ತವರಿನ ಅಂಗಳದಲ್ಲಿ ಬಿರುಸಿನ ಸೆಂಚುರಿ ಸಿಡಿಸಿ ಶೈನಿಂಗ್
ವೈಟ್ಬಾಲ್ ಶೈಲಿಯಲ್ಲಿ ಬ್ಯಾಟಿಂಗ್, 108 ಎಸೆತ, 100 ರನ್
ಅಪ್ಪನ ಎದುರಲ್ಲೆ ಶತಕ ಬಾರಿಸಿ ಸಂಭ್ರಮಿಸಿದ ಅಶ್ವಿನ್
ಚಾಂಪಿಯನ್ ತಂಡ ತವರಿನಲ್ಲಿ ತಲೆತಗ್ಗಿಸುವ ಸ್ಥಿತಿ ನಿರ್ಮಾಣವಾಗಿತ್ತು. ಟಾಪ್ ಕ್ಲಾಸ್ ಆಟಗಾರರೆಲ್ಲರೂ ಕೈಕೊಟ್ರು. ಆದರೆ ಸ್ಪಿನ್ ಮಾಂತ್ರಿಕ ಆರ್ ಅಶ್ವಿನ್ ಮಾತ್ರ ರೆಡ್ಬಾಲ್ ಕ್ರಿಕೆಟ್ನಲ್ಲಿ ಸ್ಫೋಟಕ ಶತಕ ಸಿಡಿಸಿ ಹೋಮ್ಗ್ರೌಂಡ್ನಲ್ಲಿ ಟೀಮ್ ಇಂಡಿಯಾದ ಮಾನ ಕಾಪಾಡಿದ್ರು.
ಚೆಪಾಕ್ನಲ್ಲಿ ಅಶ್ವಿನ್ ಸ್ಫೋಟಕ ಸೆಂಚುರಿ
ಚೆಪಾಕ್ನ ಟೆಸ್ಟ್ನ ಮೊದಲ ದಿನ ಸ್ಟಾರ್ ಆಲ್ರೌಂಡರ್ ಆರ್.ಅಶ್ವಿನ್ ಕಟ್ಟಿದ ಬೊಂಬಾಟ್ ಇನ್ನಿಂಗ್ಸ್ ಆಗಿತ್ತು. ಸ್ವಲ್ಪವು ಅಂಜಿಕೆ, ಒತ್ತಡವಿಲ್ಲದೇ ದಿಟ್ಟ ಇನ್ನಿಂಗ್ಸ್ ಕಟ್ಟಿದ ಲೋಕಲ್ ಬಾಯ್ ಸ್ಫೋಟಕ ಶತಕ ಸೆಂಚುರಿ ಸಿಡಿಸಿ ಮಿಂಚಿದರು. ನಿನ್ನೆಯ ಸೆಂಚುರಿ ಟೀಮ್ ಇಂಡಿಯಾದ ಸ್ಪಿನ್ ಮ್ಯಜಿಷಿಯನ್ ಪಾಲಿಗೆ ತುಂಬಾನೆ ವಿಶೇಷವಾಗಿತ್ತು. ಯಾಕಂದ್ರೆ ಭಾರತ-ಬಾಂಗ್ಲಾ ಮೊದಲ ಟೆಸ್ಟ್ ಪಂದ್ಯವನ್ನ ವೀಕ್ಷಿಸಲು ಅಶ್ವಿನ್ ತಂದೆ ರವಿಚಂದ್ರನ್ ಆಗಮಿಸಿದ್ರು. ಅಪ್ಪನ ಎದುರಿನಲ್ಲಿ ವೀರ ಸೇನಾನಿಯಂತೆ ಹೋರಾಡಿದ ಅಶ್ವಿನ್ ಬ್ರಿಲಿಯಂಟ್ ಶತಕ ಬಾರಿಸಿ ಸಂಭ್ರಮಿಸಿದ್ರು.
ಇದನ್ನೂ ಓದಿ:ಟೀಂ ಇಂಡಿಯಾದ 3 ದೊಡ್ಡ ವೀಕ್ನೆಸ್ಗಳು ಬಹಿರಂಗ.. ರೋಹಿತ್, ಗಿಲ್, ಕೊಹ್ಲಿ ಇದನ್ನು ಒಪ್ಪಿಕೊಳ್ಳಬೇಕು..!
ಸಂಕಷ್ಟದಲ್ಲಿ ತಂಡದ ಮಾನ ಕಾಪಾಡಿದ ಅಶ್ವಿನ್
ರೆಡ್ ಸಾಯಿಲ್ ಪಿಚ್ನಲ್ಲಿ ಟೀಮ್ ಇಂಡಿಯಾದ ಘಟಾನುಘಟಿ ಬ್ಯಾಟ್ಸ್ಮನ್ಗಳು ಮುಗ್ಗರಿಸಿದ್ರು. 144 ರನ್ಗೆ 6 ವಿಕೆಟ್ ಕಳೆದುಕೊಂಡ ಭಾರತ ಅಲ್ಪಮೊತ್ತಕ್ಕೆ ಆಲೌಟಾಗುವ ಸ್ಥಿತಿಯಲ್ಲಿತ್ತು. ಆಗ ಕ್ರೀಸ್ಗಿಳಿದ ಅಶ್ವಿನ್ ಒತ್ತಡದಲ್ಲಿ ನಿರ್ಭೀತಿ ಇನ್ನಿಂಗ್ಸ್ ಕಟ್ಟಿದ್ರು. ತಾನಾಡಿದ ಬೆಳೆದ ಅಂಗಳದಲ್ಲೆ ಅಮೋಘ ಸೆಂಚುರಿ ಸಿಡಿಸಿದ್ರು. 108 ಎಸೆತಗಳಲ್ಲಿ ಬಿರುಸಿನ ಶತಕ ಬಾರಿಸಿದ ಆಲ್ರೌಂಡರ್ ಟೀಮ್ ಇಂಡಿಯಾಗೆ ಸಂಕಷ್ಟಹರನಾದ್ರು. ರೆಡ್ಬಾಲ್ ಆಟವನ್ನ ವೈಟ್ಬಾಲ್ನಂತೆ ಆಡಿದ ಅಶ್ವಿನ್ ಚೆಪಾಕ್ ಮೈದಾನದಲ್ಲಿ 2ನೇ ಶತಕ ದಾಖಲಿಸಿದ್ರು.
