/newsfirstlive-kannada/media/post_attachments/wp-content/uploads/2024/09/Ravindra-Jadeja.jpg)
ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ರವೀಂದ್ರ ಜಡೇಜಾ ಈಗ ರಾಜಕೀಯ ಹಾದಿ ಹಿಡಿದಿದ್ದಾರೆ. ಭಾರತೀಯ ಜನತಾ ಪಾರ್ಟಿ ಸೇರುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಅಂದಹಾಗೆಯೇ ಜಡ್ಡು ಪತ್ನಿ ಜೊತೆಗೆ ಸೇರಿಕೊಂಡು ರಾಜಕೀಯ ಮಾಡಲು ಮುಂದಾಗಿದ್ದಾರೆ.
ಜಡೇಜಾ ಪತ್ನಿ ರಿವಾಬಾ ಗುಜರಾತ್​​ನ ಜಾಮ್​ ನಗರದ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿಯಾಗಿದ್ದಾರೆ. ಪತ್ನಿಯ ಸಹಾಯದಿಂದ ಬಿಜೆಪಿ ಪಕ್ಷ ಹೊಕ್ಕಿದ್ದಾರೆ. ಸದ್ಯ ಈ ಕುರಿತಾಗಿ ರಿವಾಬಾ ಟ್ವಿಟ್ಟರ್​ನಲ್ಲಿ ಪತಿ ಬಿಜಿಪಿ ಸೇರಿರುವ ಕುರಿತು ಮತ್ತು ಪಡೆದಿರುವ ಸದಸ್ಯತ್ವ ಕಾರ್ಡ್​ನ ಫೋಟೋ ಪೋಸ್ಟ್​ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ದುಲೀಪ್ ಟ್ರೋಫಿಯಲ್ಲಿ RCB ಸ್ಟಾರ್ ಬಿರುಗಾಳಿ; ಅಯ್ಯರ್ ಕನಸು ಭಗ್ನಗೊಳಸಿದ ಕನ್ನಡಿಗ ವೈಶಾಕ್
? #SadasyataAbhiyaan2024pic.twitter.com/he0QhsimNK
— Rivaba Ravindrasinh Jadeja (@Rivaba4BJP)
— Rivaba Ravindrasinh Jadeja (@Rivaba4BJP) September 2, 2024
">September 2, 2024
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಭಾರತೀಯ ಜನತಾ ಪಕ್ಷ 2024ರ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಪಕ್ಷದ ಕಾರ್ಯಕರ್ತರು ಯುವಕರ ಜೊತೆಗೆ ಸಂಪರ್ಕ ಸಾಧಿಸಲು ಒತ್ತಾಯಿಸಿದರು. ಅಂದಹಾಗೆಯೇ ಈ ಅಭಿಯಾನವು 100 ಮಿಲಿಯನ್​​ ಸದಸ್ಯರನ್ನು ಬಿಜೆಪಿ ಸೇರ್ಪಡೆಗೊಳಿಸುವ ಗುರಿಯನ್ನು ಹೊಂದಿದೆ. 2014 ಮತ್ತು 2019ರ ನಡುವೆ 180 ಮಿಲಿಯನ್​​ ಕೋಟಿ ಸದಸ್ಯರು ಪಕ್ಷಕ್ಕೆ ಸೇಪರ್ಡೆಯಾಗಿದ್ದಾರೆ.
ಇನ್ನು ಜಡೇಜಾ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ ಕ್ರಿಕೆಟಿಗರಲ್ಲಿ ಒಬ್ಬರು. ಇವರು 72 ಟೆಸ್ಟ್​ ಮತ್ತು 197 ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು ಆಡುವ ಮೂಲಕ ಭಾರತವನ್ನು ಪ್ರತಿನಿಧಿಸಿದ್ದಾರೆ. ಇವರು 294 ಮತ್ತು 220 ವಿಕೆಟ್​​ಗಳನ್ನು ಏಕದಿನ ಪಂದ್ಯದಲ್ಲಿ ಪಡೆದಿದ್ದಾರೆ. 36 ವರ್ಷದ ಆಲ್​ರೌಂಡರ್​ 6 ಸಾವಿರ ರನ್​ ಗಳಿಸಿದ್ದಾರೆ. 2024ರ ಟಿ20 ವಿಶ್ವಕಪ್​ ಗೆದ್ದ ಬಳಿಕ ನಿವೃತ್ತಿ ಘೋಷಿಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us