newsfirstkannada.com

ಈ ವಿಚಾರದಲ್ಲಿ ಆರ್​ಸಿಬಿ ಬೌಲರ್ಸ್​​ಗೆ ಮೊದಲ ಸ್ಥಾನ.. ರನ್ ಮಷಿನ್ ಕೊಹ್ಲಿ ಅಲ್ಲ, ಬೌಲರ್ಸ್​..!

Share :

Published April 1, 2024 at 10:03am

  16 ವರ್ಷದಿಂದ ಆರ್​ಸಿಬಿ ಕಪ್​ ಗೆಲ್ಲಲಿಲ್ಲ ಯಾಕೆ..?

  ದಿಕ್ಕೆ ತೋಚದಂತಾಗಿದೆ ಕ್ಯಾಪ್ಟನ್ ಡುಪ್ಲೆಸಿ​​ ಕಥೆ

  ಮೂರು ಪಂದ್ಯಗಳಲ್ಲಿ ಎರಡರಲ್ಲಿ ಸೋತಿರುವ ಆರ್​​ಸಿಬಿ

ಈ ಸಲ ಕಪ್​ ನಮ್ದೇ.. ಈ ಸಲ ಕಪ್ ನಮ್ದೇ ಅಂತಿದ್ದ ಆರ್​ಸಿಬಿ ಫ್ಯಾನ್ಸ್​ ಇದೀಗ ಈ ಸಲನೂ ನಮ್ದಲ್ಲ ಅನ್ನೋ ಕ್ಲಾರಿಟಿಗೆ ಬರಬೇಕಿದೆ. ಹಾಗಾದ್ರೆ 16 ವರ್ಷದಿಂದ ಗೆಲ್ಲದ ಆರ್​ಸಿಬಿ ಈ ವರ್ಷವೂ ಯಾಕೆ ಗೆಲ್ಲಲ್ವಾ? 2 ಪಂದ್ಯ ಸೋತ ಮಾತ್ರಕ್ಕೆ ಕಪ್​ ಗೆಲ್ಲೋಕೆ ಆಗಲ್ವಾ? ಅನ್ನೋ ಪ್ರಶ್ನೆ ನಿಮ್ಮಲ್ಲಿರಬಹುದು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಾಕೆ ಐಪಿಎಲ್ ಟ್ರೋಫಿ ಗೆದ್ದಿಲ್ಲ ಅನ್ನೋದು ಇಂಡಿಯನ್ ಪ್ರೀಮಿಯರ್​​ ಲೀಗ್​ನ ಮಿಲಿಯನ್​ ಡಾಲರ್​ ಪಶ್ನೆ. ಬರೋಬ್ಬರಿ 16 ವರ್ಷಗಳಿಂದ ಇದು ಉತ್ತರ ಸಿಗದ ಪ್ರಶ್ನೆಯಾಗಿ ಕಾಡ್ತಿದೆ. ಪ್ರಸಕ್ತ ಸೀಸನ್​ನಲ್ಲೂ ಆರ್​​ಸಿಬಿ ಚೊಚ್ಚಲ ಟ್ರೋಫಿ ಗೆಲ್ಲೋ ಕನವರಿಕೆಯಲ್ಲಿದೆ. ತಂಡದ ಪರಿಸ್ಥಿತಿ ನೋಡಿದ್ರೆ ಕಪ್​ ಗೆಲ್ಲೋದು ಕಷ್ಟಸಾಧ್ಯವಾಗಿದೆ.

ಗರಿಷ್ಠ ಸಿಕ್ಸರ್​ ಸಿಡಿಸಿದ ತಂಡಗಳ ಮುಕುಟಕ್ಕೆ ಟ್ರೋಫಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು. ಕ್ರಿಸ್​ ಗೇಲ್, ಎಬಿ ಡಿವಿಲಿಯರ್ಸ್​, ವಿರಾಟ್​ ಕೊಹ್ಲಿಯಂತ ಬಿಗ್ ಮ್ಯಾಚ್​ ವಿನ್ನರ್​ಗಳನ್ನ ಕಂಡಿರುವ ಟೀಮ್. ದಿಗ್ಗಜ ಆಟಗಾರರು ಮುನ್ನಡೆಸಿರುವ ಖ್ಯಾತಿ ಹೊಂದಿರೋ ಆರ್​ಸಿಬಿ, ಐಪಿಎಲ್​ನಲ್ಲಿ 3 ಬಾರಿ ಫೈನಲ್​​ಗೇರಿದೆ. ಡೇಂಜರಸ್ ತಂಡವಾಗಿಯೇ ಗುರುತಿಸಿಕೊಂಡು ಅಸಾಧ್ಯವಾದ ದಾಖಲೆಗಳನ್ನೇ ಬರೆದಿದೆ. ಮುಂಬೈ ಇಂಡಿಯನ್ಸ್​ ಬಳಿಕ ಗರಿಷ್ಠ 1,507 ಸಿಕ್ಸರ್​ ಸಿಡಿಸಿದ ಖ್ಯಾತಿ ತಂಡಕ್ಕಿದೆ. ಈ ಲೆಕ್ಕಾಚಾರದಲ್ಲಿ ಚೆನ್ನೈ ಕೂಡ ಆರ್​​ಸಿಬಿಗಿಂತ ಹಿಂದಿದೆ. ಆದ್ರೆ, ಈ ಎರಡೂ ತಂಡಗಳೂ ಐದು ಬಾರಿ ಟ್ರೋಫಿ ಗೆದ್ದಿವೆ. ಆದ್ರೆ, ಆರ್​ಸಿಬಿಯಿಂದ ಒಮ್ಮೆಯೂ ಗೆದ್ದಿಲ್ಲ. ಇದಕ್ಕೆಲ್ಲಾ ಕಾರಣ ರಾಯಲ್ ಚಾಲೆಂಜರ್ಸ್​ ಬೌಲರ್​ಗಳ ಉದಾರತೆ..

16 ವರ್ಷಗಳ ಟ್ರೋಫಿ ಬರಕ್ಕೆ ಬೌಲರ್ಸ್ ಕಾರಣ​

ಒಂದೆಡೆ ಆರ್​​ಸಿಬಿ ಬ್ಯಾಟ್ಸ್​ಮನ್​​ಗಳು ತಂಡದ ಗೆಲುವಿಗಾಗಿ ಸಿಕ್ಸರ್​ಗಳ ಮಳೆ ಸುರಿಸಿದ್ರೆ, ಇನ್ನೊಂದೆಡೆ ಬೌಲರ್​ಗಳು ಮಾತ್ರ ಉದಾರತೆ ಮರೆದಿದ್ದಾರೆ. ಬ್ಯಾಟ್ಸ್​ಮನ್​​ಗಳುಗಿಂತ ನಾವೇನು ಕಡಿಮೆ ಎಂಬಂತೆ ಸಿಕ್ಸರ್​ ಬಿಟ್ಟುಕೊಟ್ಟಿದ್ದಾರೆ. ಐಪಿಎಲ್​ ಹಿಸ್ಟರಿಯಲ್ಲಿ ಗರಿಷ್ಠ ಸಿಕ್ಸರ್​, ಬಿಟ್ಟುಕೊಟ್ಟವರ ಪಟ್ಟಿಯಲ್ಲಿ ಆರ್​​ಸಿಬಿನೇ ಫಸ್ಟ್.. ಬೇಸರದ ಸಂಗತಿ ಏನಂದ್ರೆ, 2ನೇ ಸ್ಥಾನದಲ್ಲಿರುವ ಡೆಲ್ಲಿಗೂ, ಆರ್​ಸಿಬಿ ಬೌಲರ್​ಗಳಿಗೂ ಅಜಗಜಾಂತರ ವ್ಯತ್ಯಾಸವಿದೆ.

ಇದನ್ನೂ ಓದಿ: ಹಾರ್ದಿಕ್​ ಪಾಂಡ್ಯನಾ ಟ್ರೋಲ್​ ಮಾಡೋ ರೋಹಿತ್​​ ಫ್ಯಾನ್ಸ್​​ಗೆ ಎಚ್ಚರ! ಏನಿದು ಸ್ಟೋರಿ?

ಯಾಱರು ಎಷ್ಟು ಸಿಕ್ಸರ್ ಬಿಟ್ಟುಕೊಟ್ಟಿದ್ದಾರೆ..?

242 ಪಂದ್ಯಗಳಿಂದ ಆರ್​ಸಿಬಿ 1529 ಸಿಕ್ಸರ್​ ಬಿಟ್ಟುಕೊಟ್ಟಿದೆ. ಡೆಲ್ಲಿ ಕ್ಯಾಪಿಟಲ್ಸ್ 239 ಪಂದ್ಯಗಳಿಂದ 1392, ಮುಂಬೈ ಇಂಡಿಯನ್ಸ್​ ಬೌಲರ್​​ಗಳು 249 ಪಂದ್ಯಗಳಿಂದ 1389 ಸಿಕ್ಸರ್​​​​​​​​​​​​​​​​​​​​​​​ಗಳನ್ನ ಬಿಟ್ಟುಕೊಟ್ಟಿದ್ದಾರೆ. ಈ ಸಿಕ್ಸರ್​ಗಳೇ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಸಂಕಟಕ್ಕೆ ಕಾರಣವಾಗಿವೆ. ಪ್ರತಿ ಸೀಸನ್​ನಲ್ಲೂ ಟ್ರೋಫಿ ಗೆಲ್ಲುವ ಕನಸು ನುಚ್ಚುನೂರು ಮಾಡ್ತಿದೆ.

ಈ ವರ್ಷವೂ ಅದೇ ರಾಗ ಅದೇ ಹಾಡು

ಈ ವರ್ಷವೂ ಆರ್​ಸಿಬಿ ಬೌಲಿಂಗ್​​ನಲ್ಲಿ ಧಮ್ ಇಲ್ಲ. ಇದಕ್ಕೆ ಚೆನ್ನೈ ಸೂಪರ್​ ಕಿಂಗ್ಸ್, ಪಂಜಾಬ್ ಕಿಂಗ್ಸ್, ಕೊಲ್ಕತ್ತಾ ನೈಟ್​ ರೈಡರ್ಸ್ ಈ ಮೂರು ಪಂದ್ಯಗಳಲ್ಲಿ ಪರದಾಡಿದ ರೀತಿಯೇ ಸಾಕ್ಷಿ. 3 ಪಂದ್ಯಗಳಿಂದ ಆರ್​​ಸಿಬಿ ಒಟ್ಟು 55.3 ಓವರ್ ಬೌಲಿಂಗ್ ಮಾಡಿದೆ. ಈ ಪೈಕಿ ಸ್ಪಿನ್ನರ್​ಗಳು ಎಸೆದಿದ್ದು ಜಸ್ಟ್ 13.5 ಓವರ್ ಮಾತ್ರ. ಕ್ವಾಲಿಟಿ ಸ್ಪಿನ್ನರ್​ ಕೊರತೆ ಎಷ್ಟು ಕಾಡ್ತಿದೆ ಅನ್ನೋದಕ್ಕೆ ಇದೇ ಸಾಕ್ಷಿ. ಹೆಚ್ಚು ಓವರ್​ ಹಾಕಿರೋ ವೇಗಿ ರನ್​ಮಷೀನ್​ಗಳಂತೆ ರನ್​ ಲೀಕ್​ ಮಾಡಿದ್ದಾರೆ.

ಇವರ ಆಟಕ್ಕೆ ದಿಕ್ಕೆ ತೋಚದಂತಾಯ್ತು ಕ್ಯಾಪ್ಟನ್​ ಕಥೆ..!

ಬೌಲರ್​ಗಳ ದುಬಾರಿ ಸ್ಪೆಲ್​​ಗೆ ಕ್ಯಾಪ್ಟನ್​ ಫಾಫ್​ಗೆ ದಿಕ್ಕೆ ತೋಚದಂತಾಗಿದೆ. 11.50 ಕೋಟಿ ವೀರ ಅಲ್ಜಾರಿಗೆ, ಏಕಾನಮಿ ಕಾಯ್ದುಕೊಳ್ಳುವುದು ಅಲರ್ಜಿಯಾಗಿದೆ. ಮ್ಯಾಚ್ ವಿನ್ನರ್​ ಆಗಿ ಮೆರದಾಡಬೇಕಿದ್ದ ಸಿಡಿಗುಂಡು ಸಿರಾಜ್​ 10ರ ಏಕಾನಮಿಯಲ್ಲೇ ರನ್ ನೀಡ್ತಿದ್ದಾರೆ. ಆಲ್ರೌಂಡರ್ ಗ್ರೀನ್ ಕಥೆ ಹೇಳಬೇಕಿಲ್ಲ. ಹೀಗಾಗಿ ಬೆಂಚ್ ಕಾಯ್ತಿರುವ ರೀಸಿ ಟಾಪ್ಲೆ ಅಥವಾ ಲೂಕಿ ಫರ್ಗೂಸನ್ ಪ್ರಯೋಗವೊಂದೇ ಬಾಕಿಯಿದೆ. ಹೀಗಾಗಿ ಟೀಮ್​ ಮ್ಯಾನೇಜ್​ಮೆಂಟ್​ ಮುಂದಿನ ನಡೆ ಏನಿರುತ್ತೆ ಅನ್ನೋ ಕುತೂಹಲವಿದೆ.

ಇದನ್ನೂ ಓದಿ: ನಿರಾಸೆ ಮಾಡಲಿಲ್ಲ ಧೋನಿ; ಒಂದೇ ಕೈಯಲ್ಲಿ ಅದ್ಭುತ ಸಿಕ್ಸರ್ ಸಿಡಿಸಿದ ವಿಡಿಯೋ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಈ ವಿಚಾರದಲ್ಲಿ ಆರ್​ಸಿಬಿ ಬೌಲರ್ಸ್​​ಗೆ ಮೊದಲ ಸ್ಥಾನ.. ರನ್ ಮಷಿನ್ ಕೊಹ್ಲಿ ಅಲ್ಲ, ಬೌಲರ್ಸ್​..!

https://newsfirstlive.com/wp-content/uploads/2023/10/RCB_1.jpg

Load More