ಜಡೇಜಾ ಜೊತೆ ಅಮೋಘ 195 ರನ್ಗಳ ಜೊತೆಯಾಟ
ಚೆಪಾಕ್ ಟೆಸ್ಟ್ನ ಮೊದಲ ದಿನದ ಹೀರೋಗಳಂದ್ರೆ ಅದು ಆಲ್ರೌಂಡರ್ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ. ತಂಡ ಸಂಕಷ್ಟದಲ್ಲಿದ್ದಾಗ ಇಬ್ಬರು ಟೊಂಕಕಟ್ಟಿ ನಿಂತ್ರು. ಬಾಂಗ್ಲಾ ಬೌಲರ್ಗಳನ್ನ ಹೈರಾಣಾಗಿಸಿದ ಈ ಭಲೇ ಜೋಡಿ ಅತ್ಯಾಮೂಲ್ಯ 195 ರನ್ಗಳ ಜೊತೆಯಾಟ ನಡೆಸಿದ್ರು. ಆಕ್ರಮಣಕಾರಿ ಆಟವಾಡಿದ ಅಶ್ವಿನ್ ಅಜೇಯ 102 ರನ್ ಗಳಿಸಿದ್ರೆ ಜಡ್ಡು 86 ರನ್ ಗಳಿಸಿ ಮೆರೆದಾಡಿದ್ರು. ಪರಿಣಾಮ ಭಾರತ ಮೊದ ಇನ್ನಿಂಗ್ಸ್ನಲ್ಲಿ ಬೃಹತ್ ಮೊತ್ತದತ್ತ ಹೆಜ್ಜೆ ಹಾಕಿದೆ.
ಇದನ್ನೂ ಓದಿ:ಕೊಹ್ಲಿ, ಗಿಲ್, ರೋಹಿತ್ ಠುಸ್.. ಭಾರತಕ್ಕೆ ಬಿಗ್ ಶಾಕ್ ಕೊಟ್ಟ ಬಾಂಗ್ಲಾ ತಂಡ..!
ಅಶ್ವಿನ್ ನೋಡಿ ಕಲಿಬೇಕು ಘಟಾನುಘಟಿ ಬ್ಯಾಟರ್ಸ್
ಚೆಪಾಕ್ ಮೈದಾನದಲ್ಲಿ ನಂಬಿಗಸ್ಥ ರೋಹಿತ್ ಶರ್ಮಾ, ಶುಭ್ಮನ್ ಗಿಲ್, ಕಿಂಗ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ರಂತ ಸ್ಟಾರ್ ಕ್ರಿಕೆಟರ್ಸ್ ಮಕಾಡೆ ಮಲಗಿದ್ರು. ಆದ್ರೆ ಅದೇ ಅಶ್ವಿನ್ ಇವರು ಪರದಾಡಿದ ಪಿಚ್ನಲ್ಲೆ ಬಿರುಸಿನ ಸೆಂಚುರಿ ಸಿಡಿಸಿ ವಿಜೃಂಭಿಸಿದ್ರು. ಮೊದಲ ಎಸೆತದಿಂದ ಕೊನೆ ಎಸೆತದ ತನಕ ಬಾಂಗ್ಲಾ ಬೌಲರ್ಗಳನ್ನ ದಿಟ್ಟವಾಗಿ ಎದುರಿಸಿದ್ರು. ಆ ಮೂಲಕ ಟಫ್ ಕಂಡಿಷನ್ನಲ್ಲಿ ಹೇಗೆ ಆಡ್ಬೇಕು ಅನ್ನೋದನ್ನ ಅಶ್ವಿನ್, ಸ್ಟಾರ್ ಕ್ರಿಕೆಟಿಗರಿಗೆ ತೋರಿಸಿ ಕೊಟ್ಟಿದ್ದಾರೆ.
ಮೊದಲ ದಿನವಂತೂ ಅಶ್ವಿನ್ ಅಮೋಘ ಸೆಂಚುರಿ ಸಿಡಿಸಿ ತಂಡದ ಮಾನ ಕಾಪಾಡಿದ್ದಾರೆ. ಇಂದು ಕೂಡ ಅವರು ಬ್ಯಾಟಿಂಗ್ ಕಾಯ್ದುಕೊಂಡಿದ್ದು, ಮೊದಲ ದಿನದ ಘರ್ಜನೆ ಎರಡನೇ ದಿನವೂ ರಿಪೀಟ್ ಆಗಲಿ. ಭಾರತ ತಂಡ ಬೃಹತ್ ಮೊತ್ತ ಹಾಕುವಂತಾಗಲಿ ಎಂಬುದೇ ಎಲ್ಲಾ ಫ್ಯಾನ್ಸ್ ಆಶಯವಾಗಿದೆ.
ಇದನ್ನೂ ಓದಿ:ಭಾರತ-ಬಾಂಗ್ಲಾ ಮೊದಲ ಟೆಸ್ಟ್; ಟೀಂ ಇಂಡಿಯಾ ಮುಂದಿರುವ ಹೊಸ ಭರವಸೆಗಳು ಇಲ್ಲಿವೆ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್