬಂದ ರತನ್ ಟಾಟಾ ಚಿತ್ರ; ಗುಜರಾತ್​ ವ್ಯಾಪಾರಿಯಿಂದ ವಿಶೇಷ ಶ್ರದ್ಧಾಂಜಲಿ!

author-image
Gopal Kulkarni
Updated On
ಸಾವಿರಾರು ವಜ್ರಗಳಲ್ಲಿ ಮೂಡಿ ಬಂದ ರತನ್ ಟಾಟಾ ಚಿತ್ರ; ಗುಜರಾತ್​ ವ್ಯಾಪಾರಿಯಿಂದ ವಿಶೇಷ ಶ್ರದ್ಧಾಂಜಲಿ!
Advertisment
  • ರತನ್ ಟಾಟಾ ಅಗಲಿಕೆಗೆ ವಿಶೇಷ ಶ್ರದ್ಧಾಂಜಲಿ ಸಲ್ಲಿಸಿದ ವಜ್ರ ವ್ಯಾಪಾರಿ
  • 1 ಲಕ್ಷ 10 ಸಾವಿರ ವಜ್ರಗಳಲ್ಲಿ ಮೂಡಿ ಬಂದ ರತನ್ ಟಾಟಾ ಅವರ ಚಿತ್ರ
  • ರತನ್ ಟಾಟಾ ಅವರ ಕಟ್ಟುತ್ತಿದ್ದ ವಾಚ್​ ಯಾವುದು ಅಂತ ನಿಮಗೆ ಗೊತ್ತಾ?

ರತನ್ ಟಾಟಾ ನಮ್ಮನ್ನು ಅಗಲಿ ಹಲವು ದಿನಗಳೇ ಆದವು. ಆದ್ರೆ ದೇಶದ ಜನರಲ್ಲಿ ಮಡುಗಟ್ಟಿದ ಆ ಶೋಕ ಇನ್ನೂ ಕೂಡ ಹಾಗೆಯೇ ಇದೆ. ಭಾರತ ಮಾತೆಯ ಹೆಮ್ಮೆಯ ಪುತ್ರನನ್ನು, ಅಜಾತಶತ್ರುವನ್ನು ಕಳೆದುಕೊಂಡ ನೋವೊಂದು ಇಂದಿಗೂ ಕೂಡ ಎಲ್ಲರ ಹೃದಯದಲ್ಲಿ ಜೀವಂತವಾಗಿ ಇದೆ. ಒಬ್ಬೊಬ್ಬರು ಒಂದು ರೀತಿ ತಮ್ಮ ದುಃಖವನ್ನು ಹೊರಗಡೆ ಹಾಕುತ್ತಿದ್ದಾರೆ. ಅದರಲ್ಲೂ ಸೂರತ್​ನ ಒಬ್ಬ ವಜ್ರ ವ್ಯಾಪಾರಿ ಸಾವಿರಾರು ವಜ್ರಗಳಲ್ಲಿ ರತನ್ ಟಾಟಾ ಅವರ ಭಾವಚಿತ್ರವನ್ನು ಚಿತ್ರಿಸಿ ತಮ್ಮ ಶ್ರದ್ಧಾಂಜಲಿಯನ್ನು ಅರ್ಪಿಸಿದ್ದಾರೆ.

ಇದನ್ನೂ ಓದಿ:ವಯಸ್ಸಿಗೆ ಮೀರಿದ ಸ್ನೇಹ ಬಾಂಧವ್ಯ; ರತನ್ ಟಾಟಾ ಹಾಗೂ ಶಾಂತನು ನಡುವೆ ದೋಸ್ತಿ ಬೆಳೆದಿದ್ದು ಹೇಗೆ?


ಈ ಒಂದು ವಜ್ರದಲ್ಲಿ ತಯಾರಾದ ಭಾವಚಿತ್ರಕ್ಕೆ ಒಟ್ಟು 1 ಲಕ್ಷ 10ಸಾವಿರ ಡೈಮಂಡ್ ಬಳಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಒಂದು ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ರತನ್ ಟಾಟಾಗೆ ನೀಡುತ್ತಿರುವ ವಿಶೇಷ ಶ್ರದ್ಧಾಂಜಲಿಯನ್ನು ಎಲ್ಲರೂ ಮೆಚ್ಚಿಕೊಂಡಿದ್ದು. ವಿಡಿಯೋವನ್ನು ಎಕ್ಸ್, ಇನ್​ಸ್ಟಾಗ್ರಾಮ್​, ಫೇಸ್​ಬುಕ್​ಗಳಲ್ಲಿ ವೈರಲ್ ಮಾಡುತ್ತಿದ್ದಾರೆ.

ಇದನ್ನೂ ಓದಿ: Big breaking: ರತನ್ ಟಾಟಾ ಅವರ ಉತ್ತರಾಧಿಕಾರಿ ನೇಮಿಸಿದ ಟಾಟಾ ಟ್ರಸ್ಟ್.. ಯಾರು ಇವರು?

publive-image

ಇನ್ನು ರತನ್ ಟಾಟಾ ಅವರು ಸ್ವರ್ಗಸ್ಥರಾದ ಬಳಿಕ ಅವರು ದೇಶಕ್ಕೆ ಮಾಡಿರುವ ಬಡವರಿಗಾಗಿ ಮಾಡಿರುವ ಉಪಕಾರದ ಸ್ಮರಣೆಯಾಗುತ್ತಿದೆ. ಅವರ ಸರಳತೆ ಹಾಗೂ ಸೌಮ್ಯ ಸ್ವಭಾವವೂ ಕೂಡ ಜನರು ನೆನಪಿಸಿಕೊಂಡೇ ಅವರಿಗೆ ವಿದಾಯ ಹೇಳಿದ್ದಾರೆ. ಸದ್ಯ ರತನ್ ಟಾಟಾ ಅವರ ವಾಚ್​ ಬಗ್ಗೆಯೂ ಕೂಡ ಚರ್ಚೆಯಾಗುತ್ತಿದೆ. ಅವರ ಸರಳತೆಗೆ ಅವರು ಕಟ್ಟುತ್ತಿದ್ದ ವಾಚ್ ನಿದರ್ಶನ ಎನ್ನಲಾಗುತ್ತಿದೆ. ಅವರು ಕಟ್ಟುತ್ತಿದ್ದದ್ದು ಸಾಮಾನ್ಯವಾದ ಐದು ಸಾವಿರ ರೂಪಾಯಿಯ ರೊಂಡಾ515 ಕ್ವಿರ್ಟ್ಜ್​ ವಾಚ್​​ ಎಂದು ಹೇಳಲಾಗುತ್ತಿದೆ. ವಿಶ್ವದ ಪ್ರಮುಖ ಶ್ರೀಮಂತರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ರತನ್ ಟಾಟಾ ಅವರು ಕಟ್ಟುತ್ತಿದ್ದ ವಾಚ್ ಈಗ ದೊಡ್ಡ ಸುದ್ದಿಯಾಗುತ್ತಿದ್ದು. ಬದುಕಲ್ಲಿ ಸರಳತೆಯನ್ನು ಅಳವಡಿಸಿಕೊಳ್ಳುವುದು ಅಷ್ಟು ಸರಳವಲ್ಲ ಎಂದೇ ಮಾತನಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment